Get Updates
Get notified of breaking news, exclusive insights, and must-see stories!

ಸಕ್ಕರೆ ಕಾರ್ಖಾನೆಯ ಆಲ್ಕೋಹಾಲ್‌ ಇಂಧನವೂ ಆದೀತು !

ಬೆಳಗಾವಿ : ಸಕಲ ರೋಗಾನಿಕಿ ಸಾರಾಯಿ ಮದ್ದು ಎಂದು ಯಾರೋ ಎಲ್ಲೋ ಹೇಳಿದ ನೆನಪು. ಆಲ್ಕೋಹಾಲ್‌ ಮಹಿಮೆಯನ್ನು ಏನೆಂದು ವರ್ಣಿಸುವುದು. ಬಚ್ಚಿಟ್ಟ ಸತ್ಯವನ್ನು ಪಟ್ಟನೆ ಹೊರಹಾಕುವ ಸಾಮರ್ಥ್ಯ ಇರುವ ಆಲ್ಕೋಹಾಲ್‌ ಮತ್ತೇರಿಸುವ ಸಾಧನವಷ್ಟೇ ಅಲ್ಲ. ಇಂಧನವಾಗಿಯೂ ಬಳಕೆಯಾದೀತು.

ನಿಶೆಯಲ್ಲಿ ನಶೆ ಏರಿಸುವ ಆಲ್ಕೋಹಾಲನ್ನೇ ಪರ್ಯಾಯ ಇಂಧನವಾಗಿ ಬಳಸಿದರೆ, ಭಾರತ ಪ್ರತಿವರ್ಷ ಸುಮಾರು 500 ಕೋಟಿ ರುಪಾಯಿ ವಿದೇಶಿ ವಿನಿಮಯ ಉಳಿಸಲೂ ಸಾಧ್ಯ. ಸಕ್ಕರೆ ಕಾರ್ಖಾನೆಗಳಲ್ಲಿ ಉತ್ಪಾದಿಸುವ ಆಲ್ಕೋಹಾಲ್‌ ಅನ್ನು ಇಂಧನದ ರೂಪದಲ್ಲಿ ಬಳಸ ಬಹುದು ಎಂದು ಅಖಿಲ ಭಾರತ ಸಕ್ಕರೆ ಕಾರ್ಖಾನೆಗಳ ಮಹಾಮಂಡಳದ ಅಧ್ಯಕ್ಷ ಎಂ.ಆರ್‌. ದೇಸಾಯಿ ಹೇಳಿದ್ದಾರೆ.

ಬುಧವಾರ ಬೆಳಗಾವಿಯಲ್ಲಿ ನಡೆದ ಉತ್ತರ ಕರ್ನಾಟಕ ಸಕ್ಕರೆ ಕಾರ್ಖಾನೆಗಳ ಸಮಸ್ಯೆಗಳ ಚರ್ಚೆಗೆ ಕರೆಯಲಾಗಿದ್ದ ಸಭೆಯಲ್ಲಿ ಈ ವಿಷಯವನ್ನು ಅವರು ತಿಳಿಸಿದರು. ಇದೇನು ಹೊಸ ವಿಚಾರವಲ್ಲ. ಎರಡನೇ ಮಹಾಯುದ್ಧದ ಕಾಲದಲ್ಲೇ ಮಂಡ್ಯದ ಸಕ್ಕರೆ ಕಾರ್ಖಾನೆ ಇದನ್ನು ಪ್ರಾಯೋಗಿಕವಾಗಿ ಜಾರಿಗೆ ತಂದಿತ್ತು ಎಂಬುದನ್ನು ಅವರು ಸ್ಮರಿಸಿದರು.

ಬ್ರೆಜಿಲ್‌, ಆಸ್ಟ್ರೇಲಿಯಾ ದೇಶಗಳಲ್ಲಿ ಈಗಾಗಲೇ ಸಕ್ಕರೆ ಕಾರ್ಖಾನೆಯಲ್ಲಿ ಉತ್ಪಾದಿಸುವ ಆಲ್ಕೋಹಾಲ್‌ ಅನ್ನು ಇಂಧನವಾಗಿ ಬಳಸಲಾಗುತ್ತಿದೆ ಎಂದೂ ಅವರು ಹೇಳಿದರು. ಭಾರತದಲ್ಲಿ ಪ್ರತಿವರ್ಷ 1.8 ಮಿಲಿಯನ್‌ ಟನ್‌ ಆಲ್ಕೋಹಾಲ್‌ ಉತ್ಪಾದಿಸಲಾಗುತ್ತದೆ. ಅದರಲ್ಲಿ ಕೆಲ ಭಾಗವನ್ನು ಮಾತ್ರ ಮದ್ಯ ತಯಾರಿಕೆಯಲ್ಲಿ ಬಳಸಲಾಗುತ್ತಿದೆ. ಉಳಿದ ಆಲ್ಕೋಹಾಲನ್ನು ಬದಲಿ ಇಂಧನ ಮೂಲವಾಗಿ ಪರಿವರ್ತಿಸಿದರೆ, ಇಂಧನ ಸಮಸ್ಯೆ ಬಗೆಹರಿಯುವುದೇ ಅಲ್ಲದೆ, ದೇಶ 500 ಕೋಟಿ ರುಪಾಯಿ ವಿದೇಶಿ ವಿನಿಮಯ ಉಳಿಸಲು ಸಾಧ್ಯ ಎಂದರು.

More From
Prev
Next
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+