ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ತಾಳ್ತಜೆ ಕೇಶವಭಟ್‌ ಸೇರಿದಂತೆ ಐವರಿಗೆ ಜನಪದ ಅಕಾಡಮಿ ಪ್ರಶಸ್ತಿ

By Staff
|
Google Oneindia Kannada News

ಬೆಂಗಳೂರು : ಸ.ಚ. ಮಹದೇವ ನಾಯಕ, ತಾಳ್ತಜೆ ಕೇಶವ ಭಟ್‌ ಸೇರಿದಂತೆ ಐದು ಮಂದಿಗೆ ಜಾನಪದ ತಜ್ಞ ಹಾಗೂ ಏಳು ಸಂಘ ಸಂಸ್ಥೆಗಳಿಗೆ ಮತ್ತು ಎರಡು ಪುಸ್ತಕಗಳಿಗೆ ಈ ಸಾಲಿನ ಜಾನಪದ ಮತ್ತು ಯಕ್ಷಗಾನ ಅಕಾಡೆಮಿಯ ಪ್ರಶಸ್ತಿಗಳನ್ನು ಘೋಷಿಸಲಾಗಿದೆ.

ಬುಧವಾರ ಅಕಾಡೆಮಿಯ ಅಧ್ಯಕ್ಷ ಪ್ರೊ. ಕಾಳೇಗೌಡ ನಾಗವಾರ ಸುದ್ದಿಗೋಷ್ಠಿಯಲ್ಲಿ ಈ ವಿಷಯ ತಿಳಿಸಿದ್ದು, ಪ್ರಶಸ್ತಿಯು ಐದು ಸಾವಿರ ರೂಪಾಯಿ ನಗದು ಮತ್ತು ಪ್ರಶಸ್ತಿ ಫಲಕವನ್ನೊಳಗೊಂಡಿರುತ್ತದೆ. ಫೆಬ್ರವರಿ ತಿಂಗಳ ಕೊನೆ ವಾರ ಕೋಲಾರ ಅಥವಾ ಬೆಂಗಳೂರಿನಲ್ಲಿ ಪ್ರಶಸ್ತಿ ಪ್ರದಾನ ಸಮಾರಂಭವನ್ನು ಆಯೋಜಿಸಲಾಗುವುದು ಎಂದು ಕಾಳೇಗೌಡರು ಹೇಳಿದ್ದಾರೆ.

ಬೆಂಗಳೂರಿನ ಎಂ.ಟಿ.ಧೂಪದ ಮತ್ತು ಡಾ. ಎಂ. ಜಯಚಂದ್ರ, ಮೈಸೂರಿನ ಡಾ. ಟಿ.ಎನ್‌. ರಾಜಪ್ಪ ಅವರಿಗೆ ಜಾನಪದ ತಜ್ಞ ಪ್ರಶಸ್ತಿ ನೀಡಲಾಗುವುದು. ವೆಂಕಟೇಶ ಗಣಪುಗೌಡ ಅವರಿಗೆ ಬುಡಕಟ್ಟು ಪ್ರಶಸ್ತಿ, ಗೈಬು ಸಾಹೇಬ ಮಕಾನದಾರ್‌ಗೆ ಗಡಿನಾಡು ವಿಶೇಷ ಪ್ರಶಸ್ತಿ, ಮೇಮಗಲ್‌ ಡಿ. ನಾರಾಯಣ ಸ್ವಾಮಿ ಅವರಿಗೆ ಜನಪದ ಗೀತ ಗಾಯನ ಪ್ರಶಸ್ತಿಗಳನ್ನು ನೀಡಲು ಉದ್ದೇಶಿಸಲಾಗಿದೆ.

ಗುಂಡುಬಾಳಾ ಗ್ರಾಮದ ಮುಖ್ಯ ಪ್ರಾಣ ಯಕ್ಷಗಾನ ಮಂಡಲಿ, ಹೊನ್ನಾವರ, ಬೆಳಗಾವಿಯ ತೆಲಗಿನ ಹಟ್ಟಿಯ ಗುರು ವಾಲ್ಮೀಕಿ ಡೊಳ್ಳಿನ ಕಲಾ ಸಂಘ, ಬಿಜಾಪುರ ಸಾಲೋಟಗಿ ಗ್ರಾಮದ ಕರ್ನಾಟಕ ಜಾನಪದ ಕಲೆಗಳ ಸಂಘ ಧಾರವಾಡ ಬ್ಯಾಹಟ್ಟಿ ಗ್ರಾಮದ ಬಸವೇಶ್ವರ ಜಗ್ಗವಿಗೆ ಮೇಳ, ಬೆಂಗಳೂರಿನ ಕ್ರಿಯಾ ಕಲ್ಪ ಆರ್‌. ವಿ. ಎಂಜಿಸಿಯರಿಂಗ್‌ ಕಾಲೇಜು, ಕರ್ನಾಟಕ ಯಕ್ಷಗಾನ ಮೇಳ(ತೆಂಕುತಿಟ್ಟು) ಸಂಸ್ಥೆಗಳು ಅಕಾಡೆಮಿ ಪ್ರಶಸ್ತಿ ಪಡೆಯಲಿವೆ.

ಪುಸ್ತಕ ವಿಭಾಗದಲ್ಲಿ ಡಾ. ತೀ. ನಂ. ಶಂಕರ ನಾರಾಯಣ ಅವರ ಸಂಶೋಧನಾ ಗ್ರಂಧ- ಜಾನಪದ ಸಮೀಕ್ಷೆ ,ವಿಶ್ಲೇಷಣೆ ಮತ್ತು ಡಾ. ಎನನ. ಆರ್‌, ನಾಯಕ್‌ ಅವರ ಸುಗ್ಗಿ ಹಬ್ಬ ಗ್ರಂಥಗಳು ಬಹುಮಾನ ಪಡೆಯಲಿವೆ.

ಜಾನಪದ ಅಕಾಡೆಮಿ ಪ್ರಶಸ್ತಿ ಪಡೆದ ಕಲಾವಿದರು -

ಕೊಪ್ಪಳದ ಜಾನಪದ ಹಾಡುಗಾರ ಮುದುಕಪ್ಪಜ್ಜ ಹೂಗಾರ, ಚಾಮರಾಜ ನಗರದ ಜನಪದ ವೈದ್ಯ ಜಲ್ಲೆ ಸಿದ್ದಮ್ಮ , ಮೈಸೂರಿನ ಜನಪದ ಹಾಡುಗಾರ್ತಿ ಮೆಣಸಿಕ್ಯಾತನ ಹಳ್ಳಿ ನಿಂಗಮ್ಮ, ಧಾರವಾಡದ ಏಕತಾರಿ ಹಾಡುಗಾರ ಹನುಮಂತಪ್ಪ ಹಾಡುಕಾರ, ಗದಗದ ಜನಪದ ಹಾಡುಗಾರ್ತಿ ಸಯಿದಮ್ಮ ಆಡುಗೋಡಿ, ಕೊಡಗು ಜನಪದ ಹಾಡುಗಾರ ಜೇನುಕುರುಬರ ದಾಸಪ, ಬಡಗುತಿಟ್ಟು ಯಕ್ಷಗಾನ ಮದ್ದಲೆ ವಾದಕ ದುಗ್ಗಪ್ಪ ಗುಡಿಗಾರ, ಬಡಗುತಿಟ್ಟು ಯಕ್ಷಗಾನ ಕಲಾವಿದ ಶಿರೂರು ಫಣಿಯಪ್ಪಯ್ಯ, ತುಮಕೂರು ತೊಗಲುಗೊಂಬೆಯಾಟ ಗೊಂಬೆ ರಾಮರ ಗೋವಿಂದಯ್ಯ, ಬೀದರದ ಜನಪದ ವೈದ್ಯ ರಾಮಣ್ಣ ಗೊಂಡ , ಬಳ್ಳಾರಿ ದೊಡ್ಡಾಟದ ಮದ್ದಲೆಕಾರ ನಾಗಲಿಂಗಪ್ಪ ಪತ್ತಾರ , ಬಿಜಾಪುರ ಕೃಷ್ಣ ಪಾರಿಜಾತ ಡೊಳ್ಳಿನ ಪದ, ಮುದುಕಪ್ಪ ಕೆಂಚಪ್ಪ ಕುರಿ, ಬಾಗಲಕೋಟೆ ಕರಡಿ ಮಜಲು- ಸಂಗಪ್ಪ ಪಕೀರಪ್ಪ ಹೂಗಾರ.

ಚಿತ್ರದುರ್ಗ ಜನಪದ ಕತೆಗಾರ ಈರಬಡಪ್ಪ , ದಾವಣಗೆರೆ ಚೌಡಿಕೆ ಪದ ಉಚ್ಚಂಗಮ್ಮ , ಚಿಕ್ಕ ಮಗಳೂರು ಸೋಬಾನೆ ಹಾಡುಗಾರ್ತಿ ಗಂಗಮ್ಮ, ದಕ್ಷಿಣ ಕನ್ನಡ ಭೂತಾರಾಧನೆ- ಕಾಂತ ಮಂಜೇಶ್ವರ, ಗುಲ್ಬರ್ಗ ಲಂಬಾಣಿ ಹಾಡುಗಾರ ನವಸಿ ಧನಸಿಂಗ್‌ ಚವಾಣ, ಇಹಾಸನ ಸೋಬಾನೆ ಹಾಡುಗಾರ್ತಿ ಸೋಬಾನೆ ಗಿರಿಜಮ್ಮ , ಹಾವೇರಿ ದೊಡ್ಡಾಟದ ಮದ್ದಲೆಕಾರ ಚಂದ್ರಪ್ಪ ರಾ. ನಾಯ್ಕರ್‌ , ಕೋಲಾರ ಬಯಲಾಟ ಭಾಗವತ ದ್ಯಾವಣ್ಣ, ಮಂಡ್ಯ ಭಾಗವಂತಿಕೆ ಪಟಾಕುಣಿತ-ಬಸವೇ ಗೌಡ, ರಾಟಚೂರು ದೊಡ್ಡಾಟ ಮದ್ದಲೆಕಾರ ಸದಾಳಶಿವ ನಾಯಿಂದ , ಶಿವಮೊಗ್ಗ ಹಾಡುಗಾರ್ತಿ ಹಾದಿಮನೆ ಕನ್ನಮ್ಮ , ಬೆಂಗಳೂರಿನ ಜನಪದ ಹಾಡುಗಾರ ಟಿ.ಕೆಂಪ ಹನುಮಯ್ಯ.

(ಇನ್ಫೋ ವಾರ್ತೆ)

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X