ನಿತ್ಯ ಭವಿಷ್ಯ
*ಜಾನುಕೊಂಡ ಶಾಮಾ ಶಾಸ್ತ್ರೀ
ಮೇಷ : ವೈಯಕ್ತಿಕ ಮತ್ತು ವ್ಯಾವಹಾರಿಕ ಸಂಬಂಧಗಳಲ್ಲಿನ ಸಣ್ಣ ಬಿರುಕನ್ನು ಹಚ್ಚಿಕೊಂಡು ಕೊರಗುತ್ತಿದ್ದುದು, ಇವತ್ತಿಗೆ ಕೊನೆಯಾಗುತ್ತದೆ. ಇವತ್ತು ಮತ್ತಷ್ಟು ಖುಷಿಗಳನ್ನು ತಬ್ಬಿಕೊಳ್ಳುತ್ತೀರಿ.ವೃಷಭ : ನೀವು ಇವತ್ತು ತೆರೆ ಮರೆಯಲ್ಲೇ ಕೆಲಸ ಮಾಡಬೇಕು. ನಿಮ್ಮ ಮೇಲೆ ಇವತ್ತು ಬೀಳಲಿರುವ ಜವಾಬ್ದಾರಿಯಿಂದ ನುಣುಚಿಕೊಂಡರೆ ಸೋಲುತ್ತೀರಿ. ಇಂದಿನ ನಿಮ್ಮ ಕತ್ತೆ ದುಡಿತ ಮುಂದೊಂದು ದಿನ ಸಹಾಯವಾಗಲಿದೆ.
ಮಿಥುನ : ನಿಮ್ಮ ಚೌಕಟ್ಟಿಗೆ ಯಾವ ಪರಿಸ್ಥಿತಿಯೂ ಬಂದು ಕುಳಿತು ಕೊಳ್ಳುವುದಿಲ್ಲ ಅನ್ನೋದನ್ನ ಕಂಡು ಬೇಸರ ಪಟ್ಟುಕೊಳ್ಳುವುದಾ ? ಆರೋಗ್ಯ ಹಾನಿಯಿಂದ ಜೇಬು ಖಾಲಿಯಾಗಬಹುದು.
ಕಟಕ : ಯಾರ ಮಾತುಗಳೂ ನಿಮ್ಮನ್ನು ಬದಲಾಯಿಸುವುದಿಲ್ಲ. ಇವತ್ತೆಲ್ಲಾ ಆಧ್ಯಾತ್ಮದ ಯೋಚನೆ ಮಾಡಿಕೊಂಡಿರುತ್ತೀರಿ. ಕ್ಷಣಿಕ ವೈರಾಗ್ಯವಾದರೂ, ಇವತ್ತಿನ ಡಲ್‌ನೆಸ್‌ಗೆ ಅಂತಹ ಕಾರಣವೇನಿಲ್ಲ ಬಿಡಿ.
ಸಿಂಹ : ಒಮ್ಮೆ ಮಾತಾಡಿದರೆ ಮುಗಿಯಿತು. ನಿಮ್ಮ ವಿವರಣೆಗಳು ನಿಮ್ಮ ಕೃತಿಯನ್ನು ನ್ಯಾಯಯುತ ಎಂದು ಒಪ್ಪಿಕೊಳ್ಳುವಂತೆ ಮಾಡಲಾರವು. ಇಂದು ನಿಮ್ಮ ಯಜಮಾನಿಕೆಯಲ್ಲಿ ಎಲ್ಲ ಕೆಲಸಗಳು ನಡೆಯುತ್ತವೆ.
ಕನ್ಯಾ : ದ್ವಂದ್ವದಿಂದಾಗಿ ಕೀಳರಿಮೆ ಬೆಳೆಸಿಕೊಳ್ಳುತ್ತೀರಿ. ಆದರೆ ನಿಮ್ಮ ಪ್ರತಿಭೆಯನ್ನೂ ಗುರುತಿಸುತ್ತಾರೆ ಎಂಬುದು ನೆನಪಿರಲಿ. ಪುರಸ್ಕಾರ ಸಿಗಲಿದೆ. ನಿರೀಕ್ಷಿ ಸಿ.
ತುಲಾ : ಕೆಲಸದ ಒತ್ತಡದಿಂದ ಮೂಡ್ ಕೆಟ್ಟು ಹೋಗಬಹುದು. ವೃತ್ತಿಯಲ್ಲಿ ಬದಲಾವಣೆ ಇಚ್ಚಿಸಬಹುದು. ಆದರೆ ಅಂತಹ ಅವಕಾಶಗಳೇನೂ ಸದ್ಯಕ್ಕೆ ಬರುವ ಹಾಗೆ ಕಾಣುವುದಿಲ್ಲ.
ವೃಶ್ಚಿಕ : ದಿನಗಳೆಲ್ಲಾ ನಿಮಗೆ ಬರೀ ಒಪ್ಪಂದಗಳು ವ್ಯವಹಾರಗಳಲ್ಲೇ ಮುಗಿದು ಹೋಗುತ್ತವೆ. ನಿರಾಳವಾಗಿರಬೇಕು ಅಂತ ಅನಿಸಬಹುದು. ವಿಶ್ರಾಂತಿಯತ್ತ ಗಮನವಿರಲಿ. ಪ್ರಯಾಣ ಯೋಗವೇನೂ ಇಲ್ಲ, ಸದ್ಯಕ್ಕೆ ಅಂತಹ ಪ್ಲಾನ್ ಬೇಡ.
ಧನಸ್ಸು : ನಿಮ್ಮ ಪ್ರೇಯಸಿಯ ಜೊತೆಗೆ ಇವತ್ತಿನ ಸಂಜೆಯನ್ನು ಸುಂದರವಾಗಿ ಕಳೆಯುತ್ತೀರಿ. ದಿನವಿಡೀ ಸ್ನೇಹಿತರಿಗಾಗಿ ಹಣ ವ್ಯಯ. ಬೇಸರ ಸಲ್ಲ ಅಲ್ಲವೇ ?
ಮಕರ : ಸಣ್ಣ ಪುಟ್ಟ ವಿಷಯಗಳಿಗೆಲ್ಲಾ ದಿನಗಟ್ಟಲೆ ಯೋಚನೆ ಮಾಡುವುದರಿಂದ ಪ್ರಯೋಜನವಿಲ್ಲ. ಆಫೀಸಿನಲ್ಲಿ ಮೀಟಿಂಗ್, ಓಡಾಟದಿಂದ ಸುಸ್ತೆನಿಸಬಹುದು.
ಕುಂಭ : ಮನೆಯಲ್ಲಿ ಮಂಗಳ ಕಾರ್ಯ ಇರಬಹುದು. ಅದಕ್ಕಾಗಿ ಓಡಾಟ. ಮನೆಯವರ ಮಾತನ್ನೂ ಕಿವಿಗೆ ಹಾಕಿಕೊಳ್ಳಿ. ವ್ಯಾಪಾರದಲ್ಲಿ ಅಂತಹ ಲಾಭವೇನೂ ಆಗಲಿಕ್ಕಿಲ್ಲ.
ಮೀನ : ನಿಮ್ಮ ಸ್ವಂತ ರೂಲ್‌ಗಳನ್ನು ನೀವೇ ಮುರಿದರೆ ಹೇಗೆ ? ಇವತ್ತು ನಿಮಗೆ ಬೇರೆಯವರ ಸಹಾನುಭೂತಿ ಲಭಿಸಲಿದೆ. ದಿನವನ್ನು ಚೆನ್ನಾಗಿಟ್ಟುಕೊಳ್ಳುವುದು ನಿಮ್ಮ ಕೈಯಲ್ಲಿದೆ.
-
New Airport: ವಿಜಯಪುರ ಏರ್ಪೋರ್ಟ್ಗೆ ಸಿಕ್ತು 220 ಕೋಟಿ ರೂ, ಕಾರ್ಯಾಚರಣೆ ಬಗ್ಗೆ ಎಂಬಿ ಪಾಟೀಲ ಅಪ್ಡೇಟ್ -
Bengaluru Property: ಬೆಂಗಳೂರಿನ 3 ಲಕ್ಷಕ್ಕೂ ಅಧಿಕ ಆಸ್ತಿ ಮಾಲೀಕರಿಗೆ ಶುಭ ಸುದ್ದಿ -
"ಇಲ್ಲಿ ಎಲ್ಲದಕ್ಕೂ ಚೌಕಾಸಿ ಮಾಡಬೇಕು": ಬೆಂಗಳೂರಿನಲ್ಲಿ 2 ತಿಂಗಳು ಕಳೆದ ಮುಂಬೈ ಯುವಕನ Viral Post -
3 ವರ್ಷಕ್ಕೆ 1.17 ಕೋಟಿ: ಮಲೈಕಾ ಅರೋರಾ ಅಪಾರ್ಟ್ಮೆಂಟ್ ಬಾಡಿಗೆ ಬಹಿರಂಗ -
Karnataka Weather: ಬೇಸಿಗೆ ಬಿಸಿಲ ನಡುವೆ ರಾಜ್ಯದ ಹಲವೆಡೆ ಗುಡುಗು-ಮಿಂಚು ಸಹಿತ ಮಳೆ; ಈ ಜಿಲ್ಲೆಗಳಿಗೆ ಯೆಲ್ಲೋ ಅಲರ್ಟ್ -
April 4 Horoscope: ಇಂದು ನಿಮ್ಮ ರಾಶಿ ಏನು ಹೇಳುತ್ತದೆ? ಏಪ್ರಿಲ್ 4 ಭವಿಷ್ಯ ಇಲ್ಲಿದೆ -
HSRP: ಎಚ್ಎಸ್ಆರ್ಪಿ ನಂಬರ್ ಪ್ಲೇಟ್ ಕಡ್ಡಾಯ: ವದಂತಿಗಳಿಗೆ ಕಿವಿಗೊಡಬೇಡಿ ಎಂದು ಸ್ಪಷ್ಟನೆ ಕೊಟ್ಟ ಸಾರಿಗೆ ಇಲಾಖೆ -
Bengaluru: ಆಟೋ LPG ಕೊರತೆ ಬಗೆಹರಿಯುವ ವಿಶ್ವಾಸ: ಪೂರೈಕೆ ಹೆಚ್ಚಿಸಿದ ಇಂಡಿಯನ್ ಆಯಿಲ್ -
ರಾಜ್ಯಪಾಲರೇ ಗಂಟುಮೂಟೆ ಕಟ್ಟಿಕೊಂಡು ನಿಮ್ಮ ರಾಜ್ಯಕ್ಕೆ ತೊಲಗಿ: ಕರವೇ ನಾರಾಯಣಗೌಡ ಎಚ್ಚರಿಕೆ -
ಲಲಿತ್ಪುರ ಫಾರ್ಮಾ ಪಾರ್ಕ್ ಅನ್ನು ಜಾಗತಿಕ ರಫ್ತು ಕೇಂದ್ರವನ್ನಾಗಿ ಮಾಡುವ ನಿಟ್ಟಿನಲ್ಲಿ ಮಹತ್ವದ ಹೆಜ್ಜೆ -
40 ವರ್ಷ ಮೇಲ್ಪಟ್ಟವರಿಗೆ ಸರ್ಕಾರದಿಂದಲೇ ಉಚಿತ ದೃಷ್ಟಿ ತಪಾಸಣೆ, ಕನ್ನಡಕ ವಿತರಣೆ -
Bengaluru: ಸತತ 3ನೇ ವರ್ಷವೂ ರಾಜ್ಯಕ್ಕೇ ಪ್ರಥಮ ಸ್ಥಾನ: 1,273 ಕೋಟಿ ರೂ. ಆದಾಯ ಸಂಗ್ರಹಿಸಿದ ಬೆಂಗಳೂರು ಕೇಂದ್ರ RTO












Click it and Unblock the Notifications