ಗುಜರಾತ್ ಸಂತ್ರಸ್ತರಿಗೆ ಕನ್ನಡದ ನೆರವಿನ ಹಸ್ತ
- ಭುಜ್, ರಾಪುರ್ ಮತ್ತು ಬಚಾಹೊಗಳಲ್ಲಿ ನ ಗಾಯಾಳುಗಳಿಗೆ ಚಿಕಿತ್ಸೆ ನೀಡುವ ಉದ್ದೇಶದಿಂದ ಸೇಂಟ್ ಜಾನ್ಸ್ ವೈದ್ಯಕೀಯ ಕಾಲೇಜು ಮತ್ತು ಆಸ್ಪತ್ರೆಯ 10 ವೈದ್ಯರ ತಂಡ, ಸೋಮವಾರ ಬೆಂಗಳೂರಿನಿಂದ ಗುಜರಾತ್‌ಗೆ ತೆರಳಿದೆ. ವೈದ್ಯರ ತಂಡ ತನ್ನೊಂದಿಗೆ 1.6 ಟನ್ ಔಷಧಿಗಳನ್ನು ಹೊತ್ತೊಯ್ದಿದೆ. ತಂಡದ ನೇತೃತ್ವವನ್ನು ಡಾ. ವೆಂಕಟೇಶ್ ವಹಿಸಿದ್ದಾರೆ.
- ಮಣಿಪಾಲ್ ಆಸ್ಪತ್ರೆ, ಬೆಂಗಳೂರು- ಇಲ್ಲಿನ ಮೂವರು ವೈದ್ಯರು ತಂಡ ಮಂಗಳವಾರ ಪರಿಹಾರ ಕಾರ್ಯಗಳಲ್ಲಿ ಭಾಗವಹಿಸಲು ಗುಜರಾತ್‌ಗೆ ತೆರಳಿತು.
- ಶೇಷಾದಿಪುರಂ ಕಾಲೇಜಿನ ಸಿಬ್ಬಂದಿ ಒಂದು ದಿನದ ಸಂಬಳವನ್ನು ಗುಜರಾತ್ ಭೂಕಂಪ ಸಂತ್ರಸ್ತರ ಪರಿಹಾರ ನಿಧಿಗೆ ನೀಡಲು ನಿರ್ಧರಿಸಿದೆ. ಕಾಲೇಜು ದಿನಾಚರಣೆಯನ್ನು ರದ್ದು ಪಡಿಸಲು ನಿರ್ಧರಿಸಿರುವ ವಿದ್ಯಾರ್ಥಿಗಳು, ವಾರ್ಷಿಕೋತ್ಸವಕ್ಕಾಗಿ ಮೀಸಲಿಟ್ಟ ಹಣವನ್ನು ಪರಿಹಾರ ನಿಧಿಗೆ ನೀಡಿದ್ದಾರೆ.
- ಭೂಕಂಪ ಸಂತ್ರಸ್ತರಿಗೆ ನಿಧಿ ಸಂಗ್ರಹಿಸುವ ಉದ್ದೇಶದಿಂದ ರೋಟರಿ ಕ್ಲಬ್, ಬೆಂಗಳೂರು, ಲ್ಯಾವಲೆ ರಸ್ತೆಯ ಕಚೇರಿಯಲ್ಲಿ ನಿಧಿ ಸಂಗ್ರಹಣಾ ಕೇಂದ್ರವನ್ನು ಸ್ಥಾಪಿಸಿದೆ. ಬೆಳಿಗ್ಗೆ 8 ರಿಂದ ಇಳಿಸಂಜೆ 8 ರವರೆಗೆ ಕಚೇರಿ ಕಾರ್ಯ ನಿರ್ವಹಿಸುವುದು. ಬ್ಲಾಂಕೆಟ್ಸ್ , ಉಡುಪುಗಳು, ಟಾರ್ಚ್, ಬ್ಯಾಟರಿ ಸೆಲ್ಸ್ , ಔಷಧಿ ಹಾಗೂ ಧನರೂಪದ ಸಹಾಯವನ್ನು ಕಚೇರಿಗೆ ಸಲ್ಲಿಸಬಹುದು. ಆಸಕ್ತರು ಸಂಪರ್ಕಿಸಬಹುದಾದ ದೂರವಾಣಿ ಸಂಖ್ಯೆ 080-2210134.
- ಕರ್ನಾಟಕ ವಿದ್ಯುತ್ ಪ್ರಸರಣ ನಿಗಮದ ನೌಕರರು ಒಂದು ದಿನದ ವೇತನವನ್ನು ಮುಖ್ಯ ಮಂತ್ರಿಗಳ ಪರಿಹಾರ ನಿಧಿಯ ಮೂಲಕ 1.50 ಕೋಟಿ ರೂಪಾಯಿ ಗುಜರಾತ್ ಸಂತ್ರಸ್ಥರಿಗೆ ತಲುಪಿಸಲು ನಿರ್ಧರಿಸಿದ್ದಾರೆ.
- ಕರ್ನಾಟಕ ಸರಕು ಸಾಗಾಣಿಕೆದಾರರ ಸಂಘ, ಆಹಾರ ಪದಾರ್ಥ ಮತ್ತು ಔಷಧಿಗಳನ್ನು ಸಾಗಿಸಲು ಉಚಿತ ಸಾರಿಗೆ ವ್ಯವಸ್ಥೆ ಕಲ್ಪಿಸಲು ನಿರ್ಧರಿಸಿದೆ. ಆಸಕ್ತರು ಸರಕು ಸಾಗಾಣಿಕೆದಾರರ ಸಂಘ, ರಾಜಾ ಮ್ಯಾನ್‌ಷನ್, 5ನೇ ಕ್ರಾಸ್, ಕಲಾಸಿಪಾಳ್ಯಂ, ಬೆಂಗಳೂರು, ಈ ವಿಳಾಸವನ್ನು ಸಂಪರ್ಕಿಸಹುದು. ಫೋನ್ : 080 - 2221383, 2210493
- ಬೆಂಗಳೂರಿನ ನೂತನ ಗುಜರಾತ್ ಸಾರಿಗೆ ಕಂಪೆನಿ ವಿವಿಧ ಪದಾರ್ಥಗಳನ್ನು ಸಾಗಿಸಲು ಉಚಿತ ಸಾರಿಗೆ ವ್ಯವಸ್ಥೆ ಒದಗಿಸಲು ನಿರ್ಧರಿಸಿದೆ.
- ಬೆಂಗಳೂರು ನಗರ ಜಿಲ್ಲಾ ಪಂಚಾಯತ್ ತನ್ನ ವ್ಯಾಪ್ತಿಗೆ ಸೇರುವ ಸಿಬ್ಬಂದಿಯ ಒಂದು ದಿನದ ಸಂಬಳ ಹಾಗೂ 5 ಲಕ್ಷ ರು. ಗಳನ್ನು ಭೂಕಂಪ ಸಂತ್ರಸ್ತರಿಗೆ ನೀಡಲು ಮುಂದಾಗಿದೆ.
- ಭೂಕಂಪ ಪೀಡಿತ ಪ್ರದೇಶದಲ್ಲಿ ಕಣ್ಣಿನ ತೊಂದರೆಗಳಿಂದ ಬಳಲುತ್ತಿರುವವಗೆ ಚಿಕಿತ್ಸೆ ನೀಡಲು ಬೆಂಗಳೂರಿನ ಡಾ. ಅಗರ್‌ವಾಲ್ ಕಣ್ಣಾಸ್ಪತ್ರೆಯ ವೈದ್ಯರ ನಾಲ್ಕು ತಂಡಗಳು ಗುಜರಾತ್‌ಗೆ ತೆರಳಲು ನಿರ್ಧರಿಸಿವೆ. ಕಂಬಳಿ, ಬಟ್ಟೆ, ಔಷಧಿ ನೀಡಲು ಬಯಸುವವರು ನಂ. 15, ಈಗಲ್ ಸ್ಟ್ರೀಟ್, ಬೆಂಗಳೂರು- 25, ದೂರವಾಣಿ 080- 2240736 ಸಂಪರ್ಕಿಸಬಹುದು.
- ಬೆಂಗಳೂರು ಮಹಾನಗರ ಪಾಲಿಕೆ ನೌಕರರ ಸಂಘ, ಒಂದು ದಿನದ ವೇತನವನ್ನು ಭೂಕಂಪ ಸಂತ್ರಸ್ತರಿಗೆ ನೀಡುವುದಾಗಿ ಪ್ರಕಟಿಸಿದೆ.
- ಬ್ಯಾಂಕ್ ಆಫ್ ಇಂಡಿಯಾ 1.5 ಕೋಟಿ ರುಪಾಯಿಗಳನ್ನು ಪ್ರಧಾನ ಮಂತ್ರಿಗಳ ಪರಿಹಾರ ನಿಧಿಗೆ ದೇಣಿಗೆ ನೀಡಿದೆ.
- ಮಂಗಳೂರಿನ ಗುಜರಾತಿ ಶಾಲೆ ಭೂಕಂಪ ಸಂತ್ರಸ್ತರಿಗೆ ನೀಡಲು ಬಟ್ಟೆ ಬರೆ ಸಂಗ್ರಹಿಸುತ್ತಿದೆ. ನೀಡುವ ಕೈ- ಗುಜರಾತಿ ಶಾಲೆ, ಅಳಕೆ, ಕುದ್ರೋಳಿ, ಮಂಗಳೂರು- 3 ವಿಳಾಸವನ್ನು ಸಂಪರ್ಕಿಸಬಹುದು.
- ಬೆಂಗಳೂರಿನ ಬಿಷಪ್ ಕಾಟನ್ ಬಾಲಕರ ಶಾಲೆ ಗುಜರಾತ್ ಸಂತ್ರಸ್ತರ ನಿಧಿಗೆ 2 ಲಕ್ಷ ರು. ದೇಣಿಗೆ ನೀಡಿದೆ. ಶಾಲೆಯ ಪ್ರಾಂಶುಪಾಲ ಡಾ. ಅಬ್ರಹಾಂ ಎಬಿನೇಜರ್ ಮುಖ್ಯಮಂತ್ರಿ ಕೃಷ್ಣ ಅವರಿಗೆ 2 ಲಕ್ಷ ರು. ಡಿಡಿ ಸಲ್ಲಿಸಿದ್ದಾರೆ.
- ನ್ಯಾಷನಲ್ ಕೋ ಆಪರೇಟಿವ್ ಬ್ಯಾಂಕ್, 1 ಲಕ್ಷ ರು. ದೇಣಿಗೆಯನ್ನು ಗುಜರಾತ್ ಸಂತ್ರಸ್ತರಿಗೆ ನೀಡಿದೆ ಎಂದು ಬ್ಯಾಂಕ್ ಅಧ್ಯಕ್ಷ ಕೆ.ಎನ್. ಶಿವರಾಮಶಾಸ್ತ್ರಿ ತಿಳಿಸಿದ್ದಾರೆ.
- ಬಳ್ಳಾರಿಯ ಎ.ಐಯಡಿ.ಎಸ್.ಓ ಮೆಡಿಕಲ್ ಸರ್ವೀಸ್ ಸೆಂಟರ್‌ನ 13 ವೈದ್ಯಕೀಯ ವಿದ್ಯಾರ್ಥಿಗಳ ತಂಡ ಗುಜರಾತ್‌ಗೆ ತೆರಳಿದೆ.
- ಭೂಕಂಪ ಪರಿಹಾರ ನಿಧಿಗೆ ರಾಜ್ಯ ಸಂಯುಕ್ತ ಜನತಾದಳದ ಶಾಸಕರಿಂದ ಒಂದು ತಿಂಗಳ ವೇತನ. ಬೃಹತ್ ಕೈಗಾರಿಕೆ ಸಚಿವ ಆರ್.ವಿ. ದೇಶಪಾಂಡೆ ಅವರಿಂದ 25001 ರು. ದೇಣಿಗೆ.
- ಬೆಂಗಳೂರು ಮಹಾರಾಣಿ ವಿಜ್ಞಾನ ಕಾಲೇಜಿನ ವಿದ್ಯಾರ್ಥಿನಿಯರು ಕಾಲೇಜಿನ ವಾರ್ಷಿಕ ಕ್ರೀಡಾಕೂಟ ಮತ್ತು ಸ್ನೇಹ ಸಮ್ಮಿಲನ ಕಾರ್ಯಕ್ರಮಗಳನ್ನು ರದ್ದುಪಡಿಸಿ, ಕಾರ್ಯಕ್ರಮಗಳಿಗೆ ಮೀಸಲಿರಿಸಿದ್ದ ಮೊತ್ತ 50 ಸಾವಿರ ರು.ಗಳನ್ನು ಪ್ರಜಾವಾಣಿ- ಡೆಕ್ಕನ್ ಹೆರಾಲ್ಡ್ ಭೂಕಂಪ ಪರಿಹಾರ ನಿಧಿಗೆ ಅರ್ಪಿಸಿದ್ದಾರೆ.
| ಮುಖಪುಟ |
More From
-
New Airport: ವಿಜಯಪುರ ಏರ್ಪೋರ್ಟ್ಗೆ ಸಿಕ್ತು 220 ಕೋಟಿ ರೂ, ಕಾರ್ಯಾಚರಣೆ ಬಗ್ಗೆ ಎಂಬಿ ಪಾಟೀಲ ಅಪ್ಡೇಟ್ -
Bengaluru Property: ಬೆಂಗಳೂರಿನ 3 ಲಕ್ಷಕ್ಕೂ ಅಧಿಕ ಆಸ್ತಿ ಮಾಲೀಕರಿಗೆ ಶುಭ ಸುದ್ದಿ -
"ಇಲ್ಲಿ ಎಲ್ಲದಕ್ಕೂ ಚೌಕಾಸಿ ಮಾಡಬೇಕು": ಬೆಂಗಳೂರಿನಲ್ಲಿ 2 ತಿಂಗಳು ಕಳೆದ ಮುಂಬೈ ಯುವಕನ Viral Post -
3 ವರ್ಷಕ್ಕೆ 1.17 ಕೋಟಿ: ಮಲೈಕಾ ಅರೋರಾ ಅಪಾರ್ಟ್ಮೆಂಟ್ ಬಾಡಿಗೆ ಬಹಿರಂಗ -
Karnataka Weather: ಬೇಸಿಗೆ ಬಿಸಿಲ ನಡುವೆ ರಾಜ್ಯದ ಹಲವೆಡೆ ಗುಡುಗು-ಮಿಂಚು ಸಹಿತ ಮಳೆ; ಈ ಜಿಲ್ಲೆಗಳಿಗೆ ಯೆಲ್ಲೋ ಅಲರ್ಟ್ -
April 4 Horoscope: ಇಂದು ನಿಮ್ಮ ರಾಶಿ ಏನು ಹೇಳುತ್ತದೆ? ಏಪ್ರಿಲ್ 4 ಭವಿಷ್ಯ ಇಲ್ಲಿದೆ -
HSRP: ಎಚ್ಎಸ್ಆರ್ಪಿ ನಂಬರ್ ಪ್ಲೇಟ್ ಕಡ್ಡಾಯ: ವದಂತಿಗಳಿಗೆ ಕಿವಿಗೊಡಬೇಡಿ ಎಂದು ಸ್ಪಷ್ಟನೆ ಕೊಟ್ಟ ಸಾರಿಗೆ ಇಲಾಖೆ -
Bengaluru: ಆಟೋ LPG ಕೊರತೆ ಬಗೆಹರಿಯುವ ವಿಶ್ವಾಸ: ಪೂರೈಕೆ ಹೆಚ್ಚಿಸಿದ ಇಂಡಿಯನ್ ಆಯಿಲ್ -
ರಾಜ್ಯಪಾಲರೇ ಗಂಟುಮೂಟೆ ಕಟ್ಟಿಕೊಂಡು ನಿಮ್ಮ ರಾಜ್ಯಕ್ಕೆ ತೊಲಗಿ: ಕರವೇ ನಾರಾಯಣಗೌಡ ಎಚ್ಚರಿಕೆ -
ಲಲಿತ್ಪುರ ಫಾರ್ಮಾ ಪಾರ್ಕ್ ಅನ್ನು ಜಾಗತಿಕ ರಫ್ತು ಕೇಂದ್ರವನ್ನಾಗಿ ಮಾಡುವ ನಿಟ್ಟಿನಲ್ಲಿ ಮಹತ್ವದ ಹೆಜ್ಜೆ -
40 ವರ್ಷ ಮೇಲ್ಪಟ್ಟವರಿಗೆ ಸರ್ಕಾರದಿಂದಲೇ ಉಚಿತ ದೃಷ್ಟಿ ತಪಾಸಣೆ, ಕನ್ನಡಕ ವಿತರಣೆ -
Bengaluru: ಸತತ 3ನೇ ವರ್ಷವೂ ರಾಜ್ಯಕ್ಕೇ ಪ್ರಥಮ ಸ್ಥಾನ: 1,273 ಕೋಟಿ ರೂ. ಆದಾಯ ಸಂಗ್ರಹಿಸಿದ ಬೆಂಗಳೂರು ಕೇಂದ್ರ RTO












Click it and Unblock the Notifications