For Daily Alerts
ವಿಫ್ರೋ ಟೆಕ್ನಾಲಜೀಸ್‌ಗೆ ಐಎಸ್‌ಓ 14001 ಪ್ರಮಾಣಪತ್ರ
ಬೆಂಗಳೂರು : ರಾಜ್ಯದ ಪ್ರತಿಷ್ಠಿತ ಸಾಫ್ಟ್‌ವೇರ್ ಕಂಪನಿಗಳಲ್ಲೊಂದಾದ ವಿಫ್ರೋ, ಐಎಸ್‌ಓ 14001 ಪ್ರಮಾಣಪತ್ರ ಪಡೆದಿದೆ. ಇದರೊಂದಿಗೆ, ಈ ಗೌರವಕ್ಕೆ ಪಾತ್ರವಾದ ಮೊದಲ ಭಾರತೀಯ ಸಾಫ್ಟ್‌ವೇರ್ ಕಂಪನಿ ಎನ್ನುವ ಅಗ್ಗಳಿಕೆಗೆ ವಿಫ್ರೋ ಪಾತ್ರವಾಯಿತು.
ಪರಿಸರ ನಿರ್ವಹಣಾ ಪದ್ಧತಿಯ ಅಂತರರಾಷ್ಟ್ರೀಯ ಗುಣಮಟ್ಟವನ್ನು ಪೂರೈಸಿದ ಕಾರಣ, ವಿಫ್ರೋಗೆ ಐಎಸ್‌ಓ 14001 ಪ್ರಮಾಣಪತ್ರ ನೀಡಲಾಗಿದೆ ಎಂದು ವಿಫ್ರೋ ಟೆಕ್ನಾಲಜೀಸ್‌ನ ಉಪಾಧ್ಯಕ್ಷ ಬುಧವಾರ ಬಿಡುಗಡೆ ಮಾಡಿದ ಮಾಧ್ಯಮ ಹೇಳಿಕೆಯಲ್ಲಿ ತಿಳಿಸಿದ್ದಾರೆ.
ವಿಫ್ರೋ ಒಂದು ಉತ್ಪಾದನಾ ಕೈಗಾರಿಕೆಯಾಗಿದ್ದರೂ ಪರಿಸರ ಹಿತಾಸಕ್ತಿಗೆ ಪೂರಕವಾಗಿದೆ. ನೈಸರ್ಗಿಕ ಹಾಗೂ ಅಮೂಲ್ಯ ಸಂಪನ್ಮಲಗಳನ್ನು ಸಾಧ್ಯವಾದಷ್ಟು ಮಿತವಾಗಿ ಬಳಸಲು ಹಾಗೂ ಹಾನಿಕಾರಕ ವಸ್ತುಗಳ ಬಳಕೆಯ ನಿಯಂತ್ರಣಕ್ಕೆ ವಿಫ್ರೋ ಎಲ್ಲಾ ಕ್ರಮಗಳನ್ನು ಕೈಗೊಂಡಿದೆ ಎಂದು ಪ್ರಕಟಣೆ ತಿಳಿಸಿದೆ.
(ಯುಎನ್‌ಐ)