ಮೈಸೂರಲ್ಲಿ ಇತಿಹಾಸ ದಾಖಲೆಗಳ ಆಯೋಗದ ಅಧಿವೇಶನ
ಮೈಸೂರು : ಇದೇ ಗುರುವಾರ ಹಾಗೂ ಶುಕ್ರವಾರ ಮೈಸೂರಿನಲ್ಲಿ ಭಾರತೀಯ ಐತಿಹಾಸಿಕ ದಾಖಲೆಗಳ ಆಯೋಗದ 57ನೇ ಅಧಿವೇಶನ. ಇದಕ್ಕೆ ಮೈಸೂರು ವಿಶ್ವವಿದ್ಯಾಲಯದ ಇತಿಹಾಸ ಅಧ್ಯಯನ ವಿಭಾಗ ಹಾಗೂ ರಾಜ್ಯ ಪತ್ರಾಗಾರ ಇಲಾಖೆಯ ಸಹಯೋಗ.
ಪತ್ರಾಗಾರ ಇಲಾಖೆ ನಿರ್ದೇಶಕ ಗಂಗಾರಾಮ್ ಬಡೇರಿಯಾ ಅವರ ಪ್ರಕಾರ ಫೆ.8 ಹಾಗೂ 9ರಂದು ನಡೆಯುವ ಈ ರಾಷ್ಟ್ರೀಯ ಅಧಿವೇಶನದಲ್ಲಿ ದೇಶದ ವಿವಿಧ ರಾಜ್ಯಗಳ ಸುಮಾರು 200ಕ್ಕೂ ಹೆಚ್ಚು ಚರಿತ್ರಕಾರರು, ಪತ್ರಪಾಲಕರು, ಸಂಶೋಧಕರು, ರಕ್ಷಣೆ, ವಿದೇಶಾಂಗ ವ್ಯವಹಾರಗಳ ಇಲಾಖೆ ಕಾರ್ಯದರ್ಶಿಗಳು, ಆಡಳಿತಗಾರರು ಭಾಗವಹಿಸುತ್ತಿದ್ದಾರೆ.
ಕೇಂದ್ರ ಸಚಿವ ಅನಂತಕುಮಾರ್‌ರಿಂದ ಕಾರ್ಯಕ್ರಮದ ಉದ್ಘಾಟನೆ. ರಾಜ್ಯ ಕನ್ನಡ ಮತ್ತು ಸಂಸ್ಕೃತಿ ಖಾತೆ ಸಚಿವೆ ರಾಣಿ ಸತೀಶ್‌ರಿಂದ ಛಾಯಾಚಿತ್ರ ಪ್ರದರ್ಶನದ ಅನಾವರಣ. ಡಾ. ಆರ್.ವಿ. ವೈದ್ಯನಾಥ ಅಯ್ಯರ್‌ರಿಂದ ಭಾರತೀಯರಾದ ನಾವು ಎಂಬ ಕಿರುಹೊತ್ತಗೆಯ ಬಿಡುಗಡೆ.
ಮೈಸೂರಿನಲ್ಲಿ ಈ ಹಿಂದೆ 1942, 1955 ಹಾಗೂ 1977ರಲ್ಲಿ ಮೂರು ಬಾರಿ ಆಯೋಗದ ಅಧಿವೇಶನ ನಡೆದಿತ್ತು. ಈಗ ನಡೆಯಲಿರುವುದು 57ನೇ ರಾಷ್ಟ್ರೀಯ ಅಧಿವೇಶನ. ಐತಿಹಾಸಿಕ ದಾಖಲೆಗಳ ನಿರ್ವಹಣೆ ಮತ್ತು ಸಂರಕ್ಷಣೆಗೆ 1919ರಲ್ಲಿ ಅಂದಿನ ಆಡಳಿತ ಈ ಆಯೋಗ ಸ್ಥಾಪಿಸಿತ್ತು. ಆಯೋಗದಲ್ಲಿ ರಾಜ್ಯ ಸರಕಾರ, ವಿವಿಧ ವಿಶ್ವವಿದ್ಯಾಲಯಗಳು, ದಾಖಲೆಗಳ ಭಂಡಾರ, ವಿವಿಧ ಇಲಾಖೆಗಳನ್ನು ಪ್ರತಿನಿಧಿಸುವ ಇತಿಹಾಸಕಾರರು, ಪ್ರಮುಖ ವಿದ್ಯಾಸಂಸ್ಥೆಗಳು ಸಾಂಸ್ಥಿಕ ಸದಸ್ಯತ್ವ ಹೊಂದಿವೆ.
ಕಳೆದೈದು ದಶಕದಲ್ಲಿ ಆಯೋಗ 56 ರಾಷ್ಟ್ರೀಯ ಅಧಿವೇಶನ ನಡೆಸಿ, ದಾಖಲೆಗಳನ್ನು ಸಂರಕ್ಷಿಸುವ, ಪತ್ರಭಂಡಾರದ ಸದುಪಯೋಗ ಪಡಿಸಿಕೊಳ್ಳುವ ಅರಿವನ್ನು ಸಾರ್ವಜನಿಕರಲ್ಲಿ ಮೂಡಿಸಿದೆ. ಇತಿಹಾಸದ ಪ್ರಮುಖ ದಾಖಲೆಗಳು ಹಾಳಾಗದಂತೆ ಹಾಗೂ ಮುಂದಿನ ಪೀಳಿಗೆಯ ಅಧ್ಯಯನಕ್ಕಾಗಿ 10 ಸಹಸ್ರ ಹಸ್ತ ಪ್ರತಿಗಳನ್ನು ಮೈಕ್ರೋ ಫಿಲಂ ಆಗಿ ಪರಿವರ್ತಿಸುವ ಕಾರ್ಯವನ್ನೂ ಹಮ್ಮಿಕೊಂಡಿದೆ.
ಅರಮನೆಗಳ ನಗರಿ ಮೈಸೂರಿನ ಕ್ರಾಫರ್ಡ್ ಭವನದಲ್ಲಿ ನಡೆಯುವ ಈ ರಾಷ್ಟ್ರೀಯ ಅಧಿವೇಶನಕ್ಕೆ ಭರದ ಸಿದ್ದತೆಗಳು ಸಾಗಿವೆ. ಐತಿಹಾಸಿಕ ದಾಖಲೆಗಳ ಬಗ್ಗೆ ಅರಿಯ ಬಯಸುವ, ಇತಿಹಾಸಾಸಕ್ತರಿಗೆ ಇದು ಒಂದು ಉತ್ತಮ ವೇದಿಕೆ ಕಲ್ಪಿಸಲಿದೆ.
(ಮೈಸೂರು ಪ್ರತಿನಿಧಿಯಿಂದ)
-
New Airport: ವಿಜಯಪುರ ಏರ್ಪೋರ್ಟ್ಗೆ ಸಿಕ್ತು 220 ಕೋಟಿ ರೂ, ಕಾರ್ಯಾಚರಣೆ ಬಗ್ಗೆ ಎಂಬಿ ಪಾಟೀಲ ಅಪ್ಡೇಟ್ -
Bengaluru Property: ಬೆಂಗಳೂರಿನ 3 ಲಕ್ಷಕ್ಕೂ ಅಧಿಕ ಆಸ್ತಿ ಮಾಲೀಕರಿಗೆ ಶುಭ ಸುದ್ದಿ -
"ಇಲ್ಲಿ ಎಲ್ಲದಕ್ಕೂ ಚೌಕಾಸಿ ಮಾಡಬೇಕು": ಬೆಂಗಳೂರಿನಲ್ಲಿ 2 ತಿಂಗಳು ಕಳೆದ ಮುಂಬೈ ಯುವಕನ Viral Post -
3 ವರ್ಷಕ್ಕೆ 1.17 ಕೋಟಿ: ಮಲೈಕಾ ಅರೋರಾ ಅಪಾರ್ಟ್ಮೆಂಟ್ ಬಾಡಿಗೆ ಬಹಿರಂಗ -
Karnataka Weather: ಬೇಸಿಗೆ ಬಿಸಿಲ ನಡುವೆ ರಾಜ್ಯದ ಹಲವೆಡೆ ಗುಡುಗು-ಮಿಂಚು ಸಹಿತ ಮಳೆ; ಈ ಜಿಲ್ಲೆಗಳಿಗೆ ಯೆಲ್ಲೋ ಅಲರ್ಟ್ -
April 4 Horoscope: ಇಂದು ನಿಮ್ಮ ರಾಶಿ ಏನು ಹೇಳುತ್ತದೆ? ಏಪ್ರಿಲ್ 4 ಭವಿಷ್ಯ ಇಲ್ಲಿದೆ -
HSRP: ಎಚ್ಎಸ್ಆರ್ಪಿ ನಂಬರ್ ಪ್ಲೇಟ್ ಕಡ್ಡಾಯ: ವದಂತಿಗಳಿಗೆ ಕಿವಿಗೊಡಬೇಡಿ ಎಂದು ಸ್ಪಷ್ಟನೆ ಕೊಟ್ಟ ಸಾರಿಗೆ ಇಲಾಖೆ -
Bengaluru: ಆಟೋ LPG ಕೊರತೆ ಬಗೆಹರಿಯುವ ವಿಶ್ವಾಸ: ಪೂರೈಕೆ ಹೆಚ್ಚಿಸಿದ ಇಂಡಿಯನ್ ಆಯಿಲ್ -
ರಾಜ್ಯಪಾಲರೇ ಗಂಟುಮೂಟೆ ಕಟ್ಟಿಕೊಂಡು ನಿಮ್ಮ ರಾಜ್ಯಕ್ಕೆ ತೊಲಗಿ: ಕರವೇ ನಾರಾಯಣಗೌಡ ಎಚ್ಚರಿಕೆ -
ಲಲಿತ್ಪುರ ಫಾರ್ಮಾ ಪಾರ್ಕ್ ಅನ್ನು ಜಾಗತಿಕ ರಫ್ತು ಕೇಂದ್ರವನ್ನಾಗಿ ಮಾಡುವ ನಿಟ್ಟಿನಲ್ಲಿ ಮಹತ್ವದ ಹೆಜ್ಜೆ -
40 ವರ್ಷ ಮೇಲ್ಪಟ್ಟವರಿಗೆ ಸರ್ಕಾರದಿಂದಲೇ ಉಚಿತ ದೃಷ್ಟಿ ತಪಾಸಣೆ, ಕನ್ನಡಕ ವಿತರಣೆ -
Bengaluru: ಸತತ 3ನೇ ವರ್ಷವೂ ರಾಜ್ಯಕ್ಕೇ ಪ್ರಥಮ ಸ್ಥಾನ: 1,273 ಕೋಟಿ ರೂ. ಆದಾಯ ಸಂಗ್ರಹಿಸಿದ ಬೆಂಗಳೂರು ಕೇಂದ್ರ RTO












Click it and Unblock the Notifications