ಅಜರ್- ಜಡೇಜಾಗೆ ಬಿಸಿಸಿಐನಿಂದ ಅನ್ಯಾಯ : ತೌಸಿಫ್
ಅಶೋಕ್ ಟುತೇಜ
ದುಬೈ : ತನ್ನ ಮೇಲೆ ಬಿಸಿಸಿಐ ಆಜೀವ ನಿಷೇಧ ಹೇರರುವುದನ್ನು ಪ್ರಶ್ನಿಸಿ ಅಜರುದ್ದೀನ್ ಕೋರ್ಟಿಗೆ ಎಡತಾಕುತ್ತಿರುವ ಈ ಹೊತ್ತಿನ ಸಂದರ್ಭದಲ್ಲಿ ಪಾಕಿಸ್ತಾನದ ಮಾಜಿ ಕ್ರಿಕೆಟಿಗರೊಬ್ಬರು ಅಜರ್ ಹಾಗೂ ಜಡೇಜ ಬಗ್ಗೆ ಸಿಂಪತಿಯ ಮಾತುಗಳನ್ನಾಡಿದ್ದಾರೆ.
ಸ್ಥಳೀಯ ಖಲೀಜ್ ಟೈಮ್ಸ್ ಪತ್ರಿಕೆಗೆ ನೀಡಿರುವ ಸಂದರ್ಶನದಲ್ಲಿ ಪಾಕಿಸ್ತಾನದ 80ರ ದಶಕದ ಯಶಸ್ವಿ ಬೌಲರ್ ತೌಸಿಫ್ ಅಹ್ಮದ್ ಈ ಮಾತುಗಳನ್ನಾಡಿದ್ದಾರೆ....
ಅಜರ್ ಆಗಲೀ, ಜಡೇಜ ಆಗಲೀ ತಂತಾವೇ ಒಂದಿಡೀ ಪಂದ್ಯದ ಹಣೆ ಬರೆಹ ನಿರ್ಧರಿಸಲಾರರು. ಹಾಗೊಂದು ವೇಳೆ ಅವರು ಪಂದ್ಯಗಳನ್ನು ಫಿಕ್ಸ್ ಮಾಡಿದ್ದೇ ಆದರೆ, ಅವರಿಬ್ಬರೇ ಇಡೀ ಪಂದ್ಯವನ್ನು ಬೇರೊಬ್ಬರ ಕೈಗಿಡುವುದು ಪ್ರಾಯೋಗಿಕವಾಗಿ ಅಸಾಧ್ಯ. ಆಗಿರುವ ಎಲ್ಲಾ ತಪ್ಪಿಗೂ ಒಬ್ಬಿಬ್ಬರನ್ನೇ ಹೊಣೆಯಾಗಿಸಿ, ಗೂಬೆ ಕೂರಿಸೋದು ಮುಠ್ಠಾಳತನ.
ಒಬ್ಬಿಬ್ಬರು ಆಟಗಾರರಿಂದ ಇಡೀ ಆಟ ತಿದ್ದುವುದು ಸಾಧ್ಯ ಎಂದಾದರೆ ಮ್ಯಾಚ್‌ಫಿಕ್ಸಿಂಗ್‌ಗೆ ಕೊನೆಯೇ ಇಲ್ಲ . ಯಾರೇನೇ ತಿಪ್ಪರಲಾಗ ಹಾಕಿದರೂ ಅದನ್ನ ನಿಲ್ಲಿಸಲು ಸಾಧ್ಯವಿಲ್ಲ. ಕ್ರಿಕೆಟ್ಟಿರುವವರೆಗೆ ಫಿಕ್ಸಿಂಗೂ ಉಳಿಯುತ್ತೆ.
ಪಾಕ್ ಕ್ರಿಕೆಟ್ಟಿಗೆ ನ ಭವಿಷ್ಯತಿ ? : ಇಮ್ರಾನ್ ಖಾನ್ ನಾಯಕತ್ವದ ತಂಡದಲ್ಲಿ ಹೆಸರು ಮಾಡಿದ್ದ ತೌಸಿಫ್ ಅಹಮದ್ ಪಾಕಿಸ್ತಾನ ಕ್ರಿಕೆಟ್ ಬಗ್ಗೆ ಹೀಗನ್ನುತ್ತಾರೆ- ‘ಈಗಿರುವ ಆಟಗಾರರನ್ನೇ ದೇಶ ನೆಚ್ಚಿಕೊಳ್ಳಬೇಕಿದ್ದು, ಹೊಸ ಪ್ರತಿಭೆಗಳು ಹುಟ್ಟುತ್ತಿಲ್ಲ. ಈಗಿನ ಆಟಗಾರರಲ್ಲಿ ಗೆಲ್ಲುವ ಹುಮ್ಮಸ್ಸು, ಛಲ, ಆಟ ಎಲ್ಲವೂ ಇವೆ. ತಾಯ್ನೆಲದಲ್ಲೇ ನಾಲ್ಕು ಸರಣಿಗಳನ್ನು ಸತತವಾಗಿ ಸೋತಿರುವ ಪಾಕ್ ಆಟ ಮಸುಕಾಗಿದೆ. ಇಂಜಮಾಮ್, ಸಯೀದ್ ಅನ್ವರ್, ವಾಸಿಂ ಆಕ್ರಂ, ಮೊಯಿನ್ ಖಾನ್ ಮೊದಲಾದವರು ಕ್ರಿಕೆಟ್‌ನಿಂದ ನಿವೃತ್ತರಾದ ನಂತರ ಪಾಕಿಸ್ತಾನ ಕ್ರಿಕೆಟ್ಟಿಗೆ ಮಂಕು ಕವಿಯುವುದು ಖಂಡಿತ.
ಸ್ಥಳೀಯ ಕ್ರಿಕೆಟ್‌ನಲ್ಲಿ ಒಂದು ಸೆಂಚುರಿ ಹೊಡೆಯುವ ಕ್ರಿಕೆಟಿಗನನ್ನೇ ನಾವು ಭರವಸೆಯ ಆಟಗಾರ ಎಂಬ ಲೇಬಲ್ ಅಂಟಿಸಿ, ಅಂತರರಾಷ್ಟ್ರೀಯ ಕ್ರಿಕೆಟ್ಟಿಗೆ ತಂದು ಬಿಟ್ಟರೆ ಅಲ್ಲಿ ಆತನ ಆಟ ಠುಸ್ಸು. ಒತ್ತಡದ ನಡುವೆ ಬ್ಯಾಟಿನ ಬೀಸು ಬಿರುಸಾಗೋದೇ ಇಲ್ಲ. ಇದೊಂದು ದೊಡ್ಡ ದುರಂತ’.
(ಯುಎನ್‌ಐ)
-
New Airport: ವಿಜಯಪುರ ಏರ್ಪೋರ್ಟ್ಗೆ ಸಿಕ್ತು 220 ಕೋಟಿ ರೂ, ಕಾರ್ಯಾಚರಣೆ ಬಗ್ಗೆ ಎಂಬಿ ಪಾಟೀಲ ಅಪ್ಡೇಟ್ -
Bengaluru Property: ಬೆಂಗಳೂರಿನ 3 ಲಕ್ಷಕ್ಕೂ ಅಧಿಕ ಆಸ್ತಿ ಮಾಲೀಕರಿಗೆ ಶುಭ ಸುದ್ದಿ -
"ಇಲ್ಲಿ ಎಲ್ಲದಕ್ಕೂ ಚೌಕಾಸಿ ಮಾಡಬೇಕು": ಬೆಂಗಳೂರಿನಲ್ಲಿ 2 ತಿಂಗಳು ಕಳೆದ ಮುಂಬೈ ಯುವಕನ Viral Post -
3 ವರ್ಷಕ್ಕೆ 1.17 ಕೋಟಿ: ಮಲೈಕಾ ಅರೋರಾ ಅಪಾರ್ಟ್ಮೆಂಟ್ ಬಾಡಿಗೆ ಬಹಿರಂಗ -
Karnataka Weather: ಬೇಸಿಗೆ ಬಿಸಿಲ ನಡುವೆ ರಾಜ್ಯದ ಹಲವೆಡೆ ಗುಡುಗು-ಮಿಂಚು ಸಹಿತ ಮಳೆ; ಈ ಜಿಲ್ಲೆಗಳಿಗೆ ಯೆಲ್ಲೋ ಅಲರ್ಟ್ -
April 4 Horoscope: ಇಂದು ನಿಮ್ಮ ರಾಶಿ ಏನು ಹೇಳುತ್ತದೆ? ಏಪ್ರಿಲ್ 4 ಭವಿಷ್ಯ ಇಲ್ಲಿದೆ -
HSRP: ಎಚ್ಎಸ್ಆರ್ಪಿ ನಂಬರ್ ಪ್ಲೇಟ್ ಕಡ್ಡಾಯ: ವದಂತಿಗಳಿಗೆ ಕಿವಿಗೊಡಬೇಡಿ ಎಂದು ಸ್ಪಷ್ಟನೆ ಕೊಟ್ಟ ಸಾರಿಗೆ ಇಲಾಖೆ -
Bengaluru: ಆಟೋ LPG ಕೊರತೆ ಬಗೆಹರಿಯುವ ವಿಶ್ವಾಸ: ಪೂರೈಕೆ ಹೆಚ್ಚಿಸಿದ ಇಂಡಿಯನ್ ಆಯಿಲ್ -
ರಾಜ್ಯಪಾಲರೇ ಗಂಟುಮೂಟೆ ಕಟ್ಟಿಕೊಂಡು ನಿಮ್ಮ ರಾಜ್ಯಕ್ಕೆ ತೊಲಗಿ: ಕರವೇ ನಾರಾಯಣಗೌಡ ಎಚ್ಚರಿಕೆ -
ಲಲಿತ್ಪುರ ಫಾರ್ಮಾ ಪಾರ್ಕ್ ಅನ್ನು ಜಾಗತಿಕ ರಫ್ತು ಕೇಂದ್ರವನ್ನಾಗಿ ಮಾಡುವ ನಿಟ್ಟಿನಲ್ಲಿ ಮಹತ್ವದ ಹೆಜ್ಜೆ -
40 ವರ್ಷ ಮೇಲ್ಪಟ್ಟವರಿಗೆ ಸರ್ಕಾರದಿಂದಲೇ ಉಚಿತ ದೃಷ್ಟಿ ತಪಾಸಣೆ, ಕನ್ನಡಕ ವಿತರಣೆ -
Bengaluru: ಸತತ 3ನೇ ವರ್ಷವೂ ರಾಜ್ಯಕ್ಕೇ ಪ್ರಥಮ ಸ್ಥಾನ: 1,273 ಕೋಟಿ ರೂ. ಆದಾಯ ಸಂಗ್ರಹಿಸಿದ ಬೆಂಗಳೂರು ಕೇಂದ್ರ RTO












Click it and Unblock the Notifications