ಟಿ. ನರಸೀಪುರದಲ್ಲಿ ಕರ್ನಾಟಕದ ಕುಂಭಮೇಳ
* ನಾಗೇಂದ್ರ ಪ್ರಸಾದ್, ನಂಜನಗೂಡು
ಮೈಸೂರು : ತಿರಮಕೂಡಲು ನರಸೀಪುರ ಮೈಸೂರು ಜಿಲ್ಲೆಯ ಒಂದು ಪುರಾಣ ಪ್ರಸಿದ್ಧ ನಗರ. ಕನ್ನಡ ನಾಡಿನ ಜೀವನದಿ ಕಾವೇರಿ ಅರ್ಥಾತ್ ಲೋಪಮುದ್ರೆಯ ಪತಿ ಎನ್ನಲಾದ ಅಗಸ್ತ್ಯ ಮಹರ್ಷಿಗಳು ಈ ಪುಣ್ಯ ಕ್ಷೇತ್ರದಲ್ಲಿ ಸೈಕತ ಲಿಂಗ (ಮರಳಿನ ಲಿಂಗ) ಮಾಡಿ ಪ್ರತಿಷ್ಠಾಪಿಸಿ, ಪೂಜಿಸಿದರೆನ್ನುವುದು ಪುರಾಣ.
ಹೀಗಾಗೇ ಇಲ್ಲಿಯ ಶಿವನಿಗೆ ಅಗಸ್ತ್ಯೇಶ್ವರನೆಂದೇ ಹೆಸರು. ರುದ್ರಪಾದ, ಗುಂಜಾ ನರಸಿಂಹ, ಕೆಂಡದ ಕೊಪ್ಪಲು, ಆನಂದೇಶವರ, ಭಿಕ್ಷೇಶ್ವರ, ಅಶ್ವತ್ಥಾಮ ವೃಕ್ಷದ ಜತೆಗೆ ಇಲ್ಲಿ ಕಾವೇರಿ, ಕಪಿಲಾ ಹಾಗೂ ಸ್ಫಟಿಕ ಸರೋವರಗಳ ಸಂಗಮವಿದೆ. ಈ ಪವಿತ್ರ ತ್ರಿವೇಣಿ ಸಂಗಮದಲ್ಲಿ ಸ್ನಾನ ಮಾಡಿದರೆ, ಸಪ್ತ ಜನ್ಮ ಕೃತ ಪಾಪಗಳೂ ಪರಿಹಾರವಾಗುತ್ತವೆ ಎನ್ನುವುದು ನಂಬಿಕೆ. ಹೀಗಾಗೇ ಇಲ್ಲಿ ಕುಂಭ ಮೇಳ ಜರುಗುತ್ತಿದೆ, 1989ರ ಫೆಬ್ರವರಿ 20ರಿಂದ.
ಈ ಕುಂಭ ಮೇಳದ ಆರಂಭಕ್ಕೆ ಸುತ್ತೂರು, ತಿರುಚಿ, ಶಿವಪುರಿ ಹಾಗೂ ಆದಿ ಚುಂಚನಗಿರಿ ಮಹಾ ಸಂಸ್ಥಾನದ ಪರಿಶ್ರಮ ಹಾಗೂ ಪ್ರಯತ್ನಗಳೇ ಕಾರಣ. ಮಂಗಳವಾರದಿಂದ ಮೂರು ದಿನಗಳ ಕಾಲ (ಫೆ. 6,7 ಮತ್ತು 8ರಂದು) ಇಲ್ಲಿ ನಡೆಯಲಿರುವ ಮಹಾಕುಂಭ ಮೇಳಕ್ಕೆ ರಾಷ್ಟ್ರದ ನಾನಾ ಭಾಗಗಳಿಂದ ಸುಮಾರು 5 ಲಕ್ಷಕ್ಕೂ ಹೆಚ್ಚು ಜನರು ಬರುವ ನಿರೀಕ್ಷೆ ಇದೆ. ಎಲ್ಲ ದೇವಾಲಯಗಳೂ ಸುಣ್ಣ ಬಣ್ಣದಿಂದ ಅಲಂಕೃತಗೊಂಡು ಕಂಗೊಳಿಸುತ್ತಿವೆ.
ಮಹಾಕುಂಭ ಮೇಳ : ಮೂರು ವರ್ಷಕ್ಕೊಮ್ಮೆ ನಡೆಯುವ ಈ ಕುಂಭಮೇಳಕ್ಕೆ ಈ ಬಾರಿ 12 ವರ್ಷಗಳು ತುಂಬಿರುವ ಹಿನ್ನೆಲೆಯಲ್ಲಿ ಮಹಾಕುಂಭ ಮೇಳವನ್ನು ನಡೆಸಲಾಗುತ್ತಿದೆ. ಪ್ರತಿಬಾರಿಯ ಕುಂಭ ಮೇಳದಲ್ಲೂ ಧಾರ್ಮಿಕ ವಿಧಿಗಳ ಜತೆಗೆ ಕನ್ನಡ ನಾಡಿನ ಕಲೆ, ಸಂಸ್ಕೃತಿಯನ್ನು ಬಿಂಬಿಸುವ ಹಲವು ಸಾಂಸ್ಕೃತಿಕ ಕಾರ್ಯಕ್ರಮಗಳೂ ಜರುಗುತ್ತವೆ. ಪ್ರತಿ ಬಾರಿಯಂತೆ ಈ ಬಾರಿಯೂ ಸಾಂಸ್ಕೃತಿಕ ಕಾರ್ಯಕ್ರಮಗಳು ಜರುಗುತ್ತವಾದರೂ ಗುಜರಾತ್ ಭೂಕಂಪದ ಹಿನ್ನೆಲೆಯಲ್ಲಿ ಕೇವಲ ಧಾರ್ಮಿಕ ಕಾರ್ಯಕ್ರಮಗಳಿಗೇ ಹೆಚ್ಚು ಒತ್ತು ನೀಡಲಾಗಿದೆ.
ಐತಿಹಾಸಿಕ ಸ್ಥಳ : ಹಲವು ದೇವಾಲಯಗಳ ಬೀಡಾದ ಟಿ. ನರಸೀಪುರ, ಪುರಾಣ ಪ್ರಸಿದ್ಧವಷ್ಟೇ ಅಲ್ಲ, ಐತಿಹಾಸಿಕ ಪಟ್ಟಣ ಕೂಡ. ಗಂಗರು, ಚೋಳರು, ಹೊಯ್ಸಳರು ಆಳಿದ ನಾಡಿದು. ಆನಂತರ ಇದು ಮೈಸೂರು ಒಡೆಯರ ಆಳ್ವಿಕೆಗೆ ಒಳಪಟ್ಟಿತು. ಸ್ಫಟಿಕಾ ಇಲ್ಲಿ ಗುಪ್ತ ಗಾಮಿನಿ. (ಅಲಹಾಬಾದಿನ ಸರಸ್ವತಿ ನದಿಯಂತೆ) ಮರ್ಯಾದಾ ಪುರುಷೋತ್ತಮ ತ್ರೇತಾಯುಗದ ಶ್ರೀರಾಮಚಂದ್ರನ ಸಮ್ಮುಖದಲ್ಲೇ ಅಗಸ್ತ್ಯರು ಇಲ್ಲಿ ಲಿಂಗಪ್ರತಿಷ್ಠಾಪನೆ ಮಾಡಿದರಂತೆ.
ಇಂದೂ ಇಲ್ಲಿ ಕುಂಭಮೇಳದ ಸಂದರ್ಭದಲ್ಲಿ ಸುಮಂಗಲಿಯರು ವಾದ್ಯವೃಂದಗಳ ಜತೆ ಕಳಶ - ಕುಂಭಗಳನ್ನು ಹೊತ್ತು ಮೆರವಣಿಗೆ ನಡೆಸಿ, ನದಿ ದಂಡೆಯ ಯಾಗಶಾಲೆಯಲ್ಲಿ ಪೂರ್ಣಾಹುತಿ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳುತ್ತಾರೆ. ಗಂಗೆ, ಯಮುನೆ, ಗೋದಾವರಿ, ಸರಸ್ವತಿ, ನರ್ಮದಾ, ಸಿಂಧು, ಕಾವೇರಿ (ಪವಿತ್ರ ಸಪ್ತ ನದಿಗಳು)ಯಿಂದ ತಂದ ನೀರನ್ನು ಮಾಘ ಪುಣ್ಯ ಸ್ನಾನಕ್ಕಾಗಿ ಐಕ್ಯ ಮಾಡಲಾಗುತ್ತದೆ.
ಒತ್ತಾಯ : ಈ ನಡುವೆ ತಲಕಾಡು ಪಂಚಲಿಂಗ ದರ್ಶನ, ಶ್ರವಣಬೆಳಗೊಳದ ಮಹಾ ಮಸ್ತಕಾಭಿಷೇಕದ ಮಾದರಿಯಲ್ಲಿ ತಿರಮಕೂಡಲು ನರಸೀಪುರದ ಕುಂಭಮೇಳದ ಜವಾಬ್ದಾರಿಯನ್ನು ಸರ್ಕಾರವೇ ಹೊರಬೇಕು ಎಂಬ ಒತ್ತಾಯವೂ ಕೇಳಿಬಂದಿದೆ.
ಸಂಗೀತ ಗಂಗೆ: ಟಿ. ನರಸೀಪುರ ಕೇವಲ ಕೇವಲ ಐತಿಹಾಸಿಕ ಹಾಗೂ ಪುರಾಣ ಪ್ರಸಿದ್ಧ ಪಟ್ಟಣವಷ್ಟೇ ಅಲ್ಲ. ಸಂಗೀತದ ತವರೂ ಹೌದು. ಪ್ರಸಿದ್ಧ ಪಿಟೀಲು ವಾದಕ ಟಿ. ಚೌಡಯ್ಯನವರ ಹುಟ್ಟೂರೂ ಟಿ. ನರಸೀಪುರವೇ. ಅಂದಹಾಗೆ ಮೈಸೂರು , ಬೆಂಗಳೂರಿನಿಂದ ಹಾಗೂ ರಾಜ್ಯದ ಪ್ರಮುಖ ಪಟ್ಟಣಗಳಿಂದ ತಿರಮಕೂಡಲು ನರಸೀಪುರಕ್ಕೆ ನೇರ ಬಸ್ ಸೌಕರ್ಯ ಇದೆ.
ಮುಖಪುಟ / ನೋಡು ಬಾ ನಮ್ಮೂರ
-
New Airport: ವಿಜಯಪುರ ಏರ್ಪೋರ್ಟ್ಗೆ ಸಿಕ್ತು 220 ಕೋಟಿ ರೂ, ಕಾರ್ಯಾಚರಣೆ ಬಗ್ಗೆ ಎಂಬಿ ಪಾಟೀಲ ಅಪ್ಡೇಟ್ -
Bengaluru Property: ಬೆಂಗಳೂರಿನ 3 ಲಕ್ಷಕ್ಕೂ ಅಧಿಕ ಆಸ್ತಿ ಮಾಲೀಕರಿಗೆ ಶುಭ ಸುದ್ದಿ -
"ಇಲ್ಲಿ ಎಲ್ಲದಕ್ಕೂ ಚೌಕಾಸಿ ಮಾಡಬೇಕು": ಬೆಂಗಳೂರಿನಲ್ಲಿ 2 ತಿಂಗಳು ಕಳೆದ ಮುಂಬೈ ಯುವಕನ Viral Post -
3 ವರ್ಷಕ್ಕೆ 1.17 ಕೋಟಿ: ಮಲೈಕಾ ಅರೋರಾ ಅಪಾರ್ಟ್ಮೆಂಟ್ ಬಾಡಿಗೆ ಬಹಿರಂಗ -
Karnataka Weather: ಬೇಸಿಗೆ ಬಿಸಿಲ ನಡುವೆ ರಾಜ್ಯದ ಹಲವೆಡೆ ಗುಡುಗು-ಮಿಂಚು ಸಹಿತ ಮಳೆ; ಈ ಜಿಲ್ಲೆಗಳಿಗೆ ಯೆಲ್ಲೋ ಅಲರ್ಟ್ -
April 4 Horoscope: ಇಂದು ನಿಮ್ಮ ರಾಶಿ ಏನು ಹೇಳುತ್ತದೆ? ಏಪ್ರಿಲ್ 4 ಭವಿಷ್ಯ ಇಲ್ಲಿದೆ -
HSRP: ಎಚ್ಎಸ್ಆರ್ಪಿ ನಂಬರ್ ಪ್ಲೇಟ್ ಕಡ್ಡಾಯ: ವದಂತಿಗಳಿಗೆ ಕಿವಿಗೊಡಬೇಡಿ ಎಂದು ಸ್ಪಷ್ಟನೆ ಕೊಟ್ಟ ಸಾರಿಗೆ ಇಲಾಖೆ -
Bengaluru: ಆಟೋ LPG ಕೊರತೆ ಬಗೆಹರಿಯುವ ವಿಶ್ವಾಸ: ಪೂರೈಕೆ ಹೆಚ್ಚಿಸಿದ ಇಂಡಿಯನ್ ಆಯಿಲ್ -
ರಾಜ್ಯಪಾಲರೇ ಗಂಟುಮೂಟೆ ಕಟ್ಟಿಕೊಂಡು ನಿಮ್ಮ ರಾಜ್ಯಕ್ಕೆ ತೊಲಗಿ: ಕರವೇ ನಾರಾಯಣಗೌಡ ಎಚ್ಚರಿಕೆ -
ಲಲಿತ್ಪುರ ಫಾರ್ಮಾ ಪಾರ್ಕ್ ಅನ್ನು ಜಾಗತಿಕ ರಫ್ತು ಕೇಂದ್ರವನ್ನಾಗಿ ಮಾಡುವ ನಿಟ್ಟಿನಲ್ಲಿ ಮಹತ್ವದ ಹೆಜ್ಜೆ -
40 ವರ್ಷ ಮೇಲ್ಪಟ್ಟವರಿಗೆ ಸರ್ಕಾರದಿಂದಲೇ ಉಚಿತ ದೃಷ್ಟಿ ತಪಾಸಣೆ, ಕನ್ನಡಕ ವಿತರಣೆ -
Bengaluru: ಸತತ 3ನೇ ವರ್ಷವೂ ರಾಜ್ಯಕ್ಕೇ ಪ್ರಥಮ ಸ್ಥಾನ: 1,273 ಕೋಟಿ ರೂ. ಆದಾಯ ಸಂಗ್ರಹಿಸಿದ ಬೆಂಗಳೂರು ಕೇಂದ್ರ RTO












Click it and Unblock the Notifications