ಗಂಗೂಲಿ ನೇತೃತ್ವದ ರಾಷ್ಟ್ರೀಯ ತಂಡವನ್ನು ಹಿಂದಿಕ್ಕಿದ ದ್ರಾವಿಡ್ ಪಡೆ
ರಾಯಚೂರು : ಅಂತರರಾಷ್ಟ್ರೀಯ ಮಟ್ಟದ ಕ್ರೀಡಾಂಗಣ ಸ್ಥಾಪನೆಯ ಸಹಾಯಾರ್ಥ ಬುಧವಾರ ನಡೆದ ಸೀಮಿತ ಓವರ್‌ಗಳ ಕ್ರಿಕೆಟ್ ಪಂದ್ಯದಲ್ಲಿ ಗಂಗೂಲಿ ನೇತೃತ್ವದ ಭಾರತ ಇತರರ ತಂಡದ ವಿರುದ್ಧ ರಾಹುಲ್ ದ್ರಾವಿಡ್ ನೇತೃತ್ವದ ಕರ್ನಾಟಕ ತಂಡ 3 ವಿಕೆಟ್‌ಗಳ ಅರ್ಹ ಜಯ ಸಾಧಿಸಿತು.
ಟಾಸ್ ಗೆದ್ದ ಗಂಗೂಲಿ ಬ್ಯಾಟಿಂಗ್ ಆಯ್ದುಕೊಂಡರು. ಕರ್ನಾಟಕದ ಬೌಲರ್‌ಗಳನ್ನು ಗೋಳು ಹೊಯ್ದುಕೊಂಡ ಗಂಗೂಲಿ ಹಾಗೂ ಲಕ್ಷ್ಮಣ್ ಮೈದಾನದ ಮೂಲೆ ಮೂಲೆಗೆ ಬೌಂಡರಿ, ಸಿಕ್ಸರುಗಳನ್ನು ಹರಿಸಿದರು. ಸೀಮಿತ 40 ಓವರ್‌ಗಳಲ್ಲಿ ಗಂಗೂಲಿ ದಂಡು 8 ವಿಕೆಟ್‌ಗಳ ನಷ್ಟಕ್ಕೆ 327 ರನ್ ಗಳಿಸಿತು.
ಭಾರತ ಇತರರ ತಂಡದ ಬೃಹತ್ ಮೊತ್ತವನ್ನು ಬೆನ್ನಟ್ಟಿದ ಕರ್ನಾಟಕ ತಂಡ ಆರಂಭದಲ್ಲೇ ಕುಸಿತ ಕಂಡಿತು. ಈ ಹಂತದಲ್ಲಿ ಜಯವನ್ನು ಕರ್ನಾಟಕದ ಪರ ವಾಲಿಸಿದ್ದು, ಪ್ರಸ್ತುತ ಕೇಂದ್ರ ವಲಯ ತಂಡವನ್ನು ಪ್ರತಿನಿಧಿಸುತ್ತಿರುವ ರಾಯಚೂರಿನ ಹುಡುಗ ಯರೇಗೌಡ ಚಚ್ಚಿದ 108 ರನ್. ನಾಯಕ ದ್ರಾವಿಡ್ (49) ಹಾಗೂ ವಿಜಯ್ ಭಾರದ್ವಾಜ್ (51) ಶತಕ ಶೂರನಿಗೆ ಅತ್ಯುತ್ತಮ ಬೆಂಬಲ ನೀಡಿದರು.
(ಯುಎನ್‌ಐ)
ವಾರ್ತಾಸಂಚಯ
ಮುಖಪುಟ / ಇವತ್ತು... ಈ ಹೊತ್ತು...