ನಿತ್ಯ ಭವಿಷ್ಯ
*ಜಾನುಕೊಂಡ ಶಾಮಾ ಶಾಸ್ತ್ರೀ
ಮೇಷ : ನೀವು ನಿರೀಕ್ಷಿಸಿರುವ ಜಯ ನಿಮ್ಮನ್ನು ಹುಡುಕಿಕೊಂಡು ಬರುತ್ತಿದೆ. ಹಬ್ಬ ಆಚರಿಸುವ ಯೋಗ ಒದಗಬಹುದು. ಉದ್ಯೋಗದಲ್ಲಿನ ಸಣ್ಣ ಪುಟ್ಟ ತೊಂದರೆಗಳು ಸಹಜ ಅಲ್ಲವೇ ?ವೃಷಭ :ಚಿನ್ನಾಭರಣ ಖರೀದಿ ಯೋಗ. ಮನೆಗೆ ಎಣಿಸದೇ ಬರುವ ನೆಂಟರಿಂದ ಇರಿಸು ಮುರುಸು. ಹೊಸ ಹೊಸ ಪ್ಲಾನ್‌ಗಳು ಈಗಲೇ ಬೇಡ.
ಮಿಥುನ : ಇಲ್ಲದ ಆತಂಕಗಳನ್ನು ಸಷ್ಟಿಸಿಕೊಳ್ಳುವುದರಿಂದ ಪ್ರಯೋಜನವಿಲ್ಲ. ಪ್ರಯಾಣ ಯೋಗವಿದೆ. ಇವತ್ತಿನ ಹಾಗೇ ಯಾವತ್ತೂ ನಿರಾಳವಾಗಿರಬಾರದೇ ಎಂಬ ಯೋಚನೆ ಸಹಜ. ಆದರೆ ಐದು ಬೆರಳು ಒಂದೇ ರೀತಿ ಇರುವುದಿಲ್ಲ ಅಲ್ವೇ?
ಕಟಕ : ಕೆಲಸದಲ್ಲಿ ಜಯ. ಹಿರಿಯರೊಂದಿಗೆ ಇದ್ದ ಅಸಮಾಧಾನಗಳು ಇಂದು ಇತ್ಯರ್ಥವಾಗಲಿವೆ. ಷೇರು ವ್ಯವಹಾರಗಳತ್ತ ಗಮನ ಹರಿಸುತ್ತೀರಾ. ಇವತ್ತೇ ಪ್ಲಾನ್ ರೆಡಿ ಮಾಡಿ.
ಸಿಂಹ : ತನ್ನ ಮಾತೇ ನಡೆಯಬೇಕು ಎಂಬ ಅಹಂನಿಂದ ನೀವೇ ಸೋಲಬಹುದು. ಸ್ನೇಹಿತರ ಮಾತು ಕೇಳಿದರೆ ಚಿಕ್ಕವರಾಗುತ್ತೀರಿ ಅಂತ ನಿಮಗೆ ಯಾರು ಹೇಳಿದ್ದು ?
ಕನ್ಯಾ : ಮನೆಯಲ್ಲಿ ಸಣ್ಣ ಯುದ್ಧವಾಗುತ್ತದೆ. ಅದು ದಿನವೆಲ್ಲಾ ಉಳಿಯುವುದಿಲ್ಲ. ಅನಗತ್ಯ ವಿವಾದಗಳು ಹೆಚ್ಚು ಕಾಲ ನಿಲ್ಲವು. ಇವತ್ತಿನ ಕಿರಿಕಿರಿಯಿಂದ ತಪ್ಪಿಸಿಕೊಂಡರೆ ನೀವು ಗೆದ್ದಂತೆಯೇ ?
ತುಲಾ : ಎಲ್ಲವನ್ನೂ ತೂಗಿ ತೂಗಿ ನೋಡುವುದರಿಂದ ಲೆಕ್ಕ ತಪ್ಪುತ್ತೀರಿ. ಅಚಾನಕ್ ಆಗಿ ಬಂದೊದಗುವ ಖುಷಿಗೇ ನೀವೇ ಅವಾಕ್ಕಾಗುತ್ತೀರಿ
ವೃಶ್ಚಿಕ : ಇದು ಒಳ್ಳೆಯ ದಿನ. ಸ್ನೇಹಿತರ ಪಾಲಿಗೆ ಒಳ್ಳೆಯವರೆನಿಸಿಕೊಳ್ಳುತ್ತೀರಿ. ಮನೆ ಬಂಧುಗಳೊಂದಿಗಿನ ಮಾತುಕತೆಯಿಂದ ಒಳ್ಳೆ ಮೂಡ್ ಉಳಿಸಿಕೊಳ್ಳುತ್ತೀರಿ.
ಧನಸ್ಸು : ಮುಟ್ಟಿದ್ದೆಲ್ಲಾ ಚಿನ್ನವಾಗುತ್ತದೆ. ಖರೀದಿ, ಯೋಜನೆ, ದಾನ, ಶುಭಕಾರ್ಯ ಏನೆಲ್ಲಾ ಅಂದುಕೊಂಡಿದ್ದೀರೋ ಅದೆಲ್ಲಕ್ಕೂ ಇವತ್ತು ಸುಯೋಗ. ಮನೆಯವರ ಮಾತನ್ನು ಮಾತ್ರ ತೆಗೆದು ಹಾಕಬೇಡಿ.
ಮಕರ : ಎಲ್ಲ ಸಂಕೀರ್ಣವಾಗಿದೆ ಅಂತ ಯಾಕೆ ಯೋಚಿಸುತ್ತೀರಿ? ಇವತ್ತೆಲ್ಲಾ ಖುಷಿಯಾಗಿರುತ್ತೀರಿ. ಸದ್ಯಕ್ಕೆ ಪ್ರಯಾಣಯೋಗವಿಲ್ಲ. ಆದ್ದರಿಂದ ಆ ದಿಕ್ಕಿನಲ್ಲಿ ಹಗಲುಗನಸು ಕಾಣಬೇಡಿ.
ಕುಂಭ : ಆಫೀಸಿನಲ್ಲಿ ಕೆಲಸ ಓವರ್ ಲೋಡ್ ಆಗಿರುತ್ತದೆ. ರಜೆಯ ಮೂಡ್‌ನಿಂದ ಇನ್ನೂ ಹೊರಬರದ ನಿಮ್ಮ ಆರೋಗ್ಯದತ್ತ ಎಚ್ಚರ ಇರಲಿ. ಡಾಕ್ಟರ್ ಶಾಫ್‌ಗೆ ಅಲೆದಾಡಬೇಕಾಗಲೂ ಬಹುದು.
ಮೀನ : ಉದ್ಯೋಗದಲ್ಲಿ ಬದಲಾವಣೆ. ಮೊದ ಮೊದಲು ಎಲ್ಲವೂ ತನ್ನಿಚ್ಛೆಯಂತೆಯೇ ನಡೆಯುತ್ತದೆ ಎನಿಸಿದರೂ, ನಂತರದಲ್ಲಿ ಸ್ವಲ್ಪ ತ್ರಾಸ ಪಡುತ್ತೀರಿ. ಎಂದೋ ಮಾಡಿದ ತಪ್ಪಿಗೆ ಶಿಕ್ಷೆ ಅನುಭವಿಸಬೇಕಾದೀತು.
-
New Airport: ವಿಜಯಪುರ ಏರ್ಪೋರ್ಟ್ಗೆ ಸಿಕ್ತು 220 ಕೋಟಿ ರೂ, ಕಾರ್ಯಾಚರಣೆ ಬಗ್ಗೆ ಎಂಬಿ ಪಾಟೀಲ ಅಪ್ಡೇಟ್ -
Bengaluru Property: ಬೆಂಗಳೂರಿನ 3 ಲಕ್ಷಕ್ಕೂ ಅಧಿಕ ಆಸ್ತಿ ಮಾಲೀಕರಿಗೆ ಶುಭ ಸುದ್ದಿ -
"ಇಲ್ಲಿ ಎಲ್ಲದಕ್ಕೂ ಚೌಕಾಸಿ ಮಾಡಬೇಕು": ಬೆಂಗಳೂರಿನಲ್ಲಿ 2 ತಿಂಗಳು ಕಳೆದ ಮುಂಬೈ ಯುವಕನ Viral Post -
3 ವರ್ಷಕ್ಕೆ 1.17 ಕೋಟಿ: ಮಲೈಕಾ ಅರೋರಾ ಅಪಾರ್ಟ್ಮೆಂಟ್ ಬಾಡಿಗೆ ಬಹಿರಂಗ -
Karnataka Weather: ಬೇಸಿಗೆ ಬಿಸಿಲ ನಡುವೆ ರಾಜ್ಯದ ಹಲವೆಡೆ ಗುಡುಗು-ಮಿಂಚು ಸಹಿತ ಮಳೆ; ಈ ಜಿಲ್ಲೆಗಳಿಗೆ ಯೆಲ್ಲೋ ಅಲರ್ಟ್ -
April 4 Horoscope: ಇಂದು ನಿಮ್ಮ ರಾಶಿ ಏನು ಹೇಳುತ್ತದೆ? ಏಪ್ರಿಲ್ 4 ಭವಿಷ್ಯ ಇಲ್ಲಿದೆ -
HSRP: ಎಚ್ಎಸ್ಆರ್ಪಿ ನಂಬರ್ ಪ್ಲೇಟ್ ಕಡ್ಡಾಯ: ವದಂತಿಗಳಿಗೆ ಕಿವಿಗೊಡಬೇಡಿ ಎಂದು ಸ್ಪಷ್ಟನೆ ಕೊಟ್ಟ ಸಾರಿಗೆ ಇಲಾಖೆ -
Bengaluru: ಆಟೋ LPG ಕೊರತೆ ಬಗೆಹರಿಯುವ ವಿಶ್ವಾಸ: ಪೂರೈಕೆ ಹೆಚ್ಚಿಸಿದ ಇಂಡಿಯನ್ ಆಯಿಲ್ -
ರಾಜ್ಯಪಾಲರೇ ಗಂಟುಮೂಟೆ ಕಟ್ಟಿಕೊಂಡು ನಿಮ್ಮ ರಾಜ್ಯಕ್ಕೆ ತೊಲಗಿ: ಕರವೇ ನಾರಾಯಣಗೌಡ ಎಚ್ಚರಿಕೆ -
ಲಲಿತ್ಪುರ ಫಾರ್ಮಾ ಪಾರ್ಕ್ ಅನ್ನು ಜಾಗತಿಕ ರಫ್ತು ಕೇಂದ್ರವನ್ನಾಗಿ ಮಾಡುವ ನಿಟ್ಟಿನಲ್ಲಿ ಮಹತ್ವದ ಹೆಜ್ಜೆ -
40 ವರ್ಷ ಮೇಲ್ಪಟ್ಟವರಿಗೆ ಸರ್ಕಾರದಿಂದಲೇ ಉಚಿತ ದೃಷ್ಟಿ ತಪಾಸಣೆ, ಕನ್ನಡಕ ವಿತರಣೆ -
Bengaluru: ಸತತ 3ನೇ ವರ್ಷವೂ ರಾಜ್ಯಕ್ಕೇ ಪ್ರಥಮ ಸ್ಥಾನ: 1,273 ಕೋಟಿ ರೂ. ಆದಾಯ ಸಂಗ್ರಹಿಸಿದ ಬೆಂಗಳೂರು ಕೇಂದ್ರ RTO












Click it and Unblock the Notifications