ಪರಿಹಾರ ನಿಧಿಗೆ ಕ್ಯಾಲಿಫೋರ್ನಿಯಾ ಕಾಣಿಕೆ
*ಸುಖ್‌ಜಿತ್ ಪುರೇವಾಲ್
ಸ್ಯಾನ್ ಜ್ಯೋಸ್ (ಕ್ಯಾಲಿಫೋರ್ನಿಯಾ) : ಇಲ್ಲಿನ ಸಿಲಿಕಾನ್ ವ್ಯಾಲಿಯಲ್ಲಿ ಹೆಸರು ಮಾಡಿರುವ, ವಿವಿಧಮೂಲೆಗಳಿಂದ ಬಂದು ನೆಲೆಸಿರುವ ಭಾರತೀಯ ಅಮೆರಿಕನ್ನರು ಗುಜರಾತ್ ಸಂತ್ರಸ್ತರಿಗೆ ನೆರವು ನೀಡಲು ಒಗ್ಗೂಡಿ ಮುಂದಾಗಿದ್ದಾರೆ.
ಇಲ್ಲಿನ ಕೊಲ್ಲಿ ಪ್ರದೇಶದಲ್ಲಿ ನೆಲೆಸಿರುವ ಸುಮಾರು 25 ಭಾರತೀಯ ಅಮೆರಿಕನ್ನರ ಸಮುದಾಯಗಳು ಒಂದೇ ಸೂರಿನಡಿ ಸೇರಿ, ಅದಕ್ಕೆ ಯುನೈಟೆಡ್ ಕಮ್ಯುನಿಟಿ ಅಪೀಲ್ ಫಾರ್ ಇಂಡಿಯಾ (ಯುಸಿಎ) ಎಂಬ ಹೆಸರಿಟ್ಟುಕೊಂಡು ಗುಜರಾತ್ ಸಂತ್ರಸ್ತರಿಗೆ ಪರಿಹಾರ ಸಂಗ್ರಹಿಸುವ ಕೆಲಸದಲ್ಲಿ ನಿರತವಾಗಿವೆ.
ಸಿಲಿಕಾನ್ ವ್ಯಾಲಿಯಲ್ಲಿರುವ ಭಾರತೀಯ ಅಮೆರಿಕನ್ನರ ಪೈಕಿ ಸುಮಾರು ಒಂದೂವರೆ ಲಕ್ಷ ಮಂದಿ ಗುಜರಾತಿನಿಂದ ಬಂದು ನೆಲೆಸಿದವರು. ಯಾರು ಎಲ್ಲಿಂದ ಬಂದಿದ್ದೇವೆ ಅನ್ನುವುದು ಈಗ ಮುಖ್ಯವಾಗುತ್ತಿಲ್ಲ. ಇಡೀ ಭಾರತ ಇಂದು ಹೊಡೆತಕ್ಕೆ ಸಿಕ್ಕಿದೆ ಎಂಬ ನೋವು ಎಲ್ಲರ ಮನದಲ್ಲಿ ಬೇರೂರಿದೆ. ತಮ್ಮ ನಾಡಿನ ಜನರ ದುಗುಡಕ್ಕೆ ಇಲ್ಲಿನ ಎಲ್ಲಾ ಭಾರತೀಯ ಅಮೆರಿಕನ್ನರೂ ಸ್ಪಂದಿಸುತ್ತಿದ್ದಾರೆ ಎನ್ನುತ್ತಾರೆ ಕೊಲ್ಲಿ ಪ್ರದೇಶದ ಗುಜರಾತ್ ಸಾಂಸ್ಕೃತಿಕ ಒಕ್ಕೂಟ (ಜಿಸಿಎ) ದ ಅಧ್ಯಕ್ಷ ರಾಜೇಶ್ ಕೊಟಾಡಿಯಾ.
ಗುಜರಾತ್‌ನಲ್ಲಿ ಕೊಚ್ಚಿಹೋಗಿರುವ ಸಂಪತ್ತು ಕಳಕೊಂಡಿರುವ ಜನರಿಗೆ ಈ ಹೊತ್ತು ಎಷ್ಟು ಸಹಾಯ ಮಾಡಿದರೂ ಸಾಲದು. ನಾವು 25 ದಶಲಕ್ಷ ಡಾಲರ್ ಸಂಗ್ರಹಿಸಿದರೂ ಒಂದು ದೊಡ್ಡ ಬಕೆಟ್ಟಿಗೆ ಒಂದು ಹನಿ ನೀರು ಸುರಿದಂತೆ. ನಾವು ನಮ್ಮ ಕೈಮೀರಿ ಹಣ ಸಂಗ್ರಹಿಸಲು ಯತ್ನಿಸುತ್ತೇವೆ ಎನ್ನುತ್ತಾ ಹಣ ಸಂಗ್ರಹಿಸಲು ಮುಂದಾಗುತ್ತಿದ್ದಾರೆ ದಿ ಇಂಡಸ್ ಎಂಟರ್‌ಪ್ರೀನರ್ಸ್ ಎಂಬ ಲಾಭಕ್ಕಾಗಿ ಕೆಲಸ ಮಾಡದ ಸಂಸ್ಥೆಯ ಅಧ್ಯಕ್ಷ ಜೋಶಿ.
ಯುಸಿಎ ಮಾಧ್ಯಮ ಹೇಳಿಕೆಗಳನ್ನು ಬಿಡುಗಡೆ ಮಾಡಿದೆ. ಮನೆಮನೆಗಳ ಹೊಸ್ತಿಲು ತುಳಿದು, ಕೈಚಾಚಿ ಸಹಾಯ ಬೇಡುತ್ತಿದೆ. ಗುಜರಾತ್‌ನಲ್ಲಿ ಸಂಭವಿಸಿರುವ ಭೂಕಂಪದ ತೀವ್ರತೆ ಬಗ್ಗೆ ಜನರಲ್ಲಿ ಜಾಗೃತಿ ಹುಟ್ಟಿಸಲು ಕಾರ್ಯಕ್ರಮಗಳನ್ನು ಆಯೋಜಿಸುತ್ತಿದೆ. ಮಾಹಿತಿ ತಂತ್ರಜ್ಞಾನದಲ್ಲಿ ಹೆಸರು ಮಾಡಿರುವ ಸಿಲಿಕಾನ್ ವ್ಯಾಲಿಯ ಕೆಲವು ಕಂಪನಿಗಳೂ ಸಹಾಯಕ್ಕೆ ಭಾರೀ ಮೊತ್ತ ನೀಡುತ್ತಿವೆ.
ಕೊಡುಗೈ ದೊರೆ ನೆಟ್‌ಸ್ಕೇಲರ್ ಜಗದೀಶ್ : ನೆಟ್‌ಸ್ಕೇಲರ್ ಎಂಬೊಂದು ಐಟಿ ಕಂಪನಿ. ಈವರೆಗೆ ತನ್ನ ಸಿಬ್ಬಂದಿಯಿಂದ 14 ಸಾವಿರ ಡಾಲರ್ ಹಣ ಸಂಗ್ರಹಿಸಿದೆ. ಕಂಪನಿಯ ಮುಖ್ಯ ಕಾರ್ಯ ನಿರ್ವಾಹಕ ಅಧಿಕಾರಿ ಬಿ.ವಿ.ಜಗದೀಶ್ ಅವರದೇ ಇದರಲ್ಲಿ ಸಿಂಹಪಾಲು. ಕಂಪನಿಯ ನೌಕರರು ಒಂದು ಡಾಲರ್ ದೇಣಿಗೆ ನೀಡಿದರೆ, ಜಗದೀಶ್ ಪ್ರತಿ ಒಂದು ಡಾಲರ್‌ಗೆ 5 ಡಾಲರ್ ಸೇರಿಸಿ ಸಹಾಯ ಮಾಡಲು ಮುಂದೆ ಬಂದಿದ್ದಾರೆ.
ಗುಜರಾತ್ ಸಂತ್ರಸ್ತರಿಗೆ ಕೇವಲ ಪರಿಹಾರ ಕೊಟ್ಟು , ಕೈತೊಳೆದುಕೊಳ್ಳಲು ನಾವು ಯೋಚಿಸುತ್ತಿಲ್ಲ. ಪರಿಹಾರಕ್ಕಿಂತ ಅವರ ಪುನರ್ವಸತಿಗೆ ಒತ್ತು ಕೊಡುವುದು ನಮ್ಮ ಉದ್ದಿಶ್ಯ ಎನ್ನುತ್ತಾರೆ ದೇಣಿಗೆ ಸಂಗ್ರಹಣೆಯಲ್ಲಿ ಸಂಯೋಜನೆಯ ಹೊರೆ ಹೊತ್ತಿರುವ ನಾಗರಾಜ್ ಪಾಟೀಲ್.
ಜನರ ಅನುಮಾನಕ್ಕೆ ಕೊಟಾಡಿಯಾ ಉತ್ತರ : ಜಿಸಿಎ ಈವರೆಗೆ 5 ಸಾವಿರ ಡಾಲರ್ ಸಂಗ್ರಹಿಸಿದ್ದು, ಕನಿಷ್ಠ 15 ಸಾವಿರ ಡಾಲರ್ ಸಂಗ್ರಹಿಸುವ ಗುರಿ ಹೊಂದಿದೆ. ಆದರೂ ಕೆಲವರಿಗೆ ತಾವು ಕೊಡುವ ಸಹಾಯ ಸಂತ್ರಸ್ತರವರೆಗೆ ತಲುಪುವುದೋ ಇಲ್ಲವೋ ಎಂಬ ಅನುಮಾನ. ಕೊಟಾಡಿಯಾ ಅವರ ಮೇಲೆ ಇಲ್ಲಿನ ಜನರಿಗೆ ನಂಬುಗೆಯಿದೆ. ಆದರೂ ತಮ್ಮ ಹಣ ಎಲ್ಲಿ ಪೋಲಾಗುವುದೋ ಎಂಬೊಂದು ಸಣ್ಣ ಅನಿಶ್ಚಿತತೆ ಅವರಲ್ಲಿ ಇಣುಕುತ್ತದೆ. ಒಕ್ಕೂಟಕ್ಕೆ ನೂರಾರು ಇ- ಮೇಲ್‌ಗಳು ಬಂದಿವೆ. ಜನ ಇಟ್ಟಿರುವ ಪ್ರಶ್ನೆಗಳ ಸಾಲಿನಲ್ಲಿ ಮೊದಲನೆಯದು- ನಾವು ಕೊಡುವ ಹಣ ಸಂತ್ರಸ್ತರಿಗೆ ತಲುಪೇ ತಲುಪುತ್ತದೆ ಎಂಬುದಕ್ಕೆ ಏನು ಗ್ಯಾರಂಟಿ ಎಂಬುದು. ಇದನ್ನು ನಮ್ಮ ಜನರಿಗೆ ಖಾತ್ರಿ ಮಾಡಿಸಲು ಇರುವುದೊಂದೇ ದಾರಿ- ಸ್ವತಃ ನಾನೇ ಭಾರತಕ್ಕೆ ಹೋಗಿ, ಸಹಾಯ ಮುಟ್ಟಿಸಿ ಬರುವುದು ಎನ್ನುತ್ತಾರೆ ಕೊಟಾಡಿಯಾ.
ವ್ಯಾಲಿಯಲ್ಲಿ ಭುಜ್ ಜನ : ಭುಜ್ ಮೂಲದ ಬೊಚಾಸನ್‌ವಾಸಿ ಶ್ರೀ ಅಕ್ಷಪುರುಷೋತ್ತಮ ಸಂಸ್ಥೆಯ ಹರ್ಷದ್ ಆ ಕೂಡ ಸಿಲಿಕಾನ್ ಸಿಟಿಗೆ ಬಂದಿದ್ದು, ಇಲ್ಲಿನ ಜನರ ಸಹಾಯ ಯಾಚಿಸುತ್ತಿದ್ದಾರೆ. ಇವರು ಹಾಗೂ ಕೆಲ ಸಹಚರರು ಈಗಾಗಲೇ ಒಂದು ಲಕ್ಷ ಡಾಲರ್‌ಗಳನ್ನು ಸಂಗ್ರಹಿಸಿದ್ದಾರೆ. ಇದರಲ್ಲಿ ಏಷ್ಯನ್ ಅಮೆರಿಕನ್ ಹೊಟೇಲ್ ಮಾಲಿಕರ ಒಕ್ಕೂಟದ್ದೇ 25 ಸಾವಿರ ಡಾಲರ್. ಸಿಸ್ಕೋ, ಒರ್ಯಾಕಲ್, ಎಓಎಲ್, ಮೈಕ್ರೋಸಾಫ್ಟ್ ಮುಂತಾದ ದೊಡ್ಡ ಐಟಿ ಕಂಪನಿಗಳಿಂದಲೂ ದೊಡ್ಡ ಮೊತ್ತದ ದೇಣಿಗೆ ಸಂಗ್ರಹಿಸಲಾಗುತ್ತಿದೆ.
(ಐಎಎನ್‌ಎಸ್)
| ಮುಖಪುಟ |
-
New Airport: ವಿಜಯಪುರ ಏರ್ಪೋರ್ಟ್ಗೆ ಸಿಕ್ತು 220 ಕೋಟಿ ರೂ, ಕಾರ್ಯಾಚರಣೆ ಬಗ್ಗೆ ಎಂಬಿ ಪಾಟೀಲ ಅಪ್ಡೇಟ್ -
Bengaluru Property: ಬೆಂಗಳೂರಿನ 3 ಲಕ್ಷಕ್ಕೂ ಅಧಿಕ ಆಸ್ತಿ ಮಾಲೀಕರಿಗೆ ಶುಭ ಸುದ್ದಿ -
"ಇಲ್ಲಿ ಎಲ್ಲದಕ್ಕೂ ಚೌಕಾಸಿ ಮಾಡಬೇಕು": ಬೆಂಗಳೂರಿನಲ್ಲಿ 2 ತಿಂಗಳು ಕಳೆದ ಮುಂಬೈ ಯುವಕನ Viral Post -
3 ವರ್ಷಕ್ಕೆ 1.17 ಕೋಟಿ: ಮಲೈಕಾ ಅರೋರಾ ಅಪಾರ್ಟ್ಮೆಂಟ್ ಬಾಡಿಗೆ ಬಹಿರಂಗ -
Karnataka Weather: ಬೇಸಿಗೆ ಬಿಸಿಲ ನಡುವೆ ರಾಜ್ಯದ ಹಲವೆಡೆ ಗುಡುಗು-ಮಿಂಚು ಸಹಿತ ಮಳೆ; ಈ ಜಿಲ್ಲೆಗಳಿಗೆ ಯೆಲ್ಲೋ ಅಲರ್ಟ್ -
April 4 Horoscope: ಇಂದು ನಿಮ್ಮ ರಾಶಿ ಏನು ಹೇಳುತ್ತದೆ? ಏಪ್ರಿಲ್ 4 ಭವಿಷ್ಯ ಇಲ್ಲಿದೆ -
HSRP: ಎಚ್ಎಸ್ಆರ್ಪಿ ನಂಬರ್ ಪ್ಲೇಟ್ ಕಡ್ಡಾಯ: ವದಂತಿಗಳಿಗೆ ಕಿವಿಗೊಡಬೇಡಿ ಎಂದು ಸ್ಪಷ್ಟನೆ ಕೊಟ್ಟ ಸಾರಿಗೆ ಇಲಾಖೆ -
Bengaluru: ಆಟೋ LPG ಕೊರತೆ ಬಗೆಹರಿಯುವ ವಿಶ್ವಾಸ: ಪೂರೈಕೆ ಹೆಚ್ಚಿಸಿದ ಇಂಡಿಯನ್ ಆಯಿಲ್ -
ರಾಜ್ಯಪಾಲರೇ ಗಂಟುಮೂಟೆ ಕಟ್ಟಿಕೊಂಡು ನಿಮ್ಮ ರಾಜ್ಯಕ್ಕೆ ತೊಲಗಿ: ಕರವೇ ನಾರಾಯಣಗೌಡ ಎಚ್ಚರಿಕೆ -
ಲಲಿತ್ಪುರ ಫಾರ್ಮಾ ಪಾರ್ಕ್ ಅನ್ನು ಜಾಗತಿಕ ರಫ್ತು ಕೇಂದ್ರವನ್ನಾಗಿ ಮಾಡುವ ನಿಟ್ಟಿನಲ್ಲಿ ಮಹತ್ವದ ಹೆಜ್ಜೆ -
40 ವರ್ಷ ಮೇಲ್ಪಟ್ಟವರಿಗೆ ಸರ್ಕಾರದಿಂದಲೇ ಉಚಿತ ದೃಷ್ಟಿ ತಪಾಸಣೆ, ಕನ್ನಡಕ ವಿತರಣೆ -
Bengaluru: ಸತತ 3ನೇ ವರ್ಷವೂ ರಾಜ್ಯಕ್ಕೇ ಪ್ರಥಮ ಸ್ಥಾನ: 1,273 ಕೋಟಿ ರೂ. ಆದಾಯ ಸಂಗ್ರಹಿಸಿದ ಬೆಂಗಳೂರು ಕೇಂದ್ರ RTO












Click it and Unblock the Notifications