Get Updates
Get notified of breaking news, exclusive insights, and must-see stories!

ಚಿ.ಮೂ, ಜಿಎಸ್ಸೆಸ್‌ಗೆ ಬಹಿಷ್ಕಾರ ಹಾಕಿಲ್ಲ : ವೀರಶೈವ ಮಹಾಸಭಾ

ಬೆಂಗಳೂರು : ಹಿರಿಯ ಸಂಶೋಧಕ ಹಾಗೂ ಸಾಹಿತಿ ಡಾ. ಎಂ. ಚಿದಾನಂದಮೂರ್ತಿ ಹಾಗೂ ಡಾ. ಜಿ.ಎಸ್‌. ಶಿವರುದ್ರಪ್ಪ ಅವರನ್ನು ವೀರಶೈವ ಸಮಾಜದಿಂದ ಬಹಿಷ್ಕರಿಸಲಾಗಿಲ್ಲ ಎಂದು ಅಖಿಲ ಭಾರತ ವೀರಶೈವ ಮಹಾಸಭಾ ಅಧ್ಯಕ್ಷ ಭೀಮಣ್ಣ ಖಂಡ್ರೆ ಸ್ಪಷ್ಟಪಡಿಸಿದ್ದಾರೆ.

ಇದು ಹೈಟೆಕ್‌ ಯುಗ ಈ ಕಾಲದಲ್ಲೂ ಬಹಿಷ್ಕಾರ ಹಾಕಲು ಸಾಧ್ಯವೇ? ಎಂದು ಪ್ರಶ್ನಿಸಿರುವ ಅವರು, ಇಂತಹ ಹೀನ ಕೃತ್ಯಕ್ಕೆ ಮಹಾಸಭಾ ಕೈಹಾಕುವುದಿಲ್ಲ ಎಂದೂ ತಿಳಿಸಿದ್ದಾರೆ. ಮಿಗಿಲಾಗಿ ಈ ಇಬ್ಬರು ಸಾಹಿತಿಗಳನ್ನು ಸಮಾಜದಿಂದ ಬಹಿಷ್ಕರಿಸುವ ಅಧಿಕಾರವಾದರೂ ನಮಗೆಲ್ಲಿದೆ. ಇದು ಅರ್ಥಹೀನ ಹೇಳಿಕೆ ಎಂದು ಖಂಡ್ರೆ ತಿಳಿಸಿದ್ದಾರೆ.

ಪ್ರಾಚೀನ ವಚನಕಾರ್ತಿ ಅಕ್ಕ ನಾಗಮ್ಮನವರ ಸುಸ್ಥಾಪಿತ ನಂಬಿಕೆಗಳೇ ಸುಳ್ಳು ಎಂದು ಪ್ರತಿಪಾದಿಸಿದ ಪಿ.ವಿ. ನಾರಾಯಣ್‌ ಅವರ ಧರ್ಮಕಾರಣ ಕೃತಿಗೆ ಸಂಬಂಧಿಸಿದಂತೆ ಬೆಂಬಲಕ್ಕೆ ನಿಂತ ಚಿದಾನಂದ ಮೂರ್ತಿ ಹಾಗೂ ಜಿ.ಎಸ್‌. ಶಿವರುದ್ರಪ್ಪ ಅವರನ್ನು ಮಹಾಸಭಾದ ಕಾರ್ಯಕ್ರಮಗಳಲ್ಲಿ ಭಾಗವಹಿಸದಂತೆ ತಡೆಯಲಾಗಿದೆಯೇ ಹೊರತು ಸಮಾಜದಿಂದ ಬಹಿಷ್ಕಾರ ಹಾಕಿಲ್ಲ ಎಂದು ಅವರು ಸ್ಪಷ್ಟೀಕರಣ ನೀಡಿದರು.

2001ರ ಜನಗಣತಿಯಲ್ಲಿ ಧರ್ಮದ ಕಾಲಂನಲ್ಲಿ ವೀರಶೈವ ಅಥವಾ ಲಿಂಗಾಯತ ಎಂದೇ ಬರೆಸುವಂತೆ ಅವರು ತಮ್ಮ ಕುಲಬಾಂಧವರಿಗೆ ಮನವಿ ಮಾಡಿದರು. ವೀರಶೈವರು ಅಥವಾ ಲಿಂಗಾಯತರೂ ಹಿಂದೂಗಳೇ ಆದರೆ, ಧರ್ಮದ ಕಕ್ಷೆಯಲ್ಲಿ ಸಿಕ್‌, ಬೌದ್ಧ ಧರ್ಮಗಳಂತೆಯೇ ವೀರಶೈವ ಧರ್ಮ ಕೂಡ ಸರ್ವ ಸ್ವತಂತ್ರ ಧರ್ಮ ಎಂದೂ ಅವರು ಪ್ರತಿಪಾದಿಸಿದರು.

More From
Prev
Next
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+