Get Updates
Get notified of breaking news, exclusive insights, and must-see stories!

ಬೆಟ್ಟಿಂಗನ್ನು ಕಾನೂನು ಬದ್ಧವಾಗಿಸಿ : ಜಹೀರ್‌ ಅಬ್ಬಾಸ್‌

ದುಬೈ : ಕ್ರಿಕೆಟ್ಟಿಗೆ ಬಳಿದಿರುವ ಬೆಟ್ಟಿಂಗ್‌ ಹಗರಣದ ಮಸಿ ಇನ್ನೂ ಸಂಪೂರ್ಣವಾಗಿ ಅಳಿಸಿಲ್ಲ. ಇಂಥ ಸಂದರ್ಭದಲ್ಲೇ ಬೆಟ್ಟಿಂಗನ್ನು ಕಾನೂನಾತ್ಮಕವಾಗಿಸುವ ಸಲಹೆಯನ್ನು ಪಾಕಿಸ್ತಾನದ ಕ್ರಿಕೆಟ್‌ ತಂಡದ ಮಾಜಿ ನಾಯಕರೊಬ್ಬರು ಕೊಟ್ಟಿದ್ದಾರೆ.

ವಿಶ್ವದ ಅನೇಕ ದೇಶಗಳಲ್ಲಿ ಬೆಟ್ಟಿಂಗ್‌ಗೆ ಕಾನೂನಿನ ಸಮ್ಮತಿ ದೊರೆತಿದೆ. ಏಷ್ಯಾದಲ್ಲೂ ಇದನ್ನು ಯಾಕೆ ಆಚರಣೆಗೆ ತರಬಾರದು ಎಂದು ಪ್ರಶ್ನಿಸುವ ಜಹೀರ್‌ ಅಬ್ಬಾಸ್‌, ಮ್ಯಾಚ್‌ಫಿಕ್ಸಿಂಗನ್ನು ವಿರೋಧಿಸುತ್ತಾರೆ. ಬೆಟ್ಟಿಂಗನ್ನು ಕಾನೂನಾತ್ಮಕಗೊಳಿಸಿದರೆ ಆಟಗಾರರು ತೀರಾ ಕೆಳ ಮಟ್ಟಕ್ಕೆ ಇಳಿಯೋದನ್ನ ತಪ್ಪಿಸಬಹುದು ಎಂಬುದು ಇವರ ವಾದ.

ಭಾರತ- ಪಾಕ್‌ ಕ್ರಿಕೆಟ್ಟಿನಲ್ಲಿ ರಾಜಕೀಯ : ಗಲ್ಫ್‌ ನ್ಯೂಸ್‌ಗೆ ನೀಡಿರುವ ಸಂದರ್ಶನದಲ್ಲಿ ಜಹೀರ್‌, ಭಾರತ ಹಾಗೂ ಪಾಕ್‌ ನಡುವೆ ಕ್ರಿಕೆಟ್‌ಗೆ ತಡೆ ಹಾಕುತ್ತಿರುವ ಬಗ್ಗೆ ವಿಷಾದ ವ್ಯಕ್ತಪಡಿಸಿದರು. ಕ್ರೀಡಾ ಕ್ಷೇತ್ರದಲ್ಲಿ ರಾಜಕೀಯ ತಲೆ ತೂರಿಸುವುದು ತರವಲ್ಲ. ಇಡೀ ಆಟದ ಆರೋಗ್ಯಕರ ವಾತಾವರಣದ ಮೇಲೆ ಅದು ವ್ಯತಿರಿಕ್ತ ಪರಿಣಾಮ ಬೀರುತ್ತದೆ. ಷಾರ್ಜಾ ಆಗಲೀ, ಭಾರತದ ನೆಲವೇ ಆಗಲೀ ಅಥವಾ ಮತ್ತಾವುದೋ ದೇಶದಲ್ಲೇ ಆಗಲಿ ಭಾರತ ಹಾಗೂ ಪಾಕ್‌ ನಡುವಣ ಕ್ರಿಕೆಟ್‌ನ ರೋಮಾಂಚನ ಕ್ಷಣಗಳನ್ನು ನಾನು ಇದಿರುನೋಡುತ್ತೇನೆ ಎಂದಿದ್ದಾರೆ.

ಮಾರ್ಕ್‌ ವಾ ಧೋರಣೆ ಪಾಠವಾಗಲಿ : ವಿಚಾರಣೆಗಾಗಿ ಐಸಿಸಿ ನೀಡಿದ ಬುಲಾವಿಗೆ ಮಾರ್ಕ್‌ ವಾ ಮೊದಲು ನಿರಾಕರಿಸಿದ್ದು, ಐಸಿಸಿ ಅಂಥ ಬಲಾಢ್ಯ ಸಂಸ್ಥೆಯೇನೂ ಅಲ್ಲ ಎಂಬ ಅನುಮಾನಗಳನ್ನು ಹುಟ್ಟು ಹಾ ಕಿದೆ. ಈ ಪ್ರಕರಣ ಇತರೆ ಕ್ರಿಕೆಟಿಗರ ಉಡಾಫೆಗೂ ಎಡೆ ಮಾಡಿಕೊಡುವ ಅಪಾಯವಿದೆ. ಆಸ್ಟ್ರೇಲಿಯಾ ಕ್ರಿಕೆಟ್‌ ಮಂಡಲಿ ಮಾರ್ಕ್‌ ವಾ ಅವರ ವರ್ತನೆಯನ್ನು ಗಂಭೀರವಾಗಿ ತೆಗೆದುಕೊಂಡು ಸೂಕ್ತ ಕ್ರಮ ಕೈಗೊಳ್ಳುವುದು ಒಳ್ಳೆಯದು ಎಂಬುದು ಜಹೀರ್‌ ಸಲಹೆ.

ಪಾಕ್‌ ತರಬೇತುದಾರರಾಗಿ ಬಾಯ್ಕಾಟ್‌ : ಇಂಗ್ಲೆಂಡ್‌ನ ಮಾಜಿ ನಾಯಕ ಹಾಗೂ ನಿರ್ದಾಕ್ಷಿಣ್ಯ ವ್ಯಕ್ತಿ ಜಫ್ರಿ ಬಾಯ್ಕಾಟ್‌ ಅವರನ್ನು ಪಾಕಿಸ್ತಾನ ಕ್ರಿಕೆಟ್‌ ಮಂಡಲಿ ತರಬೇತುದಾರರನ್ನಾಗಿ ನೇಮಿಸಿಕೊಂಡಿದೆ. ಇಂಥ ವ್ಯಕ್ತಿಗೆ ತೆರುತ್ತಿರುವ ಫೀಸು ಅಷ್ಟಿಷ್ಟೇನೂ ಅಲ್ಲ. ಇದನ್ನು ಮಂಡಲಿಯ ಕೆಲವರು ವಿರೋಧಿಸಿದ್ದೂ ಉಂಟು. ಆದರೆ ಜಹೀರ್‌ ಮಂಡಲಿಯ ಈ ನಿರ್ಣಯವನ್ನು ಸಮರ್ಥಿಸುತ್ತಾರೆ. ಇಂಥ ಒಂದು ನಿರ್ಣಯ ಕೈಗೊಳ್ಳುವ ಮುನ್ನ ಮಂಡಲಿ ಖಂಡಿತ ಎರಡು ಮೂರು ಬಾರಿ ಯೋಚಿಸಿರುತ್ತದೆ. ಈ ಯೋಜನೆ ಕ್ಲಿಕ್‌ ಆದರೂ ಆಗಬಹುದಲ್ಲವೇ ಎಂಬ ವಿಶ್ವಾಸ ಅವರದು.

ಪಾಕ್‌ನ ಕ್ರಿಕೆಟ್‌ ಭವಿತವ್ಯದ ಬಗ್ಗೆ ಗಂಭೀರವಾಗಿ ಯೋಚಿಸುತ್ತಿರುವ ಈತ, ಇಮ್ರಾನ್‌ ನಜೀರ್‌ ಅವರಂಥ ಯುವ ಪ್ರತಿಭೆಗಳಿಗೆ ಹೆಚ್ಚು ಹೆಚ್ಚು ಅವಕಾಶ ನೀಡಬೇಕು. ಆತನಲ್ಲಿ ಸಾಕಷ್ಟು ಆಟವಿದೆ. ಅದನ್ನು ಸರಿಯಾದ ರೀತಿಯಲ್ಲಿ ಅಭಿವೃದ್ಧಿಪಡಿಸಬೇಕಷ್ಟೆ ಎನ್ನುತ್ತಾರೆ ಐಸಿಸಿಯ ತಾಂತ್ರಿಕ ಸಮಿತಿಯಲ್ಲಿ ಪಾಕ್‌ನ ಪ್ರತಿನಿಧಿಯಾಗಿರುವ ಜಹೀರ್‌.

(ಯುಎನ್‌ಐ)

More From
Prev
Next
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+