Get Updates
Get notified of breaking news, exclusive insights, and must-see stories!

ಭೂಕಂಪಕ್ಕೆ 1 ಲಕ್ಷ ಮಂದಿ ತುತ್ತು : ಜಾರ್ಜ್‌ ಅಂದಾಜು

ನವದೆಹಲಿ : ಗುಜರಾತ್‌ನಲ್ಲಿ ಸಂಭವಿಸಿರುವ ಭೂಕಂಪಕ್ಕೆ 1 ಲಕ್ಷಕ್ಕೂ ಹೆಚ್ಚು ಮಂದಿ ಬಲಿಯಾಗಿರುವ ಸಾಧ್ಯತೆಯಿದೆ ಎಂದು ಕೇಂದ್ರ ರಕ್ಷಣಾ ಸಚಿವ ಜಾರ್ಜ್‌ ಫರ್ನಾಂಡಿಸ್‌ ಬಿಬಿಸಿ ವರ್ಲ್ಡ್‌ ಚಾನೆಲ್‌ಗೆ ನೀಡಿರುವ ಸಂದರ್ಶನದಲ್ಲಿ ತಿಳಿಸಿದ್ದಾರೆ.

ವೈಮಾನಿಕ ಸಮೀಕ್ಷೆಯಿಂದ ಈ ವಿಷಯ ತಿಳಿದುಬಂದಿರುವುದಾಗಿ ಹೇಳಿದ ಫರ್ನಾಂಡಿಸ್‌, ಸುಮಾರು 2 ಲಕ್ಷ ಮಂದಿ ಭೂಕಂಪದ ಹೊಡೆತ ತಿಂದು, ಚಿಕಿತ್ಸೆ ಪಡೆಯುತ್ತಿದ್ದಾರೆ. ಕಟ್ಟಡಗಳ ಕಳಪೆ ಕಾಮಗಾರಿಯೂ ಬಹುತೇಕರ ಜೀವಹಾನಿಗೆ ಕಾರಣವಾಗಿರುವುದು ಸ್ಪಷ್ಟವಾಗಿದೆ ಎಂದರು. ಈವರೆಗೆ ಸುಮಾರು 7 ಸಾವಿರ ಶವಗಳನ್ನು ಅವಶೇಷಗಳಿಂದ ಹೊರತೆಗೆಯಲಾಗಿದೆ.

ವಿವಿಧ ಸೇವಾ ತುಕಡಿಗಳು, ಸ್ವಯಂ ಸೇವಾ ಸಂಸ್ಥೆಗಳು (ರೆಡ್‌ಕ್ರಾಸ್‌ ಸಹಿತ), ಖಾಸಗಿ ಸೇವಾ ಸಂಘ- ಸಂಸ್ಥೆಗಳು ಗುಜರಾತಿನ ಕಷ್ಟದ ನೊಗವನ್ನು ಹೊತ್ತಿದ್ದು, ಕುಸಿದ ಕಟ್ಟಡದ ಪರಿಕರಗಳ ನಡುವೆ ಹೂತು- ಹುದುಗಿ ಹೋಗಿರುವ ಶವಗಳನ್ನು ಹೊರಗೆತ್ತುವ ಪ್ರಯತ್ನ ನಡೆಸಿದ್ದಾರೆ. 5 ದಿನಗಳ ಕಾಲವಾದ್ದರಿಂದ ಹೆಣಗಳು ಕೊಳೆಯುತ್ತಿದ್ದು, ಗುಜರಾತಿಗೆ ಸಾಂಕ್ರಾಮಿಕ ರೋಗ ಹರಡುವ ಸಾಧ್ಯತೆಯೂ ಇದೆ.

(ಇನ್ಫೋ ವಾರ್ತೆ)

More From
Prev
Next
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+