Get Updates
Get notified of breaking news, exclusive insights, and must-see stories!

ನಿತ್ಯ ಭವಿಷ್ಯ

*ಜಾನುಕೊಂಡ ಶಾಮಾ ಶಾಸ್ತ್ರೀ

ಮೇಷ :ಯಾವುದೋ ಮುಖ್ಯ ವಿಷಯದ ನಿರೀಕ್ಷೆಯಲ್ಲಿ ನೀವಿದ್ದೀರಿ. ಅದು ತಂತಾನೇ ಬರೋದಿಲ್ಲ. ಜಡ್ಡುಗಟ್ಟಿರುವ ನಿಮ್ಮ ಮಿದುಳಿಗಿಷ್ಟು ಕಸರತ್ತು ಕೊಡಿ. ಆಗ ಆಕಾಶ ಕೈತುಂಬೀತು.

ವೃಷಭ : ಆಶಾವಾದಿಗಳಾಗಿ. ಒಂದಿಷ್ಟು ಯೋಚಿಸಿ ಹಣ ಹೂಡಿ. ನೀವು ಬಿಸಿನೆಸ್‌ ಮ್ಯಾಗ್ನೆಟ್‌ ಆಗೋದರಲ್ಲಿ ಯಾವುದೇ ಅನುಮಾನ ಇಲ್ಲ.

ಮಿಥುನ : ಒಲಿದು ಬರುವ ಅದೃಷ್ಟವನ್ನ ನೀವೇ ತಳ್ಳಿ ಬಿಡುತ್ತೀರಿ. ಈ ದಿನ ನಿಮ್ಮ ಎಲ್ಲಾ ಹೆಜ್ಜೆಗಳೂ ಅತಿ ಎನಿಸಿಬಿಡುತ್ತವೆ. ಅದೇ ನಿಮಗೆ ಕಂಠಕವೂ ಹೌದು.

ಕಟಕ : ಹೇಳುವ ಎಲ್ಲದರಲ್ಲೂ ಉತ್ಪ್ರೇಕ್ಷೆ ಗರಿಗೆದರಿಬಿಡುತ್ತದೆ. ಅದು ಇದಿರು ಪಾರ್ಟಿಗೆ ಖಂಡಿತ ಅರ್ಥವಾಗುತ್ತದೆ. ನಿಮ್ಮ ಈ ವರ್ತನೆಯೇ ವ್ಯಾಪಾರದ ದೊಡ್ಡ ಎಡರು.

ಸಿಂಹ : ಕಾಂಕ್ಷೆಯ ಮೇಲಿಷ್ಟು ಕಡಿವಾಣವಿರಲಿ. ಭಾವನೆಗಳನ್ನು ಒಮ್ಮೆಲೇ ಹರಿಬಿಡಬೇಡಿ. ಬೇರೆಯವರ ದೃಷ್ಟಿಯಲ್ಲಿ ಅದು ಪ್ರವಾಹವಾದೀತು.

ಕನ್ಯಾ : ವಾರೆ ವಾ! ನಿಮ್ಮ ಕೆರಿಯರಲ್ಲಿ ಇವತ್ತು ಒಮ್ಮೆಲೇ ಹತ್ತು ಮೆಟ್ಟಿಲೇರುತ್ತೀರಿ. ವಿದೇಶಕ್ಕೆ ಹಾರೋ ಭಾಗ್ಯ ಬರುವ ಲಕ್ಷಣಗಳೂ ಇವೆ.

ತುಲಾ : ಗೆಲುವಿನ ಹಾದಿ ಕೆದಕಲು ಸೋಲೇ ಪ್ರೇರಕ. ಇವತ್ತು ಕಳಕೊಳ್ಳುವ ಹತ್ತು ರುಪಾಯಿ ಬದಲಿಗೆ ನಾಳೆ ನೂರರ ಒಡೆಯ ನೀವಾಗುವಿರಿ.

ವೃಶ್ಚಿಕ : ನಿಮ್ಮ ರುಟೀನಿನ ಟಾಕುಟೀಕು ಬಿಟ್ಟು ಮನೆಮಂದಿಯ ತಾಳಕ್ಕೆ ಹೆಜ್ಜೆ ಹಾಕುವ ದಿನವಿದು. ಎಲ್ಲಾ ವಿಷಯಗಳಲ್ಲೂ ಒಂದು ಅರ್ಥಪೂರ್ಣ ದಿನ.

ಧನಸ್ಸು : ನಿಂತಲ್ಲೇ ನಿಲ್ಲೋ ನೀರಾಗಬೇಡಿ. ಹೊಳೆಯಾಗಿ ಕೊಳೆ ತೊಳೆಯಲು ಕಟ್ಟೆ ಒಡೆದುಕೊಂಡು ಹೊರಚಿಮ್ಮಿ. ಹರಿವ ಬಗಲುಗಳೆಲ್ಲಾ ಹಸುರ ಬಯಲು.

ಮಕರ : ನಿಶ್ಚೇಷ್ಟತೆ ಕಳೆದು ಒಲವು, ಲಲ್ಲೆ, ಪ್ರೀತಿ ಮಾತುಗಳ ಹರಿಸುವ ನೀವು ಸಂಗಾತಿಯ ಮುಖದಲ್ಲಿ ಸಾರ್ಥಕತೆಯ ನಗು ಮೂಡಿಸುವಲ್ಲಿ ಯಶಸ್ವಿಯಾಗುವಿರಿ.

ಕುಂಭ : ಸಂಸಾರ ಸುಖಕ್ಕೆ ಒಂದಿಷ್ಟು ಪೆಟ್ಟು ಬಿದ್ದಿದೆ. ಮನೆಯ ವಾಸ್ತು ಸರಿಯಿಲ್ಲವೆಂಬ ಕೊರಗು ಮನ ಕೊರೆಯುತ್ತಿದೆ. ಗೊಂದಲಗಳಿಗೆಲ್ಲಾ ಉತ್ತರ ಕಂಡುಕೊಂಡು, ನೆಮ್ಮದಿ ತುಂಬಿಕೊಳ್ಳಿ.

ಮೀನ : ಹರುಷದ ಕೂಳು ನೆಚ್ಚಿಕೊಂಡು ವರ್ಷದ ಕೂಳಿಗೆ ಕುತ್ತು ತಂದುಕೊಂಡೀರಿ. ಯಾವುದೇ ತೀರ್ಮಾನ ಕೈಗೊಳ್ಳುವಾಗ 5 ನಿಮಿಷ ತಡೆದು, ಮುನ್ನುಗ್ಗಿ. ಇಲ್ಲವಾದಲ್ಲಿ ಎಡವೋ ಕಾಲೇ ಮತ್ತೆ ಮತ್ತೆ ಮುಗ್ಗರಿಕೆ ಒಡ್ಡುವುದು.

ಮುಖಪುಟ / ಇವತ್ತು... ಈ ಹೊತ್ತು...

More From
Prev
Next
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+