ಗುಜರಾತ್ ಭೂಕಂಪ ಕ್ರೆೃಸ್ತರ ಮೇಲಿನದೌರ್ಜನ್ಯದ ಫಲ -ಸಚಿವ ಜಾನ್
ಬೆಂಗಳೂರು : ಗುಜರಾತ್‌ನಲ್ಲಿ ಸಂಭವಿಸಿದ ಭೂಕಂಪ , ಅಲ್ಲಿ ಕ್ರೆೃಸ್ತರ ಮೇಲೆ ನಡೆದ ಅತೀವ ದೌರ್ಜನ್ಯದ ಫಲ ಎಂದು ರಾಜ್ಯ ವಿಮಾನಯಾನ ಖಾತೆ ಸಚಿವ ಟಿ. ಜಾನ್ ಹೇಳಿದ್ದಾರೆ.
ಗುಜರಾತ್‌ನಲ್ಲಿ ಕ್ರಿಶ್ಚಿಯನ್ನರ ಮೇಲೆ ಇನ್ನಿಲ್ಲದಂತೆ ದೌರ್ಜನ್ಯ ನಡೆಸಲಾಯಿತು, ಚರ್ಚ್‌ಗಳನ್ನೂ ಧ್ವಂಸ ಮಾಡಲಾಯಿತು. ಇದರ ಫಲವಾಗಿಯೇ ಆ ರಾಜ್ಯ ಭೀಕರ ಭೂಕಂಪ ಎದುರಿಸಬೇಕಾಯಿತು ಎಂದು ಜಾನ್ ಹೇಳಿದ್ದಾರೆ. ಅವರು ಮಂಗಳವಾರ ನಗರದ ಸೈಂಟ್ ಜೋಸೆಫ್ ಇಂಡಿಯನ್ ಹೈಸ್ಕೂಲ್‌ನಲ್ಲಿ ಏರ್ಪಡಿಸಿದ್ದ ವಿಶ್ವ ಶಾಂತಿ ದಿನ ಸಮಾರಂಭದಲ್ಲಿ ಮುಖ್ಯ ಅತಿಥಿಗಳಾಗಿ ಮಾತನಾಡುತ್ತಿದ್ದರು.
ಗುಜರಾತಿನ ಕ್ರೆೃಸ್ತರು ದೌರ್ಜನ್ಯದಿಂದ ನೊಂದು ಸಲ್ಲಿಸಿದ ಪ್ರಾರ್ಥನೆ ದೇವರನ್ನು ತಲುಪಿದೆ. ಆದ್ದರಿಂದ ಅಲ್ಲಿ ಭೂಕಂಪವಾಗಿ ಸಾವಿರಾರು ಮಂದಿ ಮಣ್ಣು ಪಾಲಾಗಬೇಕಾಯಿತು ಎಂದ ಜಾನ್, ಪರಧರ್ಮ ಸಹಿಸದವರು, ಪರಧರ್ಮವನ್ನು ನಿಂದಿಸುವವರಿಗೆ ಉಳಿಗಾಲವಿಲ್ಲ ಎಂಬುದಕ್ಕೆ ಈ ಭೂಕಂಪ ಸಾಕ್ಷಿ ಎಂದರು. ಒರಿಸ್ಸಾದಲ್ಲಿಯೂ, ಧರ್ಮಗುರು ಸ್ಟೇನ್ಸ್ ಮತ್ತು ಅವರಿಬ್ಬರು ಮಕ್ಕಳನ್ನು ಕೊಂದು ಹಾಕಿದ ಪರಿಣಾಮವಾಗಿ ಆ ರಾಜ್ಯ ಚಂಡಮಾರುತಕ್ಕೆ ಬಲಿಯಾಯಿತು ಎಂದು ಜಾನ್ ವಿವರಿಸಿದ್ದಾರೆ.
ಸಚಿವ ಜಾನ್, ಇತ್ತೀಚೆಗೆ ಕೇರಳದಲ್ಲಿ ಸುಮಾರು 40 ಮಂದಿಯನ್ನು ಬಲಿತೆಗೆದುಕೊಂಡ ಕಳ್ಳಬಟ್ಟಿ ದುರಂತದ ರೂವಾರಿ ಎಂಬ ಆರೋಪ ಎದುರಿಸುತ್ತಿರುವುದನ್ನು ಇಲ್ಲಿ ಸ್ಮರಿಸಬಹುದು.
ಇಂದು ಆರೆಸ್ಸೆಸ್ ಪ್ರತಿಭಟನೆ : ಸಚಿವ ಟಿ. ಜಾನ್ ಅವರ ಹೇಳಿಕೆಯನ್ನು ರಾಷ್ಟ್ರೀಯ ಸ್ವಯಂ ಸೇವಕ ಸಂಘದ ರಾಜ್ಯ ಶಾಖೆ ತೀವ್ರವಾಗಿ ಖಂಡಿಸಿದೆ. ಈ ಹೇಳಿಕೆಯನ್ನು ವಿರೋಧಿಸಿ ಬುಧವಾರದಂದು ರಾಜ್ಯಾದ್ಯಂತ ಪ್ರತಿಭಟನಾ ಸಭೆಗಳನ್ನು ನಡೆಸಲು ನಿರ್ಧರಿಸಲಾಗಿದೆ ಎಂದು ಆರೆಸ್ಸೆಸ್ ಪ್ರಚಾರ ಪ್ರಮುಖ್ ವಿಜಯ ಗೋಪಾಲ್ ಹೇಳಿದ್ದಾರೆ.
(ಇನ್ಫೋ ವಾರ್ತೆ)
-
New Airport: ವಿಜಯಪುರ ಏರ್ಪೋರ್ಟ್ಗೆ ಸಿಕ್ತು 220 ಕೋಟಿ ರೂ, ಕಾರ್ಯಾಚರಣೆ ಬಗ್ಗೆ ಎಂಬಿ ಪಾಟೀಲ ಅಪ್ಡೇಟ್ -
Bengaluru Property: ಬೆಂಗಳೂರಿನ 3 ಲಕ್ಷಕ್ಕೂ ಅಧಿಕ ಆಸ್ತಿ ಮಾಲೀಕರಿಗೆ ಶುಭ ಸುದ್ದಿ -
"ಇಲ್ಲಿ ಎಲ್ಲದಕ್ಕೂ ಚೌಕಾಸಿ ಮಾಡಬೇಕು": ಬೆಂಗಳೂರಿನಲ್ಲಿ 2 ತಿಂಗಳು ಕಳೆದ ಮುಂಬೈ ಯುವಕನ Viral Post -
3 ವರ್ಷಕ್ಕೆ 1.17 ಕೋಟಿ: ಮಲೈಕಾ ಅರೋರಾ ಅಪಾರ್ಟ್ಮೆಂಟ್ ಬಾಡಿಗೆ ಬಹಿರಂಗ -
Karnataka Weather: ಬೇಸಿಗೆ ಬಿಸಿಲ ನಡುವೆ ರಾಜ್ಯದ ಹಲವೆಡೆ ಗುಡುಗು-ಮಿಂಚು ಸಹಿತ ಮಳೆ; ಈ ಜಿಲ್ಲೆಗಳಿಗೆ ಯೆಲ್ಲೋ ಅಲರ್ಟ್ -
April 4 Horoscope: ಇಂದು ನಿಮ್ಮ ರಾಶಿ ಏನು ಹೇಳುತ್ತದೆ? ಏಪ್ರಿಲ್ 4 ಭವಿಷ್ಯ ಇಲ್ಲಿದೆ -
HSRP: ಎಚ್ಎಸ್ಆರ್ಪಿ ನಂಬರ್ ಪ್ಲೇಟ್ ಕಡ್ಡಾಯ: ವದಂತಿಗಳಿಗೆ ಕಿವಿಗೊಡಬೇಡಿ ಎಂದು ಸ್ಪಷ್ಟನೆ ಕೊಟ್ಟ ಸಾರಿಗೆ ಇಲಾಖೆ -
Bengaluru: ಆಟೋ LPG ಕೊರತೆ ಬಗೆಹರಿಯುವ ವಿಶ್ವಾಸ: ಪೂರೈಕೆ ಹೆಚ್ಚಿಸಿದ ಇಂಡಿಯನ್ ಆಯಿಲ್ -
ರಾಜ್ಯಪಾಲರೇ ಗಂಟುಮೂಟೆ ಕಟ್ಟಿಕೊಂಡು ನಿಮ್ಮ ರಾಜ್ಯಕ್ಕೆ ತೊಲಗಿ: ಕರವೇ ನಾರಾಯಣಗೌಡ ಎಚ್ಚರಿಕೆ -
ಲಲಿತ್ಪುರ ಫಾರ್ಮಾ ಪಾರ್ಕ್ ಅನ್ನು ಜಾಗತಿಕ ರಫ್ತು ಕೇಂದ್ರವನ್ನಾಗಿ ಮಾಡುವ ನಿಟ್ಟಿನಲ್ಲಿ ಮಹತ್ವದ ಹೆಜ್ಜೆ -
40 ವರ್ಷ ಮೇಲ್ಪಟ್ಟವರಿಗೆ ಸರ್ಕಾರದಿಂದಲೇ ಉಚಿತ ದೃಷ್ಟಿ ತಪಾಸಣೆ, ಕನ್ನಡಕ ವಿತರಣೆ -
Bengaluru: ಸತತ 3ನೇ ವರ್ಷವೂ ರಾಜ್ಯಕ್ಕೇ ಪ್ರಥಮ ಸ್ಥಾನ: 1,273 ಕೋಟಿ ರೂ. ಆದಾಯ ಸಂಗ್ರಹಿಸಿದ ಬೆಂಗಳೂರು ಕೇಂದ್ರ RTO












Click it and Unblock the Notifications