ಪಿಚ್ ಸಿದ್ಧ ಪಡಿಸೋಕೆ ಬೇರೆ ಜನ ಇದ್ದಾರೆ - ಗಂಗೂಲಿ ವ್ಯಂಗ್ಯ
ಚೆನ್ನೈ : ನಾನು ಹಾಗೂ ತರಪೇತುದಾರ ಜಾನ್‌ರೈಟ್ ನಮಗೆ ಬೇಕಾದಂತೆ ಪಿಚ್ ರೆಡಿ ಮಾಡಿಸುತ್ತಿದ್ದೇವೆ ಎಂದು ಆಸ್ಟ್ರೇಲಿಯಾ ನಾಯಕ ಸ್ಟೀವ್ ವಾ ಹೇಳಿರುವುದರಲ್ಲಿ ಯಾವುದೇ ಹುರುಳಿಲ್ಲ. ಇದು ಅವರಿಗೆ ಶೋಭೆ ಕೂಡ ತರುವಂಥದಲ್ಲ ಎಂದು ಭಾರತ ಕ್ರಿಕೆಟ್ ತಂಡದ ನಾಯಕ ಸೌರವ್ ಗಂಗೂಲಿ ಗುರುವಾರ ಪ್ರತಿಕ್ರಿಯಿಸಿದ್ದಾರೆ.
ರೈಟ್ ಅವರ ಜೊತೆ ಚೆನ್ನೈನ ಐಐಟಿ ಕೆಮ್‌ಪ್ಲಾಸ್ಟ್ ಮೈದಾನದಲ್ಲಿ ಜಂಟಿ ಸುದ್ದಿಗೋಷ್ಠಿಯಲ್ಲಿ ಗಂಗೂಲಿ ಮಾತನಾಡುತ್ತಿದ್ದರು. ನಾವು ಇಲ್ಲಿ ಪಿಚ್‌ಗಳನ್ನು ನಮಗೆ ಬೇಕಾದಂತೆ ಸಿದ್ಧಪಡಿಸುತ್ತಿದ್ದೇವೆ ಎಂದು ಆಸ್ಟ್ರೇಲಿಯಾದಲ್ಲೇ ಕೂತು ಹೇಳಿರುವ ವಾ ಅವರನ್ನು ಮೆಚ್ಚಲೇಬೇಕು. ಇಂಥ ಹೇಳಿಕೆಗಳು ಅವರನ್ನು ಸಣ್ಣವರನ್ನಾಗಿಸುತ್ತದೆ. ನಾನಾಗಲೀ, ನಮ್ಮ ತರಪೇತುದಾರರಾಗಲೀ ಪಿಚ್ ಸಿದ್ಧ ಪಡಿಸುವ ಬಗ್ಗೆ ಯಾಕೆ ತಲೆ ಕೆಡಿಸಿಕೊಳ್ಳುತ್ತೇವೆ? ಆ ಕೆಲಸ ಮಾಡೋದಕ್ಕೆ ಬೇರೆ ಜನ ಇದ್ದಾರೆ ಎಂದು ಗಂಗೂಲಿ ವ್ಯಂಗ್ಯವಾಗಿ ನುಡಿದರು.
ಸ್ಟೀವ್, ನಿನಗಿದೋ ಎಚ್ಚರ : ಅನೇಕ ತಿಂಗಳ ಕಾಲ ಟೆಸ್ಟ್ ಸೋಲಿನ ಮುಖವನ್ನೇ ಕಾಣದ ಆಸ್ಟ್ರೇಲಿಯಾ ನಮ್ಮ ನೆಲದಲ್ಲಿ ಗೆಲ್ಲೋದು ಅಷ್ಟು ಸುಲಭವೇನಲ್ಲ ಎಂದು ವಾ ಪಾಳಯಕ್ಕೆ ಗಂಗೂಲಿ ಎಚ್ಚರಿಕೆ ಕೊಟ್ಟರು. ಅಭ್ಯಾಸ ಶಿಬಿರಕ್ಕೆ ಚೆನ್ನೈಯನ್ನು ಆಯ್ಕೆ ಮಾಡಿಕೊಂಡಿರುವುದಕ್ಕೆ ತಾವು ಅಸಮಾಧಾನ ವ್ಯಕ್ತಪಡಿಸಿದರೆ ಎಂಬ ಪ್ರಶ್ನೆಗೆ, ಅವೆಲ್ಲಾ ನನಗೆ ಗ್ರೀಕ್ ಹಾಗೂ ಲ್ಯಾಟಿನ್. ಹುರುಳಿಲ್ಲದ್ದು ಎಂದು ಉತ್ತರ ಕೊಟ್ಟರು. ಜತೆಗೆ ಜಾನ್ ರೈಟ್ ಜೊತೆ ಕೆಲಸ ಮಾಡುತ್ತಿರುವುದು ಕಂಡಾಪಟ್ಟೆ ಖುಷಿ ಕೊಡುತ್ತಿದೆ ಎಂದರು.
ಆಸ್ಟ್ರೇಲಿಯಾ ಪ್ರಬಲ ತಂಡ ಎನ್ನುವುದರಲ್ಲಿ ಯಾವುದೇ ಅನುಮಾನವಿಲ್ಲ. ನಮ್ಮ ಹುಡುಗರೂ ಆತ್ಮವಿಶ್ವಾಸದಿಂದಿದ್ದಾರೆ. ಆಟಗಾರರು ತಪ್ಪನ್ನು ತಿದ್ದಿಕೊಳ್ಳಲು ತಕ್ಕ ತರಪೇತಿ ಕೊಡುತ್ತಿದ್ದೇನೆ. ಸೌರವ್ ಬಹಳ ಜವಾಬ್ದಾರಿಯುತ ನಾಯಕ. ಆಟಗಾರರನ್ನು ಪಳಗಿಸುವ ನಿಟ್ಟಿನಲ್ಲಿ ಅವರೂ ಸಾಕಷ್ಟು ಪ್ರಯತ್ನ ಪಡುತ್ತಿದ್ದಾರೆ ಎಂದು ಜಾನ್ ರೈಟ್ ಹೇಳಿದರು.
ಆಸ್ಟ್ರೇಲಿಯಾದ ಯಾವ ಆಟಗಾರರು ಭಾರತಕ್ಕೆ ಬರುತ್ತಾರೆ, ಬರುವುದಿಲ್ಲ ಅನ್ನುವುದು ನಮಗೆ ಮುಖ್ಯವಲ್ಲ. ನಾವು ಯಾವ ರೀತಿ ಆಡಬೇಕೆಂಬುದೇ ಮುಖ್ಯ. ಕುಂಬ್ಳೆ ಅನುಪಸ್ಥಿತಿ ದೊಡ್ಡ ಹೊಡೆತ ನಿಜ. ಹಾಗಂತ ಇನ್ನೊಬ್ಬ ಕುಂಬ್ಳೆಯನ್ನು ಒಂದೇ ದಿನದಲ್ಲಿ ಸೃಷ್ಟಿಸಲು ಸಾಧ್ಯವಿಲ್ಲ. ಯುವ ಸ್ಪಿನ್ನರ್‌ಗಳಲ್ಲೂ ಪ್ರತಿಭೆಯಿದೆ ಎಂದು ಪ್ರಶ್ನೆಗಳಿಗೆ ಉತ್ತರಿಸುತ್ತಾ ಸೌರವ್ ಹೇಳಿದರು.
(ಯುಎನ್‌ಐ)
ವಾರ್ತಾಸಂಚಯ
ಮುಖಪುಟ / ಇವತ್ತು... ಈ ಹೊತ್ತು...
-
New Airport: ವಿಜಯಪುರ ಏರ್ಪೋರ್ಟ್ಗೆ ಸಿಕ್ತು 220 ಕೋಟಿ ರೂ, ಕಾರ್ಯಾಚರಣೆ ಬಗ್ಗೆ ಎಂಬಿ ಪಾಟೀಲ ಅಪ್ಡೇಟ್ -
Bengaluru Property: ಬೆಂಗಳೂರಿನ 3 ಲಕ್ಷಕ್ಕೂ ಅಧಿಕ ಆಸ್ತಿ ಮಾಲೀಕರಿಗೆ ಶುಭ ಸುದ್ದಿ -
"ಇಲ್ಲಿ ಎಲ್ಲದಕ್ಕೂ ಚೌಕಾಸಿ ಮಾಡಬೇಕು": ಬೆಂಗಳೂರಿನಲ್ಲಿ 2 ತಿಂಗಳು ಕಳೆದ ಮುಂಬೈ ಯುವಕನ Viral Post -
3 ವರ್ಷಕ್ಕೆ 1.17 ಕೋಟಿ: ಮಲೈಕಾ ಅರೋರಾ ಅಪಾರ್ಟ್ಮೆಂಟ್ ಬಾಡಿಗೆ ಬಹಿರಂಗ -
Karnataka Weather: ಬೇಸಿಗೆ ಬಿಸಿಲ ನಡುವೆ ರಾಜ್ಯದ ಹಲವೆಡೆ ಗುಡುಗು-ಮಿಂಚು ಸಹಿತ ಮಳೆ; ಈ ಜಿಲ್ಲೆಗಳಿಗೆ ಯೆಲ್ಲೋ ಅಲರ್ಟ್ -
April 4 Horoscope: ಇಂದು ನಿಮ್ಮ ರಾಶಿ ಏನು ಹೇಳುತ್ತದೆ? ಏಪ್ರಿಲ್ 4 ಭವಿಷ್ಯ ಇಲ್ಲಿದೆ -
HSRP: ಎಚ್ಎಸ್ಆರ್ಪಿ ನಂಬರ್ ಪ್ಲೇಟ್ ಕಡ್ಡಾಯ: ವದಂತಿಗಳಿಗೆ ಕಿವಿಗೊಡಬೇಡಿ ಎಂದು ಸ್ಪಷ್ಟನೆ ಕೊಟ್ಟ ಸಾರಿಗೆ ಇಲಾಖೆ -
Bengaluru: ಆಟೋ LPG ಕೊರತೆ ಬಗೆಹರಿಯುವ ವಿಶ್ವಾಸ: ಪೂರೈಕೆ ಹೆಚ್ಚಿಸಿದ ಇಂಡಿಯನ್ ಆಯಿಲ್ -
ರಾಜ್ಯಪಾಲರೇ ಗಂಟುಮೂಟೆ ಕಟ್ಟಿಕೊಂಡು ನಿಮ್ಮ ರಾಜ್ಯಕ್ಕೆ ತೊಲಗಿ: ಕರವೇ ನಾರಾಯಣಗೌಡ ಎಚ್ಚರಿಕೆ -
ಲಲಿತ್ಪುರ ಫಾರ್ಮಾ ಪಾರ್ಕ್ ಅನ್ನು ಜಾಗತಿಕ ರಫ್ತು ಕೇಂದ್ರವನ್ನಾಗಿ ಮಾಡುವ ನಿಟ್ಟಿನಲ್ಲಿ ಮಹತ್ವದ ಹೆಜ್ಜೆ -
40 ವರ್ಷ ಮೇಲ್ಪಟ್ಟವರಿಗೆ ಸರ್ಕಾರದಿಂದಲೇ ಉಚಿತ ದೃಷ್ಟಿ ತಪಾಸಣೆ, ಕನ್ನಡಕ ವಿತರಣೆ -
Bengaluru: ಸತತ 3ನೇ ವರ್ಷವೂ ರಾಜ್ಯಕ್ಕೇ ಪ್ರಥಮ ಸ್ಥಾನ: 1,273 ಕೋಟಿ ರೂ. ಆದಾಯ ಸಂಗ್ರಹಿಸಿದ ಬೆಂಗಳೂರು ಕೇಂದ್ರ RTO












Click it and Unblock the Notifications