Get Updates
Get notified of breaking news, exclusive insights, and must-see stories!

ನಿತ್ಯ ಭವಿಷ್ಯ

*ಜಾನುಕೊಂಡ ಶಾಮಾ ಶಾಸ್ತ್ರೀ

ಮೇಷ : ನೀವು ಎಂದೋ ಆರಂಭಿಸಿದ ಯೋಜನೆ ಇವತ್ತು ನಿಮ್ಮ ಕೈಗೆ ಒಂದಿಷ್ಟು ಹಣತಂದಿಡಬಹುದು. ಮತ್ತೆ ಬಂಡವಾಳ ಹೂಡುವುದಕ್ಕೆ ತೊಂದರೆ ಇಲ್ಲ. ಆದರೆ ನಿಧಾನಿಸಬೇಡಿ. ಹಾಗೆಂದು ನಿರ್ಧಾರಗಳನ್ನು ತೆಗೆದುಕೊಳ್ಳುವಾಗ ಅವಸರ ಬೇಡ.

ವೃಷಭ : ಬದಲಾವಣೆ ಬೇಕು ಅಂತ ಸುಖಾ ಸುಮ್ಮನೇ ಮನಸ್ಸು ಕಿರಿಕಿರಿ ಮಾಡಿಕೊಳ್ಳುತ್ತೀರಿ. ನಿಮ್ಮ ಸಹಾಯದ ಅಗತ್ಯವಿರುವವರನ್ನು ಬಿಟ್ಟು ಬೇರೆ ದಿಕ್ಕಿನತ್ತ ಮುಖ ಮಾಡಿ ಕುಳಿತರೆ ಲಾಭವಿಲ್ಲ. ಹಠಮಾರಿತನ ತೋರಿಸಲು ನೀವೇನು ಮಗುವೇ ?

ಮಿಥುನ : ಭಂಗಿ ಕುಡಿದವರಂತೆ ಒಮ್ಮೆಲೇ ಇದ್ದ ಬದ್ದ ಎಲ್ಲಾ ಕೆಲಸಗಳಲ್ಲಿ ನಿಮ್ಮನ್ನು ತೊಡಗಿಸಿಕೊಳ್ಳಬೇಡಿ. ಬೆದರಿಸುತ್ತಿರುವ ಆರೋಗ್ಯದತ್ತ ಗಮನವಿರಲಿ.

ಕಟಕ : ಆಟೋಟಗಳಲ್ಲಿ ಭಾಗವಹಿಸುತ್ತೀರಾ ? ಗುಡ್‌ ಡೇ. ಕಪ್‌ ಗೆದ್ದುಕೊಂಡೇ ಬರುತ್ತೀರಿ. ಮಾನಸಿಕವಾಗಿ ಬಳಲಿದ ಹಾಗೆ ಅನಿಸಬಹುದು. ಆದರೆ ಮನಸ್ತಾಪಗಳಿಂದಲೇ ದಿನ ಹಾಳು ಮಾಡಿಕೊಳ್ಳುತ್ತೀರಿ.

ಸಿಂಹ : ವಾದ ಮಾಡಬೇಕೆಂಬ ಅತ್ಯಾಸೆಯನ್ನು ಒತ್ತಿಟ್ಟುಕೊಳ್ಳಿ. ಸಮಯ ಪಕ್ವವಾಗಿಲ್ಲ. ನಿಮ್ಮ ಕ್ಷೇತ್ರದಲ್ಲಿ ನೀವು ಕಲಿಯಬೇಕಾದುದು ಇನ್ನೂ ತುಂಬಾ ಇದೆ ಎನ್ನುವುದನ್ನು ಆಗಾಗ ಮರೆಯುತ್ತೀರಲ್ಲ.

ಕನ್ಯಾ : ಗಲಾಟೆಯಲ್ಲಿ ಸಿಕ್ಕಿ ಹಾಕಿಕೊಳ್ಳುವ ಪ್ರಸಂಗ ಬರಬಹುದು. ಒಂಟಿ ಪ್ರಯತ್ನ ಬೇಡ. ನಿಮ್ಮ ಗುಂಪಿನವರನ್ನು ಎದುರು ಹಾಕಿಕೊಂಡರೆ ಕೆಲಸ ಕೆಡುತ್ತದೆ.

ತುಲಾ : ರಾಶಿ ಕೆಲಸಗಳನ್ನು ಮಾಡಿ ಮುಗಿಸಬೇಕು ಎಂದುಕೊಂಡು ದಿನಗಳೇ ಕಳೆದುವು. ಇವತ್ತು ಅವುಗಳಿಗೆಲ್ಲಾ ಒಂದು ಗತಿ ಕಾಣಿಸಿ. ಉದಾಸೀನ ಗೆದ್ದರೆ ಇವತ್ತೆಲ್ಲಾ ಕೈತುಂಬಾ ಕೆಲಸ.

ವೃಶ್ಚಿಕ : ನಿಮ್ಮ ಮುಂದೆ ಒಂದು ಖುಷಿಯ ದಿನ ನಿಂತಿದೆ. ಮನೆಯ ಸಣ್ಣ ಪುಟ್ಟ ವಿರಸ, ನೋವು, ಮಕ್ಕಳು ಮರಿಗಳ ಹಿತವಾದ ಕಾಟದಿಂದ ನೀವೇ ಮನಸ್ಸನ್ನು ಘಾಸಿ ಮಾಡಿಕೊಳ್ಳದಿದ್ದರೆ ಆಯ್ತು.

ಧನಸ್ಸು : ನಿಮ್ಮ ಉದಾರತೆ ಆಫೀಸಿನಲ್ಲಿ ಜನಪ್ರಿಯತೆ ತಂದು ಕೊಡಬಹುದು. ಸಾಲ ಕೇಳಿದವರು ನಿಮ್ಮ ಕೈ ಸುಡುವುದಿಲ್ಲ . ಸಹೋದ್ಯೋಗಿಗಳು ನಿಮ್ಮನ್ನು ಒಳ್ಳೆಯ ಮನುಷ್ಯ ಎಂದುಕೊಳ್ಳುತ್ತಾರೆ.

ಮಕರ : ಹೊಸದಾಗಿ ಬರುವ ಯೋಚನೆಗಳು, ಐಡಿಯಾಗಳು ನಿಮ್ಮನ್ನು ಕಾಡುತ್ತಿರುತ್ತವೆ. ಹಾಗೆಂದು ಹೆಚ್ಚು ಆಯಾಸ ಮಾಡಿಕೊಳ್ಳಬೇಡಿ. ಆರೋಗ್ಯ ಜೋಪಾನ. ಆರೋಗ್ಯಕರ ಸ್ಪರ್ಧೆ ನಿಮ್ಮನ್ನು ಮುಂದೆ ನಡೆಸುತ್ತದೆ.

ಕುಂಭ : ಮೂಡ್‌ ಕೆಡಿಸಿಕೊಂಡರೆ ಯಾರು ಏನು ಮಾಡುವುದಕ್ಕಾಗುತ್ತದೆ ? ಅತಿಯಾಗಿ ಯೋಚನೆ ಮಾಡಬಾರದು. ಮುಂದಾಲೋಚನೆ ಮಿತಿ ದಾಟಿದರೆ ಮಾನಸಿಕವಾಗಿ ಬಳಲುತ್ತೀರಲ್ಲವಾ ? ಸುಮ್ಮನೇ ಇವತ್ತು ಸಂಜೆ ಗೆಳೆಯರ ಮನೆಗೆ ದಿಢೀರಿ ಭೇಟಿ ಯಾಕೆ ನೀಡಬಾರದು.

ಮೀನ : ಇವತ್ತು ಧನ ಲಾಭದ ನಿರೀಕ್ಷೆ ಇದೆ. ಹೊಸ ಗಾಳಿಗೆ ಮರುಳಾಗದಿದ್ದರೆ, ಮನೆಯಲ್ಲಿ ಶುಭಕಾರ್ಯವಿರಬಹುದು.

ಮುಖಪುಟ / ಇವತ್ತು... ಈ ಹೊತ್ತು...

More From
Prev
Next
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+