Get Updates
Get notified of breaking news, exclusive insights, and must-see stories!

ಇನ್ನು ಮುಂದೆ ಕ್ರಿಕೆಟ್‌ ಆಡದವರು ಆಯ್ಕೆ ಸಮಿತಿ ಸದಸ್ಯರಾಗುವಂತಿಲ್ಲ

ಮುಂಬೈ : ಬುಧವಾರ 8 ತಾಸುಗಳ ದೀರ್ಘ ಕಾಲದ ಸಭೆ ನಡೆಸಿದ ಬಿಸಿಸಿಐನ ಕ್ರೀಡಾ ಸಂಹಿತೆ ಸಮಿತಿ ಈಗ ಇರುವ 5 ಮಂದಿ ದೊಡ್ಡವರ ಆಯ್ಕೆ ಸಮಿತಿ ಪದ್ಧತಿಯನ್ನೇ ಕ್ರಿಕೆಟ್‌ನಲ್ಲಿ ಮುಂದುವರೆಸಲು ನಿರ್ಧರಿಸಿತು. ಆದರೂ ಈ ಆಯ್ಕೆಯಲ್ಲಿ ಕೆಲವು ಪಾಬಂದಿಗಳನ್ನು ವಿಧಿಸಿ ಮಾರ್ಪಾಟು ಮಾಡಲು ಶಿಫಾರಸ್ಸು ಮಾಡಿತು. ಅವುಗಳೆಂದರೆ-

  • ಕ್ರಿಕೆಟಿಗ ನಿವೃತ್ತಿಯಾದ 20 ವರ್ಷಗಳ ಕಾಲ ಕ್ರೀಡೆಯ ಯಾವುದೇ ಚಟುವಟಿಕೆಗಳಲ್ಲಿ ತೊಡಗಿಕೊಳ್ಳದಿದ್ದರೆ ಅಂತಹವ ಆಯ್ಕೆ ಸಮಿತಿ ಸದಸ್ಯನಾಗಲು ಅನರ್ಹ
  • ಪ್ರತಿಯಾಂದು ವಲಯದ ಆಯ್ಕೆ ಸಮಿತಿ ಸದಸ್ಯನಾಗಲು ಕನಿಷ್ಠ 15 ಟೆಸ್ಟ್‌ ಪಂದ್ಯಗಳನ್ನಾಡಿರಬೇಕು
  • ಕನಿಷ್ಠ 20 ಮೊದಲ ದರ್ಜೆ ಪಂದ್ಯಗಳನ್ನಾಡಿದ್ದು, ಕ್ರಿಕೆಟಿಗನಾಗಿ ನಿವೃತ್ತಿಯಾಗಿ ಕನಿಷ್ಠ 5 ವರ್ಷಗಳಾಗಿರಬೇಕು
ಸಂಹಿತಾ ಸಮಿತಿಯ ಇನ್ನಷ್ಟು ಶಿಫಾರಸ್ಸುಗಳು-

  • ಬಿಸಿಸಿಐನ ಕಾರ್ಯಕಾರಿ ಸಮಿತಿಯಲ್ಲಿ ಅಧ್ಯಕ್ಷ, ಕಾರ್ಯದರ್ಶಿ, ಜಂಟಿ ಕಾರ್ಯದರ್ಶಿ, ಖಜಾಂಚಿ ಹಾಗೂ ಐದೂ ವಲಯಗಳ ಪ್ರತಿನಿಧಿಗಳೂ ಸೇರಿದಂತೆ 23 ಸದಸ್ಯರಿರರಬೇಕು
  • ಕಾರ್ಯಕಾರಿ ಸಮಿತಿ ಸಭೆಯಲ್ಲಿ ಐದು ಉಪಾಧ್ಯಕ್ಷರಿಗೆ ಮತ ಹಾಕುವ ಹಕ್ಕು ಇರುತ್ತದೆ
  • ಬಿಸಿಸಿಐಗೆ ಅಧ್ಯಕ್ಷರ ನೇಮಕಾತಿ ವಲಯಗಳ ಸರದಿಯಲ್ಲಿ ಆಗಬೇಕು. ಕೇಂದ್ರ, ದಕ್ಷಿಣ, ಪೂರ್ವ, ಉತ್ತರ ಹಾಗೂ ನಂತರ ಪಶ್ಚಿಮ ಈ ಸರದಿಯಲ್ಲಿ ಒಂದೊಂದು ವಲಯದಿಂದಲೂ ಒಬ್ಬೊಬ್ಬ ಅಧ್ಯಕ್ಷರನ್ನು ಒಬ್ಬರಾದ ಮೇಲೊಬ್ಬರಂತೆ ಆಯ್ಕೆ ಮಾಡಬೇಕು
  • ಕಾರ್ಯದರ್ಶಿ ಮತ್ತು ಖಜಾಂಚಿಯ ಅಧಿಕಾರ ಕಾಲಾವಧಿ 5 ವರ್ಷಗಳು
  • ಒಬ್ಬ ಅಭ್ಯರ್ಥಿ ಸತತ 3 ವರ್ಷ ಮಾತ್ರ ಅಧ್ಯಕ್ಷ ಹುದ್ದೆಯ ಮರು ಚುನಾವಣೆಯಲ್ಲಿ ಸ್ಪರ್ಧಿಸಬಹುದು
  • ವಾರ್ಷಿಕ ಸಾಮಾನ್ಯ ಸಭೆಗೆ ನಡೆಯುವ ಚುನಾವಣೆಗಳಲ್ಲಿ ಜನಸತ್ತಾತ್ಮಕ ನೀತಿಯನ್ನು ಅಳವಡಿಸಿಕೊಳ್ಳಬೇಕು
  • ಚುನಾವಣೆ ನಡೆಯುವ 24 ಗಂಟೆಗಳೊಳಗೆ ಯಾವುದೇ ಹುದ್ದೆಯ ಚುನಾವಣೆಗೆ ನಾಮಪತ್ರ ಸಲ್ಲಿಸಬಹುದು
  • ಕಾರ್ಯಕಾರಿ ವಾರ್ಷಿಕ ಸಭೆಗಾಗಲೀ, ಕಾರ್ಯಕಾರಿ ಸಮಿತಿಯ ಸಭೆಗಳಿಗಾಗಲೀ ಹಾಜರಾಗುವ ಪ್ರತಿನಿಧಿಗಳ ಹೆಸರನ್ನು 7 ದಿನ ಮುಂಚೆ ಸಂಬಂಧಪಟ್ಟ ಪ್ರಾಧಿಕಾರ ಮಂಡಲಿಯ ಕಾರ್ಯದರ್ಶಿಗೆ ಲಿಖಿತ ಸಂದೇಶದ ಮೂಲಕ ತಿಳಿಸಬೇಕು.
ಆಂಧ್ರಪ್ರದೇಶ್‌ ಕ್ರಿಕೆಟ್‌ ಒಕ್ಕೂಟದ ಸುಬ್ಬರಾವ್‌, ವಿದರ್ಭಾ ಕ್ರಿಕೆಟ್‌ ಒಕ್ಕೂಟದ ಶಶಾಂಕ್‌ ಮನೋಹರ್‌, ತಮಿಳುನಾಡು ಕ್ರಿಕೆಟ್‌ ಒಕ್ಕೂಟದ ಅಂೋಕ್‌ ಕುಂಭಟ್‌ ಹಾಗೂ ಬಿಸಿಸಿಐ ಖಜಾಂಚಿ ಕಿಶೋರ್‌ ರುಂಗ್ಟಾ ಸಭೆಯಲ್ಲಿ ಹಾಜರಿದ್ದ ಪ್ರಮುಖರು. ಸಮಿತಿಯ ಈ ಶಿಫಾರಸ್ಸುಗಳನ್ನು ಚೆನ್ನೈನಲ್ಲಿ ಈ ತಿಂಗಳ ಅಂತ್ಯದಲ್ಲಿ ನಡೆಯಲಿರುವ ವಿಶೇಷ ಸಾಮಾನ್ಯ ಸಭೆಯಲ್ಲಿ ಮಂಡಿಸಿ, ಅಂತಿಮ ರೂಪು ಕೊಡಲಾಗುವುದು.

(ಯುಎನ್‌ಐ)

More From
Prev
Next
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+