2008 ರೊಳಗೆ 120 ಮಿಲಿಯನ್ ಇಂಟರ್ನೆಟ್ ಬಳಕೆದಾರರು - ನಾಸ್ಕಾಮ್
ಬೆಂಗಳೂರು : ಪ್ರಸ್ತುತ ಪರ್ಸನಲ್ ಕಂಪ್ಯೂಟರ್/ ಇನ್ಫರ್ಮೇಶನ್ ಡಿವೈಸ್ಗಳನ್ನು ಬಳಸುತ್ತಿರುವ ಸಂಖ್ಯೆ 5 ಮಿಲಿಯನ್ನಿಂದ 2008 ರೊಳಗೆ 30 ಮಿಲಿಯನ್ ಮುಟ್ಟುತ್ತದೆಂದು ನ್ಯಾಶನಲ್ ಅಸೋಸಿಯೇಶನ್ ಆಫ್ ಸಾಫ್ಟ್ವೇರ್ ಅಂಡ್ ಸರ್ವೀಸಸ್ ಕಂಪನೀಸ್(ನಾಸ್ಕಾಮ್) ಸಮೀಕ್ಷೆ ತಿಳಿಸಿದೆ.
ಇದೇ ವೇಳೆಯಲ್ಲಿ ಪ್ರಸ್ತುತ ಇರುವ 1.8 ಮಿಲಿಯನ್ ಇಂಟರ್ನೆಟ್ ಗ್ರಾಹಕರ ಸಂಖ್ಯೆ 50 ಮಿಲಿಯನ್ ಮುಟ್ಟುವುದು ಹಾಗೂ ಶೇ. 47 ರ ವೇಗದಲ್ಲಿ ಹೆಚ್ಚಳವಾಗುತ್ತಿರುವ ಇಂಟರ್ನೆಟ್ ಬಳಕೆದಾರರ ಸಂಖ್ಯೆ 5.5 ಮಿಲಿಯನ್ನಿಂದ 120 ಮಿಲಿಯನ್ ಮುಟ್ಟುವುದು.
ಅಂತೆಯೇ ಕೇಬಲ್ ಟಿವಿ ಗ್ರಾಹಕರ ಸಂಖ್ಯೆ 38 ಮಿಲಿಯನ್ನಿಂದ 70 ಮಿಲಿಯನ್ಗೆ, ಫಿಕ್ಸಡ್ ಫೋನ್ ಬಳಕೆದಾರರ ಸಂಖ್ಯೆ 28 ಮಿಲಿಯನ್ನಿಂದ 125 ಮಿಲಿಯನ್ಗೆ ಹಾಗೂ ದೂರದರ್ಶನ ಸೆಟ್ಗಳ ಸಂಖ್ಯೆ 75 ಮಿಲಿಯನ್ನಿಂದ 225 ಮಿಲಿಯನ್ಗೆ ಏರಿಕೆಯಾಗುವುದು ಎಂದು ನಾಸ್ಕಾಮ್ ತಿಳಿಸಿದೆ. ಸಮೀಕ್ಷೆ ತಿಳಿಸಿರುವ ಇತರ ಪ್ರಮುಖ ಅಂಕಿ ಅಂಶಗಳು -
- 1999- 2000 ಹಣಕಾಸಿನ ವರ್ಷದಲ್ಲಿ ಇಂಟರ್ನೆಟ್ ಸಂಪರ್ಕಕ್ಕಾಗಿ ಮಾರಾಟವಾದ ಕಂಪ್ಯೂಟರ್ಗಳಲ್ಲಿ ಪಿಸಿಗಳ ಪಾಲು ಶೇ. 81 ರಷ್ಟಿತ್ತು .
- ಇಂಟರ್ನೆಟ್ ಸಂಪರ್ಕಗಳ ಪೈಕಿ ಪ್ರತಿಶತ 77 ಸಂಪರ್ಕಗಳನ್ನು ರಾಜಧಾನಿ ನಗರಗಳು ಹೊಂದಿದ್ದರೆ, ಉಳಿದ ಶೇ. 23 ಸಂಪರ್ಕಗಳನ್ನು ಇತರ ನಗರ- ಪಟ್ಟಣಗಳು ಹಂಚಿಕೊಂಡಿವೆ.
- ಇಂಟರ್ನೆಟ್ ಬಳಸುವ ಶೇ. 50 ರಷ್ಟು ಮಂದಿ 18 ರಿಂದ 24 ರ ವಯೋಮಾನದವರು. ಶೇ. 13 ರಷ್ಟು ಮಂದಿ 18 ವರ್ಷದೊಳಗಿನವರು. ಶೇ. 27 ಮಂದಿ 25 ರಿಂದ 39 ರ ನಡುವಿನ ವಯಸ್ಕರು. ಶೇ. 7 ರಷ್ಟು ಮಂದಿ 40 ರಿಂದ 54 ವರ್ಷದವರು. ಆದರೆ, 55 ವರ್ಷ ಮೇಲ್ಪಟ್ಟ ಇಂಟರ್ನೆಟ್ ಬಯಸುವ ವಯಸ್ಕರ ಸಂಖ್ಯೆ ಶೇ. 3 ಮಾತ್ರ.
- ನಿತ್ಯ ಇಂಟರ್ನೆಟ್ ಬಳಸುವವರ ಸಂಖ್ಯೆ ಶೇ. 48 (ಡಿಸೆಂಬರ್ 2000). ಶೇ. 31 ರಷ್ಟು ಬಳಕೆದಾರರು ವಾರಕ್ಕೆ 2 ರಿಂದ 4 ಬಾರಿ ಇಂಟರ್ನೆಟ್ ಬಳಸಿದರೆ, ಶೇ. 10 ರಷ್ಟು ಮಂದಿ ವಾರಕ್ಕೊಮ್ಮೆ ಇಂಟರ್ನೆಟ್ಗೆ ಇಣಕುವರು. ಉಳಿದಂತೆ ಶೇ. 8 ಮಂದಿ 15 ದಿನಕ್ಕೊಮ್ಮೆ ಹಾಗೂ ನೂರಕ್ಕೆ ಮೂರು ಮಂದಿ ತಿಂಗಳಿಗೊಮ್ಮೆ ಇಂಟರ್ನೆಟ್ ಬಳಸುವರು.
More From
-
New Airport: ವಿಜಯಪುರ ಏರ್ಪೋರ್ಟ್ಗೆ ಸಿಕ್ತು 220 ಕೋಟಿ ರೂ, ಕಾರ್ಯಾಚರಣೆ ಬಗ್ಗೆ ಎಂಬಿ ಪಾಟೀಲ ಅಪ್ಡೇಟ್ -
Bengaluru Property: ಬೆಂಗಳೂರಿನ 3 ಲಕ್ಷಕ್ಕೂ ಅಧಿಕ ಆಸ್ತಿ ಮಾಲೀಕರಿಗೆ ಶುಭ ಸುದ್ದಿ -
"ಇಲ್ಲಿ ಎಲ್ಲದಕ್ಕೂ ಚೌಕಾಸಿ ಮಾಡಬೇಕು": ಬೆಂಗಳೂರಿನಲ್ಲಿ 2 ತಿಂಗಳು ಕಳೆದ ಮುಂಬೈ ಯುವಕನ Viral Post -
3 ವರ್ಷಕ್ಕೆ 1.17 ಕೋಟಿ: ಮಲೈಕಾ ಅರೋರಾ ಅಪಾರ್ಟ್ಮೆಂಟ್ ಬಾಡಿಗೆ ಬಹಿರಂಗ -
Karnataka Weather: ಬೇಸಿಗೆ ಬಿಸಿಲ ನಡುವೆ ರಾಜ್ಯದ ಹಲವೆಡೆ ಗುಡುಗು-ಮಿಂಚು ಸಹಿತ ಮಳೆ; ಈ ಜಿಲ್ಲೆಗಳಿಗೆ ಯೆಲ್ಲೋ ಅಲರ್ಟ್ -
April 4 Horoscope: ಇಂದು ನಿಮ್ಮ ರಾಶಿ ಏನು ಹೇಳುತ್ತದೆ? ಏಪ್ರಿಲ್ 4 ಭವಿಷ್ಯ ಇಲ್ಲಿದೆ -
HSRP: ಎಚ್ಎಸ್ಆರ್ಪಿ ನಂಬರ್ ಪ್ಲೇಟ್ ಕಡ್ಡಾಯ: ವದಂತಿಗಳಿಗೆ ಕಿವಿಗೊಡಬೇಡಿ ಎಂದು ಸ್ಪಷ್ಟನೆ ಕೊಟ್ಟ ಸಾರಿಗೆ ಇಲಾಖೆ -
Bengaluru: ಆಟೋ LPG ಕೊರತೆ ಬಗೆಹರಿಯುವ ವಿಶ್ವಾಸ: ಪೂರೈಕೆ ಹೆಚ್ಚಿಸಿದ ಇಂಡಿಯನ್ ಆಯಿಲ್ -
ರಾಜ್ಯಪಾಲರೇ ಗಂಟುಮೂಟೆ ಕಟ್ಟಿಕೊಂಡು ನಿಮ್ಮ ರಾಜ್ಯಕ್ಕೆ ತೊಲಗಿ: ಕರವೇ ನಾರಾಯಣಗೌಡ ಎಚ್ಚರಿಕೆ -
ಲಲಿತ್ಪುರ ಫಾರ್ಮಾ ಪಾರ್ಕ್ ಅನ್ನು ಜಾಗತಿಕ ರಫ್ತು ಕೇಂದ್ರವನ್ನಾಗಿ ಮಾಡುವ ನಿಟ್ಟಿನಲ್ಲಿ ಮಹತ್ವದ ಹೆಜ್ಜೆ -
40 ವರ್ಷ ಮೇಲ್ಪಟ್ಟವರಿಗೆ ಸರ್ಕಾರದಿಂದಲೇ ಉಚಿತ ದೃಷ್ಟಿ ತಪಾಸಣೆ, ಕನ್ನಡಕ ವಿತರಣೆ -
Bengaluru: ಸತತ 3ನೇ ವರ್ಷವೂ ರಾಜ್ಯಕ್ಕೇ ಪ್ರಥಮ ಸ್ಥಾನ: 1,273 ಕೋಟಿ ರೂ. ಆದಾಯ ಸಂಗ್ರಹಿಸಿದ ಬೆಂಗಳೂರು ಕೇಂದ್ರ RTO












Click it and Unblock the Notifications