ನಿತ್ಯ ಭವಿಷ್ಯ
*ಜಾನುಕೊಂಡ ಶಾಮಾ ಶಾಸ್ತ್ರೀ
ಮೇಷ : ಶುಭ ಕೆಲಸ ನಿಮಿತ್ತ ಟೂರ್ ಹಾಕಿಕೊಳ್ಳುವ ಪ್ರಸಂಗ ಬರಬಹುದು. ಎಷ್ಟೋ ದಿನದಿಂದ ಭೇಟಿಯಾಗಬೇಕು ಎಂದು ಆಸೆಪಟ್ಟಿದ್ದ ಸ್ನೇಹಿತರು ಅಚಾನಕ್ ಸಿಕ್ಕಿ ಬಿಟ್ಟು ನಿಮಗೆ ಹಾಯ್ ಹೇಳುತ್ತಾರೆ.ವೃಷಭ :ಮೋಟಾರು -ವಾಹನ ಕ್ಷೇತ್ರದಲ್ಲಿ ಲಕ್ ಇದೆ. ಟಿವಿಎಸ್, ಕೈನೆಟಿಕ್ ...ಕಾರು ಕೊಳುವ ಪ್ಲಾನ್ ಉಂಟಾ ? ಈ ದಿನವನ್ನು ಕಳೆದುಕೊಳ್ಳಬೇಡಿ. ಉದಾಸೀನ ಬಿಟ್ಟು ಶಾಪಿಂಗ್‌ಗೆ ಹೋಗಿ.
ಮಿಥುನ : ಕತ್ತು ಬೇನೆ ಬರುವ ಮುನ್ನ ಜಾಗ್ರತೆ ವಹಿಸುವುದು ಒಳ್ಳೆಯದು. ಬಾಯಿ ಹರಿ ಬಿಟ್ಟು ಸ್ನೇಹಿತರೊಂದಿಗೆ ಜಗಳ ಕಾಯುತ್ತೀರಿ. ವ್ಯಾಪಾರದಲ್ಲಿ ಒಳ್ಳೆಯ ಲಾಭವಿದೆ.
ಕಟಕ : ಕೆಲಸದಲ್ಲಿ ತೃಪ್ತಿಕರ ವಾತಾವರಣ ಇರುತ್ತದೆ. ಆಫೀಸಿನಲ್ಲಿ ಯಾವುದೇ ತಂಟೆ ತಕರಾರು ಇರುವುದಿಲ್ಲ. ಮನೆಯಲ್ಲಿ ಶುಭ ಕಾರ್ಯ ಎದುರಾಗಬಹುದು.
ಸಿಂಹ : ಹೊಸದೊಂದು ಪ್ಲಾನ್ ಹಾಕಿಕೊಂಡು ಇತ್ತೀಚೆಗೆ ಪಕ್ಕಿಟ್ಟಿದ್ದರೆ ಇವತ್ತು ಅದನ್ನು ಕೈಗೆತ್ತಿಕೊಳ್ಳಿ. ಆಮೇಲೆ ಅಧಿಕಾರ ಚಲಾಯಿಸುವುದು ಸ್ವಲ್ಪ ಕಡಿಮೆ ಮಾಡಿದರೆ ನಿಮಗೆ ಶ್ರೇಯಸ್ಸು ಸಿಗುತ್ತದೆ. ಶುಭ ಪ್ರಯಾಣಯೋಗವಿದೆ. ಎಂಜಾಯ್ ಮಾಡಲು ರೆಡಿಯಾಗಿರಿ.
ಕನ್ಯಾ : ಇವತ್ತು ನಿಮ್ಮ ಸಂಗಾತಿಯಾಂದಿಗೆ ಒಂದೂ ಜಗಳವಿಲ್ಲದೆ ದಿನ ಮುಗಿಯುತ್ತದೆ. ಆದೆರ ಖರೀದಿಯೋಗವಿದೆ. ಬ್ಯಾಂಕ್ ವ್ಯವಹಾರಗಳಲ್ಲಿ ಲಾಭ ಬರುವ ಸಾಧ್ಯತೆ ಇರುವುದರಿಂದ ಲೋನ್, ಷೇರು ಮುಂತಾದ ಕೆಲಸಗಳಿದ್ದರೆ ಇವತ್ತೇ ಮುಗಿಸಿಬಿಡಿ.
ತುಲಾ : ಮಾಡಿದವನ ಪಾಪ ಆಡಿದವನ ತಲೆ ಮೇಲೆ ಎಂಬ ಮಾತಿನಂತೆ ಸುಮ್ಮನೇ ಮಾತುಗಳಿಂದ ಮೂಡ್ ಕೆಡಿಸಿಕೊಳ್ಳಬೇಡಿ. ನಿಷ್ಠುರವಾಗಿದ್ದರೆ ನಿಮ್ಮ ಎಲ್ಲ ಸಮಸ್ಯೆಗಳೂ ಖತಮ್ ಆಗುತ್ತವೆ.
ವೃಶ್ಚಿಕ : ವೃಥಾ ಯೋಚನೆ ಮಾಡುತ್ತೀರಿ. ಮನೆಯಲ್ಲಿ ಸಂತೋಷದ ವಾತಾವರಣ. ಆಫೀಸಿನಲ್ಲಿ ಸಣ್ಣ ಪುಟ್ಟ ಕಿರಿಕಿರಿಗಳು ಎದುರಾಗಬಹುದು. ಆತಂಕಗಳಿಗೆ ನಿಮ್ಮ ಮಿದಳನ್ನು ಬಲಿಕೊಡಬೇಡಿ.
ಧನಸ್ಸು : ಒಂದು ಸಿಹಿಯೂಟದ ಇನ್ವಿಟೇಷನ್ ಇವತ್ತು ನಿಮ್ಮ ಕೈ ಸೇರಬಹುದು. ನಿಮ್ಮನ್ನು ತುಂಬಾ ಮುದಗೊಳಿಸುವ ವಿಚಾರವನ್ನು ಯಾರಾದರೂ ನಿಮಗೆ ತಿಳಿಸಬಹುದು. ಇವತ್ತೆಲ್ಲಾ ನಿಮಗೆ ಅವರದೇ ನಿರೀಕ್ಷೆ
ಮಕರ : ಆರೋಗ್ಯ ಹಾನಿಯ ಭಯವಿದೆ. ಸಣ್ಣ ಪುಟ್ಟ ವಿಷಯಗಳಿಗೆ ಹೆಚ್ಚು ತಲೆ ಕೆಡಿಸಿಕೊಂಡು ದಿನದ ಕೆಲಸಗಳಲ್ಲಿ ತೊಂದರೆ ಎದುರಿಸುತ್ತೀರಿ.
ಕುಂಭ : ದೇವರು, ಪೂಜೆ ಪುನಸ್ಕಾರಗಳು ಅಂತ ಇವತ್ತೆಲ್ಲಾ ವ್ಯಸ್ತರಾಗಿರುತ್ತೀರಿ. ಸಂಗಾತಿಯಾಂದಿಗೆ ಸುಂದರ ಸಂಜೆ ಕಳೆಯಬೇಕೆಂಬ ಆಸೆಗೆ ಕಲ್ಲು. ಅತಿಥಿಗಳು ಬಂದರೆ ಸಿಡುಕಬೇಡಿ. ಬೀರುವಿನಲ್ಲಿ ಸ್ವಲ್ಪ ಹಣವಿದೆ ತಾನೇ?
ಮೀನ : ನಾವು ಮಾಡಿದ ತಪ್ಪನ್ನೇ ಬೇರೆಯವರು ಮಾಡಿದಾಗ ರೇಗಾಡಲಾಗುತ್ತದೆಯೇ ? ಪಾಲಿಗೆ ಬಂದ್ದದ್ದು ಪಂಚಾಮೃತ ಎಂದುಕೊಂಡರಾಯಿತು. ನಿಮ್ಮ ಕಮರ್ಷಿಯಲ್ ಯೋಚನೆಗಳಿಗೆ ಇವತ್ತು ಗೆಲುವಿಲ್ಲ.
-
New Airport: ವಿಜಯಪುರ ಏರ್ಪೋರ್ಟ್ಗೆ ಸಿಕ್ತು 220 ಕೋಟಿ ರೂ, ಕಾರ್ಯಾಚರಣೆ ಬಗ್ಗೆ ಎಂಬಿ ಪಾಟೀಲ ಅಪ್ಡೇಟ್ -
Bengaluru Property: ಬೆಂಗಳೂರಿನ 3 ಲಕ್ಷಕ್ಕೂ ಅಧಿಕ ಆಸ್ತಿ ಮಾಲೀಕರಿಗೆ ಶುಭ ಸುದ್ದಿ -
"ಇಲ್ಲಿ ಎಲ್ಲದಕ್ಕೂ ಚೌಕಾಸಿ ಮಾಡಬೇಕು": ಬೆಂಗಳೂರಿನಲ್ಲಿ 2 ತಿಂಗಳು ಕಳೆದ ಮುಂಬೈ ಯುವಕನ Viral Post -
3 ವರ್ಷಕ್ಕೆ 1.17 ಕೋಟಿ: ಮಲೈಕಾ ಅರೋರಾ ಅಪಾರ್ಟ್ಮೆಂಟ್ ಬಾಡಿಗೆ ಬಹಿರಂಗ -
Karnataka Weather: ಬೇಸಿಗೆ ಬಿಸಿಲ ನಡುವೆ ರಾಜ್ಯದ ಹಲವೆಡೆ ಗುಡುಗು-ಮಿಂಚು ಸಹಿತ ಮಳೆ; ಈ ಜಿಲ್ಲೆಗಳಿಗೆ ಯೆಲ್ಲೋ ಅಲರ್ಟ್ -
April 4 Horoscope: ಇಂದು ನಿಮ್ಮ ರಾಶಿ ಏನು ಹೇಳುತ್ತದೆ? ಏಪ್ರಿಲ್ 4 ಭವಿಷ್ಯ ಇಲ್ಲಿದೆ -
HSRP: ಎಚ್ಎಸ್ಆರ್ಪಿ ನಂಬರ್ ಪ್ಲೇಟ್ ಕಡ್ಡಾಯ: ವದಂತಿಗಳಿಗೆ ಕಿವಿಗೊಡಬೇಡಿ ಎಂದು ಸ್ಪಷ್ಟನೆ ಕೊಟ್ಟ ಸಾರಿಗೆ ಇಲಾಖೆ -
Bengaluru: ಆಟೋ LPG ಕೊರತೆ ಬಗೆಹರಿಯುವ ವಿಶ್ವಾಸ: ಪೂರೈಕೆ ಹೆಚ್ಚಿಸಿದ ಇಂಡಿಯನ್ ಆಯಿಲ್ -
ರಾಜ್ಯಪಾಲರೇ ಗಂಟುಮೂಟೆ ಕಟ್ಟಿಕೊಂಡು ನಿಮ್ಮ ರಾಜ್ಯಕ್ಕೆ ತೊಲಗಿ: ಕರವೇ ನಾರಾಯಣಗೌಡ ಎಚ್ಚರಿಕೆ -
ಲಲಿತ್ಪುರ ಫಾರ್ಮಾ ಪಾರ್ಕ್ ಅನ್ನು ಜಾಗತಿಕ ರಫ್ತು ಕೇಂದ್ರವನ್ನಾಗಿ ಮಾಡುವ ನಿಟ್ಟಿನಲ್ಲಿ ಮಹತ್ವದ ಹೆಜ್ಜೆ -
40 ವರ್ಷ ಮೇಲ್ಪಟ್ಟವರಿಗೆ ಸರ್ಕಾರದಿಂದಲೇ ಉಚಿತ ದೃಷ್ಟಿ ತಪಾಸಣೆ, ಕನ್ನಡಕ ವಿತರಣೆ -
Bengaluru: ಸತತ 3ನೇ ವರ್ಷವೂ ರಾಜ್ಯಕ್ಕೇ ಪ್ರಥಮ ಸ್ಥಾನ: 1,273 ಕೋಟಿ ರೂ. ಆದಾಯ ಸಂಗ್ರಹಿಸಿದ ಬೆಂಗಳೂರು ಕೇಂದ್ರ RTO












Click it and Unblock the Notifications