Get Updates
Get notified of breaking news, exclusive insights, and must-see stories!

ಮುಳುಗುತ್ತಿರುವ ಅರಿಶಿಣಕ್ಕೆ ಹುಲ್ಲುಕಡ್ಡಿ:ಅರಿಶಿಣ ಬೆಳೆಗಾರರ ವೇದಿಕೆ

ಹುಣಸೂರು : ಭತ್ತ, ಜೋಳ, ಟೊಮೆಟೋ... ಹೀಗೆ ಬೆಲೆ ಕುಸಿತಕ್ಕೆ ತುತ್ತಾದ ಬೆಳೆಗಳ ಸಾಲು ಉದ್ದವಾಗುತ್ತಿದ್ದಂತೆಯೇ ಈ ಸಾಲಿಗೆ ಅರಿಶಿಣ ಕೂಡ ಸೇರುತ್ತಿದೆ. ಈ ಬಾರಿ ಅರಿಶಿಣ ದ ಬೆಲೆ ಕ್ವಿಂಟಾಲ್‌ಗೆ 2,800 ರೂಪಾಯಿಯಿಂದ ಸಾವಿರ ರೂಪಾಯಿಯ ಆಸುಪಾಸಿಗಿಳಿದಿದೆ.

ಅರಿಶಿಣದ ಬೆಳೆ ಮಾರುಕಟ್ಟೆಯಲ್ಲಿ ನೆಲಕಚ್ಚುತ್ತಿರುವುದನ್ನು ಗಮನಿಸಿದ ರತ್ನ ಪುರಿಯ ರೈತರು ಅರಿಶಿಣ ಬೆಳೆಗಾರರ ವೇದಿಕೆಯನ್ನು ರಚಿಸಿದ್ದಾರೆ. ಶಕ್ತಿ ಕೃಷಿಕರ ವೇದಿಕೆ ಆಶ್ರಯದಲ್ಲಿ 9 ಮಂದಿ ರೈತರ ವೇದಿಕೆ ರಚಿಸಲಾಗಿದೆ. ಈ ತಿಂಗಳ ಕೊನೆಯಲ್ಲಿ ಸಂಸದ ಸಿ. ಎಚ್‌. ವಿಜಯ ಶಂಕರ ನೇತೃತ್ವದಲ್ಲಿ ವೇದಿಕೆಯ ಸದಸ್ಯರು ಕೊಚ್ಚಿನ್‌ನಲ್ಲಿರುವ ಕೇಂದ್ರ ಸರಕಾರದ ಮಂಡಳಿಗೆ ಭೇಟಿ ನೀಡುವರು. ಬೆಳೆ ಕುಸಿತದ ಕಾರಣಗಳನ್ನು ಅಧ್ಯಯನ ಮಾಡಿದ ನಂತರ ಮುಂದಿನ ಹೋರಾಟದ ಕ್ರಮಗಳನ್ನು ರೂಪಿಸಲು ವೇದಿಕೆ ನಿರ್ಧರಿಸಿದೆ.

ಅರಿಶಿಣ ಪುಡಿ ಮಾಡಲು 7ಸಾವಿರ ರೂ ಖರ್ಚೇ? : ಎರಡು ವರ್ಷಗಳ ಹಿಂದೆ ಕ್ವಿಂಟಾಲ್‌ ಅರಿಶಿಣದ ಬೆಲೆ 4 ಸಾವಿರ ರೂಪಾಯಿ. ಮೈಸೂರು, ಚಾಮರಾಜ ನಗರ, ರಾಯಚೂರು, ಬೀದರ್‌ ಮತ್ತು ಗುಲ್ಬರ್ಗಾ ಜಿಲ್ಲೆಗಳಲ್ಲಿ ಅರಿಶಿಣ ಬೆಳೆಯುವ ರೈತರಿಗೆ ಮಾರುಕಟ್ಟೆಯಿರುವುದು ಮಹಾಲಿಂಗಪುರದಲ್ಲಿ. ದಕ್ಷಿಣ ಕರ್ನಾಟಕದವರಿಗೆ ಈ ಮಾರುಕಟ್ಟೆ ದೂರವಾಗುವುದರಿಂದ ತಮಿಳುನಾಡಿನ ಈರೋಡ್‌ ಮಾರುಕಟ್ಟೆಗೇ ರೈತರು ಶರಣಾಗುತ್ತಾರೆ. ಅಲ್ಲೂ ಮತ್ತೆ ಮಧ್ಯವರ್ತಿಗಳ ಕಾಟ.

ಹೆಚ್ಚುತ್ತಿರುವ ಜನಸಂಖ್ಯೆಯಿಂದ ಅರಿಶಿಣಕ್ಕೆ ಬೇಡಿಕೆಯೂ ಹೆಚ್ಚಿದೆ. ಆದರೆ ರೈತನ ಕೈಯ್ಯಲ್ಲಿರುವ ಅರಿಶಿಣಕ್ಕೆ ಮಾತ್ರ ಮೂರು ಕಾಸಿಗಿಂತ ಹೆಚ್ಚು ಬೆಲೆ ಬರದೇ ಇರಲು ಕಾರಣವೇನು ಎನ್ನುವುದು ಗೊತ್ತಾಗುತ್ತಿಲ್ಲ. ಅಂಗಡಿಯಲ್ಲಿ 100 ಗ್ರಾಂ ಅರಿಶಿಣ ಪುಡಿಗೆ 8 ರೂಪಾಯಿ, ಆ ಪ್ರಕಾರ ಕ್ವಿಂಟಾಲ್‌ಗೆ 8 ಸಾವಿರ ರೂಪಾಯಿ. ರೈತನ ಕೈಗೆ ಬರೇ ಸಾವಿರ ರೂಪಾಯಿ ಸಿಗಬೇಕಿದ್ದರೆ, ಅರಿಶಿಣ ಪುಡಿ ಮಾಡಲು 7 ಸಾವಿರ ರೂಪಾಯಿ ಖರ್ಚಾಗುತ್ತದೆಯೇ ಎನ್ನುವುದು ರೈತರ ಪ್ರಶ್ನೆ.

(ಇನ್ಫೋ ವಾರ್ತೆ)

More From
Prev
Next
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+