ಮುಂಬಯಿ ಐಟಿ ಸಮಾವೇಶಕ್ಕೆ ದುಬೈ ಐಟಿ ಪ್ರತಿನಿಧಿಗಳು
ದುಬೈ : ಮುಂಬಯಿಯಲ್ಲಿ ನಡೆಯುವ ಮಾಹಿತಿ ತಂತ್ರಜ್ಞಾನ ಸಭೆ ಮತ್ತು ಪ್ರದರ್ಶನದಲ್ಲಿ ದುಬೈಯ ಇಂಟರ್ ನೆಟ್ಸಿಟಿ ಮತ್ತು ಅಲ್ಲಿನ ಇಂಡಿಯನ್ ಬಿಸಿನೆಸ್ ಕೌನ್ಸಿಲ್ನ ಪ್ರತಿನಿಧಿಗಳು ಭಾಗವಹಿಸಲಿದ್ದಾರೆ.
ನಾಲ್ಕು ದಿನಗಳ ಕಾಲ ನಡೆಯುವ ನಾಸ್ಕಾಮ್-2001 ಸಮ್ಮೇಳನವನ್ನು ರಾಷ್ಟ್ರೀಯ ಸಾಫ್ಟ್ವೇರ್ ಮತ್ತು ಸರ್ವೀಸ್ ಅಸೋಸಿಯೇಷನ್ (ನಾಸ್ಕಾಮ್) ಆಯೋಜಿಸಿದ್ದು, ಫೆಬ್ರವರಿ 7ರ ಬುಧವಾರ ಸಮಾವೇಶ ಉದ್ಘಾಟನೆಗೊಳ್ಳಲಿದೆ.
ದುಬೈ ಇಂಟರ್ನೆಟ್ ಸಿಟಿ ಕಳೆದ ಅಕ್ಟೋಬರ್ನಲ್ಲಷ್ಟೇ ಆರಂಭವಾಗಿದ್ದು, ಪ್ರಾದೇಶಿಕ ಮತ್ತು ಅಂತರರಾಷ್ಟ್ರೀಯ ಮಾರುಕಟ್ಟೆಗೆ ಪ್ರವೇಶಿಸುತ್ತಿದೆ. ಭಾರತೀಯ ಕಂಪೆನಿಗಳು ದುಬೈಯಲ್ಲಿ ಬಂಡವಾಳ ಹೂಡುವಂತೆ ಆಹ್ವಾನಿಸುವ ನಿರೀಕ್ಷೆಯೂ ಇದೆ.
ಮುಂಬಯಿಯ ಸಮಾವೇಶಕ್ಕೆ ಆಗಮಿಸುವ ಪ್ರತಿನಿಧಿಗಳ ಡಿಐಸಿಯ ನೇತೃತ್ವವನ್ನು ಮುಖ್ಯ ನಿರ್ವಹಣಾಧಿಕಾರಿ ಅಹ್ಮದ್ ಬಿನ್ ಬ್ಯಾಟ್ ವಹಿಸು-ವ-ರು. ಪ್ರಸ್ತುತ ಹೊರ ಹೊಮ್ಮುತ್ತಿರುವ ಮಾರುಕಟ್ಟೆಯ ಬಗ್ಗೆ ಅಹ್ಮದ್ ಅವರು ಗುರುವಾರ ಸಮ್ಮೇಳನದಲ್ಲಿ ಉಪನ್ಯಾಸ ನೀ-ಡು-ವ-ರು. ಐಟಿ ಮಾರುಕಟ್ಟೆಯ ಬಗ್ಗೆ ನಾಸ್ಕಾಮ್ ಸಮಾವೇಶದಲ್ಲಿ ಹಿರಿಯ ಸಾಫ್ಟ್ವೇರ್ ಮಾರ್ಕೆಟ್ ಪರಿಣತರಿಂದ ಉಪನ್ಯಾಸಗಳನ್ನು, ಗೋಷ್ಠಿಗಳನ್ನು ಹಮ್ಮಿಕೊಳ್ಳಲಾಗಿದೆ. ಇಂಡಿಯನ್ ಬಿಸಿನೆಸ್ ಕೌನ್ಸಿಲ್ನ ಪ್ರತಿನಿಧಿಗಳ ತಂಡ ಹರಿಪದ್ಮನಾಭನ್ ಅವರ ನೇತೃತ್ವದಲ್ಲಿ ಸಮಾವೇಶದಲ್ಲಿ ಭಾಗವಹಿಸಲಿದೆ.
(ಐಎಎನ್ಎಸ್)
-
New Airport: ವಿಜಯಪುರ ಏರ್ಪೋರ್ಟ್ಗೆ ಸಿಕ್ತು 220 ಕೋಟಿ ರೂ, ಕಾರ್ಯಾಚರಣೆ ಬಗ್ಗೆ ಎಂಬಿ ಪಾಟೀಲ ಅಪ್ಡೇಟ್ -
Bengaluru Property: ಬೆಂಗಳೂರಿನ 3 ಲಕ್ಷಕ್ಕೂ ಅಧಿಕ ಆಸ್ತಿ ಮಾಲೀಕರಿಗೆ ಶುಭ ಸುದ್ದಿ -
"ಇಲ್ಲಿ ಎಲ್ಲದಕ್ಕೂ ಚೌಕಾಸಿ ಮಾಡಬೇಕು": ಬೆಂಗಳೂರಿನಲ್ಲಿ 2 ತಿಂಗಳು ಕಳೆದ ಮುಂಬೈ ಯುವಕನ Viral Post -
3 ವರ್ಷಕ್ಕೆ 1.17 ಕೋಟಿ: ಮಲೈಕಾ ಅರೋರಾ ಅಪಾರ್ಟ್ಮೆಂಟ್ ಬಾಡಿಗೆ ಬಹಿರಂಗ -
Karnataka Weather: ಬೇಸಿಗೆ ಬಿಸಿಲ ನಡುವೆ ರಾಜ್ಯದ ಹಲವೆಡೆ ಗುಡುಗು-ಮಿಂಚು ಸಹಿತ ಮಳೆ; ಈ ಜಿಲ್ಲೆಗಳಿಗೆ ಯೆಲ್ಲೋ ಅಲರ್ಟ್ -
April 4 Horoscope: ಇಂದು ನಿಮ್ಮ ರಾಶಿ ಏನು ಹೇಳುತ್ತದೆ? ಏಪ್ರಿಲ್ 4 ಭವಿಷ್ಯ ಇಲ್ಲಿದೆ -
HSRP: ಎಚ್ಎಸ್ಆರ್ಪಿ ನಂಬರ್ ಪ್ಲೇಟ್ ಕಡ್ಡಾಯ: ವದಂತಿಗಳಿಗೆ ಕಿವಿಗೊಡಬೇಡಿ ಎಂದು ಸ್ಪಷ್ಟನೆ ಕೊಟ್ಟ ಸಾರಿಗೆ ಇಲಾಖೆ -
Bengaluru: ಆಟೋ LPG ಕೊರತೆ ಬಗೆಹರಿಯುವ ವಿಶ್ವಾಸ: ಪೂರೈಕೆ ಹೆಚ್ಚಿಸಿದ ಇಂಡಿಯನ್ ಆಯಿಲ್ -
ರಾಜ್ಯಪಾಲರೇ ಗಂಟುಮೂಟೆ ಕಟ್ಟಿಕೊಂಡು ನಿಮ್ಮ ರಾಜ್ಯಕ್ಕೆ ತೊಲಗಿ: ಕರವೇ ನಾರಾಯಣಗೌಡ ಎಚ್ಚರಿಕೆ -
ಲಲಿತ್ಪುರ ಫಾರ್ಮಾ ಪಾರ್ಕ್ ಅನ್ನು ಜಾಗತಿಕ ರಫ್ತು ಕೇಂದ್ರವನ್ನಾಗಿ ಮಾಡುವ ನಿಟ್ಟಿನಲ್ಲಿ ಮಹತ್ವದ ಹೆಜ್ಜೆ -
40 ವರ್ಷ ಮೇಲ್ಪಟ್ಟವರಿಗೆ ಸರ್ಕಾರದಿಂದಲೇ ಉಚಿತ ದೃಷ್ಟಿ ತಪಾಸಣೆ, ಕನ್ನಡಕ ವಿತರಣೆ -
Bengaluru: ಸತತ 3ನೇ ವರ್ಷವೂ ರಾಜ್ಯಕ್ಕೇ ಪ್ರಥಮ ಸ್ಥಾನ: 1,273 ಕೋಟಿ ರೂ. ಆದಾಯ ಸಂಗ್ರಹಿಸಿದ ಬೆಂಗಳೂರು ಕೇಂದ್ರ RTO












Click it and Unblock the Notifications