Get Updates
Get notified of breaking news, exclusive insights, and must-see stories!

ನಮ್ಮಲ್ಲಿ ಬನ್ನಿ - ಕೈಗಾರಿಕೋದ್ಯಮಿಗಳಿಗೆ ಪನಾಮಉಪಾಧ್ಯಕ್ಷರ ಆಹ್ವಾನ

ಬೆಂಗಳೂರು : ಬೆಂಗಳೂರು ಭೆಟ್ಟಿ ತುಂಬಾ ಅಪರೂಪದ್ದು ಹಾಗೂ ಸ್ಮರಣೀಯವಾದದ್ದು ಎಂದು ಪನಾಮಾದ ಪ್ರಥಮ ಉಪಾಧ್ಯಕ್ಷ ಡಾ. ಅರ್ತುರೊ ವಲ್ಲಾರಿನೊ ಹೇಳಿದ್ದಾರೆ. ಎರಡು ದಿನಗಳ ಬೆಂಗಳೂರು ಭೇಟಿಗಾಗಿ ಭಾನುವಾರ ಸಂಜೆ ಅವರು ನಗರಕ್ಕೆ ಆಗಮಿಸಿದ್ದರು.

ಇನ್ಫೋಸಿಸ್‌ ಟೆಕ್ನಾಲಜೀಸ್‌ ಲಿಮಿಟೆಡ್‌ ಹಾಗೂ ಇನ್‌ಫಾರ್ಮೇಶನ್‌ ಟೆಕ್ನಾಲಜಿ ಪಾರ್ಕ್‌ಗೆ ಸೋಮವಾರ ಭೇಟಿ ನೀಡಿದ ನಂತರ, ಭಾರತೀಯ ಕೈಗಾರಿಕೆಗಳ ಒಕ್ಕೂಟ (ಸಿಐಐ) ಏರ್ಪಡಿಸಿದ್ದ ಔತಣಕೂಟದಲ್ಲಿ ಭಾಗವಹಿಸಿದ್ದ ವಲ್ಲಾರಿನೊ ರಾಜ್ಯ ಭೇಟಿಯ ಬಗ್ಗೆ ತೃಪ್ತಿ ವ್ಯಕ್ತಪಡಿಸಿದರು.

ಭಾರತ ಭೇಟಿ ಫಲಪ್ರದವಾಗಿದೆ. ಈ ಭೇಟಿಯಿಂದಾಗಿ ಹೆಚ್ಚೆಚ್ಚು ವಾಣಿಜ್ಯ ಹಾಗೂ ವಿದೇಶಾಂಗ ಒಡಂಬಡಿಕೆಗಳು ಸಾಧ್ಯವಾಗಿವೆ. ವ್ಯಾಪಾರ ಮಾತ್ರವಲ್ಲದೆ ಮಾಹಿತಿ ಮತ್ತು ತಂತ್ರಜ್ಞಾನ, ಕೃಷಿ , ಪ್ರವಾಸೋದ್ಯಮ ಕ್ಷೇತ್ರಗಳಲ್ಲೂ ಭಾರತದೊಂದಿಗೆ ಪನಾಮ ಕೊಡು ಕೊಳ್ಳುವಿಕೆ ಸಂಬಂಧ ಹೊಂದಲಿದೆ ಎಂದರು.

ಪನಾಮದಲ್ಲಿ ನೆಲೆಸಿರುವ ಭಾರತೀಯರು, ಪನಾಮದ ಕೈಗಾರಿಕೆ- ವಾಣಿಜ್ಯಕ್ಕೆ ದೊಡ್ಡ ಕೊಡುಗೆ ನೀಡಿದ್ದಾರೆ ಎಂದು ಶ್ಲಾಘಿಸಿದ ವಲ್ಲಾರಿನೊ, ಹಾಂಕಾಂಗ್‌ ನಂತರ ವಿಶ್ವದ ಎರಡನೇ ಅತಿ ದೊಡ್ಡ ಕೊಲನ್‌ ಫ್ರೀ ವಾಣಿಜ್ಯ ವಲಯವೆನಿಸಿದ ಪನಾಮದಲ್ಲಿ ತಮ್ಮ ವಾಣಿಜ್ಯ ಚಟುವಟಿಕೆಗಳನ್ನು ನಡೆಸುವಂತೆ ಭಾರತೀಯ ಬಂಡವಾಳಗಾರರಿಗೆ ಕರೆ ನೀಡಿದರು. ಪನಾಮ ಅಧ್ಯಕ್ಷರೊಂದಿಗೆ ಹಾಜರಿದ್ದ ಭಾರೀ ಕೈಗಾರಿಕೆಗಳ ಸಚಿವ ಆರ್‌.ವಿ. ದೇಶಪಾಂಡೆ, ರಾಜ್ಯದಲ್ಲಿನ ಕೈಗಾರಿಕಾ ಪರಿಸರವನ್ನು ಉಪಯೋಗಿಸಿಕೊಳ್ಳುವಂತೆ ಪನಾಮ ಕೈಗಾರಿಕೋದ್ಯಮಿಗಳಿಗೆ ಕರೆ ನೀಡಿದರು.

(ಯುಎನ್‌ಐ)

More From
Prev
Next
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+