ಜೈಸಲ್ಮೇರ್‌ಗೆ ಹೋಗಿದ್ದ ಪ್ರಭು ಮತ್ತು ಉಪ್ಪಿ ತಂಡ ಸೇಫ್!
ಬೆಂಗಳೂರು : ಗುಜರಾತ್‌ನ ಭೀಕರ ಭೂಕಂಪ, ಬೆಂಗಳೂರಿನಲ್ಲಿ ನೆಲ ನಡುಗಿ ಮನೆಯ ಪಾತ್ರೆ ಪರಟಿಗಳು ಕಿಟಿ ಕಿಟಿ ಸದ್ದು ಮಾಡಿದ ಹೆದರಿಕೆಯಿಂದಾಗಿ ಚಿತ್ರ ನಟರಾದ ಉಪೇಂದ್ರ ಮತ್ತು ಪ್ರಭುದೇವ್‌ರ ರಾಶ್ ಆ್ಯಂಡ್ ಡ್ಯಾಶ್ ಅಭಿಮಾನಿಗಳು ಎದೆ ತುಂಬ ದುಗುಡ ಹೊತ್ತುಕೊಂಡಿದ್ದರು. ಅವರಿಗೆ ಇವತ್ತು ಬೆಳಿಗ್ಗೆ ಸಿಹಿ ಸುದ್ದಿ ಬಂದಿದೆ. ಉಪ್ಪಿ ಮತ್ತು ಪ್ರಭುದೇವ್ ತಂಡ ಸೇಫ್ !
ವಿಷಯ ಇಷ್ಟೇ. ಉಪೇಂದ್ರ ಮತ್ತು ಪ್ರಭುದೇವ್ ನಟನೆಯ ಹೊಸ ಚಿತ್ರದ ಚಿತ್ರೀಕರಣಕ್ಕಾಗಿ ಜನವರಿ 21ರಂದು ಧನರಾಜ್ ಫಿಲಂಸ್ ತಂಡ ಜೈಸಲ್ಮೇರ್‌ಗೆ ಯಾತ್ರೆ ಹೊರಟಿತ್ತು. ಬೆಂಗಳೂರು ಬಿಟ್ಟ ತಂಡ, ಹಾಡಿನ ಮತ್ತು ಗುದ್ದಾಟದ ದೃಶ್ಯಗಳನ್ನು ಜೈಸಲ್ಮೇರ್‌ನಲ್ಲಿ ಚಿತ್ರೀಕರಿಸಬೇಕಾಗಿತ್ತು. ಜೈಸಲ್ಮೇರ್‌ನಲ್ಲಿಳಿದು ನಾಲ್ಕು ದಿನ ಕಳೆದಿಲ್ಲ. ಗುಜರಾತ್ ನೆಲಕಚ್ಚಿರುವ ಸುದ್ದಿ ಟಿವಿಯ ಪ್ಲಾಷ್‌ಗಳಲ್ಲಿ, ವಾರ್ತೆಗಳಲ್ಲಿ ದೇಶದ ಜನರ ಕಿವಿಗಪ್ಪಳಿಸಿತ್ತು.
ಅಲ್ಲೇ ಪಕ್ಕದಲ್ಲಿರುವ ಉಪ್ಪಿ, ಪ್ರಭುದೇವರ ಗತಿ ಏನಾಯಿತು ಅಂತ ತಿಳಿಯದೇ, ಹಳ್ಳಿಗಳಲ್ಲಿನ ಕಟ್ಟೆ ಯುವಕರಿಂದ ಹಿಡಿದು ಬೆಂಗಳೂರಿನ ಉಪ್ಪಿ ಅಭಿಮಾನಿಗಳ ಸೊಫೆಸ್ಟಿಕೇಟೆಡ್ ಸಂಘದ ಯುವಕರವರೆಗೆ ತಮ್ಮ ರೂಂನಲ್ಲಿರುವ ಉಪ್ಪಿ, ಪ್ರಭು ಫೋಟೋ ನೋಡಿಕೊಂಡು, ಮತ್ತೆ ಟೀವಿ ವಾರ್ತೆ ತರುವ ಹೆದರಿಕೆಯನ್ನು ಮರೆಸಿಕೊಂಡು ಓಡಾಡುತ್ತಿದ್ದರು. ಸೋಮವಾರ ಬೆಳಿಗ್ಗೆ ಉಪ್ಪಿ ಫೋನಿಗೆ ಸಿಕ್ಕಿದ್ದಾರೆ. ‘ನಾವೆಲ್ಲಾ ಆರಾಮವಾಗಿದ್ದೇವೆಯಪ್ಪಾ’ ಅಂತ ಹೇಳಿ ಅಭಿಮಾನಿಗಳಿಗೆ ಸದ್ಯ ಬಚಾವ್ ! ಎನ್ನುವಂತೆ ಮಾಡಿದ್ದಾರೆ.
ಚಿತ್ರೀಕರಣದ ದಂಡು ದೊಡ್ಡದು. ಕರ್ನಾಟಕದಿಂದ 75 ಮಂದಿ, ತಮಿಳು ನಾಡಿನ 50 ಮಂದಿ ಮತ್ತು ಮುಂಬಯಿಯ 50 ಮಂದಿ ಸಹನಟ, ನಟಿ, ಕಲಾವಿದರ ಸೇನೆಯಲ್ಲಿ ಯಾರ ಕೂದಲೂ ಕೊಂಕಿಲ್ಲವಂತೆ. ತಂಡಕ್ಕೆ ಭೂಕಂಪದ ಅನುಭವವಾಗಿದ್ದರೂ, ಯಾವುದೇ ಹಾನಿಯಾಗಿಲ್ಲ. ತಂಡದ ಬಳಿ ಇರುವ ಉಪಕರಣಗಳು, ಕ್ಯಾಮರಾಗಳು ಎಲ್ಲ ಸೇಫ್ ಅಂತ ಧನರಾಜ್ ತಿಳಿಸಿದ್ದಾರೆ.
(ಇನ್ಫೋ ವಾರ್ತೆ)
-
New Airport: ವಿಜಯಪುರ ಏರ್ಪೋರ್ಟ್ಗೆ ಸಿಕ್ತು 220 ಕೋಟಿ ರೂ, ಕಾರ್ಯಾಚರಣೆ ಬಗ್ಗೆ ಎಂಬಿ ಪಾಟೀಲ ಅಪ್ಡೇಟ್ -
Bengaluru Property: ಬೆಂಗಳೂರಿನ 3 ಲಕ್ಷಕ್ಕೂ ಅಧಿಕ ಆಸ್ತಿ ಮಾಲೀಕರಿಗೆ ಶುಭ ಸುದ್ದಿ -
"ಇಲ್ಲಿ ಎಲ್ಲದಕ್ಕೂ ಚೌಕಾಸಿ ಮಾಡಬೇಕು": ಬೆಂಗಳೂರಿನಲ್ಲಿ 2 ತಿಂಗಳು ಕಳೆದ ಮುಂಬೈ ಯುವಕನ Viral Post -
3 ವರ್ಷಕ್ಕೆ 1.17 ಕೋಟಿ: ಮಲೈಕಾ ಅರೋರಾ ಅಪಾರ್ಟ್ಮೆಂಟ್ ಬಾಡಿಗೆ ಬಹಿರಂಗ -
Karnataka Weather: ಬೇಸಿಗೆ ಬಿಸಿಲ ನಡುವೆ ರಾಜ್ಯದ ಹಲವೆಡೆ ಗುಡುಗು-ಮಿಂಚು ಸಹಿತ ಮಳೆ; ಈ ಜಿಲ್ಲೆಗಳಿಗೆ ಯೆಲ್ಲೋ ಅಲರ್ಟ್ -
April 4 Horoscope: ಇಂದು ನಿಮ್ಮ ರಾಶಿ ಏನು ಹೇಳುತ್ತದೆ? ಏಪ್ರಿಲ್ 4 ಭವಿಷ್ಯ ಇಲ್ಲಿದೆ -
HSRP: ಎಚ್ಎಸ್ಆರ್ಪಿ ನಂಬರ್ ಪ್ಲೇಟ್ ಕಡ್ಡಾಯ: ವದಂತಿಗಳಿಗೆ ಕಿವಿಗೊಡಬೇಡಿ ಎಂದು ಸ್ಪಷ್ಟನೆ ಕೊಟ್ಟ ಸಾರಿಗೆ ಇಲಾಖೆ -
Bengaluru: ಆಟೋ LPG ಕೊರತೆ ಬಗೆಹರಿಯುವ ವಿಶ್ವಾಸ: ಪೂರೈಕೆ ಹೆಚ್ಚಿಸಿದ ಇಂಡಿಯನ್ ಆಯಿಲ್ -
ರಾಜ್ಯಪಾಲರೇ ಗಂಟುಮೂಟೆ ಕಟ್ಟಿಕೊಂಡು ನಿಮ್ಮ ರಾಜ್ಯಕ್ಕೆ ತೊಲಗಿ: ಕರವೇ ನಾರಾಯಣಗೌಡ ಎಚ್ಚರಿಕೆ -
ಲಲಿತ್ಪುರ ಫಾರ್ಮಾ ಪಾರ್ಕ್ ಅನ್ನು ಜಾಗತಿಕ ರಫ್ತು ಕೇಂದ್ರವನ್ನಾಗಿ ಮಾಡುವ ನಿಟ್ಟಿನಲ್ಲಿ ಮಹತ್ವದ ಹೆಜ್ಜೆ -
40 ವರ್ಷ ಮೇಲ್ಪಟ್ಟವರಿಗೆ ಸರ್ಕಾರದಿಂದಲೇ ಉಚಿತ ದೃಷ್ಟಿ ತಪಾಸಣೆ, ಕನ್ನಡಕ ವಿತರಣೆ -
Bengaluru: ಸತತ 3ನೇ ವರ್ಷವೂ ರಾಜ್ಯಕ್ಕೇ ಪ್ರಥಮ ಸ್ಥಾನ: 1,273 ಕೋಟಿ ರೂ. ಆದಾಯ ಸಂಗ್ರಹಿಸಿದ ಬೆಂಗಳೂರು ಕೇಂದ್ರ RTO












Click it and Unblock the Notifications