ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಗುರುವಾರ ಗುಲ್ಬರ್ಗಾದಲ್ಲಿ ಪಾಸ್‌ಪೋರ್ಟ್‌ ಕಚೇರಿ ಆರಂಭ

By Staff
|
Google Oneindia Kannada News

ಬೆಂಗಳೂರು : ರಾಜ್ಯದ ರಾಜಧಾನಿ ಬೆಂಗಳೂರಿನಿಂದ ಬಹುದೂರ ಇರುವ ಹಾಗೂ ಹಿಂದುಳಿದ ಜಿಲ್ಲೆಗಳಲ್ಲಿ ಒಂದಾದ ಗುಲ್ಬರ್ಗಾ ಹಾಗೂ ಸುತ್ತಮುತ್ತಲ ಹತ್ತು ಜಿಲ್ಲೆಗಳ ಜನತೆಯ ಅನುಕೂಲಕ್ಕಾಗಿ ಗುಲ್ಬರ್ಗಾ ನಗರದಲ್ಲಿ ಪಾಸ್‌ಪೋರ್ಟ್‌ ಅರ್ಜಿಗಳನ್ನು ಸ್ವೀಕರಿಸುವ ಕೇಂದ್ರ ಒಂದನ್ನು ತೆರೆಯಲಾಗುತ್ತಿದೆ.

ಕೇಂದ್ರದ ವಿದೇಶಾಂಗ ವ್ಯವಹಾರಗಳ ಖಾತೆ ರಾಜ್ಯ ಸಚಿವ ಯು.ವಿ. ಕೃಷ್ಣಂರಾಜು ಅವರು ಗುರುವಾರ (ಫೆ.1) ಈ ಕಚೇರಿಯನ್ನು ಉದ್ಘಾಟಿಸಲಿದ್ದಾರೆ.

ಕೇಂದ್ರದ ನಿರ್ಧಾರದ ಮೇರೆಗೆ ಕಾರ್ಯಾರಂಭ ಮಾಡುತ್ತಿರುವ ಈ ಕಚೇರಿಯ ವ್ಯಾಪ್ತಿಗೆ ಗುಲ್ಬರ್ಗಾ, ಬೀದರ್‌, ರಾಯಚೂರು, ಬಳ್ಳಾರಿ, ಬೆಳಗಾವಿ, ಬಿಜಾಪುರ, ಗದಗ್‌, ಕೊಪ್ಪಳ, ಬಾಗಲಕೋಟೆ ಹಾಗೂ ಧಾರವಾಡ ಜಿಲ್ಲೆಗಳು ಬರುತ್ತವೆ.

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X