Get Updates
Get notified of breaking news, exclusive insights, and must-see stories!

ಹೊಸಿತಿಲಲ್ಲಿ ಇಣುಕುತಿರುವ ಬಿರು ಬಿಸಿಲ ಧಗೆ !

ಉರುಳಿದ ಶತಮಾನದಲ್ಲಿ ಕನಿಷ್ಠ 10 ಮಳೆಯ ವರ್ಷಗಳು ಕೇರಳದ ಪಾಲಿಗೆ ಕೆಟ್ಟದ್ದಾಗಿದ್ದವು ಎಂದು ತಿರುವನಂತಪುರದಿಂದ ಪ್ರಕಟವಾಗಿರುವ ತಜ್ಞರ ವರದಿಯಾಂದು ತಿಳಿಸಿದೆ. ಅಲ್ಲಿಗೆ ಕನಿಷ್ಠ 10 ವರ್ಷಗಳಿಗೆಮ್ಮೆ ಕೆಟ್ಟ ಮಳೆಯ ವರ್ಷ ಎಂದಾಯಿತು . ಕೇರಳದ ತಜ್ಞರು ಪ್ರಕಟಿಸಿರುವ ವರದಿಯಲ್ಲಿನ ಅಂಕಿ ಅಂಶಗಳ ಪ್ರಕಾರ, 1934, 1951, 1952,1972, 1976, 1982, 1986, 1987 ಹಾಗೂ 2000 ವರ್ಷಗಳಲ್ಲಿ ತೃಪ್ತಿಕರ ಮಳೆ ಕೇರಳಕ್ಕೆ ಮರೀಚಿಕೆಯಾಗಿತ್ತು .

ಇಂಥಾ ವರದಿಗಳು ಕರ್ನಾಟಕ ಕುರಿತಂತೆ ಸದ್ಯಕ್ಕೆ ಲಭ್ಯವಿಲ್ಲ . ಆದರೆ, ನೆರೆಯ ಕೇರಳದ ಅಂಕಿ ಅಂಶಗಳು ಕರ್ನಾಟಕದ ಮಳೆ ವರ್ಷಗಳಿಗಿಂತಾ ತೀರಾ ಭಿನ್ನವಾಗಿರಲೇನೂ ಸಾಧ್ಯವಿಲ್ಲ . ಹೆಚ್ಚೆಂದರೆ ನಾಲ್ಕೈದು ಕೆಟ್ಟ ಮಳೆಯ ವರ್ಷಗಳು ಕರ್ನಾಟಕದ ಪಾಲಿಗೆ ಹೆಚ್ಚಿರಬಹುದು ಅಷ್ಟೇ. ಕೇರಳೀಯರಿಗಿಂತ ಅಕ್ಷರತೆಯಲ್ಲಿ ಹಿಂದಿರುವ ನಾವು ಜನಸಂಖ್ಯೆಯ ವಿಷಯದಲ್ಲಿ ಸಾಕಷ್ಟು ಮುಂದು. ಅಂತೆಯೇ ಕಾಡನ್ನು ನಾಡಾಗಿಸುವಲ್ಲೂ ಎತ್ತಿದ ಕೈ.

ಪ್ರಸ್ತುತ ನಮ್ಮ ಮುಂದಿರುವ ಪ್ರಶ್ನೆ - ಅಂಕಿ ಅಂಶಗಳು ನಮ್ಮ ಮುಂದಿರಿಸುವ ಸತ್ಯದಲ್ಲಿ ಪ್ರಕೃತಿಯ ಪಾಲೆಷ್ಟು , ನಮ್ಮ ಪಾಲೆಷ್ಟು ಅನ್ನುವ ಕುತೂಹಲದ್ದು. ಉದಾಹರಣೆಗೆ, ಉತ್ತರಕರ್ನಾಟಕದ ಬಾಯಾರಿಕೆಯನ್ನೇ ಎತ್ತಿಕೊಳ್ಳೋಣ. ಭೀಮೆಯಲ್ಲಿ ಬಿರುಕು ಅಗಲವಾಗುತ್ತಿವೆ. ಗದ್ದೆಗಳನ್ನು ಮರೆತುಬಿಟ್ಟರೂ, ನಾಲಗೆ ಆರದಿರಲೂ ನೀರು ಸಿಗುವುದು ಕಷ್ಟವಾಗುತ್ತಿದೆ ಅನ್ನುವ ದೂರುಗಳು ಭೀಮಾ ಪ್ರದೇಶದಿಂದ ಏಳುತ್ತಿವೆ. ಇದಕ್ಕೆಲ್ಲಾ ನಾವು ಬೆಟ್ಟು ಮಾಡುವುದು ಮಹಾರಾಷ್ಟ್ರದತ್ತ . ಮಹಾರಾಷ್ಟ್ರ ನೀರನ್ನು ಹಿಡಿದಿಟ್ಟಿದೆ. ನೀರಿನ ಬಂಧನ ತಪ್ಪಿದರೆ ಭೀಮೆಯ ಒಡಲಿಗೆ ಭೈರಿಗೆ ಹಾಕಿ ನೀರುಕ್ಕಿಸುನ ರೈತರ ಕರುಣಾಜನಕ ದೃಶ್ಯಗಳು ತಪ್ಪುತ್ತವೆ ಅನ್ನುತ್ತಿದ್ದಾರೆ ನಮ್ಮ ಆಡಳಿತ ಪ್ರತಿನಿಧಿಗಳು. ಆದರೆ, ಇತ್ತೀಚೆಗೆ ಮಾಧ್ಯಮವೊಂದರಲ್ಲಿ ವರದಿಯಾಗಿರುವ ಕಥೆಯೇ ಬೇರೆ -

ಮಹಾರಾಷ್ಟ್ರ ನೀರನ್ನು ಬಿಡುತ್ತದೆ ಅಂತಲೇ ಇಟ್ಟು ಕೊಳ್ಳೋಣ. ಆದರೆ, ಆ ನೀರನ್ನೆಲ್ಲ ಎಲ್ಲಿ ತುಂಬಿಟ್ಟು ಕೊಳ್ಳುವುದು. ನಮ್ಮ ನಿಮ್ಮ ಮನೆಗಳಲ್ಲಿರುವ ತೊಟ್ಟಿಗಳು ಎಷ್ಟು ನೀರನ್ನು ಹಿಡಿದಿಟ್ಟು ಕೊಳ್ಳಲು ಸಾಧ್ಯ. ಇನ್ನು ನೀರನ್ನು ಹಿಡಿದಿಟ್ಟುಕೊಳ್ಳುವ ಸಾಮರ್ಥ್ಯ ಇರುವುದೆಂದರೆ ಬ್ಯಾರೇಜುಗಳಿಗೆ ಮಾತ್ರ. ತಮಾಷೆ ಇರುವುದೇ ಇಲ್ಲಿ . ಮಹಾರಾಷ್ಟ್ರ ನೀರನ್ನು ಬಿಟ್ಟರೆ ಹಿಡಿದಿಟ್ಟುಕೊಳ್ಳಲು ನಮ್ಮಲ್ಲಿ ಬ್ಯಾರೇಜುಗಳೇ ಇಲ್ಲ . ಆ ಕುರಿತು ಪ್ರಭುತ್ವ ದಿವ್ಯ ನಿರ್ಲಕ್ಷ್ಯ ವಹಿಸಿದೆ. ಆದ್ದರಿಂದ ಮಹಾರಾಷ್ಟ್ರವನ್ನು ಕಳ್ಳನ ಸ್ಥಾನದಲ್ಲಿ ನಿಲ್ಲಿಸುವುದು ವ್ಯರ್ಥ. ಮಹಾರಾಷ್ಟ್ರದಿಂದ ಹರಿದು ಬರಬಹುದಾದ ನೀರು ಭೀಮೆಗೆ ನಾಲಗೆ ಒಡ್ಡಿಕೊಂಡಿರುವ ರೈತನ ದಾಟಿಕೊಂಡು ಕೃಷ್ಣೆಯ ಮೂಲಕ ಆಂಧ್ರಾರ್ಪಣವಾಗುತ್ತದಂತೆ. ಸರಿ, ಮುಂದೇನು ?

ಈವತ್ತು , ಉತ್ತರ ಸಿಕ್ಕದ ಸಾವಿರ ಪ್ರಶ್ನೆಗಳನ್ನು ನಿತ್ಯ ಎದುರಿಸುತ್ತಿದ್ದೇವೆ. ಆದರೂ, ದಿನವೂ ಮತ್ತಷ್ಟು ಪ್ರಶ್ನೆಗಳ ಹುಟ್ಟಿಗೆ ನಾವೇ ಕಾರಣರಾಗುತ್ತಿರುವ ಪರಿಗೆ ಏನನ್ನುವುದು. ರಾಜ್ಯದಲ್ಲಿ ಇಂದು ಒಣಹವೆಯಿತ್ತು , ತಾಪಮಾನದಲ್ಲಿ ಅಂಥಾ ವ್ಯತ್ಯಾಸಗಳೇವೂ ಇರಲಿಲ್ಲ . ನಾಳೆಯೂ ಗಮನಾರ್ಹ ವ್ಯತ್ಯಾಸಗಳೇನೂ ಕಾಣುವುದಿಲ್ಲ ಅನ್ನುವ ಹವಾ ವರ್ತಮಾನದಷ್ಟು ನಮ್ಮ ನಡವಳಿಕೆಗಳೂ ಜೀವಂತಿಕೆ ಕಳಕೊಂಡರೆ, ಬದುಕಲ್ಲಿ ಉಳಿವುದೇನು. ವಿಷಾದದ ಸಂಗತಿಯೆಂದರೆ, ಉತ್ತರ ಹೇಳುವ ತುರ್ತು ಯಾರಿಗೂ ಕಾಣುತ್ತಿಲ್ಲ ...

ಬಿರು ಬಿಸಿಲ ಬೇಸಿಗೆ ಹೊಸಿತಿಲಲ್ಲಿ ಇಣುಕುತ್ತಿದೆ !

More From
Prev
Next
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+