ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ರಾಜ್ಯದಿಂದ ಗುಜರಾತ್‌ಗೆ ಬಹುದಿನ ಕೆಡದ ಆಹಾರ ಪೊಟ್ಟಣ

By Staff
|
Google Oneindia Kannada News

ಮೈಸೂರಿನ ಸಿ.ಎಫ್‌.ಟಿ. ಆರ್‌.ಐ. ಬಹಳ ದಿನಗಳ ಕಾಲ ಕೆಡದೆ ಉಳಿಯುವ ಆಹಾರದ ಪೊಟ್ಟಣಗಳನ್ನು ಸಿದ್ಧಪಡಿಸಿ, ಗುಜರಾತ್‌ ಸಂತ್ರಸ್ತರ ಶಿಬಿರಗಳಿಗೆ ಕಳುಹಿಸುತ್ತಿದೆ. ಪ್ರಥಮ ಹಂತದಲ್ಲಿ ಸುಮಾರು 2500 ಆಹಾರ ಪೊಟ್ಟಣಗಳನ್ನು ಕಳುಹಿಸುತ್ತಿರುವುದಾಗಿ ಸಿಎಫ್‌ಟಿಆರ್‌ಐನ ವಿ. ಪ್ರಕಾಶ್‌ ತಿಳಿಸಿದ್ದಾರೆ.

  • ಸುಡುವ ಬಿಸಿಲಿನಲ್ಲೂ ಮಾಜಿ ಪ್ರಧಾನಿ ದೇವೇಗೌಡರು ಹಲವು ಗಣ್ಯರ ಜತೆಗೂಡಿ ಜಾತ್ಯತೀತ ಜನತಾದಳ ಕೇಂದ್ರ ಕಚೇರಿಯಿಂದ ಪಾದಯಾತ್ರೆ ನಡೆಸಿ ಗುಜರಾತ್‌ ಭೂಕಂಪ ಸಂತ್ರಸ್ತರ ನೆರವಿಗೆ ನಿಧಿ ಸಂಗ್ರಹಿಸಿದರು. ಜನ ಮುಗಿಬಿದ್ದು, ಸಂತ್ರಸ್ತರಿಗೆ ತಮ್ಮ ಕೈಲಾದಷ್ಟು ನೆರವು ನೀಡಿದರು.
    ಶುಕ್ರವಾರದ ಈ ಪಾದಯಾತ್ರೆಯಲ್ಲಿ 4.48ಲಕ್ಷ ರುಪಾಯಿ ನಗದು, 10 ಲಕ್ಷ ರುಪಾಯಿ ಮೌಲ್ಯದ, ಬಟ್ಟೆ, ಆಹಾರ ಪದಾರ್ಥ ಹಾಗೂ ಚೆಕ್‌ ಸಂಗ್ರಹವಾಗಿದೆ. ಶನಿವಾರವೂ ಪಾದಯಾತ್ರೆ ಮುಂದುವರಿಯಲಿದೆ.

  • ಸಂತ್ರಸ್ತ್ರರ ನೆರವಿಗಾಗಿ ರೆಡ್‌ಕ್ರಾಸ್‌ ಸಂಸ್ಥೆಯ ವತಿಯಿಂದ 25 ಲಕ್ಷ ರುಪಾಯಿಗಳ ಪರಿಹಾರ ಕಳುಹಿಸಿಕೊಡುವುದಾಗಿ ರೆಡ್‌ಕ್ರಾಸ್‌ ಸಂಸ್ಥೆಯ ಅಧ್ಯಕ್ಷರೂ ಆದ ರಾಜ್ಯಪಾಲರಾದ ವಿ.ಎಸ್‌. ರಮಾದೇವಿ ಅವರು ಬೆಳಾವಿಯಲ್ಲಿ ಪ್ರಕಟಿಸಿದ್ದಾರೆ.
  • ವಿವಾದಾತ್ಮಕ ಹೇಳಿಕೆ ನೀಡಿ, ರಾಜೀನಾಮೆ ನೀಡಿರುವ ಮಾಜಿ ಸಚಿವ ಟಿ. ಜಾನ್‌ ಅವರು ಶನಿವಾರದಿಂದಲೇ ಪಾದಯಾತ್ರೆ ಮಾಡಿ ನಿಧಿ ಸಂಗ್ರಹಿಸುವುದಾಗಿ ಹೇಳಿದ್ದಾರೆ.
  • ಜವಳಿ ಖಾತೆಯ ನೌಕರರು ತಮ್ಮ ಒಂದು ದಿನದ ಸಂಬಳವಾದ ಸುಮಾರು ಒಂದು ಕೋಟಿ ರುಪಾಯಿಗಳನ್ನು ಗುಜರಾತ್‌ ಸಂತ್ರಸ್ತರ ನಿಧಿಗೆ ನೀಡಿದ್ದಾರೆ.
  • ಭಾರತೀಯ ಕ್ರೆೃಸ್ತರ ಜಾಗತಿಕ ಸಮಿತಿ 5 ಲಕ್ಷ ರುಪಾಯಿ ಮೌಲ್ಯದ ಔಷಧಿ ಹಾಗೂ 2 ಕೋಟಿ ರುಪಾಯಿ ಮೌಲ್ಯದ ಆಹಾರ ಪೊಟ್ಟಣಗಳನ್ನು ಗುಜರಾತ್‌ಗೆ ಕಳುಹಿಸಿಕೊಡುವುದಾಗಿ ತಿಳಿಸಿದೆ.
  • ಅಹಮದಾಬಾದ್‌ ಸಮೀಪದ ಗಾಂಧೀಧಾಮ್‌ ಸಂತ್ರಸ್ತರಿಗೆ ಶಾಶ್ವತ ಪರಿಹಾರ ಕಲ್ಪಿಸಲು ಇಂಡಿಯಾ ಕ್ಯಾಂಪಸ್‌ ಕ್ರುಸೆಡ್‌ ಫಾರ್‌ ಕ್ರಿಶ್ಚಿಯನ್‌ನ ಸಹಯೋಗದಲ್ಲಿ ಒಂದು ಸಾವಿರ ಮನೆ ನಿರ್ಮಿಸಲು, ಮನೆಯಾಂದಕ್ಕೆ 65 ಸಾವಿರ ರುಪಾಯಿ ನೆರವು ನೀಡಲೂ ಕ್ರೆೃಸ್ತರ ಜಾಗತಿಕ ಸಮಿತಿ ಪ್ರಕಟಿಸಿದೆ.
ಮುಖಪುಟ
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X