ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಎಲ್‌ಸಿಎ ಅಭಿವೃದ್ಧಿಗೆ ರಷ್ಯಾ ನೆರವು ಪಡೆಯುವುದಿಲ್ಲ- ಹರಿ ನಾರಾಯಣ

By Staff
|
Google Oneindia Kannada News

ಬೆಂಗಳೂರು : ಇನ್ನಾರು ವರ್ಷಗಳಲ್ಲಿ ವಾಯುಪಡೆಗೆ ಸೇರ್ಪಡೆಯಾಗುತ್ತದೆಂದು ನಂಬಲಾಗಿರುವ ಲಘು ಸಮರ ವಿಮಾನ (ಎಲ್‌ಸಿಎ)ದ ಅಭಿವೃದ್ಧಿ ಗೆ ನೆರವು ನೀಡಲು ಮುಂದಾಗಿರುವ ರಷ್ಯಾದ ಪ್ರಸ್ತಾವನೆಯನ್ನು ಅಂಗೀಕರಿಸುವ ಯಾವುದೇ ಯೋಜನೆ ಭಾರತಕ್ಕಿಲ್ಲ ಎಂದು ವಾಯುಯಾನ ಅಭಿವೃದ್ಧಿ ಏಜೆನ್ಸಿಯ ನಿರ್ದೇಶಕ ಹೊಟ ಹರಿನಾರಾಯಣ ಹೇಳಿದ್ದಾರೆ.

ಬುಧವಾರದಿಂದ ಪ್ರಾರಂಭವಾಗುವ ಏರೋ ಇಂಡಿಯಾ - 2001 ಪ್ರದರ್ಶನದ ಸಂಬಂಧ ಮಂಗಳವಾರ ಸುದ್ದಿಗೋಷ್ಠಿಯನ್ನುದ್ದೇಶಿ ಮಾತನಾಡುತ್ತಿದ್ದ ಅವರು, ಎಲ್‌ಸಿಎ ಅಭಿವೃದ್ಧಿಗೆ ರಷ್ಯಾ ನೆರವು ಪಡೆಯುವುದಿಲ್ಲ . ಬುಧವಾರ ಪ್ರಾರಂಭವಾಗುವ ಉದ್ಘಾಟನಾ ಸಮಾರಂಭದಲ್ಲಿ ಎಲ್‌ಸಿಎ ಹಾರಾಟ ನಡೆಸುವುದು ಎಂದರು.

ಮೊದಲ ಮೂರು ಪರೀಕ್ಷಾರ್ಥ ಹಾರಾಟಗಳಲ್ಲಿ ಎಲ್‌ಸಿಎ ಡಿಸ್ಟಿಂಕ್ಷನ್‌ನಲ್ಲಿ (ಶೇ.85) ಪಾಸಾಗಿದೆ. ಕಂಪ್ಯೂಟರ್‌ ಸಂಬಂಧಿ ವಿನ್ಯಾಸ ಹಾಗೂ ವಿಂಡ್‌ ಟನ್ನಲ್‌ ಪರೀಕ್ಷೆಗಳಲ್ಲೂ ತನ್ನ ಸಾಮರ್ಥ್ಯ ಸಾಬೀತುಪಡಿಸಿದೆ. ಗಂಟೆಗೆ 565 ರಿಂದ 570 ಕಿಮೀ ವೇಗವನ್ನು ಪರೀಕ್ಷಾರ್ಥ ಹಾರಾಟಗಳಲ್ಲಿ ಸಾಧಿಸಿದೆ. ಆದರೂ, ನಾವಿನ್ನೂ ಸಾಗಬೇಕಾದ ದಾರಿ ದೂರವಿದೆ ಎಂದು ಹರಿನಾರಾಯಣ ಹೇಳಿದರು.

(ಯುಎನ್‌ಐ)

ವಾರ್ತಾಸಂಚಯ
ಮುಖಪುಟ / ಇವತ್ತು... ಈ ಹೊತ್ತು...

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X