Get Updates
Get notified of breaking news, exclusive insights, and must-see stories!

ದಿಸ್‌ ಈಸ್‌ ಸಮ್ಮರ್‌ !

ಅಕ್ಟೋಬರ್‌ನ ಚಳಿಗಾಲದ ದಿನಗಳಲ್ಲಿಯೂ ಮಳೆ ನುಸುಳಿ ನುಸುಳಿ ಬರುತ್ತಿದ್ದದ್ದು ಗೊತ್ತಲ್ಲ ! ಆದರೆ ಫೆಬ್ರವರಿ ಬರುವುದೇ ತಡ . ಚಳಿ ಮುದುರಿ ಮಲಗಿದೆ. ಬೆಳಿಗ್ಗೆ ಆಫೀಸಿಗೆ ಬಂದ ಕೂಡಲೇ ಕೈ ಎಸಿ ಸ್ವಿಚ್‌ನ ಮೇಲೆ ಹೋಗುತ್ತದೆ. ಶೂಸ್‌ನೊಳಗೆ ಬೇಯುವ ಕಾಲು ಸೆಕೆಗಾಲ ಬಂದಿದೆ ಅಂತ ಸಾರಿದರೆ, ವಾರ್ಡ್‌ರೋಬಿನಲ್ಲಿ ಕಾಟನ್‌ ಸೀರೆ, ಶರಟುಗಳು ತೂಗುತ್ತಿವೆ.

ಸನ್‌ ಬರ್ನ್‌, ಸುಡುಬಿಸಿಲಿಗೆ ನಿಮ್ಮ ಚರ್ಮ ಕಪ್ಪಾಗುವುದನ್ನು ತಡೆಯಲು ಕ್ರೀಮ್‌ ಕಂಪೆನಿಗಳು ಸಾಲು ಸಾಲು ಹೊಸ ನಮೂನೆಯ ಕ್ರೀಮುಗಳ ಜಾಹೀರಾತು. ಮಕ್ಕಳ ಮುಂದೆ ದೆವ್ವದಂತೆ ನಿಂತಿರುವ ಪರೀಕ್ಷೆಗಳು, ಮತ್ತೆ ಆ ಭೂತದ ಹಿಂದೆ ಅವಿತು ಕೂತಿರುವ ಸಮ್ಮರ್‌ ಕ್ಯಾಂಪ್‌ಗಳು... ಫೆಬ್ರವರಿಯನ್ನು ಒಂಥರಾ ಬೆಚ್ಚಗೆ ಇರಿಸಿದೆ.

ಈ ಕಿಲಕಿಲಾಟದ ನಡುವೆಯೇ ಆಳಕ್ಕಿಳಿಯುತ್ತಿರುವ ಬಾವಿ ನೀರು, ಪಕ್ಕದ ಮನೆಯ ಹಳೇ ಬಾವಿಯಾಳದಲ್ಲಿ ಹಾಕಿರುವ ನೆಲ್ಲಿ ಹಲಗೆಯ ಹತ್ತಿರ ಸಾಗುತ್ತಿರುವ ನೀರು, ಓಡಾಡಲು ಜಾಗ ಸಾಲದೇ ಕೊಡಪಾನದೊಳಗೆ ಸಿಕ್ಕಿ ಹಾಕಿಕೊಂಡು ಮೇಲೆ ಬರುವ ಮೀನುಗಳು... ಏಪ್ರಿಲ್‌ನ ಧಗೆಯ ಕೆಟ್ಟ ನೆನಪು ತರುತ್ತವೆ.

ಟೆಂಪರೇಚರ್‌ನ ಸವಾರಿ ವಾರ್ತೆ ಕೇಳುವುದಿದ್ದರೆ, ಬೆಳಗಾಂನಲ್ಲಿ ಕಡಿಮೆ ಅಂದರೆ 15.3 ಸೆಲ್ಷಿಯಸ್‌ ದಾಖಲಾಗಿದೆ. ಬೆಂಗಳೂರಿನಲ್ಲಿ 14, 15ರ ಆಸು ಪಾಸಿನಲ್ಲಿದ್ದು, ಬೆಳಗ್ಗಿನ ಕೆಲಸಗಳನ್ನು ಅಸ್ತವ್ಯಸ್ತಗೊಳಿಸುತ್ತಿದ್ದ ಹವೆ ಇವತ್ತು 21 ಡಿಗ್ರಿಗೇರಿ ‘ದಿಸ್‌ ಈಸ್‌ ಸಮ್ಮರ್‌’ ಅಂತ ನೆನಪಿಸಿದೆ. ನಾಳೆ ನಾಡಿದ್ದೂ ಕೂಡ ಸೂರ್ಯ ನಿಮ್ಮ ಹುಡುಕಿಕೊಂಡು ಬರುವುದಿಲ್ಲ. ಮೋಡಗಳ ಟೆಂಟಿನಡಿಯಲ್ಲಿ ಕಣ್ಣ ಮುಚ್ಚಾಲೆ ಆಡುತ್ತಾನೆ ಅಂತ ಹವಾ ಇಲಾಖೆಯವರು ಹೇಳಿದ್ದಾರೆ. ಅದೇ ಮಾಮೂಲಿ, ಬೆಂಗಳೂರಿನಲ್ಲಿ ಮೋಡ ಮುಸುಕಿದ ವಾತಾವರಣ !

More From
Prev
Next
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+