ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ರಾಜ್ಯದಲ್ಲಿ ಭೂಕಂಪ : ಹಾರೋಹಳ್ಳಿಯಲ್ಲಿ 200 ಮನೆ ಬಿರುಕು

By Staff
|
Google Oneindia Kannada News

ಬೆಂಗಳೂರು : ಸೋಮವಾರ ಮುಂಜಾನೆ 8 ಗಂಟೆ 15 ನಿಮಿಷಕ್ಕೆ 2 ಸೆಕೆಂಡುಗಳ ಕಾಲ ಸಂಭವಿಸಿದ ಭೂಕಂಪದ ಪರಿಣಾಮವಾಗಿ ಕೊಳ್ಳೇಗಾಲದಿಂದ 30 ಕಿ.ಮೀ. ದೂರದಲ್ಲಿರುವ ಉಡುತೊರೆ ಹಳ್ಳದಲ್ಲಿ ಬಿರುಕುಗಳು ಕಾಣಿಸಿಕೊಂಡಿವೆ.

ನಿರ್ಮಾಣ ಹಂತದಲ್ಲಿರುವ, 200 ಕೋಟಿ ರೂಪಾಯಿಯ ಅಣೆಕಟ್ಟಿನ ಮಣ್ಣಿನ ಅಡ್ಡ ತಡೆಯಲ್ಲಿ ಸುಮಾರು 30 ಮೀಟರ್‌ಗಳಷ್ಟು ಉದ್ದಕ್ಕೆ ಬಿರುಕುಗಳು ಕಾಣಿಸಿಕೊಂಡಿವೆ. ಅಲ್ಲಿನ ಯೋಜನಾ ಸಿಬ್ಬಂದಿಗಳ ಕ್ವಾಟರ್ಸ್‌ಗಳ ಗೋಡೆಯಲ್ಲಿಯೂ ಸಣ್ಣ ಪುಟ್ಟ ಬಿರುಕುಗಳು ಗೋಚರಿಸಿವೆ. ಉಳಿದಂತೆ-

  • ಬೆಂಗಳೂರು ಗ್ರಾಮಾಂತರ ಜಿಲ್ಲೆಯ ಹಾರೋಹಳ್ಳಿಯಲ್ಲಿ ಸುಮಾರು ಇನ್ನೂರು ಮನೆಗಳು ಬಿರುಕು ಬಿಟ್ಟಿದ್ದು, ಜನ ಈ ಹೊತ್ತೂ ಆತಂಕದಿಂದ ಹೊರ ಬಂದಿಲ್ಲ. ಶಾಸಕ ಪಿ.ಜಿ.ಆರ್‌.ಸಿಂಧ್ಯ ಮತ್ತು ಬೆಂಗಳೂರು ಗ್ರಾಮಾಂತರ ಜಿಲ್ಲಾಧಿಕಾರಿ ನಾರಾಯಣ ಸ್ವಾಮಿ ಹಳ್ಳಿಗೆ ಭೇಟಿ ಕೊಟ್ಟು , ಜನರಲ್ಲಿ ಧೈರ್ಯ ತುಂಬಿದ್ದಾರೆ. ಪೊಲೀಸರು ಹಾಗೂ ಅಗ್ನಿ ಶಾಮಕ ದಳದವರು ಗಸ್ತು ಸುತ್ತುತ್ತಿದ್ದಾರೆ.
  • ಬೆಂಗಳೂರಿನ ಕೆಂಗೇರಿಯ ಖಾಸಗಿ ವಸತಿ ಸಮುಚ್ಚಯ, ನಂದಿನಿ ಬಡಾವಣೆಯ ದೂರವಾಣಿ ವಿನಿಮಯ ಕಚೇರಿ, ಕೆಲವು ಶಾಲಾ-ಕಾಲೇಜುಗಳ ಕಟ್ಟಡಗಳು ಬಿರುಕು ಬಿಟ್ಟಿವೆ.
  • ರಾಜ್ಯದ ಬಹುತೇಕ ಶಾಲಾ- ಕಾಲೇಜುಗಳಿಗೆ ಮತ್ತೊಂದು ಭೂಕಂಪದ ನಿರೀಕ್ಷೆಯ ಕಾರಣ ರಜೆ ಘೋಷಿಸಲಾಗಿತ್ತು.
  • ಬೆಂಗಳೂರಿನ ಬಹುಮಹಡಿ ಕಟ್ಟಡ, ವಿವಿ ಟವರ್ಸ್‌, ಕಾವೇರಿ ಭವನ, ಎ.ಜಿ.ರಸ್ತೆಯ ಬಾನೆತ್ತರದ ಕಟ್ಟಡಗಳಿಂದ ಮಧ್ಯಾಹ್ನದ ಸುಮಾರಿಗೆ ಜನರನ್ನು ಹೊರಗೆ ಕಳುಹಿಸಲಾಗಿತ್ತು. ಸುಮಾರು 3-4 ತಾಸುಗಳ ಕಾಲ ಬಯಲ ತುಂಬೆಲ್ಲಾ ಜನ ಹಾಗೂ ಭೂಕಂಪದ ಮಾತುಗಳು ಹರಿದಾಡುತ್ತಿದ್ದವು.
ರಾಜ್ಯದ ಜನತೆಯ ಮನದಿಂದ ಭೂಕಂಪದ ಭಯ ಇನ್ನೂ ಸಂಪೂರ್ಣವಾಗಿ ಹೋಗಿಲ್ಲ. ಮಂಗಳವಾರವೂ ಬಹುತೇಕ ಜನ ತಮ್ಮ ಮಕ್ಕಳನ್ನು ಶಾಲೆಗಳಿಗೆ ಕಳುಹಿಸಿಲ್ಲ.

(ಇನ್ಫೋ ವಾರ್ತೆ)

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X