ಗಂಡಾಂತರದಲ್ಲಿ 27 ಮೆಗಾಸಿಟಿಗಳು : ಆ ಲಿಸ್ಟಿನಲ್ಲಿ ಕೋಲ್ಕತಾ
ನವದೆಹಲಿ : ಮುಂದಿನ 25 ವರ್ಷಗಳಲ್ಲಿ ಮೂರು ಮೆಗಾಸಿಟಿಗಳು ಭೂಕಂಪದ ಹೊಡೆತಕ್ಕೆ ಗುರಿಯಾಗುವ ಸಾಧ್ಯತೆಯಿದ್ದು , ಅಂದಾಜು 30 ಲಕ್ಷ ಜನರು ಈ ಭೂಕಂಪಗಳಿಗೆ ಬಲಿಯಾಗುವ ಶಂಕೆಯಿರುವುದಾಗಿ ಭೂ ತಜ್ಞರು ಎಚ್ಚರಿಕೆ ನೀಡಿದ್ದಾರೆ. ಈ ಲಿಸ್ಟಿನಲ್ಲಿ ಬೆಂಗಳೂರು ಸೇರ್ಪಡೆಯಾಗಿಲ್ಲ.
ವಾಸ್ತವವಾಗಿ ಈ ಮೊದಲು ಸಂಭವಿಸಿದ ಭೂಕಂಪಗಳಿಗೂ ಮುಂದೆ ಸಂಭವಿಸಬಹುದಾದ ಕಂಪನಗಳಿಗೂ ಅಂಥಾ ವ್ಯತ್ಯಾಸವೇನಿಲ್ಲ . ಆದರೆ, ಅತ್ಯಧಿಕ ಪ್ರಮಾಣದ ಜನಸಂಖ್ಯೆ ಭೂಕಂಪದ ಸಾಧ್ಯತೆ ಹೆಚ್ಚಿರುವಂತಹ ಕರಾವಳಿ ಪ್ರದೇಶಗಳಲ್ಲಿ ಕೇಂದ್ರೀಕೃತವಾಗಿರುವುದರಿಂದ ಸಾವಿನ ಸಂಖ್ಯೆ ಹೆಚ್ಚಾಗುವುದು ನಿಶ್ಚಿತ ಅನ್ನುವುದು ತಜ್ಞರ ಅಭಿಮತ.
ಜಗತ್ತಿನ ಮೂರನೇ ಒಂದು ಭಾಗದಷ್ಟು ಜನಸಂಖ್ಯೆ ಕರಾವಳಿ ತೀರದ 60 ಕಿಮೀ ಆಸುಪಾಸಿನಲ್ಲೇ ಇರುವುದು ಗಮನಾರ್ಹ. ಚಂಡಮಾರುತ, ಭೂಕಂಪದಂತಹ ಸಮೂಹ ನಾಶದ ಪ್ರಕೃತಿ ವಿಕೋಪಗಳ ತೀವ್ರತೆ ಹೆಚ್ಚಿರುವುದು ಇಂತಹ ಪ್ರದೇಶಗಳಲ್ಲೇ ಹೆಚ್ಚು ಎಂದು ತಜ್ಞರು ಹೇಳಿದ್ದಾರೆ. ಜನಸಂಖ್ಯಾ ಸ್ಫೋಟ ಕೂಡ ಭೂಕಂಪದ ತೀವ್ರತೆಗೆ ಕಾರಣವಾಗುತ್ತಿದೆ. ಹೆಚ್ಚುತ್ತಿರುವ ಜನಸಂಖ್ಯೆ ನಗರ ಪ್ರದೇಶಗಳಿಗೆ ವಲಸೆ ಬರುವುದರಿಂದ ನಗರಗಳ ಮೇಲೆ ಅಸಹಜ ಒತ್ತಡ ಉಂಟಾಗುತ್ತಿದೆ.
ಮೆಗಾಸಿಟಿಗಳಿಗೆ ಉಳಿಗಾಲ ಕಷ್ಟ : ಡಾ. ಬಿಹಾಂ ಅನ್ನುವ ತಜ್ಞರ ಅಧ್ಯಯನದ ಪ್ರಕಾರ- ಪ್ರಸ್ತುತ ಜಗತ್ತಿನಲ್ಲಿ 27 ಮೆಗಾಸಿಟಿಗಳಿದ್ದು , ಇವುಗಳಲ್ಲಿ ಮೂರನೇ ಒಂದು ಭಾಗದಷ್ಟು ನಗರಗಳು ಕರಾವಳಿಗೆ ಹೊಂದಿಕೊಂಡಿವೆ. ಪ್ರತಿಯಾಂದು ಮೆಗಾಸಿಟಿಯಲ್ಲೂ ಸರಾಸರಿ 80 ಲಕ್ಷ ಮಂದಿ ವಾಸವಿದ್ದಾರೆ. ಉದಾಹರಣೆಗೆ ಭಾರತವನ್ನು ಹೆಸರಿಸುವುದಾದರೆ, ಕಲ್ಕತ್ತಾ ನಗರಕ್ಕೆ ಭೂಕಂಪ ಅಪಾಯದ ಸಂಭವ ಹೆಚ್ಚು . ತಮಾಷೆಯೆಂದರೆ, ಮಹಾ ನಗರಗಳಲ್ಲಿ ಉಂಟಾಗುವ ಸಾವಿನ ಸಂಖ್ಯೆಗೆ ಭೂಕಂಪಕ್ಕಿಂತಲೂ ಹೆಚ್ಚಿನ ಪಾಲು ಮಾನವ ನಿರ್ಮಿತ ಕಟ್ಟಡಗಳೆ ಕಾರಣವಾಗಿರುತ್ತವೆ. ಕಟ್ಟಡಗಳ ನಿರ್ಮಾಣದಲ್ಲಿ ಗುಣಮಟ್ಟವನ್ನು ಮತ್ತಷ್ಟು ಹೆಚ್ಚಿಸುವುದು ಅನಾಹುತವನ್ನು ಕಡಿಮೆ ಮಾಡುವ ಏಕೈಕ ದಾರಿ.
ಇದೆಲ್ಲಾ ಸರಿ, ಭೂಕಂಪಕ್ಕೆ ಕಾರಣಗಳೇನು ? ಉತ್ತರ ಹೇಳುವುದು ಬಲು ಕಷ್ಟ . ಗುಜರಾತ್ ಭೂಕಂಪವನ್ನೇ ತೆಗೆದುಕೊಳ್ಳಿ. ತಜ್ಞರಲ್ಲಿ ಒಮ್ಮತವಿಲ್ಲ . ಒಬ್ಬ ತಜ್ಞರು ಭಾರತದಲ್ಲಿ ನಡೆಸಿದ ಅಣುಸ್ಫೋಟವೇ ಭೂಕಂಪಕ್ಕೆ ಕಾರಣ ಅಂದರೆ, ಮತ್ತೊಬ್ಬರು ಅದು ಅಸಂಬದ್ಧ , ಭೂಮಿಯಾಳಗಿನ ಲೆಕ್ಕಾಚಾರ ನಮ್ಮ ಗ್ರಹಿಕೆಗೆ ದಕ್ಕದು ಅನ್ನುತ್ತಾರೆ. ಅದೇನೇ ಇರಲಿ, ಮನುಕುಲಕ್ಕೆ ಮುಂದೆ ಎರಗುವ ಪ್ರತಿ ಸಣ್ಣ ಗಂಡಾಂತರವೂ ದೊಡ್ಡ ಪ್ರಮಾಣದ ಹಾನಿಗೆ ಕಾರಣವಾಗುತ್ತದೆ. ಅನಾಹುತಕ್ಕೆ ಮನುಷ್ಯ ನಿರ್ಮಿತ ಆಕೃತಿಗಳು ಕಾರಣವಾಗುತ್ತಿರುವುದರಿಂದ ಆಧುನಿಕತೆಯ ಹೆಜ್ಜೆಯನ್ನು ಪದೇ ಪದೇ ವಿಮರ್ಶಿಸಿಕೊಳ್ಳಬೇಕಾದ ಹೊತ್ತು ಬಂದಿದೆ.
(ಇನ್ಫೋ ವಾರ್ತೆ)
-
New Airport: ವಿಜಯಪುರ ಏರ್ಪೋರ್ಟ್ಗೆ ಸಿಕ್ತು 220 ಕೋಟಿ ರೂ, ಕಾರ್ಯಾಚರಣೆ ಬಗ್ಗೆ ಎಂಬಿ ಪಾಟೀಲ ಅಪ್ಡೇಟ್ -
Bengaluru Property: ಬೆಂಗಳೂರಿನ 3 ಲಕ್ಷಕ್ಕೂ ಅಧಿಕ ಆಸ್ತಿ ಮಾಲೀಕರಿಗೆ ಶುಭ ಸುದ್ದಿ -
"ಇಲ್ಲಿ ಎಲ್ಲದಕ್ಕೂ ಚೌಕಾಸಿ ಮಾಡಬೇಕು": ಬೆಂಗಳೂರಿನಲ್ಲಿ 2 ತಿಂಗಳು ಕಳೆದ ಮುಂಬೈ ಯುವಕನ Viral Post -
3 ವರ್ಷಕ್ಕೆ 1.17 ಕೋಟಿ: ಮಲೈಕಾ ಅರೋರಾ ಅಪಾರ್ಟ್ಮೆಂಟ್ ಬಾಡಿಗೆ ಬಹಿರಂಗ -
Karnataka Weather: ಬೇಸಿಗೆ ಬಿಸಿಲ ನಡುವೆ ರಾಜ್ಯದ ಹಲವೆಡೆ ಗುಡುಗು-ಮಿಂಚು ಸಹಿತ ಮಳೆ; ಈ ಜಿಲ್ಲೆಗಳಿಗೆ ಯೆಲ್ಲೋ ಅಲರ್ಟ್ -
April 4 Horoscope: ಇಂದು ನಿಮ್ಮ ರಾಶಿ ಏನು ಹೇಳುತ್ತದೆ? ಏಪ್ರಿಲ್ 4 ಭವಿಷ್ಯ ಇಲ್ಲಿದೆ -
HSRP: ಎಚ್ಎಸ್ಆರ್ಪಿ ನಂಬರ್ ಪ್ಲೇಟ್ ಕಡ್ಡಾಯ: ವದಂತಿಗಳಿಗೆ ಕಿವಿಗೊಡಬೇಡಿ ಎಂದು ಸ್ಪಷ್ಟನೆ ಕೊಟ್ಟ ಸಾರಿಗೆ ಇಲಾಖೆ -
Bengaluru: ಆಟೋ LPG ಕೊರತೆ ಬಗೆಹರಿಯುವ ವಿಶ್ವಾಸ: ಪೂರೈಕೆ ಹೆಚ್ಚಿಸಿದ ಇಂಡಿಯನ್ ಆಯಿಲ್ -
ರಾಜ್ಯಪಾಲರೇ ಗಂಟುಮೂಟೆ ಕಟ್ಟಿಕೊಂಡು ನಿಮ್ಮ ರಾಜ್ಯಕ್ಕೆ ತೊಲಗಿ: ಕರವೇ ನಾರಾಯಣಗೌಡ ಎಚ್ಚರಿಕೆ -
ಲಲಿತ್ಪುರ ಫಾರ್ಮಾ ಪಾರ್ಕ್ ಅನ್ನು ಜಾಗತಿಕ ರಫ್ತು ಕೇಂದ್ರವನ್ನಾಗಿ ಮಾಡುವ ನಿಟ್ಟಿನಲ್ಲಿ ಮಹತ್ವದ ಹೆಜ್ಜೆ -
40 ವರ್ಷ ಮೇಲ್ಪಟ್ಟವರಿಗೆ ಸರ್ಕಾರದಿಂದಲೇ ಉಚಿತ ದೃಷ್ಟಿ ತಪಾಸಣೆ, ಕನ್ನಡಕ ವಿತರಣೆ -
Bengaluru: ಸತತ 3ನೇ ವರ್ಷವೂ ರಾಜ್ಯಕ್ಕೇ ಪ್ರಥಮ ಸ್ಥಾನ: 1,273 ಕೋಟಿ ರೂ. ಆದಾಯ ಸಂಗ್ರಹಿಸಿದ ಬೆಂಗಳೂರು ಕೇಂದ್ರ RTO












Click it and Unblock the Notifications