ಭಾರತೀಯ ಲಿಕ್ಕರ್ ಉದ್ಯಮದ ಮೇಲೆ ವಿದೇಶಿ ಲಿಕ್ಕರ್ ಕರಿನೆರಳು
*ಇಮ್ರಾನ್ ಖುರೇಷಿ
ಬೆಂಗಳೂರು : ಭಾರತೀಯ ಲಿಕ್ಕರ್‌ಗೀಗ ಆತಂಕದ ಕ್ಷಣಗಳು. ವಿದೇಶಿ ಲಿಕ್ಕರ್ ಆಮದಿಗೆ ಭಾರತ ಸರ್ಕಾರ ಹೇರಿರುವ ನಿಯಂತ್ರಣಗಳು(ಕ್ಯೂಆರ್‌ಎಸ್) ರದ್ದಾಗುವ ದಿನಾಂಕ ಹತ್ತಿರವಾಗುತ್ತಿದ್ದಂತೆ ಭಾರತದ ಲಿಕ್ಕರ್ ಕೈಗಾರಿಕೆಯ ಆತಂಕ ಹೆಚ್ಚುತ್ತಿದೆ. ಅಂದ ಮೇಲೆ ಲಿಕ್ಕರ್ ಕೂಡ ಆಮದು ವಸ್ತುಗಳ ಪೋಟಿಯಿಂದ ಮುಕ್ತವಾಗಿಲ್ಲ ಎಂದಾಯಿತು.
ಬರುವ ಏಪ್ರಿಲ್ 1 ರಿಂದ ವಿದೇಶಿ ಲಿಕ್ಕರ್‌ಗೆ ಭಾರತದ ಮಾರುಕಟ್ಟೆ ತೆರೆದುಕೊಳ್ಳಲಿದೆ. ವಿದೇಶಿ ಲಿಕ್ಕರ್ ಸ್ಥಳೀಯ ಲಿಕ್ಕರ್‌ಗಿಂತ ಸಾಕಷ್ಟು ಅಗ್ಗ ಅನ್ನುವುದು ಒಂದು ಅಂದಾಜು. ಇದು ನಿಜವಾದಲ್ಲಿ , ಭಾರತೀಯ ಲಿಕ್ಕರ್ ಕೈಗಾರಿಕೆ ಪೆಟ್ಟು ತಿನ್ನುವುದು ಮಾತ್ರವಲ್ಲ , ದೀರ್ಘ ಕಾಲದ ಓಟದಲ್ಲಿ ರಾಜ್ಯಗಳ ಅಬಕಾರಿ ಸುಂಕದ ಆದಾಯದ ಮೇಲೂ ಕೆಟ್ಟ ಪರಿಣಾಮ ಬೀರುತ್ತದೆ ಎಂದು ಲಿಕ್ಕರ್ ಮೂಲಗಳು ಹೇಳುತ್ತವೆ.
ವಿದೇಶಿ ಲಿಕ್ಕರ್ ಆಗಮನದಿಂದ ಯಾರಿಗೆ ಲಾಭ? : ಅಬಕಾರಿ ಸುಂಕ ಮತ್ತಿತರ ಲೆವಿಗಳ ರೂಪದಲ್ಲಿ ವರ್ಷಕ್ಕೆ ಸುಮಾರು 200 ಬಿಲಿಯನ್ ರುಪಾಯಿಗಳನ್ನು ಸ್ಥಳೀಯ ಲಿಕ್ಕರ್ ಕೈಗಾರಿಕೆ ರಾಜ್ಯಗಳ ಬೊಕ್ಕಸಗಳಿಗೆ ಸಲ್ಲಿಸುತ್ತಿದೆ. ಆದರೆ, ವಿದೇಶಿ ಲಿಕ್ಕರ್ ಕಂಪನಿಗಳ ಆಗಮನದಿಂದ ಈ ಆದಾಯ ಗಣನೀಯ ಪ್ರಮಾಣದಲ್ಲಿ ಕುಂಠಿತಗೊಳ್ಳುತ್ತದೆ. ಇದು ಈಗಾಗಲೇ ಆಟೋಮೊಬೈಲ್ ಉದ್ಯಮದ ವಿಷಯದಲ್ಲೂ ಸಾಬೀತಾಗಿದೆ. ವಿದೇಶಿ ಆಟೋಮೊಬೈಲ್ ಸರಕುಗಳಿಗೆ ಭಾರತದಲ್ಲಿ ಮಾರುಕಟ್ಟೆ ಕಲ್ಪಿಸಿದ್ದೇ ತಡ, ಸ್ಥಳೀಯ ಉದ್ದಿಮೆಗಳಿಗೆ ಭಾರೀ ಹೊಡೆತ ಬಿತ್ತು . ಪರಿಣಾಮವಾಗಿ ಸರ್ಕಾರಗಳ ಬೊಕ್ಕಸಗಳೂ ಸೊರಗಿದವು.
ನಮ್ಮ ರಾಜ್ಯ ಸರ್ಕಾರಗಳು ಈ ಎಲ್ಲ ಅಪಾಯಗಳ ಬಗ್ಗೆ ಯೋಚಿಸುವುದೇ ಇಲ್ಲ . ಅವುಗಳು ಎಚ್ಚತ್ತುಕೊಳ್ಳುವುದು ಕೊನೆಯ ಗಳಿಗೆಯಲ್ಲಿ ಎನ್ನುತ್ತಾರೆ ಲಿಕ್ಕರ್ ಇಂಡಸ್ಟ್ರಿಯ ವಕ್ತಾರ ಹಾಗೂ ಯುಬಿ ಸಮೂಹಕ್ಕೆ ಸೇರಿದ ವಿಜಯ್ ರೇಖಿ.
ಬಹಳಷ್ಟು ರಾಜ್ಯಗಳು ವಿದೇಶಿ ಲಿಕ್ಕರ್ ಮೇಲೆ ವಿಧಿಸುವ ಶುಲ್ಕ ಹಾಗೂ ಮಾರಾಟ ತೆರಿಗೆಯ ಬಗ್ಗೆ ಈವರೆಗೂ ತಲೆ ಕೆಡಿಸಿಕೊಂಡಿಲ್ಲ . ಒಂದು ರಾಜ್ಯದಲ್ಲಿ ತಯಾರಾದ ಲಿಕ್ಕರ್ ಮತ್ತೊಂದು ರಾಜ್ಯಕ್ಕೆ ಸಾಗಾಣಿಕೆಯಾಗಬೇಕಾದರೆ ವಿವಿಧ ಹೆಚ್ಚುವರಿ ತೆರಿಗೆಗಳನ್ನು ಸಲ್ಲಿಸಬೇಕಾಗುತ್ತದೆ. ಆದರೆ, ಇಂಥಾ ಲೆವಿಗಳು ವಿದೇಶಿ ಲಿಕ್ಕರ್‌ಗೆ ಅನ್ವಯಿಸುವುದಿಲ್ಲ ವಾದ್ದರಿಂದ, ರಾಜ್ಯಾದಾಯದಲ್ಲಿ ಖೋತಾ ಉಂಟಾಗುತ್ತದೆ.
ವಿದೇಶಿ ಲಿಕ್ಕರ್‌ಗೆ ಹೆಚ್ಚು ತೆರಿಗೆ ಅಗತ್ಯ : ವಿದೇಶಿ ಲಿಕ್ಕರ್ ಆಗಮನದ ಹಿನ್ನೆಲೆಯಲ್ಲಿ ರಾಜ್ಯ ಸರ್ಕಾರ ತನ್ನ ಅಬಕಾರಿ ನೀತಿಯನ್ನು ಮತ್ತಷ್ಟು ಪರಿಷ್ಕರಿಸಬೇಕು ಹಾಗೂ ಆರೋಗ್ಯಕರ ಪೋಟಿಗೆ ಅವಕಾಶ ಮಾಡಿಕೊಡಬೇಕು ಅನ್ನುವುದು ಮೈಸೂರು ಬ್ರಿವರೀಸ್‌ನ ಅಧ್ಯಕ್ಷ ಹಾಗೂ ರಾಜ್ಯ ಬ್ರಿವರೀಸ್ ಒಕ್ಕೂಟದ ಅಧ್ಯಕ್ಷ ಕೆ.ಪಿ. ಬಾಲಸುಬ್ರಹ್ಮಣ್ಯಂ ಅವರ ಅಭಿಪ್ರಾಯ. ಪ್ರಸ್ತುತ ಸ್ಥಳೀಯ ಲಿಕ್ಕರ್‌ಗೆ ಸರ್ಕಾರ ಮಾಡಬಹುದಾದ ದೊಡ್ಡ ಸಹಾಯವೆಂದರೆ- ಸ್ಥಳೀಯ ಲಿಕ್ಕರ್‌ಗಿಂತ ವಿದೇಶಿ ಲಿಕ್ಕರ್‌ಗೆ ಹೆಚ್ಚು ತೆರಿಗೆ ವಿಧಿಸುವುದು.
ಸ್ಥಳೀಯ ಲಿಕ್ಕರ್ ಕೈಗಾರಿಕೆಯ ಹಣಕಾಸು ವ್ಯವಸ್ಥೆಯನ್ನು ವಿದೇಶಿ ಲಿಕ್ಕರ್ ಆಗಮನ ಹಾಳು ಮಾಡುತ್ತದೆನ್ನುವುದು ನಿಜ. ಆದರೆ, ಇದಷ್ಟೇ ನಮ್ಮ ಆತಂಕವಲ್ಲ . ಲಿಕ್ಕರ್ ಮಾರುಕಟ್ಟೆ ಅನೇಕ ಒಳದಾರಿಗಳಿಗೆ ತುತ್ತಾಗುವ ಭಯವೂ ಇದೆ ಎನ್ನುತ್ತಾರೆ ವಿಜಯ್ ರೇಖಿ. ಅಬಕಾರಿ ಆದಾಯ ಮತ್ತು ಸ್ಥಳೀಯ ಲಿಕ್ಕರ್ ಕೈಗಾರಿಕೆ, ವಿಶ್ವ ವಾಣಿಜ್ಯ ಸಂಘಟನೆಯ ನೀತಿಗಳ ಹಿನ್ನೆಲೆಯಲ್ಲಿ ಅಲ್ಪಾವಧಿ ಹಾಗೂ ದೀರ್ಘಾವಧಿ ಪರಿಣಾಮಗಳನ್ನು ಗಮನದಲ್ಲಿಟ್ಟುಕೊಂಡು ಸರ್ಕಾರ ತನ್ನ ಅಬಕಾರಿ ನೀತಿಯನ್ನು ಪರಿಷ್ಕರಿಸಬೇಕು ಎಂದು ರೇಖಿ ಒತ್ತಿ ಹೇಳುತ್ತಾರೆ.
ವಿದೇಶಿ ಅನ್ನುವ ಭೀತಿ ಭೂತವಾಗಿ ಭಾರತೀಯ ಕೈಗಾರಿಕೆಗಳನ್ನು ಕಾಡುತ್ತಿರುವ ವಿಷಯ ಹೊಸತೇನೂ ಅಲ್ಲ . ಚೀನಾ ಅಕ್ಕಿ ಭಾರತದ ಮಾರುಕಟ್ಟೆಯ ಮೇಲೆ ದಾಳಿಯಿಡುತ್ತಿದೆ ಎನ್ನುವುದು ಪ್ರಸ್ತುತ ಚಾಲ್ತಿಯಲ್ಲಿರುವ ಸುದ್ದಿ . ಈವರೆಗೆ ಯಂತ್ರೋಪಕರಣಗಳಿಗೆ ಮಾತ್ರವಷ್ಟೇ ಸೀಮಿತವಾಗಿದ್ದ ಆಮದು ವಸ್ತುಗಳ ಪೋಟಿ, ಎಲ್ಲಾ ಗ್ರಾಹಕ ವಸ್ತುಗಳಲ್ಲೂ ಉಂಟಾಗಿರುವುದು ಕೊಳ್ಳುಬಾಕತನದ ಪರಿಣಾಮ. ಇದಕ್ಕೆ ಇತ್ತೀಚಿನ ಸೇರ್ಪಡೆ ಲಿಕ್ಕರ್. ಇನ್ನು ಉಳಿದಿರುವುದು ಯಾವ ಕ್ಷೇತ್ರ ? ಉತ್ತರ ಗೊತ್ತಿದ್ದರೆ ಹೊಸಿತಿಲಲ್ಲಿ ಕಾಯ್ತುತಿರುವ ಬಹು ರಾಷ್ಟ್ರೀಯ ಕಂಪನಿಗಳಿಗೆ ತಿಳಿಸಿ.
(ಐಎಎನ್‌ಎಸ್)
-
New Airport: ವಿಜಯಪುರ ಏರ್ಪೋರ್ಟ್ಗೆ ಸಿಕ್ತು 220 ಕೋಟಿ ರೂ, ಕಾರ್ಯಾಚರಣೆ ಬಗ್ಗೆ ಎಂಬಿ ಪಾಟೀಲ ಅಪ್ಡೇಟ್ -
Bengaluru Property: ಬೆಂಗಳೂರಿನ 3 ಲಕ್ಷಕ್ಕೂ ಅಧಿಕ ಆಸ್ತಿ ಮಾಲೀಕರಿಗೆ ಶುಭ ಸುದ್ದಿ -
"ಇಲ್ಲಿ ಎಲ್ಲದಕ್ಕೂ ಚೌಕಾಸಿ ಮಾಡಬೇಕು": ಬೆಂಗಳೂರಿನಲ್ಲಿ 2 ತಿಂಗಳು ಕಳೆದ ಮುಂಬೈ ಯುವಕನ Viral Post -
3 ವರ್ಷಕ್ಕೆ 1.17 ಕೋಟಿ: ಮಲೈಕಾ ಅರೋರಾ ಅಪಾರ್ಟ್ಮೆಂಟ್ ಬಾಡಿಗೆ ಬಹಿರಂಗ -
Karnataka Weather: ಬೇಸಿಗೆ ಬಿಸಿಲ ನಡುವೆ ರಾಜ್ಯದ ಹಲವೆಡೆ ಗುಡುಗು-ಮಿಂಚು ಸಹಿತ ಮಳೆ; ಈ ಜಿಲ್ಲೆಗಳಿಗೆ ಯೆಲ್ಲೋ ಅಲರ್ಟ್ -
April 4 Horoscope: ಇಂದು ನಿಮ್ಮ ರಾಶಿ ಏನು ಹೇಳುತ್ತದೆ? ಏಪ್ರಿಲ್ 4 ಭವಿಷ್ಯ ಇಲ್ಲಿದೆ -
HSRP: ಎಚ್ಎಸ್ಆರ್ಪಿ ನಂಬರ್ ಪ್ಲೇಟ್ ಕಡ್ಡಾಯ: ವದಂತಿಗಳಿಗೆ ಕಿವಿಗೊಡಬೇಡಿ ಎಂದು ಸ್ಪಷ್ಟನೆ ಕೊಟ್ಟ ಸಾರಿಗೆ ಇಲಾಖೆ -
Bengaluru: ಆಟೋ LPG ಕೊರತೆ ಬಗೆಹರಿಯುವ ವಿಶ್ವಾಸ: ಪೂರೈಕೆ ಹೆಚ್ಚಿಸಿದ ಇಂಡಿಯನ್ ಆಯಿಲ್ -
ರಾಜ್ಯಪಾಲರೇ ಗಂಟುಮೂಟೆ ಕಟ್ಟಿಕೊಂಡು ನಿಮ್ಮ ರಾಜ್ಯಕ್ಕೆ ತೊಲಗಿ: ಕರವೇ ನಾರಾಯಣಗೌಡ ಎಚ್ಚರಿಕೆ -
ಲಲಿತ್ಪುರ ಫಾರ್ಮಾ ಪಾರ್ಕ್ ಅನ್ನು ಜಾಗತಿಕ ರಫ್ತು ಕೇಂದ್ರವನ್ನಾಗಿ ಮಾಡುವ ನಿಟ್ಟಿನಲ್ಲಿ ಮಹತ್ವದ ಹೆಜ್ಜೆ -
40 ವರ್ಷ ಮೇಲ್ಪಟ್ಟವರಿಗೆ ಸರ್ಕಾರದಿಂದಲೇ ಉಚಿತ ದೃಷ್ಟಿ ತಪಾಸಣೆ, ಕನ್ನಡಕ ವಿತರಣೆ -
Bengaluru: ಸತತ 3ನೇ ವರ್ಷವೂ ರಾಜ್ಯಕ್ಕೇ ಪ್ರಥಮ ಸ್ಥಾನ: 1,273 ಕೋಟಿ ರೂ. ಆದಾಯ ಸಂಗ್ರಹಿಸಿದ ಬೆಂಗಳೂರು ಕೇಂದ್ರ RTO












Click it and Unblock the Notifications