Get Updates
Get notified of breaking news, exclusive insights, and must-see stories!

ಭುಜ್‌ಗೆ ಸಂಬಂಧ ಬೆಳೆಸಲು ಮಧ್ಯಸ್ಥಿಕೆ ವಹಿಸಿದ್ದೇ ಈಕೆಯ ತಪ್ಪು

* ಕ್ರಿತ್ತಿವಾಸ್‌ ಮುಖರ್ಜಿ

ಕೋಲ್ಕತಾ : ಅತ್ತ ಗುಜರಾತಿನಲ್ಲಿ ಸಾವು ಬದುಕಿನ ನಡುವೆ ಹೋರಾಟ ನಡೆಯುತ್ತಿದ್ದರೆ, ಇಲ್ಲಿ ಹೆಂಗಸೊಬ್ಬಳನ್ನು ಜನ ಹೀನಾಮಾನ ನಿಂದಿಸುತ್ತಿದ್ದಾರೆ. ಆಕೆ ಮಾಡಿದ್ದೊಂದೇ ತಪ್ಪು , ಕೋಲ್ಕತಾ ಪ್ರಾಂತ್ಯದ ಸುಮಾರು 30 ಹುಡುಗಿಯರನ್ನು ಭುಜ್‌ನ ಸೊಸೆಯರನ್ನಾಗಿಸಿದ್ದು . ಈಗ ತಮ್ಮ ಹೆಣ್ಣು ಮಕ್ಕಳ ದುರಂತವನ್ನು ನೆನೆದು ಪೋಷಕರು ಮದುವೆಗೆ ಕಾರಣಳಾದ ಹೆಣ್ಣಿನ ಮೇಲೆ ಸಿಟ್ಟಾಗಿದ್ದಾರೆ.

ಭುಜ್‌ನಲ್ಲಿ ಸಂಸಾರ ಮಾಡಲು ಸುಮಾರು 30 ಮಂದಿ ಹೆಣ್ಣು ಮಕ್ಕಳನ್ನು ಕಳುಹಿಸಿರುವುದು ಬರ್ಧಾನ್‌ ಜಿಲ್ಲೆಯ ಚುರುಲಿಯ ಗ್ರಾಮದ ಅಗ್ಗಳಿಕೆ. ಈ ಎಲ್ಲಾ ಮದುವೆಗಳು, ಪ್ರಸ್ತುತ ಹೀಗಳಿಕೆಗೆ ತುತ್ತಾಗಿರುವ ಮಧ್ಯಮ ವಯಸ್ಸಿನ ಜನ್ನೇಗಳ ಮಧ್ಯಸ್ಥಿಕೆಯಿಂದಲೇ ಕುದುರಿವೆ. ಈ ಮಧ್ಯಸ್ಥಿಕೆಯ ಕೆಲಸವೇ ಜನ್ನೇಗಳ ಕುತ್ತಿಗೆಗೆ ಬಂದಿದೆ. ವಧುಗಳ ಪೋಷಕರು ತಮ್ಮ ಮಕ್ಕಳು ಹಾಗೂ ಅಳಿಯಂದಿರು ಹೇಗಿದ್ದಾರೆ ಅನ್ನುವ ವಿವರಗಳನ್ನು ತಿಳಿಸುವಂತೆ ಜನ್ನೇಗಳನ್ನು ಕಾಡುತ್ತಿದ್ದಾರೆ. ಮಾಹಿತಿ ಒದಗಿಸಲು ಅಸಹಾಯಕತೆ ವ್ಯಕ್ತಪಡಿಸಿರುವ ಆಕೆಯ ಮೇಲೆ ಹುಡುಗಿಯ ಕಡೆಯವರು ಏರಿ ಹೋಗಿದ್ದಾರೆ ಎಂದು ಸ್ಟೇಟ್ಸ್‌ಮನ್‌ ವರದಿ ಮಾಡಿದೆ.

ದಕ್ಷಿಣೆ ಆಸೆ : ಭುಜ್‌ಗೆ ಸಂಬಂಧಗಳನ್ನು ಕುದುರಿಸಲು ಜನ್ನೇಗ ಶುರು ಮಾಡಿದ್ದು ತನ್ನ ಸೋದರಿಯನ್ನು ಭುಜ್‌ನ ವಧುವನ್ನಾಗಿಸಿದ ನಂತರ. ಗುಜರಾತ್‌ನಲ್ಲಿ ವರದಕ್ಷಿಣೆ ರೂಢಿಯಲ್ಲಿಲ್ಲ . ಅಲ್ಲಿರುವುದು ವಧು ದಕ್ಷಿಣೆ. ಇದನ್ನರಿತ ವ್ಯವಹಾರಸ್ಥೆ ಜನ್ನೇಗ ಮದುವೆ ಕುದುರಿಸಲು ಆರಂಭಿಸಿದಳು. ಬಡ ಕುಟುಂಬಗಳನ್ನು ಒತ್ತಾಯಿಸಿ ಮದುವೆಗೆ ಒಪ್ಪಿಸಿದಳು. ವಧುವಿನ ಕಡೆಯವರು ಪಡೆದ ವಧು ದಕ್ಷಿಣೆಗೆ(10 ಸಾವಿರದಿಂದ 20 ಸಾವಿರ) ತಕ್ಕನಾಗಿ ಸಾವಿರ ರು.ನಿಂದ 5 ಸಾವಿರ ರುಪಾಯಿಗಳವರೆಗೆ ಪ್ರತಿ ಮದುವೆಗೆ ಜನ್ನೇಗ ವಸೂಲಿ ಮಾಡಿದ್ದಾಳೆ.

ಭೂಕಂಪ ಸಂಭವಿಸುವ ದಿನದವರೆಗೆ ಎಲ್ಲಾ ಸಮನಾಗಿಯೇ ಇತ್ತು . ಆದರೆ, ಸರ್ವನಾಶದ ಸುದ್ದಿ ಕಿವಿಗೆ ಬಿದ್ದಿದ್ದೇ ತಡ, ತಮ್ಮ ಹೆಣ್ಣು ಮಕ್ಕಳ ಬಗ್ಗೆ ಮಾಹಿತಿ ನೀಡುವಂತೆ ಪೋಷಕರು ಜನ್ನೇಗಾಳ ಬೆನ್ನು ಬಿದ್ದಿದ್ದಾರೆ. ಭುಜ್‌ಗೆ ಹೋಗುವಂತೆ ಒತ್ತಾಯಿಸಿದ್ದಾರೆ.

ಫೋನ್‌ ಮೂಲಕ ಭುಜ್‌ ಸಂಪರ್ಕಕ್ಕಾಗಿ ಸತತವಾಗಿ ಪ್ರಯತ್ನಿಸುತ್ತಲೇ ಇದ್ದೇನೆ. ನಾನಾದರೂ ಏನು ಮಾಡಲಿ. ಭೂಕಂಪವನ್ನು ತಡೆದು ನಿಲ್ಲಿಸಬೇಕಿತ್ತೆ ? ಜನ್ನೇಗ ಹತಾಶಳಾಗಿ ಪ್ರಶ್ನಿಸುತ್ತಾಳೆ. ಈ ನಡುವೆ, ಭುಜ್‌ನೊಂದಿಗೆ ಸಂಪರ್ಕಕ್ಕಾಗಿ ಚುರುಲಿಯಾದ ಆಡಳಿತಗಾರರೊಬ್ಬರು ಪ್ರಯತ್ನ ನಡೆಸುತ್ತಿದ್ದಾರೆ. ಸದ್ಯಕ್ಕಂತೂ ಮಾಹಿತಿ ಸಿಕ್ಕಿಲ್ಲ .

(ಐಎಎನ್‌ಎಸ್‌)

ಮುಖಪುಟ
More From
Prev
Next
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+