Get Updates
Get notified of breaking news, exclusive insights, and must-see stories!

ವಿಜ್ಞಾನಿಗಳೇ, ನಿಮ್ಮ ಶೋಧ ಸಾಮಾನ್ಯನಿಗೆ ತಲುಪಲಿ - ಫರ್ನಾಂಡಿಸ್‌

ಬೆಂಗಳೂರು : ನಾಗರಿಕರಿಗೆ ಅನುಕೂಲವಾಗುವಂತಹ ಶೋಧಗಳಲ್ಲಿ ತೊಡಗುವಂತೆ ರಕ್ಷಣಾ ಸಚಿವ ಜಾರ್ಜ್‌ ಫರ್ನಾಂಡಿಸ್‌ ರಕ್ಷಣಾ ಸಂಶೋಧನೆಗಳಲ್ಲಿ ತೊಡಗಿರುವ ವಿಜ್ಞಾನಿಗಳನ್ನು ಒತ್ತಾಯಿಸಿದ್ದಾರೆ.

ಏರೊ ಇಂಡಿಯಾ - 2001 ಅಂಗವಾಗಿ ಗುರುವಾರ ಪ್ರಾರಂಭವಾದ, ‘ಏರೋಸ್ಪೇಸ್‌ ತಂತ್ರಜ್ಞಾನಗಳು : ಅಭಿವೃದ್ಧಿ ಮತ್ತು ಕಾರ್ಯತಂತ್ರ’ ಅಂತರರಾಷ್ಟ್ರೀಯ ವಿಚಾರಸಂಕಿರಣವನ್ನು ಉದ್ಘಾಟಿಸಿ ಅವರು ಮಾತನಾಡುತ್ತಿದ್ದರು. ಮಿಲಿಟರಿ ತಂತ್ರಜ್ಞಾನದ ಫಲ ಸಾಮಾನ್ಯ ಮನುಷ್ಯನಿಗೂ ಮುಟ್ಟಬೇಕು. ಇದರಿಂದಾಗಿ, ಜಾಗತಿಕ ಮಟ್ಟದಲ್ಲಿ ತಂತ್ರಜ್ಞಾನ ಪಾರದರ್ಶಕವಾಗಿರುತ್ತದೆ ಹಾಗೂ ಆ ತಂತ್ರಜ್ಞಾನ, ಸಂತ್ರಸ್ತ ಮನುಷ್ಯನ ನೆರವಿಗೆ ಬರುತ್ತದೆ ಎಂದು ಹೇಳಿದರು.

ಇತ್ತೀಚೆಗೆ ಗುಜರಾತಿನಲ್ಲಿ ಸಂಭವಿಸಿದ ಭೀಕರ ಭೂಕಂಪವನ್ನು ಉದಾಹರಿಸಿದ ಅವರು - ಅವಶೇಷಗಳಡಿ ಕುಸಿದು ಬಿದ್ದವರ ರಕ್ಷಣೆ ಹಾಗೂ ಪರಿಹಾರ ಕಾರ್ಯಕ್ರಮಗಳಲ್ಲಿ ಸೇನೆ ಮಹತ್ತರ ಪಾತ್ರವಹಿಸಿತು ಎಂದರು.

ಅಂತರರಾಷ್ಟ್ರೀಯ ಸಹಯೋಗ ಅತ್ಯಗತ್ಯ: ನಾಗರಿಕ ಹಾಗೂ ಯುದ್ಧ ವಿಮಾನಗಳನ್ನು ಅಂತರರಾಷ್ಟ್ರೀಯ ಸಹಯೋಗದಲ್ಲಿ ನಿರ್ಮಿಸುವುದು ಅಗತ್ಯವಾಗಿದೆ. ಸಹ ನಿರ್ಮಾಣ, ಸಹ ಉತ್ಪಾದನೆಗಳಲ್ಲಿ ರಾಷ್ಟ್ರಗಳು ತೊಡಗುವುದರಿಂದ ಉತ್ಪಾದನಾ ವೆಚ್ಚವನ್ನು ಕುಗ್ಗಿಸಬಹುದು ಹಾಗೂ ಅಭಿವೃದ್ಧಿಯ ಪಥ ವೇಗಗೊಳ್ಳುವುದೆಂದು ಜಾರ್ಜ್‌ ಅಭಿಪ್ರಾಯಪಟ್ಟರು. ವಿವಿಧ ಕ್ಷೇತ್ರಗಳಲ್ಲಿ ಅಂತರರಾಷ್ಟ್ರೀಯ ಸಹಯೋಗದ ಕುರಿತಂತೆ ಪ್ರಸ್ತುತ ನಡೆಯುತ್ತಿರುವ 2 ದಿನಗಳ ವಿಚಾರ ಸಂಕಿರಣ ಕಾರ್ಯತಂತ್ರಗಳನ್ನು ಬಿಂಬಿಸುವ ಬಗ್ಗೆ ಅವರು ವಿಶ್ವಾಸ ವ್ಯಕ್ತಪಡಿಸಿದರು.

ಹಗುರ ಯುದ್ಧ ವಿಮಾನ (ಎಲ್‌ಸಿಎ) ಹಾಗೂ ಚಾಲಕ ರಹಿತ ವಿಮಾನ (ನಿಶಾಂತ್‌ ಮತ್ತು ಲಕ್ಷ್ಯ)ಗಳನ್ನು ಅಭಿವೃದ್ಧಿ ಪಡಿಸಲು ಯಶಸ್ವಿಯಾದ ಭಾರತೀಯ ವಿಜ್ಞಾನಿಗಳನ್ನು ಜಾರ್ಜ್‌ ಶ್ಲಾಘಿಸಿದರು. 14 ಆಸನಗಳ ಸರಾಸ್‌ ವಿಮಾನದ ಅಭಿವೃದ್ಧಿ ಕಾರ್ಯ ಪ್ರಗತಿಯಲ್ಲಿದ್ದು , ಸದ್ಯದಲ್ಲೇ ಅದು ಸಿದ್ಧಗೊಳ್ಳಲಿದೆ ಎಂದರು.

15 ಕ್ಕಿಂತಲೂ ಹೆಚ್ಚು ದೇಶಗಳ ಪರಿಣತರು ಎರಡು ದಿನಗಳ ಸಂಕಿರಣದಲ್ಲಿ ಭಾಗವಹಿಸಿದ್ದಾರೆ. ವಾಯುಯಾನ ತಂತ್ರಜ್ಞಾನ ಹಾಗೂ ವಿವಿಧ ವಾಣಿಜ್ಯ ಒಪ್ಪಂದಗಳ ಬಗ್ಗೆ ಸಂಕಿರಣದಲ್ಲಿ ಚರ್ಚೆ ನಡೆಯಲಿದೆ.

(ಯುಎನ್‌ಐ)

ವಾರ್ತಾಸಂಚಯ
ಮುಖಪುಟ / ಇವತ್ತು... ಈ ಹೊತ್ತು...

More From
Prev
Next
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+