Get Updates
Get notified of breaking news, exclusive insights, and must-see stories!

ನಿತ್ಯ ಭವಿಷ್ಯ

*ಜಾನುಕೊಂಡ ಶಾಮಾ ಶಾಸ್ತ್ರೀ

ಮೇಷ :ನಿಮ್ಮಲ್ಲಿರುವ ಬುದ್ಧಿಯನ್ನೆಲ್ಲಾ ಖರ್ಚು ಮಾಡುವಷ್ಟು ಕೆಲಸದ ಒತ್ತಡ ಇದೆ. ಆಪ್ತ ಮಿತ್ರನಿಂದ ಸಹಾಯ. ವ್ಯಾಪಾರದಲ್ಲಿ ನಷ್ಟ ಸಂಭವ.

ವೃಷಭ :ಸಾಧನೆಗೆ ಅಸಾಧ್ಯವಾದುದು ಯಾವುದೂ ಇಲ್ಲ. ಸಾಧಿಸುವ ಛಲ ನಿಮ್ಮಲ್ಲಿರಬೇಕಷ್ಟೇ. ಮನುಷ್ಯ ಪ್ರಯತ್ನಕ್ಕೆ ಹೆಚ್ಚು ಒತ್ತು ನೀಡಿ.

ಮಿಥುನ : ಎಲ್ಲರಿಗೂ ಅದೇಕೋ ನಿಮ್ಮ ಮೇಲೆ ಕಣ್ಣು. ನಿಮ್ಮ ಸಾಮರ್ಥ್ಯವನ್ನು ಒರೆಗೆ ಹಚ್ಚಿ, ನಿಮ್ಮ ಶ್ರದ್ಧೆ ಹಾಗೂ ಒಳ್ಳೆಯ ತನವೇ ನಿಮಗೆ ಯಶಸ್ಸು ತಂದುಕೊಡುತ್ತದೆ.

ಕಟಕ : ಕಷ್ಟಗಳೆಲ್ಲಾ ನಿಮ್ಮೊಬ್ಬರಿಗೆ ಬರುತ್ತದೆ ಎಂದುಕೊಳ್ಳಬೇಡಿ. ಮನುಷ್ಯನಿಗಲ್ಲದೆ ಮರಕ್ಕೆ ಕಷ್ಟ ಬರಲು ಸಾಧ್ಯವೇ? ನಾಳೆ ಉಳಿತಾಗಲಿದೆ ಎಂಬ ನಿರೀಕ್ಷೆ ಇರಬೇಕಷ್ಟೇ.

ಸಿಂಹ : ರಾಮನಿಗೆ ಇಲ್ಲವೆ ರಾವಣನಿಗೆ ರಾಜ್ಯ ಬಂದರೂ ರಾಗಿ ಬೀಸುವುದು ತಪ್ಪುವುದಿಲ್ಲ. ನಿಮ್ಮ ಕೆಲಸವನ್ನು ನೀವು ಶ್ರದ್ಧೆಯಿಂದ ಮಾಡಿ. ಯಶಸ್ಸು ಸಿಕ್ಕೇ ಸಿಗುತ್ತದೆ.

ಕನ್ಯಾ : ಮನಸ್ಸಿನ ಕಸಿವಿಸಿಯೆಲ್ಲಾ ಕೊನೆಯಾಗಲಿದೆ. ಸರಕಾರದ ಅಧಿಕಾರಿಗಳಿಂದ ನೆರವು. ಷೇರು ವ್ಯವಹಾರದಲ್ಲಿ ನಷ್ಟ.

ತುಲಾ : ಉಪ್ಪು ಅನ್ನ ತಿಂದರೂ ಮನಸ್ಸಿಗೆ ನೆಮ್ಮದಿ ಮುಖ್ಯ. ನೀವು ಬಯಸುತ್ತಿರುವುದೂ ಅದನ್ನೇ. ಆರೋಗ್ಯದ ಕಡೆ ಗಮನಕೊಡಿ.

ವೃಶ್ಚಿಕ : ಪ್ರಣಯಿಗಳಿಗೆ ಶುಭದಿನ. ದೂರದ ಊರಿಗೆ ಪ್ರಯಾಣ. ವಿಪರೀತ ಖರ್ಚು. ಬಂಧು ಮಿತ್ರರಿಂದ ಕಿರಿಕಿರಿ.

ಧನಸ್ಸು :ಚಿಕ್ಕ ವಿಷಯಕ್ಕೆ ತಲೆ ಕೆಡಿಸಿಕೊಳ್ಳುವುದು ಸರಿಯೇ? ಮನೆಯಲ್ಲಿ ಕಲಹ, ಚೋರ ಭಯ, ಶುಭವಾರ್ತೆಯ ನಿರೀಕ್ಷೆ.

ಮಕರ : ಇಂದು ಶುಭದಿನ. ಪ್ರಪಂಚದ ಎಲ್ಲ ಸುಖವೂ ನಿಮ್ಮ ಬಳಿಯೇ ಬಂದಿದೆ. ಅದನ್ನು ಸೂಕ್ತವಾಗಿ ಬಳಸಿಕೊಳ್ಳುವುದು ನಿಮ್ಮ ಕೈಲೇ ಇದೆ.

ಕುಂಭ : ಮಿಂಚಿ ಹೋದ ಕಾರ್ಯಕ್ಕೆ ಚಿಂತಿಸಿ ಫಲವಿಲ್ಲ. ಮುಂದೇನಾಗಬೇಕೆಂದು ನೋಡಿ. ಬಡ್ತಿ ದೊರಕುವ ಕಾಲ. ಎಲ್ಲರೂ ಮೆಚ್ಚುವಂತೆ ನಡೆದುಕೊಳ್ಳಿ.

ಮೀನ : ನೀವು ಇನ್ನು ಅದೃಷ್ಟ ಅರಸಿ ಹೋಗುವ ಅಗತ್ಯ ಇಲ್ಲ. ಇಂದಂತೂ ನಿಮ್ಮನ್ನೇ ಅದೃಷ್ಟ ಹುಡುಕಿಕೊಂಡು ಬರಲಿದೆ. ಲಾಟರಿ ಟಿಕೆಟ್‌ ಕೊಂಡರೂ ಕೊಳ್ಳಬಹುದು.

More From
Prev
Next
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+