ಶಿವ ಶಿವ ! ಕುಡಿಯುವ ನೀರಿನಲ್ಲಿ ಹಾಲಾಹಲ
ಧಗೆ ಹೊತ್ತ ಬೇಸಿಗೆಯ ಒಂದೊಂದೇ ದಳಗಳು ಹಗಲು ಇರುಳುಗಳ ಅಸಹನೀಯವಾಗಿಸುತ್ತಾ ರಾಜ್ಯಕ್ಕೆ ಕಾಲಿಡುತ್ತಿರುವ ಹಿನ್ನೆಲೆಯಲ್ಲಿ ಕುಡಿಯುವ ನೀರಿನ ಹಾಹಾಕಾರದ ಕೂಗುಗಳು, ಸಾಂಕ್ರಾಮಿಕ ರೋಗಗಳ ವಾರ್ಷಿಕ ನೆನಪುಗಳು ಈ ಬಾರಿ ಬರದಿರಲಿ ಎಂದು ನೆನೆಯೋಣ.
ರಾಜೀವ್‌ಗಾಂಧಿ ರಾಷ್ಟ್ರೀಯ ಕುಡಿಯುವ ನೀರು ಮಿಷನ್- ರಾಜ್ಯ ಗ್ರಾಮೀಣಾಭಿವೃದ್ಧಿ ಹಾಗೂ ಪಂಚಾಯತ್ ರಾಜ್ ಇಲಾಖೆಯ ಸಹಯೋಗದೊಂದಿಗೆ ಕುಡಿಯುವ ನೀರಿನ ಬಗ್ಗೆ ನಡೆಸಿರುವ ಸಮೀಕ್ಷೆ ಯಲ್ಲಿನ ಅಂಕಿ ಅಂಶಗಳು ಗಾಬರಿ ಹುಟ್ಟಿಸುವಂತಿವೆ. ರಾಜ್ಯದ 14 ಜಿಲ್ಲೆಗಳ 9060 ಜಿಲ್ಲೆಗಳಲ್ಲಿ ನ ಅಂತರ್ಜಲ ಕುಡಿಯಲು ಯೋಗ್ಯವಾಗಿಲ್ಲ . ರಾಸಾಯಿನಿಕ ಅಂಶ ಹೆಚ್ಚಿರುವ ಈ ನೀರು ಕುಡಿಯುವುದರಿಂದ ಹಲ್ಲು ಹಾಗೂ ಮೂಳೆಗೆ ಸಂಬಂಧಿಸಿದ ರೋಗಗಳು ಕಾಡುತ್ತವೆ ಎಂದು ವರದಿ ಎಚ್ಚರಿಸಿದೆ.
ಬಳ್ಳಾರಿ, ದಾವಣಗೆರೆ, ಹಾವೇರಿ, ಬೆಳಗಾವಿ, ಬಿಜಾಪುರ, ಗದಗ, ಧಾರವಾಡ, ಉತ್ತರಕನ್ನಡ, ರಾಯಚೂರು, ಗುಲ್ಬರ್ಗಾ, ಕೊಪ್ಪಳ, ಚಿತ್ರದುರ್ಗ, ತುಮಕೂರು ಹಾಗೂ ಕೋಲಾರ ಜಿಲ್ಲೆಗಳ 99 ತಾಲ್ಲೂಕುಗಳಲ್ಲಿ ಅಂತರ್ಜಲದ ಪರೀಕ್ಷೆ ನಡೆಸಲಾಗಿದ್ದು , ಅಂತರ್ಜಲದಲ್ಲಿ ಲವಣಾಂಶ, ಕಬ್ಬಿಣ, ನೈಟ್ರೇಟ್ ಅಂಶಗಳು ಹೆಚ್ಚಿರುವುದು ತಿಳಿದುಬಂದಿದೆ.
ಸರ್ಕಾರ ಈ ಸಮಸ್ಯೆಯನ್ನು ಮನಗಂಡಿದೆ, 7.5 ಕೋಟಿ ರುಪಾಯಿಗಳಲ್ಲಿ ಪರ್ಯಾಯ ಕುಡಿಯುವ ನೀರಿನ ಯೋಜನೆಗಳನ್ನು ರೂಪಿಸುತ್ತಿದೆ ಎಂದು ವರದಿಯಾಂದು ತಿಳಿಸಿದೆ. ಆದರೆ, ಅದು ಕಾರ್ಯಗತವಾಗುವುದು ಯಾವಾಗ ಅನ್ನುವುದು ಖಚಿತವಾಗಿಲ್ಲ .
ಸೋಮವಾರದ ಬಿಸಿಲು ಧಗೆ : ರಾಜ್ಯದಲ್ಲಿ ಕನಿಷ್ಠ ತಾಪಮಾನ 15 ಡಿಗ್ರಿ ಸೆಲ್ಷಿಯಸ್ ಬೆಳಗಾವಿಯಲ್ಲಿ ದಾಖಲಾಗಿತ್ತು . ರಾಜ್ಯಾದ್ಯಂತ ಯಥಾ ಪ್ರಕಾರದ ಒಣಹವೆಯದ್ದೇ ಪ್ರಾಬಲ್ಯ. ಕರಾವಳಿ ಮತ್ತು ದಕ್ಷಿಣ ಕರ್ನಾಟಕದ ಒಳಭಾಗದ ಕೆಲವೆಡೆ ತಾಪಮಾನದಲ್ಲಿ ಕುಸಿತವಿತ್ತು . ಉಳಿದಂತೆ ಮಂಗಳವಾರವೂ ರಾಜ್ಯದಲ್ಲಿ ಒಣಹವೆಯದ್ದೇ ಪ್ರಾಬಲ್ಯ ಎಂದು ಹವಾಮಾನ ಇಲಾಖೆಯ ವರದಿಗಳು ತಿಳಿಸಿವೆ. ಬೆಂಗಳೂರಿನಲ್ಲಿ ಮಂಗಳವಾರ ಮೋಡ ಕವಿದ ಆಕಾಶದ ದೃಶ್ಯಗಳು ಸಾಮಾನ್ಯವಾದರೂ ದಿನದ ಕನಿಷ್ಠ ಉಷ್ಣಾಂಶ 20 ಡಿಗ್ರಿ ಸೆಲ್ಷಿಯಸ್ ಆಸುಪಾಸಿನಲ್ಲಿರುತ್ತದೆ.
-
New Airport: ವಿಜಯಪುರ ಏರ್ಪೋರ್ಟ್ಗೆ ಸಿಕ್ತು 220 ಕೋಟಿ ರೂ, ಕಾರ್ಯಾಚರಣೆ ಬಗ್ಗೆ ಎಂಬಿ ಪಾಟೀಲ ಅಪ್ಡೇಟ್ -
Bengaluru Property: ಬೆಂಗಳೂರಿನ 3 ಲಕ್ಷಕ್ಕೂ ಅಧಿಕ ಆಸ್ತಿ ಮಾಲೀಕರಿಗೆ ಶುಭ ಸುದ್ದಿ -
"ಇಲ್ಲಿ ಎಲ್ಲದಕ್ಕೂ ಚೌಕಾಸಿ ಮಾಡಬೇಕು": ಬೆಂಗಳೂರಿನಲ್ಲಿ 2 ತಿಂಗಳು ಕಳೆದ ಮುಂಬೈ ಯುವಕನ Viral Post -
3 ವರ್ಷಕ್ಕೆ 1.17 ಕೋಟಿ: ಮಲೈಕಾ ಅರೋರಾ ಅಪಾರ್ಟ್ಮೆಂಟ್ ಬಾಡಿಗೆ ಬಹಿರಂಗ -
Karnataka Weather: ಬೇಸಿಗೆ ಬಿಸಿಲ ನಡುವೆ ರಾಜ್ಯದ ಹಲವೆಡೆ ಗುಡುಗು-ಮಿಂಚು ಸಹಿತ ಮಳೆ; ಈ ಜಿಲ್ಲೆಗಳಿಗೆ ಯೆಲ್ಲೋ ಅಲರ್ಟ್ -
April 4 Horoscope: ಇಂದು ನಿಮ್ಮ ರಾಶಿ ಏನು ಹೇಳುತ್ತದೆ? ಏಪ್ರಿಲ್ 4 ಭವಿಷ್ಯ ಇಲ್ಲಿದೆ -
HSRP: ಎಚ್ಎಸ್ಆರ್ಪಿ ನಂಬರ್ ಪ್ಲೇಟ್ ಕಡ್ಡಾಯ: ವದಂತಿಗಳಿಗೆ ಕಿವಿಗೊಡಬೇಡಿ ಎಂದು ಸ್ಪಷ್ಟನೆ ಕೊಟ್ಟ ಸಾರಿಗೆ ಇಲಾಖೆ -
Bengaluru: ಆಟೋ LPG ಕೊರತೆ ಬಗೆಹರಿಯುವ ವಿಶ್ವಾಸ: ಪೂರೈಕೆ ಹೆಚ್ಚಿಸಿದ ಇಂಡಿಯನ್ ಆಯಿಲ್ -
ರಾಜ್ಯಪಾಲರೇ ಗಂಟುಮೂಟೆ ಕಟ್ಟಿಕೊಂಡು ನಿಮ್ಮ ರಾಜ್ಯಕ್ಕೆ ತೊಲಗಿ: ಕರವೇ ನಾರಾಯಣಗೌಡ ಎಚ್ಚರಿಕೆ -
ಲಲಿತ್ಪುರ ಫಾರ್ಮಾ ಪಾರ್ಕ್ ಅನ್ನು ಜಾಗತಿಕ ರಫ್ತು ಕೇಂದ್ರವನ್ನಾಗಿ ಮಾಡುವ ನಿಟ್ಟಿನಲ್ಲಿ ಮಹತ್ವದ ಹೆಜ್ಜೆ -
40 ವರ್ಷ ಮೇಲ್ಪಟ್ಟವರಿಗೆ ಸರ್ಕಾರದಿಂದಲೇ ಉಚಿತ ದೃಷ್ಟಿ ತಪಾಸಣೆ, ಕನ್ನಡಕ ವಿತರಣೆ -
Bengaluru: ಸತತ 3ನೇ ವರ್ಷವೂ ರಾಜ್ಯಕ್ಕೇ ಪ್ರಥಮ ಸ್ಥಾನ: 1,273 ಕೋಟಿ ರೂ. ಆದಾಯ ಸಂಗ್ರಹಿಸಿದ ಬೆಂಗಳೂರು ಕೇಂದ್ರ RTO












Click it and Unblock the Notifications