Get Updates
Get notified of breaking news, exclusive insights, and must-see stories!

ಕಾಲೇಜು ಬೋಧನಾ ಶುಲ್ಕದಲ್ಲಿ ನೂರು ರುಪಾಯಿ ಇಳಿಕೆ

ಗುಲ್ಬರ್ಗಾ : ಕಾಲೇಜು ಮಟ್ಟದಲ್ಲಿ ರಾಜ್ಯ ಸರಕಾರ ಹೆಚ್ಚಿಸಿದ್ದ ಬೋಧನಾ ಶುಲ್ಕವನ್ನು ಇಳಿಸಿರುವುದಾಗಿ ರಾಜ್ಯದ ಉನ್ನತ ಶಿಕ್ಷಣ ಸಚಿವ ಡಾ. ಪರಮೇಶ್ವರ್‌ ಬುಧವಾರ ಇಲ್ಲಿ ಪ್ರಕಟಿಸಿದರು. ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡುತ್ತಿದ್ದ ಅವರು, ರಾಜ್ಯದ ವೃತ್ತಿಪರ ಕಾಲೇಜುಗಳೂ ಸೇರಿದಂತೆ, ಕಾಲೇಜು ಶಿಕ್ಷಣದ ಬೋಧನಾ ಶುಲ್ಕದಲ್ಲಿ 100 ರುಪಾಯಿ ಕಡಿತಗೊಳಿಸಲಾಗಿದೆ ಎಂದು ತಿಳಿಸಿದರು.

500 ರುಪಾಯಿಗಳಿಗೆ ಏರಿಸಲಾಗಿದ್ದ ಶುಲ್ಕದಲ್ಲಿ ನೂರು ರು. ಕಡಿಮೆ ಮಾಡಿ 400 ರುಪಾಯಿಗಳಿಗೆ ತರಲಾಗಿದೆ. ಅಲ್ಲದೆ ಪ್ರಯೋಗಾಲಯ ಶುಲ್ಕದಲ್ಲೂ ಕೂಡ 50 ರುಪಾಯಿಯಷ್ಟು ಕಡಿಮೆ ಮಾಡಲಾಗಿದೆ. ಈಗಾಗಲೇ ಹೆಚ್ಚಳವಾಗಿದ್ದ ಶುಲ್ಕ ಶ್ರೇಣಿಯಲ್ಲೇ ಹಣ ಪಾವತಿಸಿರುವ ವಿದ್ಯಾರ್ಥಿಗಳು ತಾವು ಹೆಚ್ಚುವರಿಯಾಗಿ ಪಾವತಿಸಿರುವ ಹಣವನ್ನು ಹಿಂದಕ್ಕೆ ಪಡೆಯಬಹುದಾಗಿದೆ ಎಂದೂ ತಿಳಿಸಿದರು.

ಕರ್ನಾಟಕ ಸರಕಾರ ಕಾಲೇಜು, ವೃತ್ತಿ ಶಿಕ್ಷಣ ಕಾಲೇಜುಗಳ ಶುಲ್ಕವನ್ನು ಏರಿಸಿದ್ದನ್ನು ಪ್ರತಿಭಟಿಸಿ ಅಖಿಲ ಭಾರತೀಯ ವಿದ್ಯಾರ್ಥಿ ಪರಿಷತ್‌, ಎಸ್‌.ಎಫ್‌.ಐ ಮತ್ತು ಡಿವೈಎಫ್‌ಐ ಮುಂತಾದ ವಿದ್ಯಾರ್ಥಿ ಸಂಘಟನೆಗಳು ರಾಜ್ಯಾದ್ಯಂತ ತರಗತಿಗಳನ್ನು ಬಹಿಷ್ಕರಿಸಿ ಪ್ರತಿಭಟನೆ ನಡೆಸಿದ್ದಲ್ಲದೆ, ಸಚಿವರುಗಳಿಗೆ ಘೕರಾವ್‌ ಮಾಡಿದ್ದನ್ನೂ ಇಲ್ಲಿ ಸ್ಮರಿಸಬಹುದಾಗಿದೆ.

More From
Prev
Next
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+