Get Updates
Get notified of breaking news, exclusive insights, and must-see stories!

ನಿತ್ಯ ಭವಿಷ್ಯ

*ಜಾನುಕೊಂಡ ಶಾಮಾ ಶಾಸ್ತ್ರೀ

ಮೇಷ :ಪ್ರೇಮಿಗಳ ದಿನಾಚರಣೆ ಮುನ್ನಾ ಸಿದ್ಧತೆಗೆ ಸಕಾರಾತ್ಮಕ ಪ್ರತಿಕ್ರಿಯೆ. ವ್ಯವಹಾರದಲ್ಲಿ ಸ್ವಲ್ಪವೂ ಕೈ ಸಡಿಲಿಸಬೇಡಿ.

ವೃಷಭ : ಮನದಂಗಳದ ತುಂಬಾ ಚೆಲ್ಲಿದ ಕನಸು ಇನಿತಿನಿತೇ ಬಗೆಹರಿಯುತ್ತೆ. ಆ ನಿಟ್ಟಿನಲ್ಲಿ ಈವತ್ತು ಪ್ರಮುಖ ಹೆಜ್ಜೆಯನ್ನು ನೀವು ಇಡಲಿದ್ದೀರಿ.

ಮಿಥುನ : ತಳಮಳ, ಸತಮತ, ಒಳಗೊಳಗೇ ಗುಸುಗುಸು. ಗೊಂದಲ ಎಳೆಯನ್ನು ನಂಬಿದವರಲ್ಲಿ ಹರಿಬಿಡಿ. ಮನಸ್ಸು ಹಗೂರಾಗುತ್ತೆ.

ಕಟಕ : ಕೈಕೊಟ್ಟಿದ್ದ ಆರೋಗ್ಯದಲ್ಲಿ ಸುಧಾರಣೆ. ವ್ಯವಹಾರದಲ್ಲಿ ಎರಡು ಮೆಟ್ಟಿಲು ಹಾರುವ ಅವಕಾಶ. ಅದನ್ನು ಆತುಕೊಂಡು ನುಗ್ಗುವ ಛಾತಿ ಬೇಕಷ್ಟೆ.

ಸಿಂಹ : ಇನ್‌ಫೀರಿಯಾರಿಟಿ ಕಾಂಪ್ಲೆಕ್ಸ್‌ ಬಿಟ್ಟುಬಿಡಿ. ನಿಮ್ಮ ಸಾಮರ್ಥ್ಯ ಎಷ್ಟೆಂಬುದು ನಿಮಗೇ ಗೊತ್ತಿಲ್ಲ. ಅದು ನಿಮ್ಮ ವಿನೀತ ಪ್ರಜ್ಞೆಯೂ ಹೌದು. ಸತ್ವ ಹಾಳಾಗದಂತೆ ಕಾಪಿಡಿ.

ಕನ್ಯಾ : ಅಪ್ಪ- ಪ್ರೇಮಿ. ಎರಡೂ ಬೇಕು. ಒಂದು ಉತ್ತರ, ಒಂದು ದಕ್ಷಿಣ. ಕೊಲ್ಲುವ ದ್ವಂದ್ವ. ಕನ್ವಿನ್ಸ್‌ ಮಾಡೋ ಶಕ್ತಿ ನಿಮ್ಮಲ್ಲಿದೆ. ತಲೆ ಮೇಲಿಂದ ಕೈ ತೆಗೆಯಿರಿ.

ತುಲಾ : ಮಲಗುವ ಮುನ್ನ ನಿಮ್ಮನ್ನು ನೀವು ವಿಮರ್ಶೆಗೆ ಒಡ್ಡಿಕೊಳ್ಳಿ. ಮಾಡಿರುವ ಹರಿಕತ್ತು ಪತ್ತೆಯಾಗುತ್ತೆ. ಅದೇ ನಿಮ್ಮ ಒದ್ದಾಟಕ್ಕೆ ಕಾರಣ.

ವೃಶ್ಚಿಕ : ಬಹು ದಿನಗಳಿಂದ ಸಿಗದ ಸಂಪರ್ಕ ಇಂದು ಸಿಕ್ಕುತ್ತದೆ. ಮನೆಮಂದಿಯಾಂದಿಗೆ ಹರಟೆ, ಒಂದಷ್ಟು ಸಲಹೆ, ಬಾಸಿಸಮ್‌, ಗೆಳೆಯ ಗೆಳತಿಯರಿಗೆ ಒಂದು ಹಿಡಿ ಭಾಷಣ... ಹೀಗೇ ದಿನವಿಡೀ ನಿಮ್ಮದೇ. ನಾಳೆ ಗ್ರಹಚಾರ ಕಾದಿದೆ.

ಧನಸ್ಸು :ತುಂಡು ಭೂಮಿಗಾಗಿ ತುತ್ತು ಕಳೆದುಕೊಳ್ಳುವ ಸಾಹಸಕ್ಕೆ ಕೈಹಾಕಬೇಡಿ. ಇನ್ನೊಂದು ದಾರಿಯಲ್ಲಿ ಎಕರೆಗಟ್ಟಲೆ ಫಸಲು ನಿಮಗಾಗಿ ಬೆಳೆದು ನಿಂತಿದೆ.

ಮಕರ : ಮೋಕ್ಷಕ್ಕೆರಡಕ್ಕರವೇ ‘ಸಾಕು’. ಸಾಧನೆ- ಸಿದ್ಧಿಗೆ ಕೈಹಚ್ಚೋದು ಬಿಟ್ಟು ತರಬರ ಪುರಲೆ ಉರಿಸೋದರಲ್ಲೇ ಕಾಲ ಕಳೆದರೆ ಹೇಗೆ ? ಉತ್ತರ ಕಂಡುಕೊಳ್ಳುವ ಪ್ರಾಮಾಣಿಕ ಯತ್ನವನ್ನಾದರೂ ಮಾಡಿ.

ಕುಂಭ : ಪ್ರಥಮ ಚುಂಬನಕ್ಕೆ ಹೊರಟಿದ್ದೀರಿ. ದಂತ ಪಂಕ್ತಿಯನ್ನು ಕನ್ನಡಿಯಲ್ಲೊಮ್ಮೆ ನೋಡಿಕೊಂಡು ಮುಂದುವರೆಯೋದು ಒಳಿತು.

ಮೀನ : ನೆನಪಿನಂಗಳದಲ್ಲಿ ಮುಸ್ಸಂಜೆ ಹೊತ್ತು. ಬಹುದಿನಗಳಿಂದ ಕಾಣದ ಕೆಂಸೂರ್ಯ, ಹಾರೋ ಹಕ್ಕಿ, ಆಡೋ ಮಕ್ಕಳು ಮನಸ್ಸಿಗೆ ಮುದ ನೀಡುತ್ತಿವೆ. ಕಂಪ್ಯೂಟರ್‌ ಮುಂದಿನ ಶುಷ್ಕ ಜಗತ್ತಿಗೆ ಇವತ್ತಿನ ಮಟ್ಟಿಗೆ ಬಿಡುವು.

ಮುಖಪುಟ / ಇವತ್ತು... ಈ ಹೊತ್ತು...

More From
Prev
Next
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+