ಡಬ್ಲ್ಯುಟಿಓ ಕೃಷಿ ಒಪ್ಪಂದಗಳನ್ನು ಮುಚ್ಚಿಟ್ಟ ಕೇಂದ್ರ ಸರ್ಕಾರ : ಕೃಷ್ಣ
ಬೆಂಗಳೂರು : ಕೃಷಿ ಕ್ಷೇತ್ರದಲ್ಲಿ ವಿಶ್ವ ವ್ಯಾಪಾರ ಸಂಸ್ಥೆ (ಡಬ್ಲ್ಯುಟಿಓ) ಒಪ್ಪಂದದಿಂದ ಜಾರಿಗೆ ಬಂದಿರುವ ಅಂಶಗಳ ವಿಷಯದಲ್ಲಿ ರಾಜ್ಯ ಸರ್ಕಾರಗಳನ್ನು ಕತ್ತಲಲ್ಲಿ ಇಟ್ಟಿರುವುದಕ್ಕೆ ಕಿಡಿಕಾರಿರುವ ಮುಖ್ಯಮಂತ್ರಿ ಎಸ್.ಎಂ.ಕೃಷ್ಣ ಕೇಂದ್ರ ಸರ್ಕಾರವನ್ನು ತರಾಟೆಗೆ ತೆಗೆದುಕೊಂಡಿದ್ದಾರೆ.
ಕೃಷಿ ಹಾಗೂ ಆಹಾರ ಸಂಬಂಧಿ ವಿಷಯಗಳಲ್ಲಿ ಡಬ್ಲ್ಯುಟಿಓ ಒಪ್ಪಂದಗಳು ಮತ್ತಿತರ ಅಂಶಗಳ ಕುರಿತಂತೆ ರಚಿಸಲಾಗಿರುವ ಕೇಂದ್ರದಿಂದ ಮಧ್ಯಂತರ ವರದಿ ಸ್ವೀಕರಿಸಿದ ನಂತರ ಬುಧವಾರ ಕೃಷ್ಣ ಮಾತಾಡುತ್ತಿದ್ದರು. ಕೃಷಿ, ರಾಜ್ಯ ಸರ್ಕಾರಗಳಿಗೆ ಸಂಬಂಧಪಟ್ಟ ವಿಷಯ. ಹೀಗಿದ್ದೂ ಡಬ್ಲ್ಯುಟಿಓ ಕೇಂದ್ರದ ವ್ಯಾಪ್ತಿಗೆ ಬರುವ ಏಕೈಕ ಕಾರಣಕ್ಕೆ ರಾಜ್ಯಗಳನ್ನು ಕತ್ತಲಲ್ಲಿಡಲಾಗಿದೆ. ಈಗಲಾದರೂ ಕೇಂದ್ರ ಸರ್ಕಾರ ಎಚ್ಚೆತ್ತುಕೊಂಡು ಒಪ್ಪಂದಗಳಿಗೆ ಒಳಪಟ್ಟಿರುವ ರಾಜ್ಯ ಸರ್ಕಾರಗಳಿಗೆ ವಿಷಯಗಳ ಮನವರಿಕೆ ಮಾಡಿಕೊಡುವುದು ಒಳಿತು ಎಂದರು.
ನಮ್ಮ ರೈತರ ವಿಚಾರ ನಮಗೇ ಗೊತ್ತು : ಯಾವುದೇ ರಾಜ್ಯದ ರೈತರ ಕುರಿತಂತೆ ಒಪ್ಪಂದಗಳಿಗೆ ಒಳಪಡುವ ಮುನ್ನ ಆಯಾ ರಾಜ್ಯ ಸರ್ಕಾರಗಳನ್ನು ಸಂಪರ್ಕಿಸುವುದು ಬಹು ಮುಖ್ಯ. ತನ್ನ ರೈತರ ಹಿತಾಸಕ್ತಿ ಯಾವುದರಲ್ಲಿ ಅಡಗಿದೆ ಎಂಬುದು ಆಯಾ ರಾಜ್ಯ ಸರ್ಕಾರಗಳಿಗೆ ತಿಳಿದಿರುತ್ತದೆ. ಈ ಕಾರಣ ಕೆಲವು ರಾಜ್ಯ ಸರ್ಕಾರಗಳು ಒಡಂಬಡಿಕೆಗೆ ಒಪ್ಪದಿರುವ ಸಾಧ್ಯತೆಗಳೂ ಇವೆ. ನವದೆಲಿಯ ಕೃಷಿ ಭವನ ಮತ್ತು ಉದ್ಯೋಗ ಭವನದಲ್ಲಿ ಇರುವವರೆಲ್ಲಾ ಕೃಷಿ ಪರಿಣತರಲ್ಲ. ಅವರಲ್ಲಿ ಎಷ್ಟೋ ಮಂದಿಗೆ ಯಾವ ರಾಜ್ಯದ ರೈತರ ಸ್ಥಿತಿಗತಿ ಎಂತಿದೆ ಎಂಬುದರ ಅರಿವೆಯೇ ಇರೋದಿಲ್ಲ. ಹೀಗಾಗಿ ರಾಜ್ಯ ಸರ್ಕಾರಗಳ ಸಲಹೆಗಳನ್ನು ಕೇಂದ್ರ ಅಗತ್ಯವಾಗಿ ಪಡೆಯಲೇಬೇಕು ಎಂದು ಕೃಷ್ಣ ಆಗ್ರಹ ಪಡಿಸಿದರು.
ಇನ್ನಾದರೂ ಶ್ವೇತಪತ್ರ ಹೊರಡಿಸಲಿ : ಡಬ್ಲ್ಯುಟಿಓ ವ್ಯವಹಾರಗಳಿಗೆ ಸಂಬಂಧಿಸಿದಂತೆ ಶ್ವೇತಪತ್ರ ಹೊರಡಿಸಬೇಕೆಂದು ಖ್ಯಾತ ಕೃಷಿ ವಿಜ್ಞಾನಿ ಎಂ. ಎಸ್.ಸ್ವಾಮಿನಾಥನ್ ಕೇಂದ್ರ ಸರ್ಕಾರವನ್ನು ಕೇಳಿದ್ದರೂ, ಒಂದು ತಿಂಗಳಾದರೂ ಕೇಂದ್ರ ಸರ್ಕಾರದಿಂದ ಅದಕ್ಕೆ ಯಾವುದೇ ಉತ್ತರ ಬಂದಿಲ್ಲ. ಆದಷ್ಟು ಬೇಗ ಸರ್ಕಾರ ಶ್ವೇತಪತ್ರ ಹೊರಡಿಸಬೇಕು. ಕೃಷಿ ಕ್ಷೇತ್ರಕ್ಕೆ ಸಂಬಂಧಿಸಿದಂತೆ ಕೇಂದ್ರದ ಎಲ್ಲಾ ನಿರ್ಣಯಗಳಿಗೆ ಕರ್ನಾಟಕ ಸರ್ಕಾರ ತಲೆಯಾಡಿಸದು ಎಂದು ಹೇಳಿದರು.
ವಿಶ್ವ ಬ್ಯಾಂಕಿನ ಕೃಪಾ ಕಟಾಕ್ಷಕ್ಕೂ ಕುತ್ತು : ಡಬ್ಲ್ಯುಟಿಓ ಚಟುವಟಿಕೆಗಳಿಗೆ ಸಂಬಂಧಿಸಿದಂತೆ ರೈತರಲ್ಲಿ ಅರಿವು ಮೂಡಿಸಬೇಕು. ಅಭಿವೃದ್ಧಿ ಹೊಂದುತ್ತಿರುವ ದೇಶಗಳಿಗೆ ನೆರವು ನೀಡುವ ಉದ್ದಿಶ್ಯ ಹೊಂದಿದ್ದ ವಿಶ್ವ ಬ್ಯಾಂಕ್ ನಮ್ಮ ರೈತರಿಗೆ ಕೊಡುತ್ತಿದ್ದ ಸಬ್ಸಿಡಿ ನಿಲ್ಲಿಸಿದೆ. ಬದಲಿಗೆ ಅಭಿವೃದ್ಧಿ ಹೊಂದಿದ ದೇಶಗಳ ರೈತರಿಗೆ ಮತ್ತಷ್ಟು ಬೆನ್ನುತಟ್ಟುತ್ತಿದೆ. ಇದು ನ್ಯಾಯವೇ ಎಂದು ಕೃಷ್ಣ ಪ್ರಶ್ನಿಸಿದರು.
ರೈತರ ಆಶಾಕಿರಣ, ಮಧ್ಯಂತರ ವರದಿ : ಕೇಂದ್ರ ಸಲ್ಲಿಸಿರುವ ಮಧ್ಯಂತರ ವರದಿಯ ಪ್ರತಿಗಳನ್ನು ಸಂಸತ್ತಿನ ಎಲ್ಲಾ ಸದಸ್ಯರಿಗೂ ಹಂಚಲಾಗುವುದು. ಮುಂದಿನ ಭೇಟಿಯಲ್ಲಿ ಪ್ರಧಾನಿ ಎ.ಬಿ.ವಾಜಪೇಯಿ ಅವರಿಗೂ ವರದಿಯ ಒಂದು ಪ್ರತಿ ಸಲ್ಲಿಸುತ್ತೇನೆ. ಎಕ್ಸಿಂ ಪಾಲಿಸಿಯಡಿಯಲ್ಲಿ ರಾಜ್ಯಗಳ ಕೃಷಿ ಉತ್ಪನ್ನಗಳ ರಫ್ತನ್ನು ಅಭಿವೃದ್ಧಿಗೊಳಿಸಲು ಕೇಂದ್ರ ಸರ್ಕಾರ ನಿಧಿ ಸ್ಥಾಪಿಸಬೇಕು. ಈ ನಿಟ್ಟಿನಲ್ಲಿ ಪ್ರಸ್ತುತ ವರ್ಷ 250 ಕೋಟಿ ರುಪಾಯಿಗಳ ನೆರವನ್ನು ಕೇಂದ್ರ ತನ್ನ ವರದಿಯಲ್ಲಿ ಯಾಚಿಸಿದೆ ಎಂದರು.
ಆಮದು ದರವನ್ನು ನಿಗದಿ ಪಡಿಸುವಾಗ ಇಲ್ಲಿನ ಕೃಷಿ ಉತ್ಪನ್ನಗಳ ವೆಚ್ಚ ಹಾಗೂ ಮೂಲಭೂತ ಸೌಲಭ್ಯಗಳಿಗೆ ತೆರುವ ಹಣವನ್ನು ಗಣನೆಗೆ ತೆಗೆದುಕೊಂಡು, ಸ್ಥಳೀಯ ರೈತರಿಗೆ ಅನ್ಯಾಯವಾಗದಂತೆ ನೋಡಿಕೊಳ್ಳಬೇಕು. ವ್ಯಾಪಾರಿ ಪರಿಸರ ಹುಟ್ಟುಹಾಕಲು ನೋಡಲ್ ಕೇಂದ್ರಗಳನ್ನು ಸ್ಥಾಪಿಸಬೇಕು. ರಾಜ್ಯ ಹಾಗೂ ಕೇಂದ್ರ ಕೃಷಿ ಸಚಿವಾಲಯಗಳೆರಡೂ ಇವುಗಳ ಉಸ್ತುವಾರಿಯಲ್ಲಿ ತೊಡಗಿಕೊಳ್ಳಬೇಕು ಮುಂತಾದ ಕೋರಿಕೆಗಳನ್ನು ಮಧ್ಯಂತರ ವರದಿಯಲ್ಲಿ ಉಲ್ಲೇಖಿಸಲಾಗಿದೆ ಎಂದು ಕೃಷ್ಣ ಹೇಳಿದರು.
(ಯುಎನ್‌ಐ)
-
New Airport: ವಿಜಯಪುರ ಏರ್ಪೋರ್ಟ್ಗೆ ಸಿಕ್ತು 220 ಕೋಟಿ ರೂ, ಕಾರ್ಯಾಚರಣೆ ಬಗ್ಗೆ ಎಂಬಿ ಪಾಟೀಲ ಅಪ್ಡೇಟ್ -
Bengaluru Property: ಬೆಂಗಳೂರಿನ 3 ಲಕ್ಷಕ್ಕೂ ಅಧಿಕ ಆಸ್ತಿ ಮಾಲೀಕರಿಗೆ ಶುಭ ಸುದ್ದಿ -
"ಇಲ್ಲಿ ಎಲ್ಲದಕ್ಕೂ ಚೌಕಾಸಿ ಮಾಡಬೇಕು": ಬೆಂಗಳೂರಿನಲ್ಲಿ 2 ತಿಂಗಳು ಕಳೆದ ಮುಂಬೈ ಯುವಕನ Viral Post -
3 ವರ್ಷಕ್ಕೆ 1.17 ಕೋಟಿ: ಮಲೈಕಾ ಅರೋರಾ ಅಪಾರ್ಟ್ಮೆಂಟ್ ಬಾಡಿಗೆ ಬಹಿರಂಗ -
Karnataka Weather: ಬೇಸಿಗೆ ಬಿಸಿಲ ನಡುವೆ ರಾಜ್ಯದ ಹಲವೆಡೆ ಗುಡುಗು-ಮಿಂಚು ಸಹಿತ ಮಳೆ; ಈ ಜಿಲ್ಲೆಗಳಿಗೆ ಯೆಲ್ಲೋ ಅಲರ್ಟ್ -
April 4 Horoscope: ಇಂದು ನಿಮ್ಮ ರಾಶಿ ಏನು ಹೇಳುತ್ತದೆ? ಏಪ್ರಿಲ್ 4 ಭವಿಷ್ಯ ಇಲ್ಲಿದೆ -
HSRP: ಎಚ್ಎಸ್ಆರ್ಪಿ ನಂಬರ್ ಪ್ಲೇಟ್ ಕಡ್ಡಾಯ: ವದಂತಿಗಳಿಗೆ ಕಿವಿಗೊಡಬೇಡಿ ಎಂದು ಸ್ಪಷ್ಟನೆ ಕೊಟ್ಟ ಸಾರಿಗೆ ಇಲಾಖೆ -
Bengaluru: ಆಟೋ LPG ಕೊರತೆ ಬಗೆಹರಿಯುವ ವಿಶ್ವಾಸ: ಪೂರೈಕೆ ಹೆಚ್ಚಿಸಿದ ಇಂಡಿಯನ್ ಆಯಿಲ್ -
ರಾಜ್ಯಪಾಲರೇ ಗಂಟುಮೂಟೆ ಕಟ್ಟಿಕೊಂಡು ನಿಮ್ಮ ರಾಜ್ಯಕ್ಕೆ ತೊಲಗಿ: ಕರವೇ ನಾರಾಯಣಗೌಡ ಎಚ್ಚರಿಕೆ -
ಲಲಿತ್ಪುರ ಫಾರ್ಮಾ ಪಾರ್ಕ್ ಅನ್ನು ಜಾಗತಿಕ ರಫ್ತು ಕೇಂದ್ರವನ್ನಾಗಿ ಮಾಡುವ ನಿಟ್ಟಿನಲ್ಲಿ ಮಹತ್ವದ ಹೆಜ್ಜೆ -
40 ವರ್ಷ ಮೇಲ್ಪಟ್ಟವರಿಗೆ ಸರ್ಕಾರದಿಂದಲೇ ಉಚಿತ ದೃಷ್ಟಿ ತಪಾಸಣೆ, ಕನ್ನಡಕ ವಿತರಣೆ -
Bengaluru: ಸತತ 3ನೇ ವರ್ಷವೂ ರಾಜ್ಯಕ್ಕೇ ಪ್ರಥಮ ಸ್ಥಾನ: 1,273 ಕೋಟಿ ರೂ. ಆದಾಯ ಸಂಗ್ರಹಿಸಿದ ಬೆಂಗಳೂರು ಕೇಂದ್ರ RTO












Click it and Unblock the Notifications