Get Updates
Get notified of breaking news, exclusive insights, and must-see stories!

ಅರಮನೆ ಆವರಣದಲ್ಲಿ ಪ್ಲಾಸ್ಟಿಕಾ -2001 ಪ್ರದರ್ಶನ ಆರಂಭ

ಬೆಂಗಳೂರು : ಪ್ಲಾಸ್ಟಿಕಾ -2001 ಎಂಬ ಹೆಸರಿನ ವಸ್ತು ಪ್ರದರ್ಶನ ಬೆಂಗಳೂರಿನ ಅರಮನೆ ಆವರಣದಲ್ಲಿ ನಡೆಯುತ್ತಿದೆ. ಶುಕ್ರವಾರ ಕರ್ನಾಟಕ ರಾಜ್ಯದ ಸಣ್ಣ ಕೈಗಾರಿಕಾ ಸಚಿವ ಎಸ್‌.ಆರ್‌. ಕಾಶಪ್ಪನವರ್‌ ಈ ವಸ್ತು ಪ್ರದರ್ಶನವನ್ನು ಉದ್ಘಾಟಿಸಿದರು.

ಫೆಬ್ರವರಿ 5ನೇ ತಾರೀಖಿನವರೆಗೆ ನಡೆಯುವ ಈ ವಸ್ತು ಪ್ರದರ್ಶನದಲ್ಲಿ ಮುದ್ರಣ ಮತ್ತು ಪ್ಲಾಸ್ಟಿಕ್‌ ವಸ್ತುಗಳ ತಯಾರಿಕಾ ಯಂತ್ರಗಳನ್ನು ಸಾರ್ವಜನಿಕರ ವೀಕ್ಷಣೆಗೆ ಇರಿಸಲಾಗಿದೆ. ದೇಶ ವಿದೇಶಗಳ ಸುಮಾರು 126 ಕಂಪನಿಗಳು ಈ ಪ್ರದರ್ಶನದಲ್ಲಿ ಪಾಲ್ಗೊಂಡಿವೆ. ನಗರದ ಪ್ರಸಿದ್ಧಿ ಪ್ರತಿಷ್ಠಾನ ಈ ಪ್ರದರ್ಶನ ಏರ್ಪಡಿಸಿದೆ.

ದಕ್ಷಿಣ ಭಾರತದ ಜನತೆಗೆ ಈ ಆಧುನಿಕ ಯಂತ್ರಗಳ ಪರಿಚಯ ಮೂಡಿಸುವ ನಿಟ್ಟಿನಲ್ಲಿ ಪ್ರದರ್ಶನ ಏರ್ಪಡಿಸಲಾಗಿದೆ ಎಂದು ಸಂಘಟಕರು ತಿಳಿಸಿದ್ದಾರೆ. ಪ್ರದರ್ಶನ ಕಾಲದಲ್ಲಿ ಸಾಂಸ್ಕೃತಿಕ ಕಾರ್ಯಕ್ರಮಗಳೂ ನಡೆಯಲಿವೆ ಎಂದೂ ಅವರು ಹೇಳಿದ್ದಾರೆ.

ಶುಕ್ರವಾರ ನಡೆದ ಉದ್ಘಾಟನಾ ಸಮಾರಂಭದಲ್ಲಿ ಮಾಜಿ ಸಚಿವ ಆರ್‌.ಕೆ. ಚೌಧರಿ, ಸುಪ್ರಸಿದ್ಧ ವೈಣಿಕರಾದ ಆರ್‌.ಕೆ. ಸೂರ್ಯನಾರಾಯಣ, ಪ್ರಸಿದ್ಧಿ ಪ್ರತಿಷ್ಠಾನದ ವ್ಯವಸ್ಥಾಪಕ ನಿರ್ದೇಶಕಿ ಕೆ. ಶಾರದಾಂಬಾ ಮೊದಲಾದವರು ಪಾಲ್ಗೊಂಡಿದ್ದರು.

More From
Prev
Next
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+