Get Updates
Get notified of breaking news, exclusive insights, and must-see stories!

ವೀರಪ್ಪನ್‌ ಡೈರಿಯಲ್ಲಿ ಎಸ್‌.ಟಿ.ಎಫ್‌. ಕಾರ್ಯಾಚರಣೆಯ ವಿವರ

ಬೆಂಗಳೂರು : ವೀರಪ್ಪನ್‌ನನ್ನು ಹಿಡಿಯಲು ವಿಶೇಷ ಕಾರ್ಯಪಡೆ ಕೈಗೊಂಡಿರುವ ಯೋಜನೆಗಳೇನು, ಅವರ ಕಾರ್ಯಾಚರಣೆ ತಂತ್ರಗಳೇನು, ಎಷ್ಟು ಆಯುಧಗಳಿವೆ, ಒಂದು ತುಕಡಿಯಲ್ಲಿ ಎಷ್ಟು ಮಂದಿ ಪೊಲೀಸರಿದ್ದಾರೆ ಎಂಬ ಅಂಶಗಳೂ ಇತ್ತೀಚೆಗೆ ದೊರೆತಿರುವ ವೀರಪ್ಪನ್‌ ಡಿಜಿಟಲ್‌ ಡೈರಿಯಲ್ಲಿ ದಾಖಲಾಗಿದೆ ಎಂಬ ಅಂಶ ಬೆಳಕಿಗೆ ಬಂದಿದೆ.

ಗುಂಡಿನ ಕಾಳಗದ ಸಂದರ್ಭದಲ್ಲಿ ವೀರಪ್ಪನ್‌ ತಂಡದವರು ಬಿಟ್ಟು ಹೋದ ಈ ಪುಟ್ಟ ಡೈರಿಯಲ್ಲಿ ವಿಶೇಷ ಕಾರ್ಯಪಡೆಯ ಕೆಲವು ಅಧಿಕಾರಿಗಳ ವಿವರಗಳೂ ಇವೆ. ತತ್ಸಂಬಂಧವಾಗಿ ತನಿಖೆ ನಡೆಸಲು ಕೇರಳ ಪೊಲೀಸರ ತಂಡ ನಗರಕ್ಕೆ ಆಗಮಿಸಿದೆ ಎಂದು ಮೂಲಗಳನ್ನು ಉದ್ಧರಿಸಿ ವಿಜಯ ಕರ್ನಾಟಕ ದಿನಪತ್ರಿಕೆ ವರದಿ ಮಾಡಿದೆ.

ವೀರಪ್ಪನ್‌ ಹಾಗೂ ಆತನ ಜತೆಗಿರುವ ಉಗ್ರವಾದಿಗಳ ಜೊತೆ ನೇರ ಸಂಪರ್ಕ ಹೊಂದಿರುವ ಬೆಂಗಳೂರಿನ ಕೆಲವು ವ್ಯಕ್ತಿಗಳ ವಿಚಾರಣೆಯೂ ಇದೇ ಸಂದರ್ಭದಲ್ಲಿ ನಡೆಯಲಿದೆ. ಹಾಲಿ ಕೇರಳ ಪೊಲೀಸರ ವಶದಲ್ಲಿರುವ ಡೈರಿಯಲ್ಲಿ ಎಸ್‌ಟಿಎಫ್‌ ಅಧಿಕಾರಿಗಳ ದೂರವಾಣಿ ಸಂಖ್ಯೆ, ಮನೆ ವಿಳಾಸವೇ ಮೊದಲಾದ ಮಾಹಿತಿಗಳಿವೆ. ಇದರಲ್ಲಿ ಕರ್ನಾಟಕದ ಕೆಲವು ಅಧಿಕಾರಿಗಳ ವಿವರಗಳೂ ಇವೆ ಎಂದು ಪತ್ರಿಕೆ ವರದಿ ಮಾಡಿದೆ.

ಕಾರ್ಯಾಚರಣೆಯ ಪೂರ್ಣ ವಿವರ : ಎಸ್‌.ಟಿ.ಎಫ್‌ ಅಧಿಕಾರಿಗಳು ಯಾವ ಸ್ಥಳದಲ್ಲಿ ಕ್ಯಾಂಪ್‌ ಮಾಡುತ್ತಾರೆ. ಯಾವ ತುಕಡಿಯಲ್ಲಿ ಎಷ್ಟು ಮಂದಿ ಸಿಬ್ಬಂದಿ ಇದ್ದಾರೆ. ಎಸ್‌ಟಿಎಫ್‌ ತುಕಡಿ ಬಳಿ ಎಷ್ಟು ಆಯುಧಗಳಿವೆ. ಯಾವ ಯಾವ ಸಲಕರಣೆಗಳು ಇವೆ ಎನ್ನುವ ವಿವರಗಳೂ ವೀರಪ್ಪನ್‌ ಡೈರಿಯಲ್ಲಿ ದಾಖಲಾಗಿದೆ.

ವೀರಪ್ಪನ್‌ ಸಹಚರರರಿಂದ ದೊರೆತಿರುವ ಅತ್ಯಮೂಲ್ಯ ಮಾಹಿತಿಗಳುಳ್ಳ ಈ ಡೈರಿಯನ್ನು ಕೇರಳ ಪೊಲೀಸರು ಕೇರಳ ನ್ಯಾಯಾಲಯದ ವಶಕ್ಕೆ ಇನ್ನು ಒಂದೆರಡು ದಿನಗಳಲ್ಲಿ ಒಪ್ಪಿಸಲಿದೆ ಎಂಬ ವಿಷಯಕ್ಕೆ ಸಂಬಂಧಿಸಿದಂತೆ ಕರ್ನಾಟಕ ಹಾಗೂ ತಮಿಳ ನಾಡು ಪೊಲೀಸರ ನಡುವೆ ಅಭಿಪ್ರಾಯ ಭೇದ ಉಂಟಾಗಿದೆ ಎಂದೂ ಪತ್ರಿಕೆ ಹೇಳಿದೆ.

ಅಕ್ಕಿ ಖರೀದಿ : ಈ ಮಧ್ಯೆ ವೀರಪ್ಪನ್‌ ಶಂಬುಂಬದಿಮಲೈ ಅರಣ್ಯ ವಲಯಕ್ಕೆ ಸ್ವಲ್ಪ ದೂರದಲ್ಲಿರುವ ಪರಪಲ್ಲದೈ ಗ್ರಾಮಕ್ಕೆ ಧಾವಿಸಿ ರೈತನೊಬ್ಬನಿಂದ 500 ರುಪಾಯಿ ನೀಡಿ 10 ಕೆ.ಜಿ. ಅಕ್ಕಿ ಖರೀದಿಸಿರುವ ಸುಳಿವೂ ದೊರೆತಿದೆ. ಈ ಗ್ರಾಮದ ಕೃಷಿಕ ಅಯ್ಯಪ್ಪನ್‌ ಅಂಗಡಿಯಿಂದ 10 ಕೆ.ಜಿ. ಅಕ್ಕಿ ಕೊಂಡು ತಂದು ವೀರಪ್ಪನ್‌ಗೆ ಕೊಟ್ಟಿದ್ದಾಗಿ ಪೊಲೀಸರಿಗೆ ತಿಳಿಸಿದ್ದಾನೆಂದೂ ವರದಿ ಹೇಳಿದೆ.

ಗುಹೆಗಳಲ್ಲಿ ಶೋಧ : ವೀರಪ್ಪನ್‌ ಇದೇ ಅರಣ್ಯ ವಲಯದ ಗುಹೆಗಳಲ್ಲಿ ಅಡಗಿರಬಹುದು ಎಂಬ ಸುಳಿವಿನ ಹಿನ್ನೆಲೆಯಲ್ಲಿ ವಿಶೇಷ ಕಾರ್ಯಪಡೆ ಪೊಲೀಸರು ಸಣ್ಣ ಸಣ್ಣ ಗುಹೆಗಳಲ್ಲೂ ವೀರಪ್ಪನ್‌ಗಾಗಿ ಶೋಧ ನಡೆಸಿದ್ದಾರೆ. ಬಿಎಸ್‌ಎಫ್‌, ಎಸ್‌ಟಿಎಫ್‌ ಮತ್ತು ಸಶಸ್ತ್ರಪಡೆಯ ಸುಮಾರು 2000 ಸಿಬ್ಬಂದಿ ಕೇರಳ ಮತ್ತು ತಮಿಳುನಾಡು ಗಡಿಯಲ್ಲಿ ತೀವ್ರ ತಪಾಸಣೆ ನಡೆಸಿದ್ದಾರೆ. ಈ ಪ್ರದೇಶ ಆದಿವಾಸಿಗಳ ವಿಚಾರಣೆಯೂ ನಡೆದಿದೆ.

ಈ ಅರಣ್ಯ ಪ್ರದೇಶ ಸುಮಾರು 90 ಕಿ.ಮೀಟರ್‌ ವಿಸ್ತೀರ್ಣವುಳ್ಳದ್ದಾಗಿರುವ ಕಾರಣ ವೀರಪ್ಪನ್‌ ತಪ್ಪಿಸಿಕೊಳ್ಳುವ ಸಾಧ್ಯತೆ ಇದ್ದು, ಎಲ್ಲ ಭೂ ಮಾರ್ಗಗಳಲ್ಲೂ ಬಿಗಿಬಂದೋಬಸ್ತ್‌ ಮಾಡಲಾಗಿದೆ. ವೀರಪ್ಪನ್‌ ಹಾಗೂ ಅವನ ಸಹಚರರರಾದ ಸೇತುಕುಳಿ ಗೋವಿಂದನ್‌, ಚಂದ್ರನ್‌ ಗೌಂಡರ್‌ ಅವರ ಭಾವಚಿತ್ರವಿರುವ ಪೋಸ್ಟರ್‌ಗಳನ್ನು ಈ ಪ್ರದೇಶದಲ್ಲಿ ಅಂಟಿಸಲಾಗಿದ್ದು, ಸುಳಿವು ನೀಡಿದವರಿಗೆ 40 ಲಕ್ಷ ರುಪಾಯಿ ಬಹುಮಾನ ನೀಡುವುದಾಗಿ ಕನ್ನಡ ಮತ್ತು ತಮಿಳು ಭಾಷೆಯಲ್ಲಿ ಪ್ರಕಟಿಸಲಾಗಿದೆ.

ವಾರ್ತಾಸಂಚಯ
ಮುಖಪುಟ / ವೀರಪ್ಪನ್‌ ಶಿಕಾರಿ

More From
Prev
Next
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+