Get Updates
Get notified of breaking news, exclusive insights, and must-see stories!

ಸಚಿವ ಜಾನ್‌ ವಿರುದ್ಧ ಕಠಿಣ ಕ್ರಮಕ್ಕೆ ಶುಕ್ರವಾರದ ಗಡುವು

ಬೆಂಗಳೂರು : ಕೇವಲ ರಾಜೀನಾಮೆ ಕೊಟ್ಟರೆ ಸಾಲದು. ಭಾರತೀಯ ದಂಡ ಸಂಹಿತಯ ಪ್ರಕಾರ ಕಠಿಣ ಕ್ರಮ ಕೈಗೊಳ್ಳಬೇಕು. ಕಾಂಗ್ರೆಸ್‌ ಪ್ರಾಥಮಿಕ ಸದಸ್ಯತ್ವದಿಂದ ವಜಾ ಮಾಡಬೇಕು. ಇದು ಪ್ರಚೋದನಕಾರಿ ಹೇಳಿಕೆ ನೀಡಿ ರಾಜೀನಾಮೆ ಕೊಟ್ಟ ಸಚಿವ ಜಾನ್‌ ವಿರುದ್ಧ ಬಿ.ಜೆ.ಪಿ. ಹಿಡಿದಿರುವ ಬಿಗಿಪಟ್ಟು.

ಸಮಾಜದಲ್ಲಿ ಕೋಮು ಭಾವನೆ ಕೆರಳಿಸುವಂತಹ ಹೇಳಿಕೆ ನೀಡಿದ ನಾಗರಿಕ ವಿಮಾನಯಾನ ಸಚಿವ ಟಿ. ಜಾನ್‌ ವಿರುದ್ಧ ಭಾರತೀಯ ದಂಡ ಸಂಹಿತೆ ಸೆಕ್ಷನ್‌ 153ರ ಅಡಿಯಲ್ಲಿ ಕೇಸ್‌ ದಾಖಲಿಸಬೇಕು ಎಂದು ಸಚಿವರ ರಾಜೀನಾಮೆಯಿಂದ ತೃಪ್ತರಾಗದ ಬಿ.ಜೆ.ಪಿ. ನಾಯಕರು ಪಟ್ಟು ಹಿಡಿದಿದ್ದಾರೆ. ಇದಕ್ಕಾಗಿ ಕೃಷ್ಣ ಅವರಿಗೆ ಶುಕ್ರವಾರದವರೆಗೆ ಗಡುವೂ ನೀಡಿದ್ದಾರೆ.

ಭೀಕರ ಭೂಕಂಪದಿಂದ ಸಾವಿರಾರು ಮಂದಿ ಸಾವನ್ನಪ್ಪಿರುವ ಸಂದರ್ಭದಲ್ಲಿ ವಿಶ್ವವೇ ಕಂಬನಿ ಮಿಡಿಯುತ್ತಿರುವಾಗ ರಾಜ್ಯದ ಸಚಿವರು ಇಂತಹ ಅಮಾನವೀಯ ಹೇಳಿಕೆ ನೀಡುವುದು ಅಕ್ಷಮ್ಯ ಅಪರಾಧ. ಈ ಸಚಿವರನ್ನು ಬಂಧಿಸಬೇಕು ಎಂದು ಮುಖಂಡರು ಗಾಂಧೀ ಪ್ರತಿಮೆಯ ಎದುರು ಧರಣಿ ನಡೆಸಿದ್ದಾರೆ.

ಜಾನ್‌ ಹೇಳಿಕೆ ಕೇವಲ ಬಾಯಿತಪ್ಪಿ ಬಂದ ಮಾತುಗಳಲ್ಲ. ಅದು ಸುದೀರ್ಘ ಪ್ರಚೋದನಕಾರಿ ಭಾಷಣ ಎಂದಿರುವ ಯಡಿಯೂರಪ್ಪ ಅವರು ಪಕ್ಷದ ಇತರ ಸದಸ್ಯರಾದ ಸುರೇಶ್‌ಕುಮಾರ್‌, ರಾಮಚಂದ್ರಗೌಡ, ಶ್ರೀನಿವಾಸ್‌, ಅಶೋಕ್‌, ಸುಬ್ರಹ್ಮಣ್ಯ ನಾಯ್ಡು ಮತ್ತಿತ್ತರ ಜತೆಗೂಡಿ ಧರಣಿ ನಡೆಸಿದ್ದಾರೆ.

ಅಘಾತಕಾರಿ ಹೇಳಿಕೆ ಸಿಂಧ್ಯಾ : ಜಾನ್‌ ಅವರ ಹೇಳಿಕೆಯನ್ನು ಖಂಡಿಸಿರುವ ಜನತಾದಳ ಮುಖಂಡ ಪಿ.ಜಿ.ಆರ್‌. ಸಿಂಧ್ಯಾ ಅವರು ಇದೊಂದು ಆಘಾತಕಾರಿ ಹೇಳಿಕೆ. ಜವಾಬ್ದಾರಿಯುತ ಸ್ಥಾನದಲ್ಲಿರುವ ಸಚಿವರು ಹೀಗೆ ಮಾತನಾಡುವುದು ಸಲ್ಲ. ಭೂಕಂಪ ಜಾತಿ ಅಥವಾ ಧರ್ಮದ ಮೇರೆಗೆ ಉಂಟಾಗಿಲ್ಲ. ಈ ಹೇಳಿಕೆ ಇಡೀ ಮಾನವ ಕುಲವೇ ತಲೆತಗ್ಗಿಸುವಂತಹದ್ದು ಎಂದಿದ್ದಾರೆ.

ಜಾನ್‌ ಹೇಳಿಕೆಗೆ ದಿಗ್ಭ್ರಮೆ ವ್ಯಕ್ತಪಡಿಸಿರುವ ರಾಜ್ಯ ಬಿ.ಜೆ.ಪಿ. ಅಧ್ಯಕ್ಷ ಸೇಡಂ ಅವರು, ಗೂಂಡಾ ಕಾಯಿದೆ ಅಡಿ ಜಾನ್‌ ಅವರನ್ನು ಬಂಧಿಸಬೇಕು ಎಂದು ಮುಖ್ಯಮಂತ್ರಿಗಳನ್ನು ಆಗ್ರಹಿಸಿದ್ದಾರೆ. ಅವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳದಿದ್ದರೆ, ರಾಜ್ಯಾದ್ಯಂತ ಧರಣಿ, ಪ್ರತಿಭಟನೆ ನಡೆಸುವುದು ಅನಿವಾರ್ಯವಾಗುತ್ತದೆ ಎಂದೂ ಅವರು ಎಚ್ಚರಿಸಿದ್ದಾರೆ.

ಸಭಾತ್ಯಾಗ : ಬುಧವಾರ ನಡೆದ ಬೆಂಗಳೂರು ಮಹಾನಗರ ಪಾಲಿಕೆ ಸಭೆಯಲ್ಲಿ ಜಾನ್‌ ಹೇಳಿಕೆ ಖಂಡಿಸಿದ ಬಿ.ಜೆ.ಪಿ. ಸದಸ್ಯರು ಸಭಾತ್ಯಾಗ ಮಾಡಿದರು. ಸಚಿವರ ಈ ಹೇಳಿಕೆಯನ್ನು ವಿಶ್ವಹಿಂದೂ ಪರಿಷತ್‌, ಗುಜರಾತಿ ವೈಷ್ಣವ ಸಮಾಜ ಖಂಡಿಸಿದೆ. ಸಚಿವರ ಬೇಜವಾಬ್ದಾರಿ ಹೇಳಿಕೆಗೆ ಸರ್ವತ್ರ ಖಂಡನೆ ಕೇಳಿಬಂದಿದೆ.

ವಾರ್ತಾಸಂಚಯ
ಮುಖಪುಟ

More From
Prev
Next
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+