Get Updates
Get notified of breaking news, exclusive insights, and must-see stories!

ಕುಪಿತ ವಸುಂಧರೆ, ಭವಿಷ್ಯ ನುಡಿವ ಪಂಡಿತರಿಗೆ ಬೆಳದಿಂಗಳ ಬಾಲೆ!

ಬೆಂಗಳೂರು : ಗುಜರಾತ್‌ ಭೂಕಂಪದ ದೃಶ್ಯಗಳನ್ನು ನೋಡಿಯೇ ಭಯಭೀತರಾಗಿದ್ದ ಬೆಂಗಳೂರಿಗರು ಸೋಮವಾರ ಬೆಳಗ್ಗೆ 8-15ರಲ್ಲಿ ತಮ್ಮ ನೆಲವೇ ನಡುಗಿದಾಗ ಹೆದರಿ ಕಂಗಾಲಾದರು. ತಾವೇ ಗಟ್ಟಿಮುಟ್ಟಾಗಿ ಕಟ್ಟಿದ ಮನೆಗಳನ್ನು ಬಿಟ್ಟು ಹೊರ ಬಂದು ಬಯಲಿನಲ್ಲಿ ನಿಂತರು. ಸೋಮವಾರ ಮಧ್ಯಾಹ್ನ 11-30ರಿಂದ 12-30ರೊಳಗೆ ಬೆಂಗಳೂರಿನಲ್ಲಿ ಭಾರಿ ಭೂಕಂಪ ಘಟಿಸುತ್ತದೆ ಎಂಬ ಗುಲ್ಲು ಕ್ಷಣಮಾತ್ರದಲ್ಲಿ ಬೆಂಗಳೂರಿನ ಮೂಲೆ ಮೂಲೆಗಳನ್ನೂ ಸಂಚರಿಸಿಬಿಟ್ಟಿತ್ತು. ಶಾಲೆ - ಕಾಲೇಜುಗಳಿಗೆ ರಜೆ ಘೋಷಿಸಲಾಯಿತು. ಜನಜೀವನ ಸುಮಾರು 2 ಗಂಟೆಗಳ ಕಾಲ ಅಸ್ತವ್ಯಸ್ತವಾಗಿತ್ತು.

ಭೂಕಂಪದ ಬಗ್ಗೆ ಭವಿಷ್ಯ ಹೇಳಲು ಸಾಧ್ಯವೇ? : ಭೂಕಂಪದ ಬಗ್ಗೆ ಭವಿಷ್ಯ ಹೇಳಲು ಸಾಧ್ಯವೇ? ಇಂತಹ ದಿನ, ಇಷ್ಟು ಹೊತ್ತಿಗೆ, ನಿರ್ದಿಷ್ಟ ಪ್ರದೇಶದಲ್ಲಿ ಭೂಕಂಪ ಆಗುತ್ತದೆ ಎಂದು ಊಹಿಸುವ ದಾಷ್ಟ್ಯವನ್ನು ವಿಜ್ಞಾನ ಸಂಪಾದಿಸಿಕೊಂಡಿದೆಯೇ ? ಖಂಡಿತಾ ಸಾಧ್ಯ ಇಲ್ಲ ಎನ್ನುತ್ತಾರೆ - ಭೂಕಂಪದ ಅಧ್ಯಯನ ಮಾಡಿರುವ ತಜ್ಞರು. ಇಂತಹ ಭವಿಷ್ಯ ನುಡಿಯಲು ವೈಜ್ಞಾನಿಕವಾಗಿ ಪ್ರಮಾಣಿತವಾದ ಯಾವುದೇ ಸಾಧನಗಳು ಇಲ್ಲ - ವಿಧಾನಗಳಿಲ್ಲ.

ಆದರೂ ಈ ಹಿಂದೆ ಎರಡು ಬಾರಿ ಮುಂದೆ ಸಂಭವಿಸುವ ಭೂಕಂಪದ ಬಗ್ಗೆ ಭವಿಷ್ಯ ನುಡಿಯಲಾಗಿತ್ತು. ಮೊದಲ ಬಾರಿಗೆ 1973ರಲ್ಲಿ ನ್ಯೂಯಾರ್ಕ್‌ನ ಬ್ಲೂ ಮೌಂಟೇನ್‌ಲೇಕ್‌ ಪ್ರದೇಶದಲ್ಲಿ ಭೂಕಂಪ ಘಟಿಸುತ್ತದೆ ಎಂದು ಭಾರತೀಯ ವಿಜ್ಞಾನಿ ನುಡಿದಿದ್ದರು. ವೈಜ್ಞಾನಿಕ ಅಧ್ಯಯನದಿಂದ ಅವರು ಈ ಭವಿಷ್ಯ ನುಡಿದಿದ್ದರು.

ಎರಡನೇ ಬಾರಿ ಚೀನಾದ ಭೂಕಂಪ ಶಾಸ್ತ್ರಜ್ಞರೊಬ್ಬರು 1975ರಲ್ಲಿ ಹೈಚೆಂಗ್‌ನಲ್ಲಿ ಭೂಕಂಪ ನಡೆಯುತ್ತದೆ ಎಂದು ತಿಳಿಸಿದ್ದರು. ಆ ವಿಜ್ಞಾನಿ ಹೇಳಿದ ದಿನವೇ ಅಲ್ಲೂ ಭೂಕಂಪ ಸಂಭವಿಸಿತ್ತು. ಈ ಇಬ್ಬರು ವಿಜ್ಞಾನಿಗಳೂ ಭೂಮಿಯಾಳಗೆ ಅಸಹಜ ಚಟುವಟಿಕೆಗಳು ಆರಂಭವಾಗಿದ್ದನ್ನು ಗಮನಿಸಿ, ಅತ್ಯಾಧುನಿಕ ಉಪಕರಣಗಳ ನೆರವಿನಿಂದ ಭೂಮಿಯ ಒಳಗಿನ ಚಟುವಟಿಕೆಗಳ ಮೇಲೆ ಸಂಪೂರ್ಣ ನಿಗಾ ಇಟ್ಟು ಈ ಭವಿಷ್ಯ ನುಡಿದಿದ್ದರು.

ಆದರೆ, ಪ್ರತಿಬಾರಿಯೂ ಭೂಕಂಪದ ಸಾಧ್ಯತೆ ಬಗ್ಗೆ ಭವಿಷ್ಯ ನುಡಿಯಲು ಸಾಧ್ಯವಿಲ್ಲ ಎನ್ನುತ್ತಾರೆ ರಾಷ್ಟ್ರೀಯ ಭೂವಿಜ್ಞಾನ ಸಂಶೋಧನಾ ಸಂಸ್ಥೆಯ ನಿವೃತ್ತ ನಿರ್ದೇಶಕ ಪ್ರೊ. ವಿ.ಕೆ. ಗೌರ್‌. ತಮ್ಮ ಈ ವಾದಕ್ಕೆ ಪುಷ್ಟಿ ನೀಡಲು ಅವರು ನೀಡಿದ ಒಂದು ಉದಾಹರಣೆ ಇದು. ಹೈಚೆಂಗ್‌ನಲ್ಲಿ 1975ರಲ್ಲಿ ಭೂಕಂಪದ ಬಗ್ಗೆ ಭವಿಷ್ಯ ನುಡಿಯಲಾಗಿತ್ತು. ಆದರೆ, 1976ರಲ್ಲಿ ಅಲ್ಲೇ ನಡೆದ ಭೂಕಂಪದ ಬಗ್ಗೆ ಯಾರೂ ಭವಿಷ್ಯ ನುಡಿಯಲಿಲ್ಲ ಏಕೆ? ಈ ಪ್ರಶ್ನೆಗೆ ಉತ್ತರ ಹೇಳುವುದು ಕಷ್ಟ.

ಗೌರ್‌ ಅವರ ಪ್ರಕಾರ ನಿರ್ದಿಷ್ಟ ಸಮಯದಲ್ಲಿ, ನಿರ್ದಿಷ್ಟ ಜಾಗದಲ್ಲಿ ಭೂಕಂಪ ನಡೆಯುತ್ತದೆ ಎಂದು ಹೇಳುವುದು ಕಷ್ಟಸಾಧ್ಯ. ಎಲ್ಲೋ ಒಮ್ಮೊಮ್ಮೆ ಕಾಕತಾಳೀಯ ಎಂಬಂತೆ ಈ ಭವಿಷ್ಯಗಳು ನಿಜವಾಗಬಹುದು ಎಂಬುದು ಅವರ ಅನಿಸಿಕೆ. ಭೂಗರ್ಭದಲ್ಲಿ ಒತ್ತಡ ಹಾಗೂ ಭೂಕಂಪನದ ರೇಖೆ ನೂರಾರು ಮೈಲಿಯಿಂದ ಸಾವಿರಾರು ಮೈಲಿಯವರೆಗೂ ಹಬ್ಬುವ ಕಾರಣ ವಿಜ್ಞಾನಿಗಳಿಗೆ ಅದನ್ನು ನಿರ್ಧರಿಸುವುದು ಕಷ್ಟವಂತೆ.

ಹಿಮಾಲಯ ಶ್ರೇಣಿಯ ತಗ್ಗು ಪ್ರದೇಶಗಳಲ್ಲಿ ಮತ್ತು ಗಂಗಾನದಿಯ ತಟದಲ್ಲಿ ಆಗಾಗ್ಗೆ ಭೂಕಂಪ ಸಂಭವಿಸುವುದರಿಂದ ದಕ್ಷಿಣ ಪ್ರಸ್ಥಭೂಮಿಯ ಮೇಲೂ ಪರಿಣಾಮ ಇರುತ್ತದೆ. ಅತಿ ಪ್ರಾಚೀನವಾದ ದಕ್ಷಿಣ ಭೂಮಿ ಹಿಮಾಲಯದತ್ತ ಅಂದರೆ ಉತ್ತರದ ಕಡೆಗೆ ಒತ್ತಲ್ಪಡುವ ಪ್ರಕ್ರಿಯೆಯಲ್ಲಿ ಸ್ಪ್ರಿಂಗ್‌ನಂತೆ ಕಾರ್ಯನಿರ್ವಹಿಸುತ್ತಿರುವುದರಿಂದಲೇ ಅತಿ ಅಲ್ಪಾವಧಿಯಲ್ಲಿ ಲಾತೂರ್‌ ಹಾಗೂ ಭುಜ್‌ನಲ್ಲಿ ಭೂಕಂಪ ಸಂಭವಿಸಿದೆ ಎನ್ನುತ್ತಾರೆ ಅವರು.

ರಾಜ್‌ಕುಮಾರ್‌ ನುಡಿದಿದ್ದ ಭವಿಷ್ಯ : ಭಾನುವಾರ ಬೆಂಗಳೂರಲ್ಲಿ ಕಾರ್ಗಿಲ್‌ ಪರಿಹಾರ ನಿಧಿ ವಿತರಣಾ ಸಮಾರಂಭದಲ್ಲಿ ಡಾ. ರಾಜ್‌ಕುಮಾರ್‌ ಅವರು, ಭೂಕಂಪವನ್ನು ಊಹಿಸಿದ್ದರು. ಇಂದು ಗುಜರಾತ್‌ನಲ್ಲಿ ಭೂಕಂಪ ಆಗಿದೆ, ನಾಳೆ ಬೆಂಗಳೂರಿನಲ್ಲಿ ಏಕಾಗಬಾರದು ಎಂದು ಅವರು ಪ್ರಶ್ನಿಸಿದ್ದರು. ರಾಜ್‌ ಏನೂ ಭೂಕಂಪ ತಜ್ಞರಲ್ಲ ಅಥವಾ ಭವಿಷ್ಯಕಾರರೂ ಅಲ್ಲ. ಪರಿಸ್ಥಿತಿಯ ತೀವ್ರತೆ ಬಣ್ಣಿಸುತ್ತಾ ಎಂತಹ ಅನಾಹುತಕ್ಕೂ ಎಲ್ಲರೂ ಎಲ್ಲ ಕಾಲಕ್ಕೂ ಸಜ್ಜಾಗಿರಬೇಕು ಎಂದು ಸೂಚ್ಯವಾಗಿ ಹೇಳಿದ ಮಾತು ಸೋಮವಾರ ಮುಂಜಾನೆ ನಿಜವಾಯಿತು. ರಾಜ್‌ಕುಮಾರ್‌ ಬಾಯಲ್ಲಿ ಮಚ್ಚೆ ಇದೆಯೇ?

More From
Prev
Next
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+