ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಇಂಥ ಕ್ರುಷುಯಲ್‌ ಟೈಂನಲ್ಲಿ ಆಡಲಾಗುತ್ತಿಲ್ಲವಲ್ಲ : ಕುಂಬ್ಳೆ ವಿಷಾದ

By Staff
|
Google Oneindia Kannada News

ಚೆನ್ನೈ : ವಿಶ್ವ ಚಾಂಪಿಯನ್ನರanil kumble ವಿರುದ್ಧ ಆಡುವ ಅವಕಾಶ ಕಳಕೊಂಡು ವಿಷಾದ ತುಂಬಿಕೊಂಡಿರುವ ಕನ್ನಡಿಗ, ಲೆಗ್‌ಸ್ಪಿನ್ನರ್‌ ಅನಿಲ್‌ ಕುಂಬ್ಳೆ ಈಗ ಸಂಭವನೀಯ ಆಟಗಾರರ ತರಪೇತಿ ಶಿಬಿರದಲ್ಲಿದ್ದಾರೆ. ಮೊನ್ನೆಯಷ್ಟೇ ಬಲಭುಜದ ಶಸ್ತ್ರ ಚಿಕಿತ್ಸೆ ಮಾಡಿಸಿಕೊಂಡಿರುವ ಕುಂಬ್ಳೆ ಬುಧವಾರ ಐಐಟಿ ಚೆಮ್‌ಪ್ಲಾಸ್ಟ್‌ ಕ್ರೀಡಾ ಕಣದಲ್ಲಿ ಹರಟೆಗೆ ಸಿಕ್ಕರು...

ಮುನ್ನೂರು ಟೆಸ್ಟ್‌ ವಿಕೆಟ್‌ ಸಂಪಾದನೆಗೆ ನನಗೆ ಇನ್ನು 24 ವಿಕೆಟ್‌ ಬೇಕು. ಇಂಥ ಒಂದು ಕ್ರುಷುಯಲ್‌ ಟೈಮ್‌ನಲ್ಲಿ , ಅದೂ ಆಸ್ಟ್ರೇಲಿಯಾದಂಥ ಅತ್ಯುತ್ತಮ ತಂಡದ ವಿರುದ್ಧ ಆಡುವ ಭಾಗ್ಯ ನನಗಿಲ್ಲವಲ್ಲ ಎಂಬ ವಿಷಾದ. 300ರ ಗುರಿ ತಲುಪಲು ಇನ್ನಷ್ಟು ದಿನ ಕಾಯಬೇಕಲ್ಲಪ್ಪಾ ಎಂಬ ಬೇಸರ. ಆದರೆ ಏನ್ಮಾಡೋಕಾಗುತ್ತೆ ಹೇಳಿ ?

ಇನ್ನು 4 ತಿಂಗಳಲ್ಲಿ ನಾನು ಮತ್ತೆ ಬೌಲ್‌ ಮಾಡುತ್ತೇನೆ. ಹಾಗಂತ ಅದುವರೆಗೆ ಕ್ರಿಕೆಟ್‌ ಕಣದಿಂದ ಹೊರಗುಳಿಯೋದಿಲ್ಲ. ನನಗೆ ಗೊತ್ತಿರೋದನ್ನ ಬೇರೆ ಆಟಗಾರರೊಂದಿಗೆ ಹಂಚಿಕೊಳ್ಳೋದು, ಅವರಿಂದ ಕಲಿತುಕೊಳ್ಳೋದು ಇದ್ದೇ ಇದೆ. ಆ ಕಾರಣಕ್ಕೇ ನಾನು ಇಲ್ಲಿಗೆ ಬಂದಿರೋದು. ಹೊಸ ಸ್ಪಿನ್ನರ್‌ಗಳಿಗೆ ನನಗೆ ಗೊತ್ತಿರೋ ಕೆಲವು ಬೌಲಿಂಗ್‌ ತಂತ್ರಗಳನ್ನು ಹೇಳಿಕೊಡುತ್ತೇನೆ.

ಕುಂಬ್ಳೆ ಇಲ್ಲದ್ದು ಭಾರತದ ಸ್ಪಿನ್‌ ದಾಳಿಗೆ ದೊಡ್ಡ ಪೆಟ್ಟು ಎಂಬಂತಹ ಮಾತುಗಳನ್ನು ನಾನು ಒಪ್ಪೋದಿಲ್ಲ. ಶರಣ್‌ಜಿತ್‌ ಸಿಂಗ್‌, ಹರ್‌ಭಜನ್‌ ಸಿಂಗ್‌ ಹಾಗೂ ಮುರಳಿ ಕಾರ್ತಿಕ್‌ ಅವರಲ್ಲಿ ಪ್ರತಿಭೆ ಇದೆ. ನನ್ನ ಕೊರತೆಯನ್ನು ತುಂಬಬಲ್ಲ ಬೌಲಿಂಗ್‌ ಮೊನಚು ಅವರಲ್ಲಿ ಇಲ್ಲದೇ ಇಲ್ಲ.

ಆಸ್ಟ್ರೇಲಿಯಾ ವಿರುದ್ಧದ ಪಂದ್ಯಗಳು ಈವತ್ತಿನ ಪರಿಸ್ಥಿತಿಯಲ್ಲಿ ಬಹು ಮುಖ್ಯ. ನಮ್ಮ ಬ್ಯಾಟ್ಸ್‌ಮನ್‌ಗಳು ಸ್ಕೋರ್‌ ಬೋರ್ಡಿನ ತುಂಬಾ ಭರ್ತಿ ರನ್‌ ಬರೆದರೆ, ಎದುರಾಳಿಗಳ ನಿಯಂತ್ರಣವೇನೂ ಅಂಥ ಕಷ್ಟ ಆಗಲಿಕ್ಕಿಲ್ಲ. ನಮ್ಮ ನೆಲದಲ್ಲಿ ಬೌಲರ್‌ಗಳ ಸಾಮರ್ಥ್ಯ ನಿರೀಕ್ಷೆಯ ಮಟ್ಟಕ್ಕೆ ಇದ್ದೇ ಇರುತ್ತದೆ.

(ಯುಎನ್‌ಐ)

ವಾರ್ತಾಸಂಚಯ
ಮುಖಪುಟ / ಇವತ್ತು... ಈ ಹೊತ್ತು...

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X