Get Updates
Get notified of breaking news, exclusive insights, and must-see stories!

38 ಕೊಲೆ ಮಾಡಿ, ಆಭರಣ ದೋಚಿದ್ದ ಆರೋಪಿಗಳ ಸೆರೆ

ಬೆಂಗಳೂರು : ರಾಜ್ಯದಲ್ಲಿ ಕಾನೂನು ಸುವ್ಯವಸ್ಥೆ ಏನಾಗಿದೆ ಎಂದು ಪ್ರಶ್ನಿಸುಂತೆ ಮಾಡಿದ್ದ ದಂಡುಪಾಳ್ಯದ ಪಾತಕಿಗಳನ್ನು ಹಿಡಿಯುವಲ್ಲಿ ಬೆಂಗಳೂರು ಪಶ್ಚಿಮ ವಿಭಾಗದ ಪೊಲೀಸರು ಯಶಸ್ವಿಯಾಗಿದ್ದಾರೆ.

ರಾಜ್ಯದ ರಾಜಧಾನಿ ಬೆಂಗಳೂರೂ ಸೇರಿದಂತೆ ರಾಜ್ಯದ ವಿವಿಧ ಭಾಗಗಳ ಒಂಟಿ ಮನೆಗಳ ಮೇಲೆ ದಾಳಿ ಮಾಡಿ ಕರುಣೆ, ಕನಿಕರವೇ ಇಲ್ಲದೆ ವೃದ್ಧರನ್ನು ಹಾಗೂ ಮಹಿಳೆಯನ್ನು ಕೊಲೆಗೈದು ಚಿನ್ನಾಭರಣ ದೋಚುತ್ತಿದ್ದ ಐದು ಮಂದಿ ಹಂತಕರನ್ನು ಬಂಧಿಸಿರುವ ಬೆಂಗಳೂರು ಪಶ್ಚಿಮ ವಿಭಾಗದ ಪೊಲೀಸರು, ಪಾತಕಿಗಳಿಂದ 8 ಲಕ್ಷ ರುಪಾಯಿ ಬೆಲೆಯ ಆಭರಣ ಹಾಗೂ ಮತ್ತಿತರ ವಸ್ತುಗಳನ್ನು ವಶಪಡಿಸಿಕೊಂಡಿದ್ದಾರೆ.

ಕಳೆದ ಆರು ತಿಂಗಳಿನಿಂದ ಬೆಂಗಳೂರೂ ಸೇರಿದಂತೆ ರಾಜ್ಯದ ನಾನಾ ಭಾಗಗಳಲ್ಲಿ ಕೊಲೆ, ಸುಲಿಗೆ, ದರೋಡೆ, ಡಕಾಯಿತಿಯ ಸುದ್ದಿಗಳನ್ನು ಓದಿ, ಕೇಳಿ ತಲ್ಲಣಗೊಂಡಿದ್ದ ನಾಗರಿಕರು ನರಹಂತಕರ ಬಂಧನದ ಸುದ್ದಿ ಕೇಳಿ ಶನಿವಾರ ನೆಮ್ಮದಿಯ ನಿಟ್ಟುಸಿರುಬಿಟ್ಟರು.

ಈ ಆರೋಪಿಗಳು ಬೆಂಗಳೂರಿನಲ್ಲೇ ಸುಮಾರು 12 ಕೊಲೆ ಮಾಡಿದ್ದಾರೆ ಎಂಬ ಅಂಶ ಬೆಳಕಿಗೆ ಬಂದಿದೆ. ಪಶ್ಚಿಮ ವಿಭಾಗದ ಡಿಸಿಪಿ ನಿಸಾರ್‌ ಅಹ್ಮದ್‌ ಅವರ ನೇತೃತ್ವದ ಪೊಲೀಸರ ತಂಡ ಈ ನರಹಂತಕರನ್ನು ಬಂಧಿಸುವಲ್ಲಿ ಹೂಡಿದ ತಂತ್ರ ಫಲ ನೀಡಿದೆ.

ದಿನದಿಂದ ದಿನಕ್ಕೆ ಹೆಚ್ಚುತ್ತಿದ್ದ ಕೊಲೆ, ಸುಲಿಗೆಗಳ ಹಿನ್ನೆಲೆಯಲ್ಲಿ ನೇಮಕಗೊಂಡಿದ್ದ ವಿಶೇಷ ತಂಡ ರಾಜ್ಯವೂ ಸೇರಿದಂತೆ ನೆರೆರಾಜ್ಯಗಳಲ್ಲಿ ಸುತ್ತಾಡಿ, ಪಾತಕಿಗಳ ಬಗ್ಗೆ ಮಾಹಿತಿ ಸಂಗ್ರಹಿಸಿ, ಹೊಸಪೇಟೆ ತಾಲೂಕು ದಂಡು ಪಾಳ್ಯದ ದೊಡ್ಡ ಹನುಮ, ಲಕ್ಷ್ಮೀ, ತುಮಕೂರು ಜಿಲ್ಲೆಯ ಈಚನೂರಿನ ವೆಂಕಟೇಶ, ಮುನಿಕೃಷ್ಣ, ಪಿರಿಯಾಪಟ್ಟಣ ತಾಲೂಕು ಚೆನ್ನೇನಹಳ್ಳಿಯ ನಲ್ಲತಿಮ್ಮ ಎಂಬ ಐವರು ಆರೋಪಿಗಳನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.

ಈ ಎಲ್ಲ ಆರೋಪಿಗಳೂ 28ರಿಂದ 35ರ ಪ್ರಾಯದವರಾಗಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ. ತಂಡದ ಪ್ರಮುಖನಾದ ದೊಡ್ಡ ಹನುಮ 38 ಕೊಲೆ, 22 ಡಕಾಯಿತಿ ಹಾಗೂ 12 ಕಳವು ಪ್ರಕರಣಗಳಲ್ಲಿ ಭಾಗಿಯಾಗಿದ್ದ ಎಂದು ಹೇಳಲಾಗಿದೆ. ಈತ ಜೈಲಿನಿಂದಲೂ ತಪ್ಪಿಸಿಕೊಂಡಿದ್ದ.

ಜೈಲಿನಿಂದ ತಪ್ಪಿಸಿಕೊಂಡ ನಂತರ ತನ್ನ ತಂಡ ಸೇರಿದ ಈ ಆರೋಪಿ, ತಾವು ಕಳವು ಮಾಡಬೇಕಾದ ಮನೆಯನ್ನು ಮೊದಲೇ ಗುರುತಿಸುತ್ತಿದ್ದ. ಮನೆಯವರ ದಿನಚರಿ ಏನು ಎಂಬುದನ್ನು ಅರಿಯಲು ತನ್ನ ತಂಡದಲ್ಲಿದ್ದ ಹೆಂಗಸರನ್ನು ಬಳಸುತ್ತಿದ್ದ ಎಂಬುದೂ ಬೆಳಕಿಗೆ ಬಂದಿದೆ. ಈ ಹೆಂಗಸರು, ಭಿಕ್ಷೆ ಬೇಡುವ ನೆಪದಲ್ಲಿ, ಕೆಲಸ ಕೇಳುವ ನೆಪದಲ್ಲಿ ಮಾಹಿತಿ ಸಂಗ್ರಹಿಸುತ್ತಿದ್ದರು.

ಈ ಎಲ್ಲ ಐವರು ಆರೋಪಿಗಳನ್ನೂ ನ್ಯಾಯಾಲಯದ ಮುಂದೆ ಹಾಜರುಪಡಿಸಲಾಗಿದ್ದು, ಪೊಲೀಸ್‌ ಕಸ್ಟಡಿಗೆ ಒಪ್ಪಿಸಲಾಗಿದೆ. ತನಿಖೆ ಮುಂದುವರಿದಿದೆ. ಈ ಎಲ್ಲ ಮಾಹಿತಿಗಳನ್ನೂ ನಗರದ ಪೊಲೀಸ್‌ ಕಮೀಷನರ್‌ ಟಿ. ಮಡಿಯಾಳ್‌ ಸುದ್ಧಿಗೋಷ್ಠಿಯಲ್ಲಿ ತಿಳಿಸಿದರು. ಪೊಲೀಸರಿಗೇ ಸವಾಲಾಗಿದ್ದ ಈ ತಂಡವನ್ನು ಬಂಧಿಸಿದ ಪೊಲೀಸ್‌ ಅಧಿಕಾರಿಗಳನ್ನು ಮುಕ್ತ ಕಂಠದಿಂದ ಪ್ರಶಂಸಿಸಿದ ಅವರು, ಬಹುಮಾನವನ್ನು ಪ್ರಕಟಿಸಿರುವುದೇ ಅಲ್ಲದೆ, ಪ್ರಶಸ್ತಿಗಾಗಿ ಸರಕಾರಕ್ಕೆ ಶಿಫಾರಸು ಮಾಡಿರುವುದಾಗಿಯೂ ತಿಳಿಸಿದರು.

ವಾರ್ತಾಸಂಚಯ
ಮುಖಪುಟ / ಇವತ್ತು... ಈ ಹೊತ್ತು...

More From
Prev
Next
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+