Get Updates
Get notified of breaking news, exclusive insights, and must-see stories!

ಗುಜರಾತ್‌ ಭೂಕಂಪ : ಇಂಡಿ ಎಂಜಿನಿಯರ್‌ ಸಾವು, ಒಬ್ಬ ನಾಪತ್ತೆ

ಬೆಂಗಳೂರು : ಗಣರಾಜ್ಯೋತ್ಸವದ ದಿನ ಗುಜರಾತ್‌ನಲ್ಲಿ ಸಂಭವಿಸಿದ ಭೀಭತ್ಸ ಭೂಕಂಪದಲ್ಲಿ ಇಂಡಿ ತಾಲೂಕಿನ ಚಿಕ್ಕ ಬೇವನೂರಿನ ಯುವ ಎಂಜಿನಿಯರ್‌ರೊಬ್ಬರು ಸಾವನ್ನಪ್ಪಿದ್ದು, ಮತ್ತೊಬ್ಬರು ನಾಪತ್ತೆಯಾಗಿದ್ದಾರೆ.

ಚಿಕ್ಕ ಬೇವನೂರಿನ ಬಾಬು ಉಮರ್ಜಿ (23) ಕಳೆದ ಐದು ವರ್ಷಗಳಿಂದಲೂ ಗುಜರಾತ್‌ ಗಾಂಧೀನಗರದಲ್ಲಿ ಕಂಪ್ಯೂಟರ್‌ ಎಂಜಿನಿಯರ್‌ ಆಗಿ ಸೇವೆಸಲ್ಲಿಸುತ್ತಿದ್ದರು. ಭೀಕರ ಭೂಕಂಪದಿಂದ ಕುಸಿದ ಕಟ್ಟಡಗಳ ಅವಶೇಷಗಳಡಿ ಸಿಕ್ಕಿ ಅವರು ಸಾವನ್ನಪ್ಪಿದ್ದಾರೆ ಎಂದು ಈಗ ವರದಿಯಾಗಿದೆ.

ಇವರೊಂದಿಗೆ ಗುಜರಾತ್‌ನಲ್ಲಿದ್ದ ಮಹೇಶ ಎಂಬುವವರು ಇನ್ನೂ ನಾಪತ್ತೆಯಾಗಿದ್ದಾರೆ. ಇವರ ಬಗ್ಗೆ ಅವರ ಕುಟುಂಬದವರಿಗೆ ಈವರೆಗೆ ಯಾವುದೇ ಮಾಹಿತಿ ದೊರಕಿಲ್ಲ ಎಂದು ಗೊತ್ತಾಗಿದೆ. ಈ ಮಧ್ಯೆ ಚಂದ್ರಶೇಖರ್‌, ಅಪ್ಪಾಜಿ ಗೌಡ ಹಾಗೂ ಗೋಪಾಲಕೃಷ್ಣ ಎಂಬ ಮೂರು ಕನ್ನಡ ಕುಟುಂಬಗಳು ಸುರಕ್ಷಿತವಾಗಿ ಬೆಂಗಳೂರಿಗೆ ಮರಳಿವೆ ಎಂದು ವರದಿಗಳು ತಿಳಿಸಿವೆ.

ಆರು ತಿಂಗಳ ಹಿಂದಷ್ಟೇ ಗುಜರಾತಿನ ಭುಜ್‌ ಬಳಿಯ ಗಾಂಧೀಧಾಮ್‌ಗೆ ಹೋಗಿ ನೆಲೆಸಿದ್ದ ವಾಣಿ ಹಾಗೂ ಆಕೆಯ 8 ವರ್ಷದ ಪುತ್ರಿ ದೀಪ್ತಿ ಅವರು ಮೃತ್ಯು ದವಡೆಯಿಂದ ಬದುಕುಳಿದು ಮರಳಿದ್ದಾರೆ. ವಾಣಿ ಅವರು, ಬೆಂಗಳೂರು ದೂರದರ್ಶನ ಕೇಂದ್ರದ ನಿವೃತ್ತ ನಿರ್ದೇಶಕ ಶ್ರೀನಿವಾಸ ಕುಲಕರ್ಣಿ ಅವರ ಪುತ್ರಿ. ಭೂಕಂಪ ಸಂಭವಿಸಿದಾಗ ವಾಣಿ ಅವರ ಪತಿ ಜೋಷಿ ಊರಿನಲ್ಲಿರಲಿಲ್ಲ. ಈಗ ಮೂವರೂ ಸುರಕ್ಷಿತವಾಗಿ ಧಾರವಾಡಕ್ಕೆ ವಾಪಸಾಗಿದ್ದಾರೆ.

ಮೂಲತಃ ಕೋಲಾರದವರಾದ ಸಿ.ಎನ್‌. ವರದರಾಜು, ರಾಜು ಅವರ ಪತ್ನಿ ಗಿರಿಜಾ ಹಾಗೂ ಮಕ್ಕಳಾದ ಸಂಜನಾ ಮತ್ತು ವರುಣ್‌ ಭೂಕಂಪದಲ್ಲಿ ಪುನರ್ಜನ್ಮ ಪಡೆದು ತವರೂರಿಗೆ ಮರಳಿದ್ದಾರೆ. ವರದರಾಜು ಅವರು, ಅಹ್ಮದಾಬಾದ್‌ನ ಅಂಬಾವಾಡಿಯ ವಿಜಯಾಬ್ಯಾಂಕ್‌ನಲ್ಲಿ ಸಹಾಯಕ ಮ್ಯಾನೇಜರ್‌ ಆಗಿ ಕಳೆದ 5 ವರ್ಷಗಳಿಂದ ಸೇವೆ ಸಲ್ಲಿಸುತ್ತಿದ್ದಾರೆ.

ಶಿವಮೊಗ್ಗದ ವಿನೋಬ ಬಡಾವಣೆ ನಿವಾಸಿ ಕೆ. ರಾಘವನ್‌ ಕಾರ್ಪೊರೇಷನ್‌ ಬ್ಯಾಂಕ್‌ ಅಧಿಕಾರಿ ಇವರು ಅಹ್ಮದಾಬಾದ್‌ನ ನವರಂಗ್‌ಪುರ್‌ ವಲಯ ಕಚೇರಿಯಲ್ಲಿ ಸೇವೆ ಸಲ್ಲಿಸುತ್ತಿದ್ದರು. ಸಾವಿರಾರು ಜನರನ್ನು ಬಲಿತೆಗೆದುಕೊಂಡ ಭೂಕಂಪದ ಕೆನ್ನಾಲಿಗೆಯಿಂದ ತಪ್ಪಸಿಕೊಂಡು ಸುರಕ್ಷಿತವಾಗಿ ತವರಿಗೆ ಮರಳಿದ ಅದೃಷ್ಟವಂತರಲ್ಲಿ ಇವರ ಕುಟುಂಬವೂ ಒಂದು.

ಪತ್ನಿ ಅನಸೂಯ, 9 ವರ್ಷದ ಮಗ ಧನುಷ್‌ ಅವರೊಂದಿಗೆ ಈಗ ಶಿವಮೊಗ್ಗಕ್ಕೆ ಬಂದಿದ್ದಾರೆ. ಸುರಕ್ಷಿತವಾಗಿ ಮರಳಿರುವ ಈ ಎಲ್ಲ ಕನ್ನಡಿಗರ ಕುಟುಂಬಗಳ ಅನುಭವವೂ ಕರುಳು ಹಿಂಡುವಂತಿವೆ. ಕಣ್ಣಾರೆ ಸಾವಿರಾರು ಜನರ ಸಾವನ್ನು ಕಂಡ ಇವರ್ಯಾರೂ ಇನ್ನೂ ಆ ಆಘಾತದಿಂದ ಚೇತರಿಸಿಕೊಂಡಿಲ್ಲ.

More From
Prev
Next
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+