Get Updates
Get notified of breaking news, exclusive insights, and must-see stories!

ಬಳ್ಳಾರಿಯಲ್ಲಿ ಪರಭಾಷಾ ಚಿತ್ರಗಳ ವಿರುದ್ಧ ಡೊಳ್ಳು ತಮಟೆ

ಹೇಮಂತ ಕುಲಕರ್ಣಿ

ಕರ್ನಾಟಕ ರಾಜ್ಯದ ಸಿನಿಮಾ ಮಂದಿರಗಳಲ್ಲಿ ವರ್ಷದಲ್ಲಿ ಕನಿಷ್ಠ 3 ತಿಂಗಳಾದರೂ ಕನ್ನಡ ಚಲನಚಿತ್ರಗಳನ್ನು ಪ್ರದರ್ಶಿಸಲೇ ಬೇಕು ಎಂದು ಕರ್ನಾಟಕ ಸರಕಾರ ಬಹು ಹಿಂದೆಯೇ ನಿಯಮವೊಂದನ್ನು ಮಾಡಿದೆ. ಆದರೆ, ಈ ನಿಯಮವನ್ನು ಗಾಳಿಗೆ ತೂರಿದವರು ಅದೆಷ್ಟೋ ಮಂದಿ.

ಈಗ ಬಳ್ಳಾರಿಯ ಕನ್ನಡ ಸಂಘಟನೆಗಳು ಬಳ್ಳಾರಿ ಚಿತ್ರಮಂದಿರಗಳಲ್ಲಿ ಕಡ್ಡಾಯವಾಗಿ ಕನ್ನಡ ಚಿತ್ರ ಪ್ರದರ್ಶಿಸಲೇಬೇಕು ಎಂದು ಆಗ್ರಹಿಸಿ ಪರಭಾಷೆಯ ಚಿತ್ರ ಪ್ರದರ್ಶಿಸುವ ಚಿತ್ರಮಂದಿರಗಳ ಮುಂದೆ ಗಂಟೆಗಟ್ಟಲೆ ಡೊಳ್ಳು, ತಮಟೆ ಬಾರಿಸುವ ಮೂಲಕ ಪ್ರತಿಭಟಿಸಲಾಗುವುದು ಎಂಬ ಎಚ್ಚರಿಕೆ ನೀಡಿದ್ದಾರೆ.

ಚಿತ್ರಪ್ರದರ್ಶನದ ಸಮಯದಲ್ಲಿ ಬೆಳಗ್ಗೆ 11ರಿಂದ 11.45 ಹಾಗೂ ಮಧ್ಯಾಹ್ನ 2ರಿಂದ 2.45ರ ತನಕ ಡೊಳ್ಳು ಬಾರಿಸುವ ಕನ್ನಡ ಕಾರ್ಯಕರ್ತರು, ಕನ್ನಡೇತರ ಚಿತ್ರಗಳಿಗೆ ಹೋಗದಂತೆ ಪ್ರೇಕ್ಷಕರ ಮನವೊಲಿಸುವ ನಿರ್ಧಾರವನ್ನೂ ಮಾಡಿದ್ದಾರೆ.

ಸಾಮಾನ್ಯವಾಗಿ ನವೆಂಬರ್‌ ತಿಂಗಳಿನಲ್ಲಿ ಮಾತ್ರವೇ ಕನ್ನಡಾಭಿಮಾನ ಹೊರಹೊಮ್ಮುತ್ತದೆ. ಆದರೆ, ಬಳ್ಳಾರಿಯ ಕನ್ನಡಿಗರಲ್ಲಿ ವರ್ಷಾರಂಭದಲ್ಲೇ ಕನ್ನಡದ ಕಳಕಳಿ ಮೂಡಿದೆ. ಯಜಮಾನ, ಸ್ಪರ್ಶ ಮುಂತಾದ ಚಿತ್ರಗಳು ತುಂಬಿದ ಗೃಹಗಳಿಗೆ ಪ್ರದರ್ಶಿತವಾಗುತ್ತಿದ್ದರೂ, ಚಿತ್ರಮಂದಿರ ಮಾಲಿಕರು ತೆಲುಗು, ಹಿಂದಿ ಹಾಗೂ ಇಂಗ್ಲಿಷ್‌ ಚಿತ್ರ ಪ್ರದರ್ಶಿಸುತ್ತಿರುವುದು ಚಳವಳಿಗೆ ಪ್ರೇರೇಪಿಸಿದೆ.

ಕನ್ನಡ ಚಿತ್ರ ಪ್ರದರ್ಶಿಸಿದರೆ, ಲಾಸ್‌ ಆಗುತ್ತದೆ ಎಂಬ ಮಾಲಿಕರ ವಾದವನ್ನು ಕನ್ನಡ ಕ್ರಿಯಾ ಸಮಿತಿ ಪಲಾಯನ ವಾದ ಎಂದು ಬಣ್ಣಿಸಿದೆ. ಇದು ಕನ್ನಡ ದ್ರೋಹ ಎಂದೂ ಹೇಳಿದೆ. ಜಿಲ್ಲಾಧಿಕಾರಿಗಳು, ನಗರಸಭೆ ಅಧಿಕಾರಿಗಳು ಹಾಗೂ ಚುನಾಯಿತ ಪ್ರತಿನಿಧಿಗಳು ಚಿತ್ರಮಂದಿರ ಮಾಲಿಕರೊಂದಿಗೆ ಮಾತುಕತೆ ನಡೆಸಿ, ಕನ್ನಡ ಚಿತ್ರ ಪ್ರದರ್ಶಿಸುವಂತೆ ಅವರ ಮನವೊಲಿಸುವಂತೆಯೂ ಕ್ರಿಯಾ ಸಮಿತಿ ಆಗ್ರಹಿಸಿದೆ.

More From
Prev
Next
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+