ಇಟಲಿ, ಇರಾನ್, ಬ್ರಿಟನ್ನಿಂದ ಭುಜ್ಗೆ ನೆರವು
ನವದೆಹಲಿ : ಉದಾರ ವಿದೇಶಿ ನೆರವು ಗುಜರಾತ್ಗೆ ಹರಿದು ಬರುತ್ತಿದ್ದು , ಇಟಲಿಯಿಂದ ಪರಿಹಾರ ಸಾಮಗ್ರಿಗಳನ್ನು ಹೊತ್ತ ವಿಮಾನ ಬುಧವಾರ ಮಧ್ಯಾಹ್ನ ಭುಜ್ ಪ್ರಾಂತ್ಯಕ್ಕೆ 150 ಕಿಮೀ ದೂರದ ರಾಪಾರ್ ಪಟ್ಟಣದಲ್ಲಿ ಬಂದಿಳಿಯಿತು.
ಜನರೇಟರ್, ಟೆಂಟ್, ಬ್ಲಾಂಕೆಟ್ಸ್ ಹಾಗೂ ಕುಡಿಯುವ ನೀರು ಶುದ್ಧೀಕರಣ ಉಪಕರಣಗಳನ್ನು ಗುಜರಾತ್ ಸಂತ್ರಸ್ತರಿಗೆ ಇಟಲಿ ಕಳುಹಿಸಿದೆ. ಪರಿಹಾರ ಸಾಮಗ್ರಿಗಳೊಂದಿಗೆ ತಜ್ಞರ ತಂಡವೊಂದು ಇಟಲಿಯಿಂದ ಆಗಮಿಸಿದೆ. ಪರಿಹಾರ ಸಾಮಗ್ರಿಗಳು ಮಾತ್ರವಲ್ಲದೆ 28 ಲಕ್ಷ ಡಾಲರ್ಗಳ ನೆರವನ್ನು ಇಟಲಿ ಗುಜರಾತ್ ಸಂತ್ರಸ್ತರಿಗೆ ಪ್ರಕಟಿಸಿದೆ.
ಇಟಲಿ ವಿದೇಶಾಂಗ ವ್ಯವಹಾರಗಳ ಸಚಿವಾಲಯ ಸಹಕಾರ ವಿಭಾಗದ ಉಪ ನಿರ್ದೇಶಕ ಮಾಸ್ಸಿಮೊ ಲನ್ನುಸ್ಸಿ ಅವರು ಗುಜರಾತ್ನ ರಾಜ್ಯಪಾಲರನ್ನು ಭೇಟಿ ಮಾಡುವ ಕಾರ್ಯಕ್ರಮವಿದ್ದು , ಗುರುವಾರ ಇಟಲಿಗೆ ವಾಪಸ್ಸಾಗುವರು.
ಇರಾನ್ ನೆರವು : 2 ಸಾವಿರ ಟೆಂಟ್, 5 ಸಾವಿರ ಬ್ಲಾಂಕೆಟ್ ಹಾಗೂ 40 ಟನ್ ಆಹಾರ ಸಾಮಗ್ರಿಗಳನ್ನು ಗುಜರಾತ್ನ ಭೂಕಂಪ ಸಂತ್ರಸ್ತರಿಗೆ ಇರಾನ್ನ ರೆಡ್ ಕ್ರೆಸೆಂಟ್ ಸೊಸೈಟಿ ಕಳುಹಿಸಿದೆ. ಇರಾನ್ ನಾಗರಿಕರನ್ನು ಸಂತ್ರಸ್ತರಿಗೆ ಉದಾರ ನೆರವು ನೀಡುವಂತೆಯೂ ಸೊಸೈಟಿ ಕೋರಿದೆ. ಈ ನಡುವೆ, ಓಮನ್ನಿಂದ ಆಹಾರ ಹಾಗೂ ಔಷಧಿ ನೆರವಿನ ಮೂರನೆ ಕಂತು ಗುಜರಾತ್ನತ್ತ ಧಾವಿಸುತ್ತಿದೆ.
ಬ್ರಿಟನ್ನಲ್ಲಿನ ಭಾರತೀಯ ಚಾರಿಟಿಯ ನೆರವು : ಕೇವಲ 24 ಗಂಟೆಗಳಲ್ಲಿ 50 ಸಾವಿರ ಪೌಂಡ್ಗಳನ್ನು ಬ್ರಿಟನ್ನಲ್ಲಿ ಅತ್ಯಂತ ದೊಡ್ಡ ಭಾರತೀಯ ಚಾರಿಟಿಯಾಂದು ಭೂಕಂಪ ಸಂತ್ರಸ್ತರಿಗಾಗಿ ಸಂಗ್ರಹಿಸಿದೆ. ಲೀಸೆಷ್ಟರ್ನಲ್ಲಿ 40 ಸಾವಿರ ಬ್ರಿಟೀಷ್ ಗುಜರಾತಿಗಳು ವಾಸವಿರುವುದು ಗಮನಾರ್ಹ.
(ಯುಎನ್ಐ)
-
New Airport: ವಿಜಯಪುರ ಏರ್ಪೋರ್ಟ್ಗೆ ಸಿಕ್ತು 220 ಕೋಟಿ ರೂ, ಕಾರ್ಯಾಚರಣೆ ಬಗ್ಗೆ ಎಂಬಿ ಪಾಟೀಲ ಅಪ್ಡೇಟ್ -
Bengaluru Property: ಬೆಂಗಳೂರಿನ 3 ಲಕ್ಷಕ್ಕೂ ಅಧಿಕ ಆಸ್ತಿ ಮಾಲೀಕರಿಗೆ ಶುಭ ಸುದ್ದಿ -
"ಇಲ್ಲಿ ಎಲ್ಲದಕ್ಕೂ ಚೌಕಾಸಿ ಮಾಡಬೇಕು": ಬೆಂಗಳೂರಿನಲ್ಲಿ 2 ತಿಂಗಳು ಕಳೆದ ಮುಂಬೈ ಯುವಕನ Viral Post -
3 ವರ್ಷಕ್ಕೆ 1.17 ಕೋಟಿ: ಮಲೈಕಾ ಅರೋರಾ ಅಪಾರ್ಟ್ಮೆಂಟ್ ಬಾಡಿಗೆ ಬಹಿರಂಗ -
Karnataka Weather: ಬೇಸಿಗೆ ಬಿಸಿಲ ನಡುವೆ ರಾಜ್ಯದ ಹಲವೆಡೆ ಗುಡುಗು-ಮಿಂಚು ಸಹಿತ ಮಳೆ; ಈ ಜಿಲ್ಲೆಗಳಿಗೆ ಯೆಲ್ಲೋ ಅಲರ್ಟ್ -
April 4 Horoscope: ಇಂದು ನಿಮ್ಮ ರಾಶಿ ಏನು ಹೇಳುತ್ತದೆ? ಏಪ್ರಿಲ್ 4 ಭವಿಷ್ಯ ಇಲ್ಲಿದೆ -
HSRP: ಎಚ್ಎಸ್ಆರ್ಪಿ ನಂಬರ್ ಪ್ಲೇಟ್ ಕಡ್ಡಾಯ: ವದಂತಿಗಳಿಗೆ ಕಿವಿಗೊಡಬೇಡಿ ಎಂದು ಸ್ಪಷ್ಟನೆ ಕೊಟ್ಟ ಸಾರಿಗೆ ಇಲಾಖೆ -
Bengaluru: ಆಟೋ LPG ಕೊರತೆ ಬಗೆಹರಿಯುವ ವಿಶ್ವಾಸ: ಪೂರೈಕೆ ಹೆಚ್ಚಿಸಿದ ಇಂಡಿಯನ್ ಆಯಿಲ್ -
ರಾಜ್ಯಪಾಲರೇ ಗಂಟುಮೂಟೆ ಕಟ್ಟಿಕೊಂಡು ನಿಮ್ಮ ರಾಜ್ಯಕ್ಕೆ ತೊಲಗಿ: ಕರವೇ ನಾರಾಯಣಗೌಡ ಎಚ್ಚರಿಕೆ -
ಲಲಿತ್ಪುರ ಫಾರ್ಮಾ ಪಾರ್ಕ್ ಅನ್ನು ಜಾಗತಿಕ ರಫ್ತು ಕೇಂದ್ರವನ್ನಾಗಿ ಮಾಡುವ ನಿಟ್ಟಿನಲ್ಲಿ ಮಹತ್ವದ ಹೆಜ್ಜೆ -
40 ವರ್ಷ ಮೇಲ್ಪಟ್ಟವರಿಗೆ ಸರ್ಕಾರದಿಂದಲೇ ಉಚಿತ ದೃಷ್ಟಿ ತಪಾಸಣೆ, ಕನ್ನಡಕ ವಿತರಣೆ -
Bengaluru: ಸತತ 3ನೇ ವರ್ಷವೂ ರಾಜ್ಯಕ್ಕೇ ಪ್ರಥಮ ಸ್ಥಾನ: 1,273 ಕೋಟಿ ರೂ. ಆದಾಯ ಸಂಗ್ರಹಿಸಿದ ಬೆಂಗಳೂರು ಕೇಂದ್ರ RTO












Click it and Unblock the Notifications