ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಸಿಗರೇಟು- ಗುಟ್ಕಾ ಪ್ರೇಮಿಗಳಿಗೆ ಸರ್ಕಾರದ ಬ್ರೇಕು

By Staff
|
Google Oneindia Kannada News

ನವದೆಹಲಿ : ಸಾರ್ವಜನಿಕ ಸ್ಥಳಗಳಲ್ಲಿ ಧೂಮಪಾನ ನಿಷೇಧ, 18 ವರ್ಷದೊಳಗಿನ ಅಪ್ರಾಪ್ತರಿಗೆ ತಂಬಾಕು ಉತ್ಪನ್ನಗಳ ಮಾರಾಟಕ್ಕೆ ನಿಬಂಧನೆ ಸೇರಿದಂತೆ ತಂಬಾಕು ಉತ್ಪನ್ನಗಳ ಮಾರಾಟ ಮತ್ತು ವಿತರಣೆಗೆ ನಿಯಂತ್ರಣಗಳನ್ನು ಹೇರುವ ಮಸೂದೆಯನ್ನು ಬರುವ ಆಯವ್ಯಯ ಅಧಿವೇಶನದಲ್ಲಿ ಮಂಡಿಸಲು ಸರ್ಕಾರ ನಿರ್ಧರಿಸಿದೆ.

ಬುಧವಾರ ನಡೆದ ಸಂಪುಟ ಸಭೆಯ ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಸಂಸದೀಯ ವ್ಯವಹಾರಗಳ ಸಚಿವ ಪ್ರಮೋದ್‌ ಮಹಾಜನ್‌ ಈ ವಿಷಯ ತಿಳಿಸಿದರು. 1975 ರ ಸಿಗರೇಟ್‌ಗಳಿಗೆ ಸಂಬಂಧಿಸಿದ ಮಸೂದೆಯನ್ನು ಬದಲಿಸಲು ಸಂಪುಟ ಸಭೆ ನಿರ್ಧರಿಸಿದ್ದು , ನಿಯಮಗಳನ್ನು ಉಲ್ಲಂಘಿಸುವವರಿಗೆ ಜೈಲು ಅಥವಾ ದಂಡ ಅಥವಾ ಎರಡನ್ನೂ ವಿಧಿಸಲಾಗುವುದು.

ತಂಬಾಕು ಉತ್ಪನ್ನಗಳ ಗ್ರಾಹಕರಿಗೆ ಹೊಸ ಮಸೂದೆಯು ಇಷ್ಟವಾಗುವುದು ಕಷ್ಟ . ಆದರೆ, ಉದ್ದೇಶಿತ ಕಾಯಿದೆಯು ಧೂಮಪಾನ ಒಲ್ಲದವರ ಪರವಾಗಿದೆ ಎಂದು ಮಹಾಜನ್‌ ಹೇಳಿದರು. ತಂಬಾಕು ಸಂಬಂಧಿ ವ್ಯಾಧಿಗಳಿಂದ ಪ್ರತಿವರ್ಷ ವಿಶ್ವದಲ್ಲಿ 3 ಮಿಲಿಯನ್‌ ಸಾವು ಸಂಭವಿಸುತ್ತಿದ್ದು , ಈ ಪೈಕಿ 1 ಮಿಲಿಯನ್‌ ಸಾವು ಭಾರತದಿಂದಲೇ ವರದಿಯಾಗುತ್ತಿವೆ ಎಂದರು.

ಉದ್ದೇಶಿತ ಮಸೂದೆ ಕುರಿತಂತೆ ಸಂಪುಟ ಸಭೆ 45 ನಿಮಿಷಗಳ ಕಾಲ ಚರ್ಚಿಸಿತು. ತಂಬಾಕು ಉತ್ಪನ್ನಗಳ ಜಾಹಿರಾತು, ವಿತರಣೆ, ವಾಣಿಜ್ಯ ಮುಂತಾದವುಗಳ ನಿಯಂತ್ರಣವನ್ನೂ ಮಸೂದೆ ಹೊಂದಿರುತ್ತದೆ. ಸರ್ಕಾರದ ತಂಬಾಕು ವಿರೋಧಿ ಕಾರ್ಯಕ್ರಮಗಳಿಗೆ ಮಸೂದೆ ಬಲ ನೀಡುತ್ತದೆ ಎಂದು ಹೇಳಿದರು. ಮಸೂದೆಯ ಇನ್ನಿತೆರೆ ಮುಖ್ಯಾಂಶಗಳು -

  • ಪ್ಯಾಕ್‌ಗಳ ಮೇಲೆ ನಿಕೋಟಿನ್‌ ಮತ್ತು ಟಾರ್‌ ಪ್ರಮಾಣಗಳ ನಮೂದಿಸುವಿಕೆ
  • ಪಾಕೆಟ್‌ನ ಮೇಲಿನ ಶಾಸನ ವಿಧಿಸಿದ ಎಚ್ಚರಿಕೆಯನ್ನು ಇಂಗ್ಲೀಷಿನ ಜೊತೆಗೆ ಒಂದು ಪ್ರಾದೇಶಿಕ ಭಾಷೆಯಲ್ಲೂ ಮುದ್ರಿಸುವುದು
  • ಆಟ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಸಿಗರೇಟ್‌ ಅಥವಾ ತಂಬಾಕು ಉತ್ಪನ್ನಗಳು ಪ್ರಾಯೋಜಿಸುವುದಕ್ಕೆ ಸಂಪೂರ್ಣ ತಡೆ
ತಂಬಾಕು ಉತ್ಪನ್ನಗಳಿಗೆ ಸಂಬಂಧಿಸಿದ ತೆರಿಗೆಯಿಂದ ಪ್ರತಿವರ್ಷ ಸುಮಾರು 6 ಸಾವಿರ ರುಪಾಯಿ ಸಂಗ್ರಹವಾಗುತ್ತಿದೆ. ಆದರೆ, ತಂಬಾಕು ಸಂಬಂಧಿ ವ್ಯಾಧಿಗಳ ಚಿಕಿತ್ಸೆಗೆ ವಾರ್ಷಿಕ 13,517 ಕೋಟಿ ರು. ಖರ್ಚಾಗುತ್ತಿದೆ ಎಂದು ಅಂಕಿ ಅಂಶಗಳನ್ನು ನೀಡಿದ ಮಹಾಜನ್‌, ಈಗಾಗಲೇ 55 ರಾಷ್ಟ್ರಗಳು ತಂಬಾಕು ಬಳಕೆಯನ್ನು ಕಡಿಮೆ ಮಾಡುವ ಉದ್ದೇಶದಿಂದ ಶಾಸನಗಳ ನಿಯಂತ್ರಣ ಹೇರಿವೆ ಎಂದರು.

(ಯುಎನ್‌ಐ)

ವಾರ್ತಾಸಂಚಯ
ಮುಖಪುಟ / ಇವತ್ತು... ಈ ಹೊತ್ತು...

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X